Radhika Pandit: 39ನೇ ವಸಂತಕ್ಕೆ ಕಾಲಿಟ್ಟ ಸ್ಯಾಂಡಲ್‌ವುಡ್ ಸಿಂಡ್ರೆಲಾ.. ಕಮ್ ಬ್ಯಾಕ್ ಸುದ್ದಿ ಕೊಡ್ತಾರಾ ಯಶ್ ಮಡದಿ?
- ನಟಿ ರಾಧಿಕಾ ಪಂಡಿತ್ ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. 39ನೇ ವಸಂತಕ್ಕೆ ಕಾಲಿಟ್ಟಿರುವ ಸ್ಯಾಂಡಲ್‌ವುಡ್ ಸಿಂಡ್ರೆಲಾಗೆ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.
- ನಟಿ ರಾಧಿಕಾ ಪಂಡಿತ್ ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. 39ನೇ ವಸಂತಕ್ಕೆ ಕಾಲಿಟ್ಟಿರುವ ಸ್ಯಾಂಡಲ್‌ವುಡ್ ಸಿಂಡ್ರೆಲಾಗೆ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.
(1 / 10)
ಆದರೆ ರಾಧಿಕಾ ಈ ಬಾರಿ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳದೆ ಇರುವುದು ಎಲ್ಲರಿಗೂ ನಿರಾಸೆಯಾಗಿದೆ. (PC: Radhika pandit Instagram, Radhika Pandit fans)
(2 / 10)
''ಈ ಬಾರಿ ನಾನು ಹುಟ್ಟುಹಬ್ಬಕ್ಕೆ ಹೊರ ಹೋಗುತ್ತಿದ್ದೇನೆ. ಆದ್ದರಿಂದ ಈ ಬಾರಿ ನಿಮ್ಮೊಂದಿಗೆ ಬರ್ತ್‌ಡೇ ಆಚರಿಸಿಕೊಳ್ಳಲಾಗುತ್ತಿಲ್ಲ. ನನಗೆ ಗೊತ್ತು ಇದು ನಿಮಗೆ ಬೇಸರವಾಗಿದೆ, ಆದರೆ ಮತ್ತೆ ನಿಮ್ಮೆಲ್ಲರನ್ನೂ ಭೇಟಿ ಮಾಡುತ್ತೇನೆ'' ಎಂದು ರಾಧಿಕಾ ಪಂಡಿತ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
(4 / 10)
ಬೆಂಗಳೂರಿನಲ್ಲೇ ವಿದ್ಯಾಭ್ಯಾಸ ಮುಗಿಸಿದ ಈ ಚೆಲುವೆ ಕಿರುತೆರೆ ಮೂಲಕ ಬಣ್ಣದ ಲೋಕಕ್ಕೆ ಪರಿಚಯ ಆದರು. ನಂದಗೋಕುಲ, ಕಾದಂಬರಿ, ಸುಮಂಗಲಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.
(5 / 10)
'ಒಲವೇ ಜೀವನ ಲೆಕ್ಕಾಚಾರ' ಚಿತ್ರದ ಮೂಲಕ ರಾಧಿಕಾ ಆಕ್ಟಿಂಗ್ ಕರಿಯರ್ ಆರಂಭಿಸಿದರೂ ಮೊದಲು ತೆರೆ ಕಂಡಿದ್ದು 'ಮೊಗ್ಗಿನ ಮನಸು' ಸಿನಿಮಾ.
(6 / 10)
'ಮೊಗ್ಗಿನ ಮನಸು' ಯಶ್ ಅವರಿಗೂ ಮೊದಲ ಸಿನಿಮಾ. 'ನಂದಗೋಕುಲ' ಧಾರಾವಾಹಿಯಲ್ಲಿ ಯಶ್ ಹಾಗೂ ರಾಧಿಕಾ ಪಂಡಿತ್ ಅಣ್ಣ ತಂಗಿ ಆಗಿ ನಟಿಸಿದ್ದು ವಿಶೇಷ.
(7 / 10)
ಕಿರುತೆರೆಯಿಂದ ಆರಂಭವಾದ ಈ ಜೋಡಿಯ ಪರಿಚಯ ಸ್ನೇಹವಾಗಿ ನಂತರ ಪ್ರೀತಿಗೆ ತಿರುಗಿತು. 3 ಸಿನಿಮಾಗಳಲ್ಲಿ ನಾಯಕ-ನಾಯಕಿಯಾಗಿ ಕೂಡಾ ನಟಿಸಿದರು.
(8 / 10)
2016 ಡಿಸೆಂಬರ್‌ನಲ್ಲಿ ರಾಧಿಕಾ ಪಂಡಿತ್, ಯಶ್ ಕೈ ಹಿಡಿದರು. ಮದುವೆ ನಂತರ ರಾಧಿಕಾ ನಟನೆಯಿಂದ ದೂರ ಉಳಿದಿದ್ಧಾರೆ. ರಾಧಿಕಾ ಪಂಡಿತ್ ಒಂದು ವೇಳೆ ನಟಿಯಾಗದಿದ್ದರೆ ಶಿಕ್ಷಕಿಯಾಗುತ್ತಿದ್ದಂತೆ. ಕೆಲವೊಂದು ಸಂದರ್ಶನಗಳಲ್ಲಿ ರಾಧಿಕಾ ಈ ವಿಚಾರವನ್ನು ಹೇಳಿಕೊಂಡಿದ್ದಾರೆ.
(9 / 10)
'ಆದಿಲಕ್ಷ್ಮಿ ಪುರಾಣ' ಸಿನಿಮಾ ನಂತರ ರಾಧಿಕಾ ಬೇರೆ ಸಿನಿಮಾಗಳಲ್ಲಿ ನಟಿಸಲಿಲ್ಲ. ಸದ್ಯಕ್ಕೆ ಅವರು ಫುಲ್ ಟೈಂ ಗೃಹಿಣಿಯಾಗಿ ಮಕ್ಕಳನ್ನು ನೋಡಿಕೊಂಡು, ಪತಿಯ ಸಿನಿಮಾ ಕೆಲಸಗಳಿಗೆ ಬೆಂಬಲ ನೀಡುತ್ತಾ ಮನೆಯಲ್ಲಿ ಉಳಿದಿದ್ದಾರೆ.
ಇತರ ಗ್ಯಾಲರಿಗಳು