ವಿಶ್ವಕಪ್ ಸೆಮಿ ಫೈನಲ್, ಫೈನಲ್‌ನಲ್ಲಿ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದ ಆಟಗಾರರು ಇವರು; ಫೋಟೊಸ್
ಐಸಿಸಿ ವಿಶ್ವಕಪ್ ಸೆಮಿ ಫೈನಲ್ ಮತ್ತು ಫೈನಲ್ ಪಂದ್ಯಗಳಲ್ಲಿ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದ ಆಟಗಾರರು ವಿವರ ಇಲ್ಲಿದೆ. ಟೀಂ ಇಂಡಿಯಾ ಪರ ಮೋಹಿಂದರ್ ಈ ಸಾಧನೆ ಮಾಡಿದ್ದಾರೆ.
(1 / 5)
ಐಸಿಸಿ ವಿಶ್ವಕಪ್ ಸೆಮಿ ಫೈನಲ್ ಮತ್ತು ಫೈನಲ್ ಪಂದ್ಯಗಳಲ್ಲಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಮೊದಲ ಬಾರಿಗೆ ಪಡೆದಿದ್ದು ನಮ್ಮ ಭಾರತೀಯ ಆಟಗಾರ. ಈ ಪಟ್ಟಿಯಲ್ಲಿ ಇನ್ನೂ ಯಾರೆಲ್ಲಾ ಇದ್ದಾರೆ ಅನ್ನೋದರ ಮಾಹಿತಿ ಇಲ್ಲಿದೆ.
(2 / 5)
1983ರಲ್ಲಿ ಭಾರತ ಮೊದಲ ಬಾರಿಗೆ ವಿಶ್ವಕಪ್ ಚಾಂಪಿಯನ್ ಆಗಿತ್ತು. ಆಗ ಮೋಹಿಂದರ್ ಅಮರನಾತ್ ಅವರು ಸೆಮಿ ಫೈನಲ್ ಮತ್ತು ಫೈನಲ್ ಪಂದ್ಯದಲ್ಲಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದಿದ್ದರು.
(3 / 5)
ಶ್ರೀಲಂಕಾದ ಬ್ಯಾಟರ್ ಅಮರನಾಥ್ ಡಿ ಸಿಲ್ವಾ ಅವರು 1996ರಲ್ಲಿ ಸೆಮಿ ಫೈನಲ್ ಮತ್ತು ಫೈನಲ್ ನಲ್ಲಿ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾಗಿದ್ದರು.
(4 / 5)
ಆಸ್ಟ್ರೇಲಿಯಾದ ಕ್ರಿಕೆಟ್ ದಂತಕಥೆ ಶೇನ್ ವಾರ್ನ್ ಜಗತ್ತಿನ ಶ್ರೇಷ್ಠ ಸ್ಪಿನ್ನರ್. ಈ ಸ್ಪಿನ್ ಮಾಂತ್ರಿಕ 1999ರ ವಿಶ್ವಕಪ್‌ನ ಸೆಮಿ ಫೈನಲ್ ಮತ್ತು ಫೈನಲ್ ಪಂದ್ಯದಲ್ಲಿ ಮ್ಯಾನ್ ಆಫ್ ದಿ ಮ್ಯಾಚ್ ಗೌರವಕ್ಕೆ ಪಾತ್ರರಾಗಿದ್ದರು.
(5 / 5)
2023ರ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಸೋಲಿಗೆ ಪ್ರಮುಖ ಕಾರಣಗಳಲ್ಲಿ ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ ಕೂಡ ಒಬ್ಬರು. ಅಹಮದಾಬಾದ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಹೆಡ್ 137 ರನ್‌ಗಳ ಬಾರಿಸಿ ಭಾರತದ ವಿಶ್ವಕಪ್ ಗೆಲುವಿನ ಕನಸನ್ನು ಭಗ್ನಗೊಳಿಸಿದ್ದರು. ಟ್ರಾವಿಸ್ ಹೆಡ್ ಈ ಬಾರಿಯ ವಿಶ್ವಕಪ್ ಸೆಮಿ ಫೈನಲ್ ಹಾಗೂ ಫೈನಲ್ ಎರಡರಲ್ಲೂ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಇತರ ಗ್ಯಾಲರಿಗಳು