Gagana Chukki Falls: ಕಾವೇರಿಗೆ ಭಾರೀ ನೀರು, ಮಂಡ್ಯ ಜಿಲ್ಲೆ ಗಗನಚುಕ್ಕಿ ಜಲಪಾತದಲ್ಲಿ ಜಲವೈಭವ, ಹೋಗೋದು ಹೇಗೆ photos
- Mandya News ಮಂಡ್ಯ ಜಿಲ್ಲೆಯ ಶಿವನಸಮುದ್ರ ಬಳಿ ಕಣಿವೆಗೆ ಬೀಳುವ ಮುನ್ನ ರೂಪುಗೊಂಡಿರುವ ಗಗನಚುಕ್ಕಿ ಜಲಪಾತ ಈಗ ವೈಭವ ತುಂಬಿದೆ. ಕಾವೇರಿ ನದಿಗೆ ಹೆಚ್ಚಿನ ನೀರು ಹರಿಯುತ್ತಿರುವುದರಿಂದ ಪ್ರವಾಸಿಗರ ಆಕರ್ಷಣೆಯಾಗಿದೆ.
- Mandya News ಮಂಡ್ಯ ಜಿಲ್ಲೆಯ ಶಿವನಸಮುದ್ರ ಬಳಿ ಕಣಿವೆಗೆ ಬೀಳುವ ಮುನ್ನ ರೂಪುಗೊಂಡಿರುವ ಗಗನಚುಕ್ಕಿ ಜಲಪಾತ ಈಗ ವೈಭವ ತುಂಬಿದೆ. ಕಾವೇರಿ ನದಿಗೆ ಹೆಚ್ಚಿನ ನೀರು ಹರಿಯುತ್ತಿರುವುದರಿಂದ ಪ್ರವಾಸಿಗರ ಆಕರ್ಷಣೆಯಾಗಿದೆ.
(1 / 6)
ಮಂಡ್ಯ ಜಿಲ್ಲೆಯಲ್ಲಿ ಗಗನಚುಕ್ಕಿ. ಚಾಮರಾಜನಗರದಲ್ಲಿ ಭರ ಚುಕ್ಕಿ. ಕಾವೇರಿ ಎರಡು ಭಾಗವಾಗಿ ರೂಪುಗೊಂಡ ಜಲಪಾತಗಳು. ಅದರಲ್ಲಿ ಗಗನಚುಕ್ಕಿ ಈಗ ಜೀವ ಪಡೆದುಕೊಂಡಿದೆ.
(2 / 6)
ಮಂಡ್ಯ ಜಿಲ್ಲೆಯ ತಾಲೂಕು ಕೇಂದ್ರ ಮಳವಳ್ಳಿಯಿಂದ 20 ಕಿ.ಮೀ. ಆಗ್ನೇಯಕ್ಕೆ, ಮಳವಳ್ಳಿ-ಕೊಳ್ಳೇಗಾಲ ರಸ್ತೆಯಲ್ಲಿ ಶಿವಸಮುದ್ರವಿದ್ದು. ಅಲ್ಲಿಂದ ಅನತಿ ದೂರದಲ್ಲಿದೆ ಗಗನಚುಕ್ಕಿ ಜಲಪಾತ.
(3 / 6)
ಕಾವೇರಿ ನೀರಿನಿಂದ ವಿದ್ಯುತ್ತನ್ನು ಉತ್ಪಾದಿಸುವ ಸಲುವಾಗಿ ಅಂದಿನ ದಿವಾನರಾಗಿದ್ದ ಸರ್.ಕೆ.ಶೇಷಾದ್ರಿ ಅಯ್ಯರ್ ಅವರು ನಿರಂತರವಾಗಿ ಪರಿಶ್ರಮಿಸಿದ್ದರ ಪರಿಣಾಮವಾಗಿ ರೂಪಗೊಂಡ ಕರ್ನಾಟಕ ಮೊದಲ ವಿದ್ಯುತ್ ಘಟಕದ ಸಮೀಪದಲ್ಲಿಯೇ ಈ ಜಲಪಾತವಿದೆ. ಇಲ್ಲಿಂದ ಬಿದ್ದ ನೀರು ಜಲ ವಿದ್ಯುತ್ ಘಟಕಕ್ಕೆ ಹೋಗುತ್ತದೆ.
(4 / 6)
ಈ ಜಲಪಾತ ವೀಕ್ಷಣೆಗೆ ಬೆಂಗಳೂರು, ಮಂಡ್ಯ, ಮೈಸೂರು, ಚಾಮರಾಜನಗರದಿಂದ ಆಗಮಿಸಬಹುದು. ಮಳವಳ್ಳಿ ಹಾಗೂ ಕೊಳ್ಳೇಗಾಲ ಭಾಗದಿಂದ ಈ ಜಲಪಾತಕ್ಕೆ ಹೋಗಲು ಬಸ್ ವ್ಯವಸ್ಥೆಯಿದೆ.
(5 / 6)
ಗಗನಚುಕ್ಕಿ ಜಲಪಾತ ವೀಕ್ಷಣೆಗೆ ಟವರ್‌ಗಳು ಇವೆ. ಅಲ್ಲಿಯೇ ನಿಂತು ಬೋರ್ಗರೆದು ಬೀಳುವ ಜಲಪಾತವನ್ನು ಕಣ್ತುಂಬಿಕೊಳ್ಳಬಹುದು. ಕೆಳಕ್ಕೆ ಹೋಗಲು ಅವಕಾಶವಿದ್ದರೂ ಮುನ್ನೆಚ್ಚರಿಕೆ ಅವಶ್ಯ.
ಇತರ ಗ್ಯಾಲರಿಗಳು