Zara Patel: ಇವಳೇ ಅವಳು.. ರಶ್ಮಿಕಾ ಮಂದಣ್ಣ ಡೀಪ್‌ಫೇಕ್ ಫೋಟೋದ ಅಸಲಿ ಮುಖ ಇವರದ್ದೇ, ಹೆಸರು ಜಾರಾ ಪಟೇಲ್
- ಕಳೆದ ಎರಡು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ರಶ್ಮಿಕಾ ಮಂದಣ್ಣ ಅವರದ್ದು ಎಂಬ ವಿಡಿಯೋ ವೈರಲ್ ಆಗಿದೆ. AI ತಂತ್ರಜ್ಞಾನ ಬಳಸಿ ಡೀಪ್‌ಫೇಕ್ ಮಾಡಿರುವುದೂ ಸಹ ಬೆಳಕಿಗೆ ಬಂದಿದ್ದು, ಇದು ಅಪಾಯದ ಮುನ್ಸೂಚನೆ ಎಂದು ಬಹುತೇಕರು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಹಾಗಾದರೆ, ಈ ಫೋಟೋದಲ್ಲಿರುವ ಹುಡುಗಿ ಯಾರು? ಇಲ್ಲಿವೆ ನೋಡಿ ಅವರ ಪೋಟೋಗಳು.

(1 / 10)
ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಸೃಷ್ಟಿಸಿದೆ.(Instagram/ Zara Patel)
(2 / 10)
ಈ ವಿಡಿಯೋದಲ್ಲಿರುವುದು ರಶ್ಮಿಕಾ ಅಲ್ಲ, ಬದಲಿಗೆ ಅದು ಜಾರಾ ಪಟೇಲ್ ಎಂಬ ಯುವತಿಯದ್ದು ಎಂಬುದೂ ಬೆಳಕಿಗೆ ಬಂದಿದೆ.
(3 / 10)
ಹಾಗಾದರೆ ಯಾರು ಈ ಜಾರಾ ಪಟೇಲ್? ಜಾರಾ ಓರ್ವ ಎನ್‌ಆರ್‌ಐ. ಭಾರತೀಯ ಮೂಲದವರಾದರೂ, ಬ್ರಿಟನ್ ಪೌರತ್ವ ಪಡೆದು ಅಲ್ಲಿಯೇ ನೆಲೆಸಿದ್ದಾರೆ.
(4 / 10)
ಇನ್‌ಸ್ಟಾಗ್ರಾಂನಲ್ಲಿ ಹಾಟ್ ಫೋಟೋ, ವಿಡಿಯೋಗಳನ್ನೇ ಶೇರ್ ಮಾಡಿಕೊಳ್ಳುವ ಜಾರಾ, ತಮ್ಮ ಬೋಲ್ಡ್ ಲುಕ್ ಮೂಲಕವೇ ಹೆಚ್ಚು ಸದ್ದು ಮಾಡುತ್ತಿರುತ್ತಾರೆ.
(5 / 10)
ಇದೀಗ ಇವರ ವಿಡಿಯೋ ತುಣುಕನ್ನೇ ಬಳಸಿಕೊಂಡು, ಅದಕ್ಕೆ ರಶ್ಮಿಕಾ ಮಂದಣ್ಣ ಅವರ ಮುಖ ಅಂಟಿಸಿ, ಇದು ನ್ಯಾಶನಲ್ ಕ್ರಷ್ ರಶ್ಮಿಕಾ ಎಂದೇ ಬಿಂಬಿಸಲಾಗುತ್ತಿದೆ.
(6 / 10)
ರಶ್ಮಿಕಾ ಅವರ ಫೇಕ್ ವಿಡಿಯೋ ವೈರಲ್ ಆಗುತ್ತಿದ್ದಂತೆ, ಇದು ಜಾರಾ ಪಟೇಲ್ ಅವರ ವಿಡಿಯೋ ಎಂಬ ವಿಚಾರ ಮುನ್ನೆಲೆಗೆ ಬಂದಿದೆ.
(7 / 10)
ಈ ಬಗ್ಗೆ ಸ್ವತಃ ಪ್ರತಿಕ್ರಿಯೆ ನೀಡಿರುವ ಜಾರಾ, ಹೆಣ್ಣುಮಕ್ಕಳ ವಿಚಾರದಲ್ಲಿ ಇದು ಬಹುದೊಡ್ಡ ಸಮಸ್ಯೆ. ಈ ಫೇಕ್ ಫೋಟೋ, ವಿಡಿಯೋ ಹಂಚುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.
(8 / 10)
"ಎಲ್ಲರಿಗೂ ನಮಸ್ಕಾರ, ಯಾರೋ ನನ್ನ ದೇಹ ಮತ್ತು ಬಾಲಿವುಡ್ ನಟಿಯ ಮುಖವನ್ನು ಬಳಸಿಕೊಂಡು ಡೀಪ್‌ಫೇಕ್ ವೀಡಿಯೊವನ್ನು ರಚಿಸಿದ್ದಾರೆ ಎಂಬುದು ನನ್ನ ಗಮನಕ್ಕೆ ಬಂದಿದೆ. ಡೀಪ್‌ಫೇಕ್ ವೀಡಿಯೊದೊಂದಿಗೆ ನನಗೆ ಯಾವುದೇ ಸಂಬಂಧವಿಲ್ಲ. ನಡೆದ ಈ ಬೆಳವಣಿಗೆ ಬಗ್ಗೆಯೂ ನಾನು ವಿಚಲಿತಳಾಗಿದ್ದೇನೆ" ಎಂದು ಸ್ಟೋರಿಯಲ್ಲಿ ಶೇರ್ ಮಾಡಿದ್ದರು ಜಾರಾ.
ಇತರ ಗ್ಯಾಲರಿಗಳು