ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಫಿಲ್ ಸಾಲ್ಟ್, ಬೈರ್​ಸ್ಟೋ ಅಬ್ಬರ; ವೆಸ್ಟ್ ಇಂಡೀಸ್ ವಿರುದ್ಧ ಇಂಗ್ಲೆಂಡ್​ಗೆ 8 ವಿಕೆಟ್​ ಭರ್ಜರಿ ಜಯ

ಫಿಲ್ ಸಾಲ್ಟ್, ಬೈರ್​ಸ್ಟೋ ಅಬ್ಬರ; ವೆಸ್ಟ್ ಇಂಡೀಸ್ ವಿರುದ್ಧ ಇಂಗ್ಲೆಂಡ್​ಗೆ 8 ವಿಕೆಟ್​ ಭರ್ಜರಿ ಜಯ

  • England vs West Indies Photos: ವೆಸ್ಟ್ ಇಂಡೀಸ್ ವಿರುದ್ಧದ ಟಿ20 ವಿಶ್ವಕಪ್ 2024 ಸೂಪರ್ 8 ಪಂದ್ಯದಲ್ಲಿ ಇಂಗ್ಲೆಂಡ್ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ಸೇಂಟ್ ಲೂಸಿಯಾದಲ್ಲಿ ಜೂನ್ 20ರ ಗುರುವಾರ ಬೆಳಿಗ್ಗೆ ನಡೆದ ಟಿ20 ವಿಶ್ವಕಪ್ 2024ರ ಸೂಪರ್-8 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡದ ವಿರುದ್ಧ ಇಂಗ್ಲೆಂಡ್ 8 ವಿಕೆಟ್​ಗಳಿಂದ ಸೋಲಿಸಿತು. ಈ ಹಂತದಲ್ಲಿ ಇಂಗ್ಲೆಂಡ್ ಇನ್ನೊಂದು ಪಂದ್ಯ ಗೆದ್ದರೆ ಸೆಮಿಫೈನಲ್ ಟಿಕೆಟ್ ಖಚಿತಗೊಳ್ಳಲಿದೆ.
icon

(1 / 5)

ಸೇಂಟ್ ಲೂಸಿಯಾದಲ್ಲಿ ಜೂನ್ 20ರ ಗುರುವಾರ ಬೆಳಿಗ್ಗೆ ನಡೆದ ಟಿ20 ವಿಶ್ವಕಪ್ 2024ರ ಸೂಪರ್-8 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡದ ವಿರುದ್ಧ ಇಂಗ್ಲೆಂಡ್ 8 ವಿಕೆಟ್​ಗಳಿಂದ ಸೋಲಿಸಿತು. ಈ ಹಂತದಲ್ಲಿ ಇಂಗ್ಲೆಂಡ್ ಇನ್ನೊಂದು ಪಂದ್ಯ ಗೆದ್ದರೆ ಸೆಮಿಫೈನಲ್ ಟಿಕೆಟ್ ಖಚಿತಗೊಳ್ಳಲಿದೆ.

181 ರನ್​​ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್ 17.3 ಓವರ್​​​​ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು. ಫಿಲ್ ಸಾಲ್ಟ್ 47 ಎಸೆತಗಳಲ್ಲಿ 7 ಬೌಂಡರಿ, 5 ಸಿಕ್ಸರ್ ಸಹಿತ ಅಜೇಯ 87 ರನ್ ಚಚ್ಚಿದರು. ಜಾನಿ ಬೈರ್​ಸ್ಟೋ ಅಜೇಯ 48 ರನ್ ಸಿಡಿಸಿ ಮಿಂಚಿದರು.
icon

(2 / 5)

181 ರನ್​​ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್ 17.3 ಓವರ್​​​​ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು. ಫಿಲ್ ಸಾಲ್ಟ್ 47 ಎಸೆತಗಳಲ್ಲಿ 7 ಬೌಂಡರಿ, 5 ಸಿಕ್ಸರ್ ಸಹಿತ ಅಜೇಯ 87 ರನ್ ಚಚ್ಚಿದರು. ಜಾನಿ ಬೈರ್​ಸ್ಟೋ ಅಜೇಯ 48 ರನ್ ಸಿಡಿಸಿ ಮಿಂಚಿದರು.(PTI)

ವೆಸ್ಟ್ ಇಂಡೀಸ್ ಪರ ರಸ್ಟನ್ ಚೇಸ್ ಹಾಗೂ ಆಂಡ್ರೆ ರಸೆಲ್ ತಲಾ 1 ವಿಕೆಟ್ ಪಡೆದರೂ ಗೆಲುವು ತಂದುಕೊಡಲು ಸಾಧ್ಯವಿಲ್ಲ. ಕಳೆದ ಪಂದ್ಯಗಳಲ್ಲಿ ಮಿಂಚಿದ್ದ ಅಲ್ಜಾರಿ ಜೋಸೆಫ್, ರೊಮಾರಿಯೊ ಶೆಫರ್ಡ್ ದುಬಾರಿ ಬೌಲರ್​​ಗಳು ಎನಿಸಿದರು.
icon

(3 / 5)

ವೆಸ್ಟ್ ಇಂಡೀಸ್ ಪರ ರಸ್ಟನ್ ಚೇಸ್ ಹಾಗೂ ಆಂಡ್ರೆ ರಸೆಲ್ ತಲಾ 1 ವಿಕೆಟ್ ಪಡೆದರೂ ಗೆಲುವು ತಂದುಕೊಡಲು ಸಾಧ್ಯವಿಲ್ಲ. ಕಳೆದ ಪಂದ್ಯಗಳಲ್ಲಿ ಮಿಂಚಿದ್ದ ಅಲ್ಜಾರಿ ಜೋಸೆಫ್, ರೊಮಾರಿಯೊ ಶೆಫರ್ಡ್ ದುಬಾರಿ ಬೌಲರ್​​ಗಳು ಎನಿಸಿದರು.(AP)

ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ 20 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 180 ರನ್ ಗಳಿಸಿತು. ಜಾನ್ಸನ್ ಚಾರ್ಲ್ಸ್​ 38, ನಿಕೋಲಸ್ ಪೂರನ್ 36, ರೊವ್ಮನ್ ಪೊವೆಲ್ 36, ಶರ್ಫಾನೆ ರುದರ್ಫೋರ್ಡ್ 28 ರನ್ ಗಳಿಸಿದರು.
icon

(4 / 5)

ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ 20 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 180 ರನ್ ಗಳಿಸಿತು. ಜಾನ್ಸನ್ ಚಾರ್ಲ್ಸ್​ 38, ನಿಕೋಲಸ್ ಪೂರನ್ 36, ರೊವ್ಮನ್ ಪೊವೆಲ್ 36, ಶರ್ಫಾನೆ ರುದರ್ಫೋರ್ಡ್ 28 ರನ್ ಗಳಿಸಿದರು.(PTI)

ಇಂಗ್ಲೆಂಡ್ ಪರ ಜೋಫ್ರಾ ಆರ್ಚರ್, ಆದಿಲ್ ರಶೀದ್, ಮೊಯೀನ್ ಅಲಿ ಹಾಗೂ ಲಿಯಾಮ್ ಲಿವಿಂಗ್​ಸ್ಟನ್​ ತಲಾ 1 ವಿಕೆಟ್ ಪಡೆದರು. ಬೌಲರ್​​​​ಗಳು 20 ಓವರ್​​​ಗಳಲ್ಲಿ ಒಟ್ಟು 51 ಎಸೆತಗಳಲ್ಲಿ ರನ್ ಬಿಟ್ಟುಕೊಟ್ಟಿಲ್ಲ.
icon

(5 / 5)

ಇಂಗ್ಲೆಂಡ್ ಪರ ಜೋಫ್ರಾ ಆರ್ಚರ್, ಆದಿಲ್ ರಶೀದ್, ಮೊಯೀನ್ ಅಲಿ ಹಾಗೂ ಲಿಯಾಮ್ ಲಿವಿಂಗ್​ಸ್ಟನ್​ ತಲಾ 1 ವಿಕೆಟ್ ಪಡೆದರು. ಬೌಲರ್​​​​ಗಳು 20 ಓವರ್​​​ಗಳಲ್ಲಿ ಒಟ್ಟು 51 ಎಸೆತಗಳಲ್ಲಿ ರನ್ ಬಿಟ್ಟುಕೊಟ್ಟಿಲ್ಲ.(PTI)


ಇತರ ಗ್ಯಾಲರಿಗಳು