Krishna Janmashtami 2024: ತುಳಸಿಯೇ ಇಲ್ಲದೆ ಕೃಷ್ಣಾಷ್ಟಮಿ ಪೂಜೆ ಸಾಧ್ಯವೇ? ಈ ವಿಷಯಗಳನ್ನು ಮರೆಯಬೇಡಿ
Krishna Janmashtami 2024: ಕೃಷ್ಣ ಜನ್ಮಾಷ್ಟಮಿಯ ದಿನ ತುಳಸಿ ಗಿಡವನ್ನು ಪೂಜಿಸುವುದು ತುಂಬಾ ಶ್ರೇಯಸ್ಕರ. ಬಾಲಗೋಪಾಲ ಜನಿಸಿದ ಈ ದಿನದಂದು ತುಳಸಿ ಪೂಜೆ ಮಾಡುವುದರಿಂದ ಇಷ್ಟಾರ್ಥಗಳ ನೆರವೇರುತ್ತವೆ ಹಾಗೂ ಬದುಕಿನಲ್ಲಿ ಎಲ್ಲವೂ ಶುಭವಾಗುತ್ತದೆ ಎಂಬ ನಂಬಿಕೆ ಇದೆ. ಇಂದು ಪಾಲಿಸಬೇಕಾದ ಕ್ರಮಗಳನ್ನು ತಿಳಿಯಿರಿ.
(1 / 9)
ಭಾರತದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ (ಕೃಷ್ಣಾಷ್ಟಮಿ)ಗೆ ವಿಶೇಷ ಮಹತ್ವವಿದೆ. ಇಂದು ಶ್ರೀಕೃಷ್ಣನ ಜನ್ಮದಿನವನ್ನು ಆಚರಿಸಲಾಗುತ್ತದೆ. ಈ ಹಬ್ಬವು ಪ್ರತಿ ವರ್ಷ ಶ್ರಾವಣ ಮಾಸದ ಕೃಷ್ಣಪಕ್ಷದ ಎಂಟನೆಯ ದಿನದಂದು ಬರುತ್ತದೆ. ಈ ವರ್ಷ ಆಗಸ್ಟ್ 26 ಅಂದರೆ ಇಂದು ಕೃಷ್ಣಾಷ್ಟಮಿ ಬಂದಿದೆ . ಕೃಷ್ಣಾಷ್ಟಮಿಯಂದು ತುಳಸಿ ಗಿಡವನ್ನು ಪೂಜಿಸುವುದರಿಂದ ಬಹಳಷ್ಟು ಒಳಿತಾಗುತ್ತದೆ ಎಂಬ ನಂಬಿಕೆ ಇದೆ.
(2 / 9)
ಹಿಂದೂ ಧರ್ಮದಲ್ಲಿ ತುಳಸಿಯನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಇದು ವಿಷ್ಣು ಮತ್ತು ಲಕ್ಷ್ಮೀದೇವಿಯ ನೆಚ್ಚಿನ ಸಸ್ಯ ಎಂದು ಹೇಳಲಾಗುತ್ತದೆ. ಮನೆಯಲ್ಲಿ ತುಳಸಿ ಗಿಡ ಇದ್ದರೆ ಧನಾತ್ಮಕ ಶಕ್ತಿ ಬರುತ್ತದೆ ಎಂಬುದು ನಂಬಿಕೆ.
(3 / 9)
ಕೃಷ್ಣಾಷ್ಟಮಿಯಂದು ತುಳಸಿ ಗಿಡದ ಮುಂದೆ ‘ಓಂ ನಮೋ ಭಗವತೇ ವಾಸುದೇವಾಯ’ ಎಂಬ ಮಂತ್ರವನ್ನು ಪಠಿಸಿ. ಶ್ರೀಕೃಷ್ಣನ ನಾಮಗಳನ್ನು ಜಪಿಸಿ. ಹೀಗೆ ಮಾಡುವುದರಿಂದ ಜೀವನದಲ್ಲಿನ ಸಮಸ್ಯೆಗಳು ದೂರವಾಗುತ್ತವೆ ಮತ್ತು ಇಷ್ಟಾರ್ಥಗಳು ಈಡೇರುತ್ತವೆ ಎಂದು ನಂಬಲಾಗಿದೆ.(Unsplash)
(4 / 9)
ಕೃಷ್ಣಾಷ್ಟಮಿಯ ದಿನದಂದು ಕೃಷ್ಣನಿಗೆ ಅರ್ಪಿಸಿದ ನೈವೇದ್ಯದಲ್ಲಿ ತುಳಸಿ ಎಲೆಗಳನ್ನು ಹಾಕಿ. ಇದರಿಂದ ಆರ್ಥಿಕ ಪರಿಸ್ಥಿತಿ ಸುಧಾರಿಸುವ ವಿಶ್ವಾಸವಿದೆ.
(5 / 9)
ಕೃಷ್ಣಾಷ್ಟಮಿಯ ದಿನ ತುಳಸಿ ಗಿಡಕ್ಕೆ ಕೆಂಪು ಬಟ್ಟೆಯನ್ನು ಅರ್ಪಿಸಬೇಕು. ಇದನ್ನು ಮಾಡುವುದರಿಂದ ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ನಂಬಲಾಗುತ್ತದೆ.
(6 / 9)
ಕೃಷ್ಣ ಜನ್ಮಾಷ್ಟಮಿಯಂದು ತುಳಸಿ ಗಿಡದ ಮುಂದೆ ತುಪ್ಪದ ದೀಪವನ್ನು ಹಚ್ಚಬೇಕು. ತುಳಸಿ ಕಟ್ಟೆಯ ಸುತ್ತ 11 ಬಾರಿ ಪ್ರದಕ್ಷಿಣೆ ಹಾಕಿ. ಹೀಗೆ ಮಾಡುವುದರಿಂದ ಸಂತೋಷ ಮತ್ತು ಸಮೃದ್ಧಿ ದೊರೆಯುತ್ತದೆ ಎಂಬುದು ನಂಬಿಕೆ.
(7 / 9)
ಕೃಷ್ಣಾಷ್ಟಮಿಯ ದಿನ ತುಳಸಿ ಗಿಡವನ್ನು ನೆಡುವುದು ಕೂಡ ತುಂಬಾ ಮಂಗಳಕರ. ಹೀಗೆ ಮಾಡುವುದರಿಂದ ವೈವಾಹಿಕ ಜೀವನದಲ್ಲಿನ ಸಮಸ್ಯೆಗಳು ನಿವಾರಣೆಯಾಗಿ ಜೀವನದಲ್ಲಿ ನೆಮ್ಮದಿಯಿಂದ ಇರುತ್ತಾರೆ ಎಂಬ ನಂಬಿಕೆ ಇದೆ.
(8 / 9)
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ
ಇತರ ಗ್ಯಾಲರಿಗಳು