ಡೇಟಿಂಗ್‌ ಆಪ್‌ ಮೂಲಕ ಪ್ರೀತಿಯಲ್ಲಿ ಬೀಳುವ ಮುನ್ನ ಇರಲಿ ಎಚ್ಚರ, ವಂಚನೆ ತಡೆಯಲು ಈ ಟಿಪ್ಸ್‌ ಅನುಸರಿಸಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಡೇಟಿಂಗ್‌ ಆಪ್‌ ಮೂಲಕ ಪ್ರೀತಿಯಲ್ಲಿ ಬೀಳುವ ಮುನ್ನ ಇರಲಿ ಎಚ್ಚರ, ವಂಚನೆ ತಡೆಯಲು ಈ ಟಿಪ್ಸ್‌ ಅನುಸರಿಸಿ

ಡೇಟಿಂಗ್‌ ಆಪ್‌ ಮೂಲಕ ಪ್ರೀತಿಯಲ್ಲಿ ಬೀಳುವ ಮುನ್ನ ಇರಲಿ ಎಚ್ಚರ, ವಂಚನೆ ತಡೆಯಲು ಈ ಟಿಪ್ಸ್‌ ಅನುಸರಿಸಿ

ಕಳೆದ ಕೆಲ ವರ್ಷಗಳಿಂದ ಡೇಟಿಂಗ್‌  ಪರಿಕಲ್ಪನೆ ಬದಲಾಗಿದೆ. ಮಿಲೇನಿಯಲ್‌ ಜಮಾನದ ಯುವಕ ಯುವತಿಯರು ಆನ್‌ಲೈನ್‌ ಡೇಟಿಂಗ್‌ ಮೇಲೆ ಹೆಚ್ಚು ಒಲವು ತೋರುತ್ತಿದ್ದಾರೆ. ಇತ್ತೀಚೆಗೆ ಹಲವು ಡೇಟಿಂಗ್‌ ಆಪ್‌ಗಳು ಹುಟ್ಟಿಕೊಂಡಿದ್ದು, ಸುರಕ್ಷತಾ ಡೇಟಿಂಗ್‌ಗೆ ಹೆಚ್ಚಿನ ಗಮನ ನೀಡುತ್ತಿವೆ. ಆದರೂ ಆನ್‌ಲೈನ್‌ ವಂಚಕರ ಬಗ್ಗೆ ಎಚ್ಚರದಿಂದಿರುವುದು ಅವಶ್ಯ. 

ಇತ್ತೀಚಿನ ಸಮೀಕ್ಷೆಯೊಂದರ ಪ್ರಕಾರ ಶೇ 67ರಷ್ಟು ಯುವತಿಯರು ನಿಜ ಜೀವನದಲ್ಲಿ ಡೇಟಿಂಗ್‌ ಮಾಡುವುದಕ್ಕಿಂತ ಆನ್‌ಲೈನ್‌ ಡೇಟಿಂಗ್‌ ಹೆಚ್ಚು ಸುರಕ್ಷಿತ ಎನ್ನುತ್ತಿದ್ದಾರೆ. ಇದಕ್ಕೆ ಕಾರಣ ಡೇಟಿಂಗ್‌ ಅಪ್ಲಿಕೇಶನ್‌ಗಳಲ್ಲಿನ ಭದ್ರತೆ. ಡೇಟಿಂಗ್‌ ವಂಚನೆ ಅಥವಾ ರೊಮ್ಯಾನ್ಸ್‌ ಸ್ಕ್ಯಾಮ್‌ ತಪ್ಪಿಸಲು ಹಲವು ಪ್ರತಿಷ್ಠಿತ ಡೇಟಿಂಗ್‌ ಆಪ್‌ಗಳು ಭದ್ರತಾ ತಪಾಸಣೆಗಳನ್ನು ಹೊಂದಿವೆ. ಆದರೆ ಇದನ್ನು ಕಣ್ತಪ್ಪಿಸಿಯೂ ಕೆಲವು ವಂಚಕರು ಮೋಸದ ಜಾಲ ಬೀಸುತ್ತಾರೆ. ಅಲ್ಲದೆ 24*7 ಅಮಾಯಕರನ್ನು ಮೋಸದ ಬಲೆಯಲ್ಲಿ ಸಿಲುಕಿಸಲು ಕಾಯುತ್ತಿರುತ್ತಾರೆ. ಅಂತಹ ಸಮಯದಲ್ಲಿ ಜಾಗರೂಕರಾಗಿರುವುದು ಬಹಳ ಮುಖ್ಯ. ಡೇಟಿಂಗ್‌ ಆಪ್‌ ವಂಚನೆಯನ್ನು ತಪ್ಪಿಸುವುದು ಹೇಗೆ ಎಂಬ ಬಗ್ಗೆ 5 ಮಾರ್ಗಗಳನ್ನು ಸೂಚಿಸಿದ್ದಾರೆ. ಕ್ವಾಕ್‌ಕ್ವಾಕ್‌ನ ಸಂಸ್ಥಾಪಕ ರವಿ ಮಿತ್ತಲ್‌. ಇವರು ಹಿಂದೂಸ್ತಾನ್‌ ಟೈಮ್ಸ್‌ ಲೈಫ್‌ಸ್ಟೈಲ್‌ಗೆ ನೀಡಿದ ಸಂದರ್ಶನದಲ್ಲಿ ಇದನ್ನು ವಿವರಿಸಿದ್ದಾರೆ. 
icon

(1 / 6)

ಇತ್ತೀಚಿನ ಸಮೀಕ್ಷೆಯೊಂದರ ಪ್ರಕಾರ ಶೇ 67ರಷ್ಟು ಯುವತಿಯರು ನಿಜ ಜೀವನದಲ್ಲಿ ಡೇಟಿಂಗ್‌ ಮಾಡುವುದಕ್ಕಿಂತ ಆನ್‌ಲೈನ್‌ ಡೇಟಿಂಗ್‌ ಹೆಚ್ಚು ಸುರಕ್ಷಿತ ಎನ್ನುತ್ತಿದ್ದಾರೆ. ಇದಕ್ಕೆ ಕಾರಣ ಡೇಟಿಂಗ್‌ ಅಪ್ಲಿಕೇಶನ್‌ಗಳಲ್ಲಿನ ಭದ್ರತೆ. ಡೇಟಿಂಗ್‌ ವಂಚನೆ ಅಥವಾ ರೊಮ್ಯಾನ್ಸ್‌ ಸ್ಕ್ಯಾಮ್‌ ತಪ್ಪಿಸಲು ಹಲವು ಪ್ರತಿಷ್ಠಿತ ಡೇಟಿಂಗ್‌ ಆಪ್‌ಗಳು ಭದ್ರತಾ ತಪಾಸಣೆಗಳನ್ನು ಹೊಂದಿವೆ. ಆದರೆ ಇದನ್ನು ಕಣ್ತಪ್ಪಿಸಿಯೂ ಕೆಲವು ವಂಚಕರು ಮೋಸದ ಜಾಲ ಬೀಸುತ್ತಾರೆ. ಅಲ್ಲದೆ 24*7 ಅಮಾಯಕರನ್ನು ಮೋಸದ ಬಲೆಯಲ್ಲಿ ಸಿಲುಕಿಸಲು ಕಾಯುತ್ತಿರುತ್ತಾರೆ. ಅಂತಹ ಸಮಯದಲ್ಲಿ ಜಾಗರೂಕರಾಗಿರುವುದು ಬಹಳ ಮುಖ್ಯ. ಡೇಟಿಂಗ್‌ ಆಪ್‌ ವಂಚನೆಯನ್ನು ತಪ್ಪಿಸುವುದು ಹೇಗೆ ಎಂಬ ಬಗ್ಗೆ 5 ಮಾರ್ಗಗಳನ್ನು ಸೂಚಿಸಿದ್ದಾರೆ. ಕ್ವಾಕ್‌ಕ್ವಾಕ್‌ನ ಸಂಸ್ಥಾಪಕ ರವಿ ಮಿತ್ತಲ್‌. ಇವರು ಹಿಂದೂಸ್ತಾನ್‌ ಟೈಮ್ಸ್‌ ಲೈಫ್‌ಸ್ಟೈಲ್‌ಗೆ ನೀಡಿದ ಸಂದರ್ಶನದಲ್ಲಿ ಇದನ್ನು ವಿವರಿಸಿದ್ದಾರೆ. (Shutterstock)

ಫೋಟೊಗಳನ್ನು ಪರಿಶೀಲಿಸಿ: ಹೆಚ್ಚು ಆಕರ್ಷಕವಾಗಿ ಕಾಣುವ ಫೋಟೊಗಳು ಮತ್ತು ಪ್ರೊಫೈಲ್‌ ಫೋಟೊಗಳ ಬಗ್ಗೆ ಜಾಗರೂಕರಾಗಿರಿ. ಪ್ರೊಫೈಲ್‌ನಲ್ಲಿರುವ ಚಿತ್ರವು ಇಂಟರ್‌ನೆಟ್‌ನ ಬೇರೆಡೆ ಕಾಣಿಸಿದರೆ ಸ್ಕ್ಯಾನ್‌ ಮಾಡಿ ನೋಡಿ. ಫೇಕ್‌ ಇಮೇಜ್‌ಗಳ ಬಗ್ಗೆ ತಿಳಿಯಲು ರಿವರ್ಸ್‌ ಇಮೇಜ್‌ ಸರ್ಚ್‌ ಎಂಬ ಆಯ್ಕೆ ಇಂಟರ್‌ನೆಟ್‌ನಲ್ಲಿ ಲಭ್ಯವಿದೆ. ಅದನ್ನು ಬಳಸಿ. ವಂಚಕರು ಸಾಮಾನ್ಯವಾಗಿ ಕದ್ದ ಚಿತ್ರವನ್ನು ಹೆಚ್ಚು ಬಳಸುತ್ತಾರೆ, ಆ ಮೂಲಕ ಜನರನ್ನು ಸೆಳೆಯುತ್ತಾರೆ.
icon

(2 / 6)

ಫೋಟೊಗಳನ್ನು ಪರಿಶೀಲಿಸಿ: ಹೆಚ್ಚು ಆಕರ್ಷಕವಾಗಿ ಕಾಣುವ ಫೋಟೊಗಳು ಮತ್ತು ಪ್ರೊಫೈಲ್‌ ಫೋಟೊಗಳ ಬಗ್ಗೆ ಜಾಗರೂಕರಾಗಿರಿ. ಪ್ರೊಫೈಲ್‌ನಲ್ಲಿರುವ ಚಿತ್ರವು ಇಂಟರ್‌ನೆಟ್‌ನ ಬೇರೆಡೆ ಕಾಣಿಸಿದರೆ ಸ್ಕ್ಯಾನ್‌ ಮಾಡಿ ನೋಡಿ. ಫೇಕ್‌ ಇಮೇಜ್‌ಗಳ ಬಗ್ಗೆ ತಿಳಿಯಲು ರಿವರ್ಸ್‌ ಇಮೇಜ್‌ ಸರ್ಚ್‌ ಎಂಬ ಆಯ್ಕೆ ಇಂಟರ್‌ನೆಟ್‌ನಲ್ಲಿ ಲಭ್ಯವಿದೆ. ಅದನ್ನು ಬಳಸಿ. ವಂಚಕರು ಸಾಮಾನ್ಯವಾಗಿ ಕದ್ದ ಚಿತ್ರವನ್ನು ಹೆಚ್ಚು ಬಳಸುತ್ತಾರೆ, ಆ ಮೂಲಕ ಜನರನ್ನು ಸೆಳೆಯುತ್ತಾರೆ.(Unsplash)

ಪ್ರೊಫೈಲ್‌ ಅನ್ನು ಪರಿಶೀಲಿಸಿ: ಅವರ ಪ್ರೊಫೈಲ್‌ನಲ್ಲಿ ಅಸಹಜ ಎನ್ನಿಸುವಂತಹ ಅಂಶಗಳಿದ್ದರೆ ಆ ಬಗ್ಗೆ ಗಮನ ಹರಿಸಿ. ಪ್ರೊಫೈಲ್‌ನಲ್ಲಿ ತಿಳಿಸಿರುವುದಕ್ಕೂ ಅವರ ವ್ಯಕ್ತಿತ್ವಕ್ಕೂ ಮ್ಯಾಚ್‌ ಆಗುವಂತಿಲ್ಲ ಎಂದರೆ ಎಚ್ಚರ ವಹಿಸಿ. ವಂಚಕರು ಸಾಮಾನ್ಯವಾಗಿ ಬಯೋ ವಿವರದ ಜಾಗವನ್ನು ಖಾಲಿ ಬಿಡುತ್ತಾರೆ. ಇದು ಆ ವ್ಯಕ್ತಿಯ ವ್ಯಕ್ತಿತ್ವವನ್ನು ಸೂಚಿಸುತ್ತದೆ.
icon

(3 / 6)

ಪ್ರೊಫೈಲ್‌ ಅನ್ನು ಪರಿಶೀಲಿಸಿ: ಅವರ ಪ್ರೊಫೈಲ್‌ನಲ್ಲಿ ಅಸಹಜ ಎನ್ನಿಸುವಂತಹ ಅಂಶಗಳಿದ್ದರೆ ಆ ಬಗ್ಗೆ ಗಮನ ಹರಿಸಿ. ಪ್ರೊಫೈಲ್‌ನಲ್ಲಿ ತಿಳಿಸಿರುವುದಕ್ಕೂ ಅವರ ವ್ಯಕ್ತಿತ್ವಕ್ಕೂ ಮ್ಯಾಚ್‌ ಆಗುವಂತಿಲ್ಲ ಎಂದರೆ ಎಚ್ಚರ ವಹಿಸಿ. ವಂಚಕರು ಸಾಮಾನ್ಯವಾಗಿ ಬಯೋ ವಿವರದ ಜಾಗವನ್ನು ಖಾಲಿ ಬಿಡುತ್ತಾರೆ. ಇದು ಆ ವ್ಯಕ್ತಿಯ ವ್ಯಕ್ತಿತ್ವವನ್ನು ಸೂಚಿಸುತ್ತದೆ.(Shutterstock)

ಖಾಸಗಿ ಮಾಹಿತಿಯನ್ನು ಹಂಚಿಕೊಳ್ಳದಿರಿ: ಮನೆಯ ವಿಳಾಸ, ಫೋನ್‌ ನಂಬರ್‌, ಇತರ ಸಾಮಾಜಿಕ ಮಾಧ್ಯಮಗಳ ವಿವರ ಹಾಗೂ ಫೋಟೊಗಳಂತಹ ಖಾಸಗಿ ವಿವರಗಳನ್ನು ಹಂಚಿಕೊಳ್ಳದಿರಿ. ಸೂಕ್ಷ್ಮವಾದ ಮಾಹಿತಿಗಳನ್ನು ಹಂಚಿಕೊಳ್ಳದೇ ಇರುವುದು ಉತ್ತಮ ವಿಧಾನ. ದೇಸಿ ಡೇಟಿಂಗ್‌ ಆಪ್‌ ಎಂದಿಗೂ ನಿಮ್ಮ ಕಾಂಟ್ಯಾಕ್ಟ್‌ ಡೀಟೈಲ್ಸ್‌ ಹಂಚಿಕೊಳ್ಳದಿರಿ ಎಂಬ ಸಂದೇಶ ನೀಡುತ್ತದೆ. ಯಾಕೆಂದರೆ ಈ ವಿವರಗಳನ್ನು ಪಡೆದು ವಂಚಕರು ಹಣ ವಸೂಲಿ ಮಾಡಿದ್ದನ್ನು ನೋಡಬಹುದಾಗಿದೆ. 
icon

(4 / 6)

ಖಾಸಗಿ ಮಾಹಿತಿಯನ್ನು ಹಂಚಿಕೊಳ್ಳದಿರಿ: ಮನೆಯ ವಿಳಾಸ, ಫೋನ್‌ ನಂಬರ್‌, ಇತರ ಸಾಮಾಜಿಕ ಮಾಧ್ಯಮಗಳ ವಿವರ ಹಾಗೂ ಫೋಟೊಗಳಂತಹ ಖಾಸಗಿ ವಿವರಗಳನ್ನು ಹಂಚಿಕೊಳ್ಳದಿರಿ. ಸೂಕ್ಷ್ಮವಾದ ಮಾಹಿತಿಗಳನ್ನು ಹಂಚಿಕೊಳ್ಳದೇ ಇರುವುದು ಉತ್ತಮ ವಿಧಾನ. ದೇಸಿ ಡೇಟಿಂಗ್‌ ಆಪ್‌ ಎಂದಿಗೂ ನಿಮ್ಮ ಕಾಂಟ್ಯಾಕ್ಟ್‌ ಡೀಟೈಲ್ಸ್‌ ಹಂಚಿಕೊಳ್ಳದಿರಿ ಎಂಬ ಸಂದೇಶ ನೀಡುತ್ತದೆ. ಯಾಕೆಂದರೆ ಈ ವಿವರಗಳನ್ನು ಪಡೆದು ವಂಚಕರು ಹಣ ವಸೂಲಿ ಮಾಡಿದ್ದನ್ನು ನೋಡಬಹುದಾಗಿದೆ. (Shutterstock)

ನಿಧಾನಗತಿ ಇರಲಿ: ರೊಮ್ಯಾನ್ಸ್‌ ಸ್ಕ್ಯಾಮರ್‌ಗಳು ಬಹಳ ಬೇಗ ಹತ್ತಿರವಾಗಲು ಪ್ರಯತ್ನಿಸುತ್ತಾರೆ. ಚಾಟ್‌ ಮಾಡಿದ ಕೆಲವೇ ದಿನಗಳಲ್ಲಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ನಂತರ ನಿಧಾನಕ್ಕೆ ಹಣಕಾಸಿನ ಬಗ್ಗೆ ತಿಳಿದುಕೊಳ್ಳಲು ಆರಂಭಿಸುತ್ತಾರೆ. ಆ ಕಾರಣಕ್ಕೆ ಆನ್‌ಲೈನ್‌ ಡೇಟಿಂಗ್‌ನಲ್ಲಿ ವ್ಯಕ್ತಿಯನ್ನು ನಂಬುವ ಮುನ್ನ ಎಚ್ಚರ ವಹಿಸಿ. ನಿಧಾನಕ್ಕೆ ಸಮಯ ತೆಗೆದುಕೊಂಡು ಎಲ್ಲವನ್ನೂ ಪರಿಶೀಲಿಸಿ ನಂತರ ಮುಂದುವರಿಯಿರಿ.  
icon

(5 / 6)

ನಿಧಾನಗತಿ ಇರಲಿ: ರೊಮ್ಯಾನ್ಸ್‌ ಸ್ಕ್ಯಾಮರ್‌ಗಳು ಬಹಳ ಬೇಗ ಹತ್ತಿರವಾಗಲು ಪ್ರಯತ್ನಿಸುತ್ತಾರೆ. ಚಾಟ್‌ ಮಾಡಿದ ಕೆಲವೇ ದಿನಗಳಲ್ಲಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ನಂತರ ನಿಧಾನಕ್ಕೆ ಹಣಕಾಸಿನ ಬಗ್ಗೆ ತಿಳಿದುಕೊಳ್ಳಲು ಆರಂಭಿಸುತ್ತಾರೆ. ಆ ಕಾರಣಕ್ಕೆ ಆನ್‌ಲೈನ್‌ ಡೇಟಿಂಗ್‌ನಲ್ಲಿ ವ್ಯಕ್ತಿಯನ್ನು ನಂಬುವ ಮುನ್ನ ಎಚ್ಚರ ವಹಿಸಿ. ನಿಧಾನಕ್ಕೆ ಸಮಯ ತೆಗೆದುಕೊಂಡು ಎಲ್ಲವನ್ನೂ ಪರಿಶೀಲಿಸಿ ನಂತರ ಮುಂದುವರಿಯಿರಿ.  (Illustration: Shutterstock)

ವರ್ಚುವಲ್‌ ಡೇಟ್‌: ಇತ್ತೀಚೆಗೆ ನೇರವಾಗಿ ಭೇಟಿ ಮಾಡುವ ಮುನ್ನ ವರ್ಚುವಲ್‌ ಡೇಟಿಂಗ್‌ ಮಾಡುತ್ತಾರೆ. ಶೇ 41ರಷ್ಟು ಮಂದಿ ಹೀಗೆ ಮಾಡುತ್ತಾರೆ. ವಂಚಕರಿಂದ ತಪ್ಪಿಸಿಕೊಳ್ಳಲು ಇದು ಕೂಡ ಒಂದು ಉತ್ತಮ ವಿಧಾನ. 
icon

(6 / 6)

ವರ್ಚುವಲ್‌ ಡೇಟ್‌: ಇತ್ತೀಚೆಗೆ ನೇರವಾಗಿ ಭೇಟಿ ಮಾಡುವ ಮುನ್ನ ವರ್ಚುವಲ್‌ ಡೇಟಿಂಗ್‌ ಮಾಡುತ್ತಾರೆ. ಶೇ 41ರಷ್ಟು ಮಂದಿ ಹೀಗೆ ಮಾಡುತ್ತಾರೆ. ವಂಚಕರಿಂದ ತಪ್ಪಿಸಿಕೊಳ್ಳಲು ಇದು ಕೂಡ ಒಂದು ಉತ್ತಮ ವಿಧಾನ. (Freepik)


ಇತರ ಗ್ಯಾಲರಿಗಳು