2022 Audi Q3: ಪ್ರತಿಸ್ಪರ್ಧಿಗಳಿಗೆ ಹೊಸ ಸವಾಲು ನೀಡಲು ಆಗಮಿಸಿದ 2022 ಔಡಿ ಕ್ಯೂ3, ಹೇಗಿದೆ ನೋಡಿ ಈ ಲಗ್ಷುರಿ ಎಸ್‌ಯುವಿ
- ಎರಡನೇ ತಲೆಮಾರಿನ ಔಡಿ ಕ್ಯೂ3 (Audi Q3) ಎಸ್‌ಯುವಿಯು ಭಾರತಕ್ಕೆ ಆಗಮಿಸಿದೆ. ನೂತನ ಎಸ್‌ಯುವಿಯು ತನ್ನ ಪ್ರತಿಸ್ಪರ್ಧಿ ಕಾರುಗಳಿಗೆ ಪ್ರಬಲ ಪೈಪೋಟಿ ನೀಡುವ ನಿರೀಕ್ಷೆಯಿದೆ. ಈ ಎಸ್‌ಯುವಿಯಲ್ಲಿ ಅಂತಹದ್ದೇನಿದೆ ಎಂದು ನೋಡೊಣ.
- ಎರಡನೇ ತಲೆಮಾರಿನ ಔಡಿ ಕ್ಯೂ3 (Audi Q3) ಎಸ್‌ಯುವಿಯು ಭಾರತಕ್ಕೆ ಆಗಮಿಸಿದೆ. ನೂತನ ಎಸ್‌ಯುವಿಯು ತನ್ನ ಪ್ರತಿಸ್ಪರ್ಧಿ ಕಾರುಗಳಿಗೆ ಪ್ರಬಲ ಪೈಪೋಟಿ ನೀಡುವ ನಿರೀಕ್ಷೆಯಿದೆ. ಈ ಎಸ್‌ಯುವಿಯಲ್ಲಿ ಅಂತಹದ್ದೇನಿದೆ ಎಂದು ನೋಡೊಣ.
(1 / 10)
ನೂತನ ಔಡಿ ಕ್ಯೂ3ಯು ದೇಶದ ಲಗ್ಷುರಿ ಎಸ್‌ಯುವಿ ಮಾರುಕಟ್ಟೆಯಲ್ಲಿ ಹೊಸ ಷರಾ ಬರೆಯುವ ನಿರೀಕ್ಷೆಯಿದೆ. ಏಕೆಂದರೆ, ಸಣ್ಣ ಗಾತ್ರದ ಕ್ಯೂ2 ಕಾರುಗಳು ದೇಶದಲ್ಲಿ ಅಂತಹ ಯಶಸ್ಸು ಪಡೆದಿರಲಿಲ್ಲ. ನೂತನ ಭರ್ಜರಿ ಲಗ್ಷುರಿ ಕಾರಿನ ಮೇಲೆ ಕಂಪನಿಯು ಸಾಕಷ್ಟು ನಿರೀಕ್ಷೆಯಿಟ್ಟಿದೆ. (HT Auto/Sabyasachi Dasgupta)
(2 / 10)
ಔಡಿಯ ಕ್ಯೂ ಕುಟುಂಬದ ಕ್ಯೂ3 ಕಾರಿನ ವಿನ್ಯಾಸವು ಪ್ರಮುಖವಾಗಿ ಗಮನ ಸೆಳೆಯುವ ಅಂಶ. ಕ್ಯೂ5 ಮತ್ತು ಕ್ಯೂ7ನಂತಹ ಎಸ್‌ಯುವಿಗಳನ್ನು ಹೋಲುವ ವಿನ್ಯಾಸ ಇದರಲ್ಲಿದೆ. ಮುಂಭಾಗದಲ್ಲಿ ಬೃಹತ್ ಗಾತ್ರದ ಗ್ರಿಲ್, ಬೃಹ್ ಗಾತ್ರದ ಏರ್ ಡಾಮ್ಸ್, ಅನನ್ಯ ಫಿನಿಷಿಂಗ್‌ನಿಂದ ಗಮನ ಸೆಳೆಯುತ್ತದೆ.
(3 / 10)
ಮೊಣಚಾದ ವಿನ್ಯಾಸದ ಎಲ್‌ಇಡಿ ಹೆಡ್‌ಲೈಟ್, ಡಿಆರ್‌ಎಲ್ ಯುನಿಟ್‌ಗಳಿಂದ ಈ ಎಸ್‌ಯುವಿ ಅತ್ಯಾಧುನಿಕವಾಗಿ ಕಾಣಿಸುತ್ತದೆ.
(5 / 10)
ನೂತನ Q3ಯ ವೀಲ್‌ಬೇಸ್ ಕೂಡ ಹೆಚ್ಚಾಗಿದೆ. ಇದರಿಂದ ಕಾರಿನ ಹಿಂಬದಿಯ ಸೀಟಿನಲ್ಲಿ ಕುಳಿತುಕೊಳ್ಳುವವರಿಗೆ ಹೆಚ್ಚಿನ ಲೆಗ್ ಸ್ಪೇಸ್ ದೊರಕಿದೆ.
(7 / 10)
ಕ್ಯಾಬಿನ್ ಸ್ಥಳಾವಕಾಶವೂ ಪರವಾಗಿಲ್ಲ. ನಾಲ್ವರು ದೊಡ್ಡವರು ಆರಾಮವಾಗಿ ಕುಳಿತುಕೊಳ್ಳಬಹುದು. ಈ ಕಾರಿನೊಳಗೆ ತಕ್ಕಮಟ್ಟಿಗೆ ಉತ್ತಮವಾದ ಫೀಚರ್‌ಗಳು ಇವೆ. ವೈರ್‌ಲೆಸ್ ಫೋನ್ ಚಾರ್ಜಿಂಗ್, ಡ್ಯೂಯೆಲ್ ಝೋನ್ ಕ್ಲೈಮೆಟ್ ಕಂಟ್ರೋಲ್, ಪನೊರಮಿಕ್ ಸನ್‌ರೂಫ್, 10.1 ಇಂಚಿನ ಡಿಸ್‌ಪ್ಲೇ ಸ್ಕ್ರೀನ್ ಇತ್ಯಾದಿಗಳಿವೆ.
(8 / 10)
ಈ ಎಸ್‌ಯುವಿಯು 2.0 ಲೀಟರ್‌ನ ಟಿಎಫ್‌ಎಸ್‌ಐ ಪೆಟ್ರೊಲ್ ಎಂಜಿನ್ ಹೊಂದಿದೆ. ಇದು 190 ಅಶ್ವಶಕ್ತಿ ಮತ್ತು 320 ಎನ್‌ಎಂ ಟಾರ್ಕ್ ಒದಗಿಸುತ್ತದೆ. ಈ ಎಂಜಿನ್‌ಗೆ ಏಳು ಹಂತದ ಆಟೋಮ್ಯಾಟಿಕ್ ಗಿಯರ್‌ಬಾಕ್ಸ್‌ನ ಬೆಂಬಲವಿದೆ.
(9 / 10)
Audi Q3ನ ಆಕ್ಸಿಲರೇಷನ್ ಕೂಡ ಉತ್ತಮವಾಗಿದೆ. ಕೇವಲ ಏಳು ಸೆಕೆಂಡ್‌ನಲ್ಲಿ 0-100 ಕಿ.ಮೀ. ವೇಗ ಪಡೆದುಕೊಳ್ಳುತ್ತದೆ.
ಇತರ ಗ್ಯಾಲರಿಗಳು