ಮಗಳು, ಪತಿ ಯಶಸ್ ಜೊತೆ ನಟಿ ಅದಿತಿ ಪ್ರಭುದೇವ ದೀಪಾವಳಿ ಫೋಟೋಶೂಟ್; ಮಗುವಿನ ನಗುವೇ ಚೆಂದ ಎಂದ ಫ್ಯಾನ್ಸ್
ದೇಶಾದ್ಯಂತ ದೀಪಾವಳಿ ಸಂಭ್ರಮ ಜೋರಾಗಿದೆ. ಜನರು ಪೂಜೆ, ಪುನಸ್ಕಾರದಲ್ಲಿ ಭಾಗಿಯಾಗಿದ್ದಾರೆ. ಆತ್ಮೀಯರಿಗೆ ಶುಭಾಶಯ, ಸಿಹಿ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ಉಡುಗೊರೆಗಳನ್ನು ನೀಡಿ ಸಂಭ್ರಮಿಸುತ್ತಿದ್ದಾರೆ.
(1 / 8)
ಸ್ಯಾಂಡಲ್ವುಡ್ ಸೆಲೆಬ್ರಿಟಿಗಳ ಮನೆಯಲ್ಲೂ ದೀಪಾವಳಿ ಸಂಭ್ರಮ ಜೋರಾಗಿದೆ. ನಟಿ ಅದಿತಿ ಪ್ರಭುದೇವ ದೀಪಾವಳಿ ಆಚರಿಸಿ ಮಗಳು, ಪತಿ ಯಶಸ್ ಜೊತೆ ಹೊಸ ಫೋಟೋಶೂಟ್ ಮಾಡಿಸಿದ್ದಾರೆ. (PC: Aditi Prabhudeva Instagram)
(2 / 8)
ಅಕ್ಟೋಬರ್ 4 ರಂದು ಅದಿತಿ ಪ್ರಭುದೇವ ಮಗಳ ಫೋಟೋವನ್ನು ರಿವೀಲ್ ಮಾಡಿದ್ದರು. ಜೊತೆಗೆ ಮಗಳಿಗೆ ನೇಸರ ಎಂದು ಹೆಸರಿಟ್ಟಿರುವುದಾಗಿ ಹೇಳಿದ್ದರು.
(3 / 8)
ಇದೀಗ ದೀಪಾವಳಿ ಹಬ್ಬಕ್ಕೆ ಹೊಸ ಫೋಟೋಶೂಟ್ ಮಾಡಿಸಿ ಆ ಸುಂದರ ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
(4 / 8)
ಫೋಟೋ ನೋಡಿದವರು ಆ ಮುದ್ದು ಕಂದನ ನಗುವನ್ನೇ ನೋಡಲು ಬಹಳ ಚೆಂದ, ಮಗುವಿಗೆ ದೃಷ್ಟಿಯಾಗುತ್ತಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
(5 / 8)
2022 ನವೆಂಬರ್ 28ರಂದು ಅದಿತಿ ಪ್ರಭುದೇವ ಹಾಗೂ ಯಶಸ್ ಪಟ್ಲ ಬೆಂಗಳೂರಿನ ಅರಮನೆ ಮೈದಾನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
(6 / 8)
ಇದೇ ವರ್ಷ ಜನವರಿ 1 ರಂದು ಅದಿತಿ, ತಾವು ಅಮ್ಮನಾಗುತ್ತಿರುವ ಸಿಹಿಸುದ್ದಿಯನ್ನು ಹಂಚಿಕೊಂಡಿದ್ದರು. ಏಪ್ರಿಲ್ 4ಕ್ಕೆ ಅದಿತಿ , ಮಗುವಿಗೆ ಜನ್ಮ ನೀಡಿದರು.
(7 / 8)
ಅಕ್ಟೋಬರ್ 4 ರಂದು ಅದಿತಿ ಮಗಳು ನೇಸರ 6ನೇ ತಿಂಗಳ ಹುಟ್ಟುಹಬ್ಬ ಆಚರಿಸಿದ್ದರು. ಆ ಸಮಯದಲ್ಲಿ ಮಗಳ ಫೋಟೋವನ್ನು ರಿವೀಲ್ ಮಾಡಿದ್ದರು.
ಇತರ ಗ್ಯಾಲರಿಗಳು