Yash Meets Shivanna: ಶಿವರಾಜ್‌ ಕುಮಾರ್‌ ಶೂಟಿಂಗ್‌ ಸ್ಥಳಕ್ಕೆ ಯಶ್‌ ಭೇಟಿ; ಶಿವಣ್ಣನ ಜತೆ ನಟಿಸಿ ಆಗ್ತಾರ ಅಣ್ತಮ್ಮ- ಫೋಟೋಸ್‌-sandalwood news rocking star yash meets hattrick hero shivarajkumar at shivanna 131 movie shooting photos viral pcp ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Yash Meets Shivanna: ಶಿವರಾಜ್‌ ಕುಮಾರ್‌ ಶೂಟಿಂಗ್‌ ಸ್ಥಳಕ್ಕೆ ಯಶ್‌ ಭೇಟಿ; ಶಿವಣ್ಣನ ಜತೆ ನಟಿಸಿ ಆಗ್ತಾರ ಅಣ್ತಮ್ಮ- ಫೋಟೋಸ್‌

Yash Meets Shivanna: ಶಿವರಾಜ್‌ ಕುಮಾರ್‌ ಶೂಟಿಂಗ್‌ ಸ್ಥಳಕ್ಕೆ ಯಶ್‌ ಭೇಟಿ; ಶಿವಣ್ಣನ ಜತೆ ನಟಿಸಿ ಆಗ್ತಾರ ಅಣ್ತಮ್ಮ- ಫೋಟೋಸ್‌

  • Shivanna 131: ಸ್ಯಾಂಡಲ್‌ವುಡ್‌ನ ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಸದ್ಯ ತಮಿಳು ನಿರ್ದೇಶಕ ಕಾರ್ತಿಕ್‌ ಅದ್ವೈತ್‌ ಜತೆ ತನ್ನ 131ನೇ ಸಿನಿಮಾದ ಶೂಟಿಂಗ್‌ನಲ್ಲಿ ಬಿಝಿಯಾಗಿದ್ದಾರೆ. ಈ ಸಿನಿಮಾದ ಶೂಟಿಂಗ್‌ನಲ್ಲಿದ್ದ ವೇಳೆ ಅಲ್ಲಿಗೆ ರಾಕಿಂಗ್‌ ಸ್ಟಾರ್‌ ಯಶ್‌ ಭೇಟಿ ನೀಡಿದ್ದಾರೆ. Yash Meets Shivanna ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.

Shivanna 131: ಸ್ಯಾಂಡಲ್‌ವುಡ್‌ನ ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಸದ್ಯ ತಮಿಳು ನಿರ್ದೇಶಕ ಕಾರ್ತಿಕ್‌ ಅದ್ವೈತ್‌ ಜತೆ ತನ್ನ 131ನೇ ಸಿನಿಮಾದ ಶೂಟಿಂಗ್‌ನಲ್ಲಿ ಬಿಝಿಯಾಗಿದ್ದಾರೆ. ಈ ಸಿನಿಮಾದ ಶೂಟಿಂಗ್‌ನಲ್ಲಿದ್ದ ವೇಳೆ ಅಲ್ಲಿಗೆ ರಾಕಿಂಗ್‌ ಸ್ಟಾರ್‌ ಯಶ್‌ ಭೇಟಿ ನೀಡಿದ್ದಾರೆ. Yash Meets Shivanna ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ಇದೇ ಸಂದರ್ಭದಲ್ಲಿ ಇವರಿಬ್ಬರು ಒಂದೇ ಸಿನಿಮಾದಲ್ಲಿ ನಟಿಸ್ತಾರ ಎಂಬ ಕುತೂಹಲವೂ ಅಭಿಮಾನಿಗಳಲ್ಲಿ ಮೂಡಿದೆ.  
icon

(1 / 7)

Yash Meets Shivanna: ಈಗಾಗಲೇ ಶಿವರಾಜ್‌ ಕುಮಾರ್‌ ನಟನೆಯ ಮುಂಬರುವ ಸಿನಿಮಾ ಶಿವಣ್ಣ 131 ಶೂಟಿಂಗ್‌ ಭರದಿಂದ ಸಾಗುತ್ತಿದೆ. ಈ ಸಿನಿಮಾಕ್ಕೆ ಇನ್ನೂ ಅಧಿಕೃತವಾಗಿ ಹೆಸರು ಇಟ್ಟಿಲ್ಲ. ಈ ಪ್ರಾಜೆಕ್ಟ್‌ಗೆ ಶಿವಣ್ಣ 131 ಎಂದು ಹೆಸರಿಡಲಾಗಿದೆ. 
icon

(2 / 7)

ಇದು ತಮಿಳು ನಿರ್ದೇಶಕ ಕಾರ್ತಿಕ್‌ ಅದ್ವೈತ್‌ ನಿರ್ದೇಶನದ ಸಿನಿಮಾ. ತಮಿಳು ನಿರ್ದೇಶಕ ಆಕ್ಷನ್‌ ಕಟ್‌ ಹೇಳುತ್ತಿರುವ ಈ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಇದೇ ಸಮಯದಲ್ಲಿ ಯಶ್‌ ಕೂಡ ಅದೇ ಶೂಟಿಂಗ್‌ ಸೆಟ್‌ಗೆ ಭೇಟಿ ನೀಡಿ ಶಿವಣ್ಣರನ್ನು ಮೀಟ್‌ ಆಗಿದ್ದಾರೆ. ಈ ಚಿತ್ರದಲ್ಲಿ ಯಶ್‌ ಕೂಡ ನಟಿಸ್ತಾರ? ಸದ್ಯಕ್ಕೆ ಮಾಹಿತಿ ಹೊರಬಿದ್ದಿಲ್ಲ. 
icon

(3 / 7)

ಸದ್ಯ ಶಿವಣ್ಣ ನಟಿಸುತ್ತಿರುವ ಈ ಸಿನಿಮಾದ ಕುರಿತು ಹೆಚ್ಚಿನ ವಿವರ ಲಭ್ಯವಿಲ್ಲ. ಆದರೆ, ಈ ಶೂಟಿಂಗ್‌ ಸೆಟ್‌ಗೆ ಯಶ್‌ ಭೇಟಿ ನೀಡಿರುವ ಚಿತ್ರಗಳು ವೈರಲ್‌ ಆಗಿವೆ. ಈ ಸಮಯದಲ್ಲಿ ಶಿವಣ್ಣ ಕೊಂಚ ಉದ್ದವಾದ ಕೂದಲಿರುವ ವಿಗ್‌ ಧರಿಸಿದ್ದಾರೆ. ಯಶ್‌ ಕೂಡ ತನ್ನ ಟಾಕ್ಸಿಕ್‌ ಲುಕ್‌ನಲ್ಲಿ ಅಭಿಮಾನಿಗಳನ್ನು ಸೆಳೆದಿದ್ದಾರೆ. 
icon

(4 / 7)

ಕಾರ್ತಿಕ್ ಅದ್ವೈತ್, ಶಿವಣ್ಣನಿಗೆ ಆಕ್ಷನ್ ಕಟ್ ಹೇಳುವ ಮೂಲಕ ಸ್ಯಾಂಡಲ್ವುಡ್ ಅಂಗಳಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಅಂದಹಾಗೇ ಇವರಿಗೆ ಇದು ನಿರ್ದೇಶಕನಾಗಿ ಎರಡನೇ ಸಿನಿಮಾ. ಇದೊಂದು ಆ್ಯಕ್ಷನ್ ಥ್ರಿಲ್ಲರ್ ಸಿನಿಮಾವಾಗಿದ್ದು, ಶಿವಣ್ಣ ಡಿಫ್ರೆಂಟ್ ಲುಕ್‌ನಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಸಿಕೊಳ್ಳಲಿದ್ದಾರೆ.
icon

(5 / 7)

ಶಿವಣ್ಣ ನಟನೆಯ ಈ ಸಿನಿಮಾಕ್ಕೆ ಘೋಸ್ಟ್ ಖ್ಯಾತಿಯ ವಿಎಂ ಪ್ರಸನ್ನ ಹಾಗೂ ಸೀತಾರಾಮಂ ಖ್ಯಾತಿಯ ಜಯಕೃಷ್ಣ ಬರಹಗಾರರಾಗಿ ಸಾಥ್ ಕೊಡುತ್ತಿದ್ದಾರೆ. ವಿಕ್ರಂ ವೇದ, ಆರ್ ಡಿ ಎಕ್ಸ್, ಖೈದಿ ಸಿನಿಮಾ ಖ್ಯಾತಿಯ ಸ್ಯಾಮ್ ಸಿ.ಎಸ್ ಸಂಗೀತ ಒದಗಿಸಲಿದ್ದಾರೆ. ಎ.ಜೆ ಶೆಟ್ಟಿ ಛಾಯಾಗ್ರಹಣ ನಿರ್ವಹಿಸಲಿದ್ದಾರೆ. ದೀಪು ಎಸ್ ಕುಮಾರ್ ಅವರ ಸಂಕಲನ ಹಾಗೂ ರವಿ ಸಂತೆಹಕ್ಲು ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿರಲಿದೆ.
icon

(6 / 7)

ಭುವನೇಶ್ವರಿ ಪ್ರೊಡಕ್ಷನ್ ನಡಿ ಎಸ್ ಎನ್ ರೆಡ್ಡಿ ಹಾಗೂ ಸುಧೀರ್ ಪಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದು, ರಮಣ ರೆಡ್ಡಿ ಕಾರ್ಯಕಾರಿ ನಿರ್ಮಾಪಕರಾಗಿ ಸಾಥ್ ಕೊಟ್ಟಿದ್ದಾರೆ. ಒಟ್ಟಾರೆ ಶಿವಣ್ಣ ಅವರ ಮುಂಬರುವ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ.  
icon

(7 / 7)

ಇತರ ಗ್ಯಾಲರಿಗಳು