ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Panchayat Season 3‌: ಫುಲೇರಾ ಗ್ರಾಮ ಪಂಚಾಯ್ತಿಗೆ ಸ್ವಾಗತ; ‘ಪಂಚಾಯತ್‌ ಸೀಸನ್‌ 3’ ವೆಬ್‌ ಸಿರೀಸ್ ಈ ದಿನದಿಂದ ಒಟಿಟಿಯಲ್ಲಿ ಸ್ಟ್ರೀಮಿಂಗ್

Panchayat Season 3‌: ಫುಲೇರಾ ಗ್ರಾಮ ಪಂಚಾಯ್ತಿಗೆ ಸ್ವಾಗತ; ‘ಪಂಚಾಯತ್‌ ಸೀಸನ್‌ 3’ ವೆಬ್‌ ಸಿರೀಸ್ ಈ ದಿನದಿಂದ ಒಟಿಟಿಯಲ್ಲಿ ಸ್ಟ್ರೀಮಿಂಗ್

  • Panchayat Season 3‌: ಒಟಿಟಿಯಲ್ಲಿ ಅತಿ ಹೆಚ್ಚು ನೋಡುಗರನ್ನು ಸೆಳೆದ ವೆಬ್‌ ಸಿರೀಸ್‌ಗಳಲ್ಲಿ ಪಂಚಾಯತ್‌ ಸಹ ಒಂದು. ಒಂದು ಗ್ರಾಮದಲ್ಲಿನ ಸಣ್ಣ ಸಣ್ಣ ಕಥೆಗಳನ್ನೇ ಆ ಸೊಗಡಿನಲ್ಲಿ ಹೆಣೆದು ನೋಡುಗರ ಮುಂದಿಟ್ಟಿದ್ದರು ನಿರ್ದೇಶಕರು. ಈಗ ಇದೇ ಪಂಚಾಯತ್‌ನ ಮೂರನೇ ಸೀಸನ್‌ ಪ್ರಸಾರಕ್ಕೆ ಅಣಿಯಾಗಿದೆ. ಯಾವಾಗ? ಎಲ್ಲಿ ವೀಕ್ಷಣೆ? ಹೀಗಿದೆ ಮಾಹಿತಿ.

ಚಂದನ್‌ ಕುಮಾರ್‌ ಬರೆದ ಪಂಚಾಯತ್‌ ವೆಬ್‌ ಸಿರೀಸ್‌, ಯಶಸ್ವಿ ವೆಬ್‌ ಸರಣಿಗಳಲ್ಲೊಂದು. ಈಗಾಗಲೇ ಎರಡು ಸೀಸನ್‌ ಮುಗಿಸಿರುವ ಈ ಪಂಚಾಯತ್, ಈಗ ಮೂರನೇ ಸೀಸನ್‌ ಆಗಮನಕ್ಕೆ ದಿನಗಣನೆ ಶುರುವಾಗಿದೆ. 
icon

(1 / 6)

ದೀಪಕ್‌ ಕುಮಾರ್‌ ಮಿಶ್ರಾ ಈ ಗ್ರಾಮ್ಯ ಸೊಗಡಿನ ಕಥೆಯನ್ನು ಅಷ್ಟೇ ಚೆಂದವಾಗಿ ಹೆಣೆದು ತಂದಿದ್ದರು. ಒಂದು ಹಳ್ಳಿಯಲ್ಲಿ ನಡೆಯುವ ಸಣ್ಣ ಸಣ್ಣ ವಿಷಯಗಳನ್ನೇ ಅಲ್ಲಿನ ಸೊಗಡಿಗೆ ಹೆಣದು ನೋಡುಗರ ಮುಂದಿಟ್ಟಿದ್ದರು ನಿರ್ದೇಶಕರು. 
icon

(2 / 6)

ಅಭಿಷೇಕ್‌ ತ್ರಿಪಾಠಿಯಾಗಿ ಜೀತೇಂದ್ರ ಕುಮಾರ್‌ ಈ ಸಿರೀಸ್‌ ಸಾರಥಿ. ಇನ್ನುಳಿದಂತೆ, ರಘುಬೀರ್‌ ಯಾದವ್‌, ನೀನಾ ಗುಪ್ತಾ, ಚಂದನ್‌ ರಾಯ್‌, ಫೈಸಲ್‌ ಮಲಿಕ್‌ ಈ ಸರಣಿಯ ತಾರಾಗಣದಲ್ಲಿದ್ದಾರೆ. ಉತ್ತರ ಪ್ರದೇಶದ ಫುಲೇರಾ ಗ್ರಾಮದ ಕಾಲ್ಪನಿಕ ಕಥೆಯನ್ನು ಈ ಸರಣಿ ಒಳಗೊಂಡಿದೆ.
icon

(3 / 6)

ಕಳೆದ ಎರಡು ಸೀಸನ್‌ ಸೂಪರ್‌ ಹಿಟ್‌ ಆಗಿದ್ದೇ ತಡ, ಮೂರನೇ ಸೀಸನ್‌ ಯಾವಾಗ ಎಂದು ಸಾಕಷ್ಟು ಮಂದಿ ಕೇಳಿದ್ದೇ ಬಂತು. ಆದರೆ, ತಂಡದಿಂದ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಇತ್ತೀಚಿಗೆ ಆ ಕಾಯುವಿಕೆಗೆ ತೆರೆ ಬಿದ್ದಿತ್ತು. 
icon

(4 / 6)

ಅಂದರೆ, ಅಮೆಜಾನ್‌ ಪ್ರೈಂ ಒಟಿಟಿಯಲ್ಲಿ ಮೇ 28ರಂದು ಪಂಚಾಯತ್‌ ಸೀಸನ್‌ 3 ಸ್ಟ್ರೀಮಿಂಗ್‌ ಆರಂಭಿಸಲಿದೆ. 
icon

(5 / 6)

ಅಂದಹಾಗೆ 2022ರ ಏಪ್ರಿಲ್‌ 3ರಂದು ಮೊದಲ ಸೀಸನ್‌ ಪ್ರಸಾರ ಕಂಡಿತ್ತು. ಅದಾದ ಬಳಿಕ 2022ರ ಮೇ 18ರಂದು ಎರಡನೇ ಸೀಸನ್‌ ಸ್ಟ್ರೀಮಿಂಗ್‌ ಆರಂಭಿಸಿತ್ತು. ಈಗ ಇದೇ ಮೇ 28ಕ್ಕೆ 3ನೇ ಸೀಸನ್‌ ಶುರುವಾಗಲಿದೆ.  
icon

(6 / 6)

IPL_Entry_Point

ಇತರ ಗ್ಯಾಲರಿಗಳು