Saturn Retrograde: ಕುಂಭದಲ್ಲಿ ಶನಿ ಸಂಚಾರ, ಈ ರಾಶಿಗಳಿಗೆ ಶುಭ ಫಲ, ಅಪಾರ ಧನ ಲಾಭ ಕರುಣಿಸಲಿದ್ದಾನೆ ಶನಿದೇವ
- Saturn retrograde: ಶನಿಯ ಹಿಮ್ಮುಖ ಚಲನೆಯು ಎಲ್ಲ 12 ರಾಶಿಗಳ ಮೇಲೆಯೂ ಪರಿಣಾಮ ಬೀರಲಿದೆ. ಕೆಲ ರಾಶಿಗಳಿಗೆ ಈ ಚಲನೆಯಿಂದ ಅದೃಷ್ಟವೂ ಒದಗಲಿದೆ. ಶನಿಯ ಅನುಗ್ರಹಕ್ಕೆ ಪಾತ್ರವಾಗುವ ರಾಶಿಗಳು ಯಾವುವು? ಇಲ್ಲಿದೆ ವಿವರ.
- Saturn retrograde: ಶನಿಯ ಹಿಮ್ಮುಖ ಚಲನೆಯು ಎಲ್ಲ 12 ರಾಶಿಗಳ ಮೇಲೆಯೂ ಪರಿಣಾಮ ಬೀರಲಿದೆ. ಕೆಲ ರಾಶಿಗಳಿಗೆ ಈ ಚಲನೆಯಿಂದ ಅದೃಷ್ಟವೂ ಒದಗಲಿದೆ. ಶನಿಯ ಅನುಗ್ರಹಕ್ಕೆ ಪಾತ್ರವಾಗುವ ರಾಶಿಗಳು ಯಾವುವು? ಇಲ್ಲಿದೆ ವಿವರ.
(1 / 6)
ನವಗ್ರಹಗಳ ಪೈಕಿ ಶನಿಗೆ ತನ್ನದೇ ಆದ ಪ್ರಾಮುಖ್ಯವಿದೆ. ಮಾನವರ ಕರ್ಮಕ್ಕೆ (ಕೆಲಸಕ್ಕೆ) ಅನುಗುಣವಾಗಿ ಸರಿಯಾದ ಪ್ರತಿಫಲವನ್ನು ಶನಿ ಹಿಂದಿರುಗಿಸುತ್ತಾನೆ. ಶನಿ ಗ್ರಹವು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಚಲಿಸಲು ಎರಡೂವರೆ ವರ್ಷ ತೆಗೆದುಕೊಳ್ಳುತ್ತದೆ. ಪ್ರತಿ ಬಾರಿ ಚಲನೆಯ ಸಂದರ್ಭದಲ್ಲಿಯೂ ಶನಿಯು ಕೆಲ ರಾಶಿಗಳಿಗೆ ಕಷ್ಟ ಮತ್ತು ಕೆಲ ರಾಶಿಗಳಿಗೆ ಲಾಭವನ್ನು ಕೊಡುತ್ತಾನೆ.
(2 / 6)
30 ವರ್ಷಗಳ ನಂತರ ಶನಿಯು ತಾನು ಅಧಿಪತಿಯಾಗಿರುವ ಕುಂಭ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. 2024 ನೇ ಇಸವಿಯುದ್ದಕ್ಕೂ ಶನಿಯು ಅದೇ ರಾಶಿಯಲ್ಲಿ ಇರುತ್ತಾನೆ. ಈ ಬೆಳವಣಿಗೆಯು ಇತರ ರಾಶಿಗಳ ಮೇಲೆಯೂ ಪರಿಣಾಮ ಬೀರಲಿದೆ. ಅದೇನೆಂದು ತಿಳಿಯೋಣ.
(3 / 6)
ಶನಿಯ ಸಂಚಾರ ಆರಂಭವಾಗಿದ್ದು, ನವೆಂಬರ್ ತಿಂಗಳಲ್ಲಿ ಹಿಂದಿನ ರಾಶಿಗೆ ಹೋಗಲಿದ್ದಾನೆ. ಶನಿಯ ಹಿಮ್ಮುಖ ಚಲನೆ ಖಂಡಿತವಾಗಿಯೂ 12 ರಾಶಿಚಕ್ರ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ. ಕೆಲ ರಾಶಿಗಳಿಗೆ ಇದು ಅದೃಷ್ಟಕಾರಕವೂ ಹೌದು.
(4 / 6)
ಕುಂಭ ರಾಶಿ: ನಿಮ್ಮ ರಾಶಿಗೇ ಶನಿಯು ಬರಲಿದ್ದಾನೆ. ಈ ಸಮಯದಲ್ಲಿ ಹಣ ಸಂಪಾದಿಸುವ ಸಾಕಷ್ಟು ಅವಕಾಶಗಳು ನಿಮಗೆ ಸಿಗಬಹುದು. ಹಣದ ಉಳಿತಾಯದ ಬಗ್ಗೆ ಯೋಚಿಸುತ್ತಿದ್ದಲ್ಲಿ ಅದೂ ಸಹ ಸಾಕಾರವಾಗಲಿದೆ. ನಿಮಗೆ ಇತರರು ಕೊಡುವ ಗೌರವವೂ ಹೆಚ್ಚಾಗಲಿದೆ.
(5 / 6)
ವೃಷಭ ರಾಶಿ: ಶನಿಯು ನಿಮ್ಮ ರಾಶಿಚಕ್ರ ಚಿಹ್ನೆಯ 10 ನೇ ಮನೆಯಲ್ಲಿದ್ದಾನೆ. ಇದು ನಿಮಗೆ ವೃತ್ತಿ ಮತ್ತು ವ್ಯವಹಾರದಲ್ಲಿ ಉತ್ತಮ ಪ್ರಗತಿಯನ್ನು ನೀಡುತ್ತದೆ. ಈ ಅವಧಿಯಲ್ಲಿ ನಿಮ್ಮ ಬುದ್ಧಿಯೂ ಚುರುಕಾಗಿ ಕೆಲಸ ಮಾಡುತ್ತದೆ. ನೀವು ಇಲ್ಲಿಯವರೆಗೆ ಕೆಲಸಕ್ಕಾಗಿ ಹಾಕಿದ ಪರಿಶ್ರಮಕ್ಕೆ ತಕ್ಕ ಪ್ರತಿಫಲವೂ ಸಿಗಲಿದೆ.ನವೆಂಬರ್ ತಿಂಗಳ ನಂತರ ನಿಮ್ಮ ವೈಯಕ್ತಿಕ ಬದುಕು ಸುಧಾರಿಸಲಿದೆ.
(6 / 6)
ಮಿಥುನ ರಾಶಿ: ನಿಮ್ಮ ರಾಶಿಚಕ್ರ ಚಿಹ್ನೆಯ 9ನೇ ಮನೆಗೆ ಶನಿ ಬರಲಿದ್ದಾನೆ. ನವೆಂಬರ್ ನಂತರ ನಿಮಗೆ ಅದೃಷ್ಟ ಒಲಿಯಲಿದೆ. ವೃತ್ತಿ ಮತ್ತು ವ್ಯವಹಾರದಲ್ಲಿ ಉತ್ತಮ ಪ್ರಗತಿಯನ್ನು ಪಡೆಯುತ್ತೀರಿ. ನೀವು ಆರ್ಥಿಕವಾಗಿ ಉತ್ತಮ ಲಾಭವನ್ನು ಪಡೆಯುತ್ತೀರಿ. ಇತರರಿಂದ ಪಡೆಯುವ ಗೌರವವೂ ಹೆಚ್ಚಾಗುತ್ತದೆ. ನಿಮಗೆ ಅದೃಷ್ಟದ ಬೆಂಬಲವೂ ಇರುತ್ತದೆ. ನೀವು ಕೈಗೊಂಡ ಕಾರ್ಯಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುವಿರಿ.
ಇತರ ಗ್ಯಾಲರಿಗಳು