ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಯುವ ಸಿನಿಮಾ ನೋಡಿ, ಬೈಕ್‌ ಗೆಲ್ಲಿ; ವೀಕ್ಷಕರಿಗೆ ಬಂಪರ್‌ ಉಡುಗೊರೆ ನೀಡಲು ಮುಂದಾದ ಸ್ಟಾರ್‌ ಸುವರ್ಣ

ಯುವ ಸಿನಿಮಾ ನೋಡಿ, ಬೈಕ್‌ ಗೆಲ್ಲಿ; ವೀಕ್ಷಕರಿಗೆ ಬಂಪರ್‌ ಉಡುಗೊರೆ ನೀಡಲು ಮುಂದಾದ ಸ್ಟಾರ್‌ ಸುವರ್ಣ

  • ಕನ್ನಡ ಕಿರುತೆರೆಯಲ್ಲಿ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಸ್ಟಾರ್ ಸುವರ್ಣ ವಾಹಿನಿಯು ಇದೀಗ ಈ ವರ್ಷದ ಹಿಟ್ ಯುವ ಸಿನಿಮಾವನ್ನು ಪ್ರಸಾರಮಾಡಲಿದೆ. ಜೊತೆಗೆ ವೀಕ್ಷಕರಿಗೆ ಬೈಕ್ ಗೆಲ್ಲುವ ಅವಕಾಶವನ್ನು ಸುವರ್ಣ ವಾಹಿನಿಯು ನೀಡುತ್ತಿದೆ. ಹಾಗಾದರೆ, ಬೈಕ್‌ ಗೆಲ್ಲಬೇಕಾದರೆ ನೀವೇನು ಮಾಡಬೇಕು? ಇಲ್ಲಿದೆ ಮಾಹಿತಿ.

ಇದೇ ಮೊದಲ ಬಾರಿಗೆ ದೊಡ್ಮನೆಯ ಕುಡಿ, ರಾಘವೇಂದ್ರ ರಾಜಕುಮಾರ್ ಪುತ್ರ ಯುವರಾಜ್ ಕುಮಾರ್ ನಟನೆಯ ಯುವ ಸಿನಿಮಾದ ಮೂಲಕ ನಾಯಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. 
icon

(1 / 6)

ಕಾಂತಾರ ಬೆಡಗಿ ಸಪ್ತಮಿ ಗೌಡ ಯುವ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಥಿಯೇಟರ್ ಅಲ್ಲಿ ಜನ ಮನ ಗೆದ್ದ ಈ ಸಿನಿಮಾ ಇದೀಗ ಸ್ಟಾರ್ ಸುವರ್ಣ ವಾಹಿನಿಯ ಮೂಲಕ ಕಿರುತೆರೆಯಲ್ಲಿ ಪ್ರಸಾರವಾಗಲಿದೆ.
icon

(2 / 6)

ಅಷ್ಟೇ ಅಲ್ಲದೆ ಸ್ಟಾರ್ ಸುವರ್ಣ ವಾಹಿನಿಯು ನೋಡುಗರಿಗೊಂದು ಸುವರ್ಣಾವಕಾಶವನ್ನು ನೀಡುತ್ತಿದೆ. ಯುವ ಸಿನಿಮಾ ನೋಡುತ್ತಿರುವಾಗ ಸ್ಟಾರ್ ಸುವರ್ಣ ಲೋಗೋ ಕೆಳಗಡೆ ಎಷ್ಟು ಬಾರಿ ಬೈಕ್ ಚಿತ್ರ ಬರುತ್ತದೆ ಎಂಬುದನ್ನು ಗಮನಿಸಬೇಕು. 
icon

(3 / 6)

ಅಲ್ಲಿ ಎಷ್ಟು ಬಾರಿ ಬೈಕ್‌ ಕಾಣಿಸಿದೆ ಎಂಬುದನ್ನು ಗಮನಿಸಿ ಸರಿಯಾದ ಉತ್ತರ ಕೊಟ್ಟ ಒಬ್ಬ ಅದೃಷ್ಟಶಾಲಿ ವಿಜೇತರಿಗೆ ಯುವ ಸಿನಿಮಾದಲ್ಲಿ ಯುವ ರಾಜ್‌ಕುಮಾರ್ ಬಳಸಿರುವ ಬೈಕ್ ಬಹುಮಾನವಾಗಿ ಸಿಗಲಿದೆ. 
icon

(4 / 6)

ಯುವರಾಜ್ ಕುಮಾರ್ ಹಾಗೂ ಸಪ್ತಮಿ ಗೌಡ ಅಭಿನಯದ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಮೂವಿ ಯುವ ಇದೇ ಭಾನುವಾರ ರಾತ್ರಿ 7 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.
icon

(5 / 6)

ಸಂತೋಷ್‌ ಆನಂದರಾಮ್‌ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾವನ್ನು ಹೊಂಬಾಳೆ ಫಿಲಂಸ್‌ ಸಂಸ್ಥೆ ನಿರ್ಮಾಣ ಮಾಡಿತ್ತು. 
icon

(6 / 6)

ಇತರ ಗ್ಯಾಲರಿಗಳು