Indian Wildlife: ಭಾರತದ ಅರಣ್ಯ ಪ್ರದೇಶಗಳಲ್ಲಿ ಅಳಿವಂಚಿನಲ್ಲಿರುವ ಪಟ್ಟಿಯಲ್ಲಿ ಪ್ರಮುಖ ಪ್ರಾಣಿಗಳು ಯಾವುದಿರಬಹುದು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Indian Wildlife: ಭಾರತದ ಅರಣ್ಯ ಪ್ರದೇಶಗಳಲ್ಲಿ ಅಳಿವಂಚಿನಲ್ಲಿರುವ ಪಟ್ಟಿಯಲ್ಲಿ ಪ್ರಮುಖ ಪ್ರಾಣಿಗಳು ಯಾವುದಿರಬಹುದು

Indian Wildlife: ಭಾರತದ ಅರಣ್ಯ ಪ್ರದೇಶಗಳಲ್ಲಿ ಅಳಿವಂಚಿನಲ್ಲಿರುವ ಪಟ್ಟಿಯಲ್ಲಿ ಪ್ರಮುಖ ಪ್ರಾಣಿಗಳು ಯಾವುದಿರಬಹುದು

  • ಭಾರತ ಒಂದು ಕಾಲಕ್ಕೆ ವನ್ಯಜೀವಿಗಳ ಪ್ರಮುಖ ತಾಣ. ಬೇಟೆ, ಹತ್ಯೆ ಕಾರಣಗಳಿಂದ ಬಹಳಷ್ಟು ಪ್ರಾಣಿಗಳ ಸಂತತಿ ಅಳಿದಿದೆ. ಇನ್ನು ಕೆಲವು ಪ್ರಾಣಿಗಳು ಅಳಿವಿನ ಅಂಚಿನ ಪಟ್ಟಿಯಲ್ಲಿವೆ. ಅವುಗಳ ರಕ್ಷಣೆಗೆ ಸರ್ಕಾರಗಳು ಒತ್ತು ನೀಡಿವೆ. ಅಂತಹ ಅಳಿವಿನಂಚಿನ ವನ್ಯಜೀವಿ ಪ್ರಭೇದಗಳು ಹಾಗೂ ಅವು ಪ್ರಮುಖವಾಗಿ ಕಂಡುಬರುವ ಸ್ಥಳಗಳ ಚಿತ್ರನೋಟ ಇಲ್ಲಿದೆ.
  • ಮಾಹಿತಿ: ಪರಿಸರ ಪರಿವಾರ

ಏಷ್ಯಾದ ಸಿಂಹ, ಈಗ  ಗುಜರಾತ್ ನ  ಗಿರ್ ಅರಣ್ಯ ಪ್ರದೇಶದಲ್ಲಿ ಮಾತ್ರ ಉಳಿದುಕೊಂಡಿವೆ. ಅಲ್ಲಿ 109 ಗಂಡು, 201 ಹೆಣ್ಣು ಹಾಗೂ 213  ಮರಿ ಸಿಂಹಗಳು ಇರುವ ಮಾಹಿತಿಯಿದೆ.
icon

(1 / 10)

ಭಾರತದ ಕಾಡುಗಳಲ್ಲಿ ಯಥೇಚ್ಛವಾಗಿದ್ದ ರಾಯಲ್ ಬೆಂಗಾಲ್ ಹುಲಿಗಳು ಈಗ ಸೀಮಿತ ರಾಜ್ಯಗಳಲ್ಲಿ ಆತಂಕದ ನಡುವೆಯೇ ನೆಲೆ ಕಂಡುಕೊಂಡಿವೆ. ಮಧ್ಯಪ್ರದೇಶ, ಕರ್ನಾಟಕ, ಮಹಾರಾಷ್ಟ್ರ ಸಹಿತ ಕೆಲ ರಾಜ್ಯಗಳು ಹುಲಿ ರಕ್ಷಣೆಯಲ್ಲಿ ಮುಂಚೂಣಿಯಲ್ಲಿದ್ದು, ಮೂರು ಸಾವಿರದಷ್ಟು ಹುಲಿ ಇರುವ ಅಂದಾಜಿದೆ.
icon

(2 / 10)

ಒಂದು ಕಾಲಕ್ಕೆ ಭಾರೀ ಸಂಖ್ಯೆಯಲ್ಲಿದ್ದ ಒಂಟಿ ಕೊಂಬಿನ ಘೇಂಡಾಮೃಗಾ (Greater One-Horned Rhinoceros) ಈಗ ಅಸ್ಸಾಂನ ಕಾಜಿರಂಗಕ್ಕೆ ಸೀಮಿತವಾಗಿವೆ. ಇತ್ತೀಚಿನ ನಡೆದ ಗಣತಿಯಲ್ಲಿ ಮೂರು ಸಾವಿರಕ್ಕೂ ಕಡಿಮೆ ಇರುವುದು ಪತ್ತೆಯಾಗಿದೆ.
icon

(3 / 10)

ಜಿಂಕೆ ಜಾತಿಯ, ಲಗುಬಗನೆ ಜಿಗಿಯುತ್ತಾ ಓಡುವ ಕೃಷ್ಣ ಮೃಗಗಳು (Blackbuck) ಕೂಡ ಬೇಟೆಯಿಂದ ಬಹುತೇಕ ಕಡಿಮೆಯಾಗಿವೆ.  ರಾಜಸ್ಥಾನ, ಕರ್ನಾಟಕದ ಕೆಲವು ಭಾಗದಲ್ಲಿ ಮಾತ್ರ ಕೃಷ್ಣಮೃಗಗಳನ್ನು ಕಾಣಬಹುದು.
icon

(4 / 10)

ಸಂಗೈ  ಎನ್ನುವ ಜಿಂಕೆ ಜಾತಿಯ ವಿಭಿನ್ನ ಕೊಂಬುಗಳ ಪ್ರಾಣಿಗಳು ಮಣಿಪುರದ  ಕೈಬುಲ್ ಲಮ್ಜಾವೊ ರಾಷ್ಟ್ರೀಯ ಉದ್ಯಾನವನದಲ್ಲಿ ನೆಲೆ ಕಂಡು ಕೊಂಡಿದ್ದರೂ ಇವುಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ.
icon

(5 / 10)

ಹಿಂದೆಲ್ಲಾ ಕರ್ನಾಟಕ ಮಾತ್ರವಲ್ಲದೇ ಪಶ್ಚಿಮ ಘಟ್ಟ ಭಾಗಕ್ಕೆ ಹೋದರೆ ಸಿಂಹ ಬಾಲದ ಸಿಂಘಳೀಕ ಕಾಣುತ್ತಿದ್ದವು. ಕೇರಳ, ಕರ್ನಾಟಕ, ತಮಿಳು ನಾಡಿನ ಮಳೆಕಾಡುಗಳಲ್ಲೂ ಇವುಗಳ ಸಂ‍ಖ್ಯೆ ಕಡಿಮೆಯಾಗಿದೆ. 
icon

(6 / 10)

ಮುಂಗಸಿಯನ್ನು ನೋಡಿದಂತೆಯೇ ಆಗುವ ನೀಲ್ಗಿರಿ ಮಾರ್ಟಿನ್ ಎನ್ನುವ ಪ್ರಾಣಿಗಳು ಅಳಿವಿನಂಚಿನಲ್ಲಿವೆ. ಕರ್ನಾಟಕ, ತಮಿಳುನಾಡು ಹಾಗೂ ಕೇರಳದಲ್ಲಿ ಹಂಚಿರುವ ನೀಲಗಿರಿ ಪರ್ವತ ಶ್ರೇಣಿಯ ಪಶ್ಚಿಮಘಟ್ಟಗಳಲ್ಲಿ ಬೆರಳಣಿಕೆಯಷ್ಟು ಉಳಿದಿವೆ.
icon

(7 / 10)

ಕರ್ನಾಟಕದ ದಕ್ಷಿಣ ಕನ್ನಡ, ಉತ್ತರ ಕನ್ನಡ ಸಹಿತ ಪಶ್ಚಿಮ ಘಟ್ಟಗಳು, ಪೂರ್ವ ಘಟ್ಟಗಳು ಮತ್ತು ಸಾತ್ಪುರ ಪರ್ವತ ಶ್ರೇಣಿಗಳಲ್ಲಿರುವ ಕೆಂದಲಿಳು (Malabar Giant Squirrel)  ಕೂಡ ಈಗ ಕಡಿಮೆ ಸಂಖ್ಯೆಗೆ ಬಂದಿವೆ. 
icon

(8 / 10)

ರಾಜಸ್ಥಾನ್, ಗುಜರಾತ್, ಕರ್ನಾಟಕದ ಅರಣ್ಯದಂಚಿನ ಪ್ರದೇಶ ಕೆಲವೇ ಸಂಖ್ಯೆಯಲ್ಲಿ ಉಳಿದಿರುವ ಹಕ್ಕಿ ಗ್ರೇಟ್ ಇಂಡಿಯನ್ ಬಸ್ಟರ್ಡ್. ದೊರೆವಾಯನ ಹಕ್ಕಿ ಎಂದು ಕರೆಯುವ ಇದರ ರಕ್ಷಣೆಗೆ ಸಾಕಷ್ಟು ಕಾರ್ಯಕ್ರಮ ರೂಪಿಸಿದರೂ ಹುಲ್ಲುಗಾವಲು ಅಳಿದು ಹಕ್ಕಿಗಳ ಸಂತತಿಯೂ ತಗ್ಗಿದೆ.
icon

(9 / 10)

ಹಲ್ಲಿಗಳ ಜಾತಿಯಲ್ಲಿ ವಿಭಿನ್ನ ಬಣ್ಣ ಹಾಗೂ ನಡವಳಿಕೆಯಿಂದ ಗಮನ ಸೆಳೆಯುವ ಫ್ಯಾನ್-ಥ್ರೋಟೆಡ್ ಹಲ್ಲಿ ಈಗ ಉಳಿದಿರುವುದು ಕೋರಮಂಡಲ್ ಕರಾವಳಿಯಲ್ಲಿ ಮಾತ್ರ.
icon

(10 / 10)

ಇತರ ಗ್ಯಾಲರಿಗಳು