ಮುಂಬಯಿಯಲ್ಲಿ ಶುರುವಾಯಿತು ಭಾರತದ ಮೊದಲ ಪ್ಯಾರಡಾಕ್ಸ್ ಮ್ಯೂಸಿಯಂ, ವಿರೋಧಾಭಾಸದ ಭ್ರಮಾಲೋಕದಲ್ಲಿ ವಿಹರಿಸಲು ಸಜ್ಜಾಗಿ
ಎ ವರ್ಲ್ಡ್ ಆಫ್ ಇಲ್ಯೂಷನ್ ಲ್ಯಾಂಡ್ಸ್, ಭಾರತದ ಮೊದಲ ವಿರೋಧಾಭಾಸ ವಸ್ತುಸಂಗ್ರಹಾಲಯ (ಪ್ಯಾರಡಾಕ್ಸ್ ಮ್ಯೂಸಿಯಂ) ವನ್ನು ಮುಂಬಯಿಯಲ್ಲಿ ತೆರೆದಿದೆ. ಇದು ಕಲೆ, ವಿಜ್ಞಾನ ಮತ್ತು ಆಪ್ಟಿಕಲ್ ಭ್ರಮೆಗಳನ್ನು ಅನುಭವದ ಮನರಂಜನೆ ಒದಗಿಸುತ್ತಿದ್ದು, ಅವುಗಳ ಕಡೆಗೊಂದು ನೋಟ ಬೀರೋಣ. ಇಲ್ಲಿದೆ ಚಿತ್ರನೋಟ.
(1 / 8)
ಅಂತಾರಾಷ್ಟ್ರೀಯ ಕಂಪನಿ ಪಾರಾಡಾಕ್ಸ್ ಮ್ಯೂಸಿಯಂ ತನ್ನ ಮೊದಲ ಶಾಖೆಯನ್ನು ಮುಂಬಯಿಯಲ್ಲಿ ಶುರುಮಾಡಿದ್ದು, ಭಾರತದ ಸಂಪೂರ್ಣ ವಿರೋಧಭಾಸದ ಮ್ಯೂಸಿಯಂ ಎಂಬ ಕೀರ್ತಿಗೆ ಭಾಜವಾಗಿದೆ. ಈ ಮ್ಯೂಸಿಯಂನ ಚಿತ್ರನೋಟ ಇಲ್ಲಿದೆ.
(2 / 8)
ಪ್ಯಾರಡಾಕ್ಸ್ ಮ್ಯೂಸಿಯಂ ಕಲೆ, ವಿಜ್ಞಾನ ಮತ್ತು ಆಪ್ಟಿಕಲ್ ಭ್ರಮೆಗಳನ್ನು ಅನುಭವದ ಮನರಂಜನೆಯನ್ನಾಗಿ ಪ್ರೇಕ್ಷಕರಿಗೆ ಒದಗಿಸುವ ಒಂದು ಜಾಗತಿಕ ಬ್ರ್ಯಾಂಡ್.
(4 / 8)
ಅದೇ ಮ್ಯೂಸಿಯಂನ ಕೆಲವು ಭ್ರಮೆ ಹುಟ್ಟಿಸುವ ದೃಶ್ಯಗಳನ್ನು ಇಲ್ಲಿ ನೋಡಬಹುದು, ಫೋಟೋ, ವಿಡಿಯೋ ಮಾಡಿಕೊಳ್ಳುವುದಕ್ಕೂ ಅವಕಾಶವಿದೆ.
(6 / 8)
ಮುಂಬೈನಲ್ಲಿ ಆರಂಭವಾದ ಈ ಮ್ಯೂಸಿಯಂ ಈಗ ಆಕರ್ಷಣೆಯ ಕೇಂದ್ರಬಿಂದುವಾಗುತ್ತಿದ್ದು, ಜನರನ್ನು ತನ್ನೆಡೆಗೆ ಸೆಳೆಯತೊಡಗಿದೆ.
(7 / 8)
ಮುಂಬೈನಲ್ಲಿರುವ ಈ ಮ್ಯೂಸಿಯಂ ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 11 ರಿಂದ ರಾತ್ರಿ 8 ರವರೆಗೆ ಸಾರ್ವಜನಿಕರಿಗೆ ತೆರೆದಿರುತ್ತದೆ.
ಇತರ ಗ್ಯಾಲರಿಗಳು