OTT News: ಅಲೋನ್ ಚಿತ್ರದಿಂದ ಕನ್ನಡದ ರಾಘುವರೆಗೂ; ಇಲ್ಲಿವೆ ಒಟಿಟಿಯಲ್ಲಿನ ಸಿಂಗಲ್ ಕ್ಯಾರೆಕ್ಟರ್ ಸಿನಿಮಾಗಳ ಲಿಸ್ಟ್
ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಒಂದೇ ಪಾತ್ರದೊಂದಿಗೆ ನಿರ್ಮಿಸಲಾದ ಕೆಲವು ಸಿನಿಮಾಗಳು ಒಟಿಟಿ ಪ್ರೇಕ್ಷಕರನ್ನು ರೋಮಾಂಚನಗೊಳಿಸಿವೆ. ಈ ಸಿಂಗಲ್ ಕ್ಯಾರೆಕ್ಟರ್ ಚಿತ್ರಗಳನ್ನು ನೀವು ನೋಡಲು ಬಯಸಿದರೆ ಈ ಒಟಿಟಿಗೆ ಭೇಟಿ ನೀಡಬಹುದು.
(1 / 5)
ಹನ್ಸಿಕಾ ಮೋಟ್ವಾನಿ ನಟಿಸಿರುವ ತೆಲುಗಿನ ಸೈಕಲಾಜಿಕಲ್ ಥ್ರಿಲ್ಲರ್ ಚಿತ್ರ 105 ಮಿನಿಟ್ಸ್. ಕೇವಲ ಒಂದೇ ಪಾತ್ರದೊಂದಿಗೆ ಸಾಗುವ ಈ ಸಿನಿಮಾ ಆಹಾ ಒಟಿಟಿ ಮತ್ತು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಪ್ರಸಾರವಾಗುತ್ತಿದೆ. ಈ ಚಿತ್ರವು ಅಗೋಚರ ಶಕ್ತಿಯಿಂದಾಗಿ ತನ್ನ ಮನೆಯಲ್ಲಿ ಬಂಧಿಯಾಗಿದ್ದ ಯುವತಿಯೊಬ್ಬಳು ಹೇಗೆ ತಪ್ಪಿಸಿಕೊಳ್ಳುತ್ತಾಳೆ ಎಂಬ ಅಂಶವನ್ನು ಆಧರಿಸಿದೆ.
(2 / 5)
ಮಲಯಾಳಂ ಚಿತ್ರ ಅಲೋನ್ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ವೀಕ್ಷಿಸಬಹುದು, ನಟ ಮೋಹನ್ ಲಾಲ್ ಅವರೊಬ್ಬರೇ ಈ ಸಿನಿಮಾದಲ್ಲಿ ನಟಿಸಿದ್ದು, ಲಾಕ್‌ಡೌನ್ ಸಮಯದಲ್ಲಿ ಹರಿದಾಸ್ ಎಂಬ ವ್ಯಕ್ತಿ ಹೊಸ ಫ್ಲಾಟ್‌ಗೆ ಇಳಿಯುತ್ತಾನೆ. ಈ ಚಿತ್ರವು ಹಾರರ್ ಥ್ರಿಲ್ಲರ್ ಆಗಿದ್ದು, ಆ ಫ್ಲಾಟ್‌ನಲ್ಲಿರುವ ಆತ್ಮಗಳಿಂದ ಹರಿದಾಸ್ ಏನೆಲ್ಲ ತೊಂದರೆಗಳನ್ನು ಎದುರಿಸುತ್ತಾನೆ ಎಂಬುದೇ ಹೈಲೈಟ್.
(3 / 5)
ಒಂದೇ ಪಾತ್ರವನ್ನು ಹೊಂದಿರುವ ತೆಲುಗು ಚಿತ್ರ ಹಲೋ ಮೀರಾ ಅಮೆಜಾನ್ ಪ್ರೈಮ್ ಒಟಿಟಿಯಲ್ಲಿ ಲಭ್ಯವಿದೆ. ಈ ಚಿತ್ರವು ಸೈಕಲಾಜಿಕಲ್ ಥ್ರಿಲ್ಲರ್ ಆಗಿದ್ದು, ಮೀರಾ ಎಂಬ ಯುವತಿಯ ರಸ್ತೆ ಪ್ರಯಾಣದಲ್ಲಿ ಅನಿರೀಕ್ಷಿತವಾಗಿ ಘಟಿಸುವ ಬೆಳವಣಿಗೆಗಳನ್ನು ಈ ಸಿನಿಮಾದಲ್ಲಿ ರೋಚಕವಾಗಿ ಕಟ್ಟಿಕೊಡಲಾಗಿದೆ.
(4 / 5)
ವಿ.ಕೆ.ಪ್ರಕಾಶ್ ನಿರ್ದೇಶನದ ನಿತ್ಯಾ ಮೆನನ್ ಅಭಿನಯದ ಮಲಯಾಳಂ ಚಿತ್ರ ಪ್ರಾಣ ಅಮೆಜಾನ್ ಪ್ರೈಮ್ನಲ್ಲಿ ಪ್ರಸಾರವಾಗುತ್ತಿದೆ. ಬರಹಗಾರ್ತಿಯೊಬ್ಬಳ ಕಥೆ ಈ ಸಿನಿಮಾದಲ್ಲಿ ಸಾಗಲಿದ್ದು, ನಿತ್ಯಾ ಮೆನನ್ ಒಬ್ಬರೇ ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಇತರ ಗ್ಯಾಲರಿಗಳು