ಒಗ್ಗರಣೆ ಮಾತ್ರವಲ್ಲ ಕರಿಬೇವಿನಿಂದ ಸಖತ್ ಟೇಸ್ಟಿ ಆಗಿರೋ ಚಟ್ನಿ ಕೂಡ ಮಾಡಬಹುದು; ಅನ್ನಕ್ಕೂ ಇಡ್ಲಿಗೂ ಇದು ಸೂಪರ್ ಕಾಂಬಿನೇಷನ್‌
ಕನ್ನಡ ಸುದ್ದಿ  /  ಜೀವನಶೈಲಿ  /  ಒಗ್ಗರಣೆ ಮಾತ್ರವಲ್ಲ ಕರಿಬೇವಿನಿಂದ ಸಖತ್ ಟೇಸ್ಟಿ ಆಗಿರೋ ಚಟ್ನಿ ಕೂಡ ಮಾಡಬಹುದು; ಅನ್ನಕ್ಕೂ ಇಡ್ಲಿಗೂ ಇದು ಸೂಪರ್ ಕಾಂಬಿನೇಷನ್‌

ಒಗ್ಗರಣೆ ಮಾತ್ರವಲ್ಲ ಕರಿಬೇವಿನಿಂದ ಸಖತ್ ಟೇಸ್ಟಿ ಆಗಿರೋ ಚಟ್ನಿ ಕೂಡ ಮಾಡಬಹುದು; ಅನ್ನಕ್ಕೂ ಇಡ್ಲಿಗೂ ಇದು ಸೂಪರ್ ಕಾಂಬಿನೇಷನ್‌

ಕರಿಬೇವು ಒಗ್ಗರಣೆಯ ಘಮ ಹೆಚ್ಚಿಸುವುದು ಮಾತ್ರವಲ್ಲ, ಇದನ್ನು ತಿನ್ನುವುದರಿಂದ ಆರೋಗ್ಯಕ್ಕೂ ಸಾಕಷ್ಟು ಪ್ರಯೋಜನಗಳಿವೆ. ಕರಿಬೇವಿನ ಸೊಪ್ಪಿನಿಂದ ಸಖತ್ ಟೇಸ್ಟಿ ಆಗಿರೋ ಚಟ್ನಿ ಮಾಡಬಹುದು. ಇದು ದೋಸೆ, ಅನ್ನದ ಜೊತೆ ಸೂಪರ್ ಕಾಂಬಿನೇಷನ್ ಆಗುತ್ತೆ. ಹಾಗಾದರೆ ಕರಿಬೇವಿನ ಸೊಪ್ಪಿನ ಚಟ್ನಿ ಮಾಡುವುದು ಹೇಗೆ ನೋಡಿ.

ಕರಿಬೇವಿನ ಚಟ್ನಿ
ಕರಿಬೇವಿನ ಚಟ್ನಿ

ಭಾರತೀಯ ಅಡುಗೆಗಳಲ್ಲಿ ಕರಿಬೇವಿಗೆ ಅಗ್ರಸ್ಥಾನವಿದೆ. ಇದು ಒಗ್ಗರಣೆಗೆ ಅತ್ಯವಶ್ಯ. ಆಹಾರದ ಘಮ ಹೆಚ್ಚಿಸುವ ಕರಿಬೇವು ಪೋಷಕಾಂಶಗಳ ಆಗರವೂ ಹೌದು. ಆದರೆ ಕೆಲವರು ಕರಿಬೇವನ್ನು ಬದಿಗೆ ಎತ್ತಿಡುತ್ತಾರೆ. ಕರಿಬೇವಿನ ಸೊಪ್ಪು ತಿಂದರೆ ನಮ್ಮ ಆರೋಗ್ಯಕ್ಕೆ ಬೇಕಾದ ಸಾಕಷ್ಟು ವಿಟಮಿನ್ ಮತ್ತು ಮಿನರಲ್ಸ್‌ಗಳು ಸಿಗುತ್ತವೆ. ಕರಿಬೇವಿನ ಎಲೆಗಳಿಂದ ದೇಹಕ್ಕೆ ಅಸಂಖ್ಯಾತ ಪ್ರಯೋಜನಗಳು ಸಿಗುತ್ತವೆ. ಇದರ ಪ್ರಯೋಜನಗಳು ನೂರಾರು.

ಕರಿಬೇವಿನ ಎಲೆಗಳನ್ನು ತಿನ್ನುವುದರಿಂದ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ಇದು ಜೀರ್ಣಕ್ರಿಯೆಯನ್ನು ನಿಯಂತ್ರಿಸುತ್ತದೆ. ಯಕೃತ್ತನ್ನು ರಕ್ಷಿಸುತ್ತದೆ. ಕೂದಲು ಬೆಳವಣಿಗೆಗೆ ಸಹಾಯ ಮಾಡುತ್ತದೆ. ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ. ಸೋಂಕುಗಳನ್ನು ತಡೆಯುತ್ತದೆ. ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ದೇಹದಲ್ಲಿ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ. ಗಾಯಗಳು ಬೇಗ ವಾಸಿಯಾಗುವಂತೆ ಮಾಡುತ್ತದೆ. ಇದು ಮಧುಮೇಹ ವಿರೋಧಿ ಗುಣಗಳನ್ನು ಹೊಂದಿದೆ.

ಆಯುರ್ವೇದದಲ್ಲೂ ಕರಿಬೇವಿನ ಎಲೆಗಳನ್ನು ಔಷಧ ರೂಪದಲ್ಲಿ ಬಳಸಲಾಗುತ್ತದೆ. ಇದನ್ನು ಭಾರತ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಂಡಮಾನ್ ದ್ವೀಪಗಳಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ. ಭಾರತೀಯ ಪಾಕಪದ್ಧತಿಯಲ್ಲಿ ಇದನ್ನು ವ್ಯಾಪಕವಾಗಿ ಬಳಸಲಾಗುತ್ತದೆ.

ಇಲ್ಲಿಯವರೆಗೆ ನೀವು ಕರಿಬೇವಿನ ಎಲೆಗಳನ್ನು ಒಗ್ಗರಣೆಗೆ ಮಾತ್ರ ಬಳಸಿ ಇರುತ್ತೀರಿ. ಆದರೆ ಇದರಿಂದ ಸಖತ್ ಟೇಸ್ಟಿ ಆಗಿರೋ ಚಟ್ನಿಯನ್ನು ಕೂಡ ಮಾಡಬಹುದು. ಇದನ್ನು ಅನ್ನ, ಚಟ್ನಿ ಜೊತೆ ತಿನ್ನಲು ಸಖತ್ ಆಗಿರುತ್ತೆ. ಹಾಗಾದರೆ ಇದನ್ನು ಮಾಡೋದು ಹೇಗೆ, ಏನೆಲ್ಲಾ ಬೇಕು ಎಂಬ ವಿವರ ಇಲ್ಲಿದೆ.

ಕರಿಬೇವಿನ ಚಟ್ನಿ ರೆಸಿಪಿ

ಬೇಕಾಗುವ ಸಾಮಗ್ರಿಗಳು: ಈರುಳ್ಳಿ - 2, ಶುಂಠಿ - ಸಣ್ಣ ತುಂಡು, ಕರಿಬೇವಿನ ಎಲೆ - ಒಂದು ಕಪ್, ಎಣ್ಣೆ - ಸಾಕಷ್ಟು, ಸಾಸಿವೆ - ಒಂದು ಚಮಚ, ತುಪ್ಪ - ಒಂದು ಚಮಚ, ತುರಿದ ತೆಂಗಿನಕಾಯಿ - ಒಂದು ಚಮಚ, ಒಣ ಮೆಣಸಿನಕಾಯಿ - ಹತ್ತು, ಉಪ್ಪು - ರುಚಿಗೆ

ಕರಿಬೇವಿನ ಎಲೆಯ ಚಟ್ನಿ

ಮೊದಲು ಕರಿಬೇವಿನ ಎಲೆಗಳನ್ನು ಸ್ವಚ್ಛವಾಗಿ ತೊಳೆದು ಪಕ್ಕಕ್ಕೆ ಇಡಿ. ಈಗ ಒಂದು ಪಾತ್ರೆಯನ್ನು ಒಲೆಯ ಮೇಲೆ ಇಟ್ಟು ಎಣ್ಣೆ ಹಾಕಿ. ಆ ಎಣ್ಣೆಯಲ್ಲಿ ಕರಿಬೇವಿನ ಸೊಪ್ಪನ್ನು ಹುರಿದುಕೊಳ್ಳಿ. ಅದೇ ಪಾತ್ರೆಗೆ ತೆಂಗಿನತುರಿ ಸೇರಿಸಿ ಹುರಿದುಕೊಳ್ಳಿ. ಒಣ ಮೆಣಸಿನಕಾಯಿಯನ್ನೂ ಹುರಿದುಕೊಳ್ಳಬೇಕು. ನಂತರ ಇದಕ್ಕೆ ಉಪ್ಪು ಸೇರಿಸಿ, ಶುಂಠಿ, ಮಿಶ್ರಣವನ್ನು ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಈಗ ಒಲೆಯ ಮೇಲೆ ಬಾಣಲಿ ಇಟ್ಟು ಎಣ್ಣೆ ಹಾಕಿ. ಇದಕ್ಕೆ ಸಾಸಿವೆ, ಜೀರಿಗೆ, ಕರಿಬೇವು, ಎರಡು ಒಣಮೆಣಸಿನ ಹಾಗೂ ಉದ್ದಿನಬೇಳೆ ಹಾಕಿ ಒಗ್ಗರಣೆ ತಯಾರಿಸಿ. ಇದನ್ನು ರುಬ್ಬಿಕೊಂಡ ಚಟ್ನಿ ಜೊತೆ ಸೇರಿಸಿ ಮಿಶ್ರಣ ಮಾಡಿ. ಈಗ ನಿಮ್ಮ ಮುಂದೆ ರುಚಿಯಾದ ಕರಿಬೇವಿನ ಚಟ್ನಿ ತಿನ್ನಲು ಸಿದ್ಧ.

ಬಿಸಿ ಅನ್ನದೊಂದಿಗೆ ತಿನ್ನಲು ಈ ಚಟ್ನಿ ಸಖತ್ ಆಗಿರುತ್ತೆ. ಇಡ್ಲಿ, ದೋಸೆ ಜೊತೆ ಕೂಡ ನೆಂಜಿಕೊಂಡು ತಿನ್ನಬಹುದು. ಇದು ಮಕ್ಕಳಿಗೂ ಖಂಡಿತ ಇಷ್ಟವಾಗುತ್ತದೆ. ಆದರೆ ಮಕ್ಕಳಿಗೆ ಮಾಡುವ ಕೊಂಚ ಮೆಣಸು ಕಡಿಮೆ ಹಾಕಿದರೆ ಉತ್ತಮ. ಇದಕ್ಕೆ ಒಣಮೆಣಸಿನ ಬದಲು ಹಸಿಮೆಣಸು ಬೇಕಾದರೂ ಸೇರಿಸಬಹುದು.

Whats_app_banner