ಪುಟ್ಟಗೌರಿ ಮದುವೆ ಸೀರಿಯಲ್‌ನಲ್ಲಿ ನಟಿಸ್ತಿದ್ದಾಗ ನನ್ನ ಸಂಬಳ ಕೇವಲ 300, ಈಗ..! ‘ಮಿಲೇನಿಯರ್’ ಶಿವಪುತ್ರನ ಬದುಕು- ಬವಣೆ
- Shivaputra Yasharadha Comedy show: ಯೂಟ್ಯೂಬ್‌ನಲ್ಲಿ 16ಲಕ್ಷ ಸಬ್‌ಸ್ಕ್ರೈಬರ್ಸ್ ಹೊಂದಿರುವ ಉತ್ತರ ಕರ್ನಾಟಕದ ಶಿವಪುತ್ರ, ತಮ್ಮ ಶಿವಪುತ್ರ ಯಶಾರದಾ ಕಾಮಿಡಿ ಶೋ ಮೂಲಕವೇ ಫೇಮಸ್. ಹೀಗೆ ಫೇಮಸ್ ಆಗುವುದಕ್ಕೂ ಮುನ್ನ, ಸೇಲ್ಸ್‌ಮನ್ ಆಗಿ, ಸೆಕ್ಯೂರಿಟಿ ಗಾರ್ಡ್ ಆಗಿ, ಸಿನಿಮಾ ಸೀರಿಯಲ್‌ಗಳಲ್ಲಿ ಜ್ಯೂನಿಯರ್ ಆರ್ಟಿಸ್ಟ್ ಆಗಿಯೂ ಇವರು ಕೆಲಸ ಮಾಡಿದ್ದಾರೆ.
- Shivaputra Yasharadha Comedy show: ಯೂಟ್ಯೂಬ್‌ನಲ್ಲಿ 16ಲಕ್ಷ ಸಬ್‌ಸ್ಕ್ರೈಬರ್ಸ್ ಹೊಂದಿರುವ ಉತ್ತರ ಕರ್ನಾಟಕದ ಶಿವಪುತ್ರ, ತಮ್ಮ ಶಿವಪುತ್ರ ಯಶಾರದಾ ಕಾಮಿಡಿ ಶೋ ಮೂಲಕವೇ ಫೇಮಸ್. ಹೀಗೆ ಫೇಮಸ್ ಆಗುವುದಕ್ಕೂ ಮುನ್ನ, ಸೇಲ್ಸ್‌ಮನ್ ಆಗಿ, ಸೆಕ್ಯೂರಿಟಿ ಗಾರ್ಡ್ ಆಗಿ, ಸಿನಿಮಾ ಸೀರಿಯಲ್‌ಗಳಲ್ಲಿ ಜ್ಯೂನಿಯರ್ ಆರ್ಟಿಸ್ಟ್ ಆಗಿಯೂ ಇವರು ಕೆಲಸ ಮಾಡಿದ್ದಾರೆ.
(1 / 12)
ಯೂಟ್ಯೂಬ್‌ನಲ್ಲಿ ಕಾಮಿಡಿ ವಿಡಿಯೋಗಳ ಮೂಲಕವೇ ಉತ್ತರ ಕರ್ನಾಟಕ ಭಾಗದ ಸಾಕಷ್ಟು ಮಂದಿ ಕ್ರಾಂತಿ ಮಾಡುತ್ತಿದ್ದಾರೆ. ಮಿಲಿಯನ್‌ಗಟ್ಟಲೇ ಸಬ್‌ಸ್ಕ್ರೈಬ್ ಸಂಪಾದಿಸಿದ್ದಾರೆ. ಯಾವ ಹಂಗಿಲ್ಲದೆ, ಯೂಟ್ಯೂಬ್‌ನಲ್ಲಿಯೇ ಲಕ್ಷಾಂತರ ರೂಪಾಯಿ ಗಳಿಕೆ ಕಾಣುತ್ತಿದ್ದಾರೆ.
(2 / 12)
ಆ ಪೈಕಿ ಅದೇ ಉತ್ತರ ಕರ್ನಾಟಕದ ಗುಮ್ಮಟ ನಗರಿ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯ ಶಿವಪುತ್ರ ಯಶಾರದಾ ಸಹ ಒಬ್ಬರು. ಯೂಟ್ಯೂಬ್‌ನಲ್ಲಿ ಶಿವಪುತ್ರ ಯಶಾರದಾ ಕಾಮಿಡಿ ಶೋ ಮೂಲಕ ತಮ್ಮ ಕಾಮಿಡಿ ಸ್ಕಿಟ್‌ಗಳ ಮೂಲಕವೇ ನಾಡಿನಾದ್ಯಂತ ಗುರುತಿಸಿಕೊಂಡಿದ್ದಾರೆ.
(3 / 12)
ತಮ್ಮದೇ ಆದ ಏಳೆಂಟು ಜನರ ತಂಡ ಕಟ್ಟಿಕೊಂಡು, ವಾರಕ್ಕೆರಡು ಕಾಮಿಡಿ ಕಿರುಚಿತ್ರಗಳನ್ನು ಯೂಟ್ಯೂಬ್‌ನಲ್ಲಿ ಶೇರ್ ಮಾಡುತ್ತಿರುತ್ತಾರೆ ಶಿವಪುತ್ರ. ಇವರ ಯೂಟ್ಯೂಬ್‌ನಲ್ಲಿ 16 ಲಕ್ಷಕ್ಕೂ ಅಧಿಕ ಸಬ್‌ಸ್ಕ್ರೈಬರ್ಸ್ ಹೊಂದಿದ್ದಾರೆ. ಇನ್‌ಸ್ಟಾಗ್ರಾಂನಲ್ಲೂ 11 ಲಕ್ಷ ಫಾಲೋವರ್ಸ್ ಹೊಂದಿದ್ದಾರೆ ಶಿವಪುತ್ರ.
(4 / 12)
2015- 16ರ ಸಮಯದಲ್ಲಿ ಕೆಲಸಕ್ಕೆಂದು ಬೆಂಗಳೂರಿಗೆ ಬಂದಿದ್ದ ಶಿವಪುತ್ರ, ಸೇಲ್ಸ್ ಮನ್ ಆಗಿಯೂ ಕೆಲಸ ಮಾಡಿದ್ದಾರೆ. ಅದು ವರ್ಕೌಟ್ ಆಗದಿದ್ದಾಗ, 19ನೇ ವರ್ಷದವನಿದ್ದಾಗಲೇ ಇನ್ಫೋಸಿಸ್‌ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿಯೂ ಕೆಲಸಕ್ಕೆ ಸೇರಿದರು. ನಾಲ್ಕು ತಿಂಗಳು ಕೆಲಸ ಮಾಡಿದೆ.
(5 / 12)
ಆದರೆ, ಇದೇ ಶಿವಪುತ್ರ ನಟನಾಗಬೇಕು, ಸಿನಿಮಾ, ಸೀರಿಯಲ್‌ಗಳಲ್ಲಿ ಕಾಣಿಸಿಕೊಳ್ಳಬೇಕೆಂದು ಸಾಕಷ್ಟು ಸರ್ಕಸ್ ಮಾಡಿದ್ದಾರೆ. ಆದರೆ, ಅದ್ಯಾವುದೂ ಅವರಿಗೆ ಒಗ್ಗಿ ಬರಲಿಲ್ಲ.
(6 / 12)
2017ರಲ್ಲಿ ಸಿನಿಮಾ ಮೇಲಿನ ಅತೀವ ಆಸಕ್ತಿಯಿಂದಲೇ ಬರಿಗೈಯಲ್ಲೇ ಬೆಂಗಳೂರಿಗೆ ಬಂದಿಳಿದಿದ್ದ ಶಿವಪುತ್ರ, ತಾಯಿಗೆ ತಕ್ಕ ಮಗ ಸಿನಿಮಾದಲ್ಲಿ ಜೂನಿಯರ್ ಆರ್ಟಿಸ್ಟ್ ಆಗಿ ಕೆಲಸ ಮಾಡಿದ್ದರು.
(7 / 12)
ಅದರ ಜತೆಗೆ ಅದೇ ಕಂಠೀರವ ಸ್ಟುಡಿಯೋದಲ್ಲಿ ನಡೆಯುತ್ತಿದ್ದ ಸೂಪರ್ ಮಿನಿಟ್ ಶೋದಲ್ಲಿ, ಪ್ರೇಕ್ಷಕನಾಗಿ, ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ಚಪ್ಪಾಳೆ ಹೊಡೆಯುವ ಕೆಲಸಕ್ಕೂ ಸೇರಿದ್ದರು.
(8 / 12)
ಇದರ ಜತೆಗೆ ಪುಟ್ಟಗೌರಿ ಮದುವೆ ಸೀರಿಯಲ್‌ನಲ್ಲಿ ಜೂನಿಯರ್ ಆರ್ಟಿಸ್ಟ್ ಆಗಿಯೂ ಸೇರಿದ್ದ ಶಿವಪುತ್ರಗೆ ಆಗ ಒಂದು ದಿನಕ್ಕೆ 300 ರೂಪಾಯಿ ಸಿಗುತ್ತಿತ್ತು. ಸೀರಿಯಲ್‌ನ ಸಣ್ಣ ದೃಶ್ಯದಲ್ಲಿ ಕಾಣಿಸಿಕೊಂಡಿದ್ದೇ ತಡ, ಶಿವಪುತ್ರ ಊರಲ್ಲಿ ಎಲ್ಲರಿಂದಲೂ ಮೆಚ್ಚುಗೆಯೂ ಸಿಕ್ಕಿತ್ತು.
(9 / 12)
ಅದಾಗಲೇ ಸೋಷಿಯಲ್ ಮೀಡಿಯಾದಲ್ಲಿ, ಟಿಕ್‌ಟಾಕ್‌ನಲ್ಲಿ ಒಂದಷ್ಟು ಫಾಲೋವರ್ಸ್ ಪಡೆದಿದ್ದ ಶಿವಪುತ್ರ, ಸಣ್ಣ ಸಣ್ಣ ವಿಡಿಯೋ ಮಾಡುವುದರ ಜತೆಗೆ ಸಿನಿಮಾ ಆಡಿಷನ್‌ಗಳಲ್ಲೂ ಭಾಗವಹಿಸಿ ಬಂದಿದ್ದರು. ಆದರೆ, ಅದ್ಯಾವುದೂ ಅವರ ಕೈ ಹಿಡಿಯಲಿಲ್ಲ.
(10 / 12)
ಹಣಕಾಸಿನ ಸಮಸ್ಯೆ ನಡುವೆಯೂ ಏನಾದರೂ ಮಾಡಲೇಬೇಕೆಂದು 2020ರಲ್ಲಿ ಯೂಟ್ಯೂಬ್‌ನಲ್ಲಿ ವಾರಕ್ಕೊಂದು ಕಾಮಿಡಿ ವಿಡಿಯೋ ಹಾಕಲು ಶುರು ಮಾಡಿದರು. ವಿಡಿಯೋ ಹಾಕುತ್ತ ಎರಡೇ ತಿಂಗಳಿಗೆ ಮೊದಲ ಪೇಮೆಂಟ್ ರೂಪದಲ್ಲಿ 8 ಸಾವಿರ ಪಡೆದಿದ್ದರು ಶಿವಪುತ್ರ.
(11 / 12)
ಎಲ್ಲವೂ ಚೆನ್ನಾಗಿ ಹೋಗ್ತಿದೆ ಎನ್ನುತ್ತಿರುವಾಗಲೇ ಮಳೆ ಹಿನ್ನೆಲೆಯಲ್ಲಿ ಮನೆಯೂ ಕುಸಿಯಿತು. ಬೇರೆಯವರ ಆಶ್ರಯ ಹೆಚ್ಚು ದಿನ ಸಿಗಲಿಲ್ಲ. ಯೂಟ್ಯೂಬ್‌ನಿಂದ ಬಂದ ಹಣ ಮತ್ತು ಅವರ ತಾಯಿ ಕೂಡಿಟ್ಟ ಹಣ ಸೇರಿಸಿ 2021ರಲ್ಲಿ ಮನೆಯನ್ನೂ ಕಟ್ಟಿಸಿದರು.
ಇತರ ಗ್ಯಾಲರಿಗಳು