Indian Railway: ಇವು ಭಾರತದ ಅತಿ ಉದ್ದ ರೈಲ್ವೆ ಮಾರ್ಗಗಳು; ಜೀವನದಲ್ಲಿ ಒಮ್ಮೆಯಾದರೂ ಈ ರೈಲುಗಳಲ್ಲಿ ಪ್ರಯಾಣಿಸಬೇಕು-railway news top 5 longest train routes in india vivek superfast express covers 4000km in over 50 hour journey prs ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Indian Railway: ಇವು ಭಾರತದ ಅತಿ ಉದ್ದ ರೈಲ್ವೆ ಮಾರ್ಗಗಳು; ಜೀವನದಲ್ಲಿ ಒಮ್ಮೆಯಾದರೂ ಈ ರೈಲುಗಳಲ್ಲಿ ಪ್ರಯಾಣಿಸಬೇಕು

Indian Railway: ಇವು ಭಾರತದ ಅತಿ ಉದ್ದ ರೈಲ್ವೆ ಮಾರ್ಗಗಳು; ಜೀವನದಲ್ಲಿ ಒಮ್ಮೆಯಾದರೂ ಈ ರೈಲುಗಳಲ್ಲಿ ಪ್ರಯಾಣಿಸಬೇಕು

  • Indian Railway: ವಿಶ್ವದ 4ನೇ ಅತಿ ದೊಡ್ಡ ರೈಲ್ವೆ ಜಾಲ ಹೊಂದಿರುವ ಭಾರತ, ದಿನಕ್ಕೆ ಲಕ್ಷಾಂತರ, ಕೋಟ್ಯಂತರ ಪ್ರಯಾಣಿಕರನ್ನು ಗಮ್ಯಸ್ಥಾನಕ್ಕೆ ಸಾಗಿಸುತ್ತದೆ. ಕೆಲವರು ಗಂಟೆಗಳಲ್ಲಿ ತಮ್ಮ ಗಮ್ಯ ಸ್ಥಾನ ಸೇರಿದರೆ, ಕೆಲವರು 2-3 ದಿನ ಹಿಡಿಯುತ್ತದೆ. ಹಾಗಿದ್ದರೆ ಭಾರತದ ಅತಿ ಉದ್ದದ ರೈಲು ಮಾರ್ಗಗಳು ಯಾವುವು? ಇಲ್ಲಿದೆ ಮಾಹಿತಿ.

ಭಾರತದಲ್ಲಿ ರೈಲ್ವೆ ಪ್ರಯಾಣವು ತುಂಬಾ ವಿಶೇಷ. ಅದ್ಭುತ ಮತ್ತು ಸುಂದರ ಅನುಭವ ನೀಡುವ ಈ ಪ್ರಯಾಣ, ಪ್ರಕೃತಿ, ನಗರ, ಪಟ್ಟಣ, ಗ್ರಾಮೀಣ ಪ್ರದೇಶಗಳ ಸೌಂದರ್ಯವನ್ನು ಅನಾವರಣ ಮಾಡುತ್ತದೆ. ರೈಲ್ವೆ ಪ್ರಯಾಣ ಜೀವನದಲ್ಲಿ ಎಂದೂ ಮರೆಯಲು ಸಾಧ್ಯವಾಗದ ಪಾಠ ಎಂದರೂ ತಪ್ಪಾಗಲ್ಲ. ದೇಶದಲ್ಲಿ ಕೆಲವು ರೈಲು ಮಾರ್ಗಗಳಿವೆ. ಅವುಗಳು ಮರೆಯಲಾಗದ ಪ್ರಯಾಣದ ಅನುಭೂತಿ ಒದಗಿಸುವ 5 ಅತಿ ಉದ್ದದ ರೈಲ್ವೆ ಮಾರ್ಗಗಳಾಗಿವೆ.
icon

(1 / 7)

ಭಾರತದಲ್ಲಿ ರೈಲ್ವೆ ಪ್ರಯಾಣವು ತುಂಬಾ ವಿಶೇಷ. ಅದ್ಭುತ ಮತ್ತು ಸುಂದರ ಅನುಭವ ನೀಡುವ ಈ ಪ್ರಯಾಣ, ಪ್ರಕೃತಿ, ನಗರ, ಪಟ್ಟಣ, ಗ್ರಾಮೀಣ ಪ್ರದೇಶಗಳ ಸೌಂದರ್ಯವನ್ನು ಅನಾವರಣ ಮಾಡುತ್ತದೆ. ರೈಲ್ವೆ ಪ್ರಯಾಣ ಜೀವನದಲ್ಲಿ ಎಂದೂ ಮರೆಯಲು ಸಾಧ್ಯವಾಗದ ಪಾಠ ಎಂದರೂ ತಪ್ಪಾಗಲ್ಲ. ದೇಶದಲ್ಲಿ ಕೆಲವು ರೈಲು ಮಾರ್ಗಗಳಿವೆ. ಅವುಗಳು ಮರೆಯಲಾಗದ ಪ್ರಯಾಣದ ಅನುಭೂತಿ ಒದಗಿಸುವ 5 ಅತಿ ಉದ್ದದ ರೈಲ್ವೆ ಮಾರ್ಗಗಳಾಗಿವೆ.(@RailMinIndia)

ಭಾರತದಲ್ಲಿ ರೈಲಿನಲ್ಲಿ ಸಂಚರಿಸುವವರ ಸಂಖ್ಯೆ ಹೆಚ್ಚು ಎಂದು ಪದೇ ಪದೇ ಹೇಳುವ ಅವಶ್ಯಕತೆ ಇಲ್ಲ. ಕೆಲವರು ತಮ್ಮ ಗಮ್ಯ ಸ್ಥಾನವನ್ನು 1 ಗಂಟೆಯೊಳಗೆ ತಲುಪಿದರೆ, ಕೆಲವರು ದಿನಗಟ್ಟಲೇ ಸಂಚಾರ ಬೆಳೆಸುತ್ತಾರೆ. ಉತ್ತರದಿಂದ ದಕ್ಷಿಣ ಭಾರತಕ್ಕೆ ಬರುವವರು, ದಕ್ಷಿಣದಿಂದ ಉತ್ತರ ಭಾರತಕ್ಕೆ ಹೋಗುವವರು 2 ರಿಂದ 3 ದಿನಗಳ ಕಾಲ ಸಂಚರಿಸಬೇಕು. ಹಾಗಿದ್ದರೆ ಭಾರತದ ಅತಿ ಉದ್ದದ ರೈಲು ಮಾರ್ಗಗಳು ಯಾವುವು? ಇಲ್ಲಿದೆ ಮಾಹಿತಿ.
icon

(2 / 7)

ಭಾರತದಲ್ಲಿ ರೈಲಿನಲ್ಲಿ ಸಂಚರಿಸುವವರ ಸಂಖ್ಯೆ ಹೆಚ್ಚು ಎಂದು ಪದೇ ಪದೇ ಹೇಳುವ ಅವಶ್ಯಕತೆ ಇಲ್ಲ. ಕೆಲವರು ತಮ್ಮ ಗಮ್ಯ ಸ್ಥಾನವನ್ನು 1 ಗಂಟೆಯೊಳಗೆ ತಲುಪಿದರೆ, ಕೆಲವರು ದಿನಗಟ್ಟಲೇ ಸಂಚಾರ ಬೆಳೆಸುತ್ತಾರೆ. ಉತ್ತರದಿಂದ ದಕ್ಷಿಣ ಭಾರತಕ್ಕೆ ಬರುವವರು, ದಕ್ಷಿಣದಿಂದ ಉತ್ತರ ಭಾರತಕ್ಕೆ ಹೋಗುವವರು 2 ರಿಂದ 3 ದಿನಗಳ ಕಾಲ ಸಂಚರಿಸಬೇಕು. ಹಾಗಿದ್ದರೆ ಭಾರತದ ಅತಿ ಉದ್ದದ ರೈಲು ಮಾರ್ಗಗಳು ಯಾವುವು? ಇಲ್ಲಿದೆ ಮಾಹಿತಿ.

ವಿವೇಕ್ ಎಕ್ಸ್‌ಪ್ರೆಸ್: ಭಾರತದ ಅತಿ ಉದ್ದದ ರೈಲು. ಇದು ಅಸ್ಸಾಂನ ದಿಬ್ರುಗಢದಿಂದ ತಮಿಳುನಾಡಿನ ಕನ್ಯಾಕುಮಾರಿಯವರೆಗೆ ಸಂಚಾರ ಮಾಡುತ್ತದೆ. ವಾರಕ್ಕೊಮ್ಮೆ ಸುಮಾರು 4,200 ಕಿ.ಮೀ ಸಂಚರಿಸುತ್ತದೆ. ಸುಮಾರು 80 ಗಂಟೆಗಳ ಕಾಲ ಸಂಚರಿಸುತ್ತದೆ. 50 ನಿಲ್ದಾಣಗಳಲ್ಲಿ ನಿಲುಗಡೆ ಮಾಡುತ್ತದೆ. ವಿವೇಕ್ ಎಕ್ಸ್‌ಪ್ರೆಸ್ ಅಸ್ಸಾಂನ ಹಸಿರು ಚಹಾ ತೋಟಗಳಿಂದ ಕನ್ಯಾಕುಮಾರಿಯ ಮರಳಿನ ಕಡಲ ತೀರಗಳವರೆಗೆ ಅನೇಕ ಅದ್ಭುತ ದೃಶ್ಯಗಳನ್ನು ಕಣ್ತುಂಬಿಕೊಳ್ಳಬಹುದು.
icon

(3 / 7)

ವಿವೇಕ್ ಎಕ್ಸ್‌ಪ್ರೆಸ್: ಭಾರತದ ಅತಿ ಉದ್ದದ ರೈಲು. ಇದು ಅಸ್ಸಾಂನ ದಿಬ್ರುಗಢದಿಂದ ತಮಿಳುನಾಡಿನ ಕನ್ಯಾಕುಮಾರಿಯವರೆಗೆ ಸಂಚಾರ ಮಾಡುತ್ತದೆ. ವಾರಕ್ಕೊಮ್ಮೆ ಸುಮಾರು 4,200 ಕಿ.ಮೀ ಸಂಚರಿಸುತ್ತದೆ. ಸುಮಾರು 80 ಗಂಟೆಗಳ ಕಾಲ ಸಂಚರಿಸುತ್ತದೆ. 50 ನಿಲ್ದಾಣಗಳಲ್ಲಿ ನಿಲುಗಡೆ ಮಾಡುತ್ತದೆ. ವಿವೇಕ್ ಎಕ್ಸ್‌ಪ್ರೆಸ್ ಅಸ್ಸಾಂನ ಹಸಿರು ಚಹಾ ತೋಟಗಳಿಂದ ಕನ್ಯಾಕುಮಾರಿಯ ಮರಳಿನ ಕಡಲ ತೀರಗಳವರೆಗೆ ಅನೇಕ ಅದ್ಭುತ ದೃಶ್ಯಗಳನ್ನು ಕಣ್ತುಂಬಿಕೊಳ್ಳಬಹುದು.(@MunnaBella79294)

ಹಿಮಸಾಗರ್ ಎಕ್ಸ್‌ಪ್ರೆಸ್: ಇದು ದೇಶದ ಮತ್ತೊಂದು ಅತಿ ಉದ್ದದ ರೈಲು ಮಾರ್ಗ. ಜೀವನದಲ್ಲಿ ಒಮ್ಮೆಯಾದರೂ ಈ ರೈಲಿನಲ್ಲಿ ಪ್ರಯಾಣ ಬೆಳೆಸಬೇಕು ಎನ್ನುವುದು ಬಹುತೇಕರ ಕನಸು. ಕನ್ಯಾಕುಮಾರಿಯಿಂದ ಜಮ್ಮು ಮತ್ತು ಕಾಶ್ಮೀರದವರೆಗೆ 3,800 ಕಿ.ಮೀ. ದೂರ ಸಂಚರಿಸುತ್ತದೆ. ಪ್ರಯಾಣದ ಸಮಯ ಸುಮಾರು 73 ಗಂಟೆ 5 ನಿಮಿಷಗಳು. ಹಿಮಸಾಗರ್ ಎಕ್ಸ್‌ಪ್ರೆಸ್ 12 ರಾಜ್ಯಗಳ ಮೂಲಕ ಹಾದುಹೋಗುತ್ತದೆ. 71 ನಿಲ್ದಾಣಗಳಲ್ಲಿ ನಿಲ್ಲುತ್ತದೆ. ಜಮ್ಮುವಿನ ವೈಷ್ಣೋದೇವಿ ದೇಗುಲಕ್ಕೆ ಹೋಗುವ ಪ್ರಯಾಣಿಕರಿಗೆ ಈ ರೈಲು ತುಂಬಾ ಅನುಕೂಲಕರವಾಗಿದೆ.
icon

(4 / 7)

ಹಿಮಸಾಗರ್ ಎಕ್ಸ್‌ಪ್ರೆಸ್: ಇದು ದೇಶದ ಮತ್ತೊಂದು ಅತಿ ಉದ್ದದ ರೈಲು ಮಾರ್ಗ. ಜೀವನದಲ್ಲಿ ಒಮ್ಮೆಯಾದರೂ ಈ ರೈಲಿನಲ್ಲಿ ಪ್ರಯಾಣ ಬೆಳೆಸಬೇಕು ಎನ್ನುವುದು ಬಹುತೇಕರ ಕನಸು. ಕನ್ಯಾಕುಮಾರಿಯಿಂದ ಜಮ್ಮು ಮತ್ತು ಕಾಶ್ಮೀರದವರೆಗೆ 3,800 ಕಿ.ಮೀ. ದೂರ ಸಂಚರಿಸುತ್ತದೆ. ಪ್ರಯಾಣದ ಸಮಯ ಸುಮಾರು 73 ಗಂಟೆ 5 ನಿಮಿಷಗಳು. ಹಿಮಸಾಗರ್ ಎಕ್ಸ್‌ಪ್ರೆಸ್ 12 ರಾಜ್ಯಗಳ ಮೂಲಕ ಹಾದುಹೋಗುತ್ತದೆ. 71 ನಿಲ್ದಾಣಗಳಲ್ಲಿ ನಿಲ್ಲುತ್ತದೆ. ಜಮ್ಮುವಿನ ವೈಷ್ಣೋದೇವಿ ದೇಗುಲಕ್ಕೆ ಹೋಗುವ ಪ್ರಯಾಣಿಕರಿಗೆ ಈ ರೈಲು ತುಂಬಾ ಅನುಕೂಲಕರವಾಗಿದೆ.(@RailMinIndia)

ದಿಬ್ರುಗಢ ಎಕ್ಸ್‌ಪ್ರೆಸ್: ಮತ್ತೊಂದು ಜನಪ್ರಿಯ ದೂರದ ರೈಲು ಅಂದರೆ ದಿಬ್ರುಗಢ ಎಕ್ಸ್‌ಪ್ರೆಸ್. ಇದು ಅಸ್ಸಾಂನ ನ್ಯೂ ಟಿನ್ಸುಕಿಯಾದಿಂದ ಪ್ರಾರಂಭಗೊಂಡು ಮಹಾರಾಷ್ಟ್ರದ ಲೋಕಮಾನ್ಯ ತಿಲಕ್ ಟರ್ಮಿನಸ್​ವರೆಗೆ ಸಂಚರಿಸುತ್ತದೆ. ಈ ರೈಲು 3,547 ಕಿಮೀ ದೂರ ಕ್ರಮಿಸುತ್ತದೆ. ಈ ಪ್ರಯಾಣವು ಸುಮಾರು 68 ಗಂಟೆಗಳ ಕಾಲ ಇರುತ್ತದೆ. ಇದು 35 ನಿಲ್ದಾಣಗಳಲ್ಲಿ ನಿಲುಗಡೆಯಾಗುತ್ತದೆ. ಗುವಾಹಟಿ, ಕೋಲ್ಕತಾ, ಬೆಂಗಳೂರು, ವಿಶಾಖಪಟ್ಟಣಂ, ವಿಜಯವಾಡದಂತಹ ಪ್ರಮುಖ ನಗರಗಳ ಸೌಂದರ್ಯವನ್ನು ನೋಡಬಹುದು. 
icon

(5 / 7)

ದಿಬ್ರುಗಢ ಎಕ್ಸ್‌ಪ್ರೆಸ್: ಮತ್ತೊಂದು ಜನಪ್ರಿಯ ದೂರದ ರೈಲು ಅಂದರೆ ದಿಬ್ರುಗಢ ಎಕ್ಸ್‌ಪ್ರೆಸ್. ಇದು ಅಸ್ಸಾಂನ ನ್ಯೂ ಟಿನ್ಸುಕಿಯಾದಿಂದ ಪ್ರಾರಂಭಗೊಂಡು ಮಹಾರಾಷ್ಟ್ರದ ಲೋಕಮಾನ್ಯ ತಿಲಕ್ ಟರ್ಮಿನಸ್​ವರೆಗೆ ಸಂಚರಿಸುತ್ತದೆ. ಈ ರೈಲು 3,547 ಕಿಮೀ ದೂರ ಕ್ರಮಿಸುತ್ತದೆ. ಈ ಪ್ರಯಾಣವು ಸುಮಾರು 68 ಗಂಟೆಗಳ ಕಾಲ ಇರುತ್ತದೆ. ಇದು 35 ನಿಲ್ದಾಣಗಳಲ್ಲಿ ನಿಲುಗಡೆಯಾಗುತ್ತದೆ. ಗುವಾಹಟಿ, ಕೋಲ್ಕತಾ, ಬೆಂಗಳೂರು, ವಿಶಾಖಪಟ್ಟಣಂ, ವಿಜಯವಾಡದಂತಹ ಪ್ರಮುಖ ನಗರಗಳ ಸೌಂದರ್ಯವನ್ನು ನೋಡಬಹುದು. (@MunnaBella79294)

ಸಿಲ್ಚಾರ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್: ಇದು ಅಸ್ಸಾಂನ ಸಿಲ್ಚಾರ್ ಮತ್ತು ತಮಿಳುನಾಡಿನ ಕೊಯಮತ್ತೂರು ನಡುವೆ ಸಂಚರಿಸುತ್ತದೆ. ಪ್ರಸ್ತುತ ವಾರಕ್ಕೆ ಒಮ್ಮೆ ಮಾತ್ರ ಚಲಿಸುತ್ತದೆ. ಅಸ್ಸಾಂ, ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್, ಒಡಿಶಾ, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳ ಮೂಲಕ ಹಾದು ಹೋಗುತ್ತದೆ. 3544 ಕಿಮೀ ಸಂಚರಿಸುವ ಈ ರೈಲಿನ ಪ್ರಯಾಣದ ಅವಧಿ 64 ಗಂಟೆ 15 ನಿಮಿಷ.
icon

(6 / 7)

ಸಿಲ್ಚಾರ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್: ಇದು ಅಸ್ಸಾಂನ ಸಿಲ್ಚಾರ್ ಮತ್ತು ತಮಿಳುನಾಡಿನ ಕೊಯಮತ್ತೂರು ನಡುವೆ ಸಂಚರಿಸುತ್ತದೆ. ಪ್ರಸ್ತುತ ವಾರಕ್ಕೆ ಒಮ್ಮೆ ಮಾತ್ರ ಚಲಿಸುತ್ತದೆ. ಅಸ್ಸಾಂ, ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್, ಒಡಿಶಾ, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳ ಮೂಲಕ ಹಾದು ಹೋಗುತ್ತದೆ. 3544 ಕಿಮೀ ಸಂಚರಿಸುವ ಈ ರೈಲಿನ ಪ್ರಯಾಣದ ಅವಧಿ 64 ಗಂಟೆ 15 ನಿಮಿಷ.(@MunnaBella79294)

ಕೇರಳ ಸಂಪರ್ಕ್​​​ ಕ್ರಾಂತಿ ಎಕ್ಸ್‌ಪ್ರೆಸ್: ಕೇರಳದ ತಿರುವನಂತಪುರಂನಿಂದ ಪಂಜಾಬ್ ತನಕ ಸಂಚಾರ ನಡೆಸುತ್ತದೆ. ಇದು 3,398 ಕಿಮೀ ದೂರ ಕ್ರಮಿಸುತ್ತದೆ. ಈ ರೈಲು ಸುಮಾರು 54 ಗಂಟೆ 25 ನಿಮಿಷ ಕಾಲ ಸಂಚಾರ ಮಾಡುತ್ತದೆ. ಇದು 9 ರಾಜ್ಯಗಳಲ್ಲಿ 22 ನಿಲ್ದಾಣಗಳಲ್ಲಿ ನಿಲುಗಡೆಯಾಗುತ್ತದೆ. ಇದು ಭಾರತದ ದಕ್ಷಿಣ ಮತ್ತು ಉತ್ತರ ರಾಜ್ಯಗಳ ನಡುವಿನ ಪ್ರಮುಖ ರೈಲು. ಈ ರೈಲು ಆಧ್ಯಾತ್ಮಿಕ ಮತ್ತು ಆಹ್ಲಾದಕರ ಸ್ಥಳಗಳ ಮೂಲಕ ಹಾದುಹೋಗುತ್ತದೆ.
icon

(7 / 7)

ಕೇರಳ ಸಂಪರ್ಕ್​​​ ಕ್ರಾಂತಿ ಎಕ್ಸ್‌ಪ್ರೆಸ್: ಕೇರಳದ ತಿರುವನಂತಪುರಂನಿಂದ ಪಂಜಾಬ್ ತನಕ ಸಂಚಾರ ನಡೆಸುತ್ತದೆ. ಇದು 3,398 ಕಿಮೀ ದೂರ ಕ್ರಮಿಸುತ್ತದೆ. ಈ ರೈಲು ಸುಮಾರು 54 ಗಂಟೆ 25 ನಿಮಿಷ ಕಾಲ ಸಂಚಾರ ಮಾಡುತ್ತದೆ. ಇದು 9 ರಾಜ್ಯಗಳಲ್ಲಿ 22 ನಿಲ್ದಾಣಗಳಲ್ಲಿ ನಿಲುಗಡೆಯಾಗುತ್ತದೆ. ಇದು ಭಾರತದ ದಕ್ಷಿಣ ಮತ್ತು ಉತ್ತರ ರಾಜ್ಯಗಳ ನಡುವಿನ ಪ್ರಮುಖ ರೈಲು. ಈ ರೈಲು ಆಧ್ಯಾತ್ಮಿಕ ಮತ್ತು ಆಹ್ಲಾದಕರ ಸ್ಥಳಗಳ ಮೂಲಕ ಹಾದುಹೋಗುತ್ತದೆ.(@MunnaBella79294)


ಇತರ ಗ್ಯಾಲರಿಗಳು