Best Smartphones: 30000 ರೂಗಿಂತ ಕಡಿಮೆ ದರದ ಅತ್ಯುತ್ತಮ ಸ್ಮಾರ್ಟ್ಫೋನ್ ಹುಡುಕುತ್ತಿದ್ದೀರಾ, ಇಲ್ಲಿವೆ 9 ಆಯ್ಕೆಗಳು
smartphones you can buy under ₹30,000: ಹೊಸ ಫೋನ್ ಖರೀದಿಸಲು ಆಲೋಚಿಸುವಿರಾ, ನಿಮ್ಮ ಬಜೆಟ್ ಹೆಚ್ಚೆಂದರೆ 30 ಸಾವಿರವೇ, ಅದಕ್ಕಿಂತ ಕಡಿಮೆ ದರದ ಫೋನ್ಗಳನ್ನು ಹುಡುಕುವಾಗ ಹತ್ತು ಹಲವು ಆಯ್ಕೆಗಳು ನಿಮ್ಮ ಕಣ್ಣಮುಂದೆ ಬರಬಹುದು. ಅತ್ಯುತ್ತಮವೆನಿಸುವ ಹತ್ತು ಫೋನ್ಗಳ ಮಾಹಿತಿ ಇಲ್ಲಿ ನೀಡಲಾಗಿದೆ.
(1 / 9)
Vivo Y100A 5G | ವಿವೊ ವೈ100 ಎ ಎಂಬ 5ಜಿ ಸ್ಮಾರ್ಟ್ಫೋನ್ ನಿಮಗೆ ಸೂಕ್ತವಾಗಬಹುದು. ಇದರ ದರ 25,999 ರೂಪಾಯಿ ಇದೆ. ಇದರಲ್ಲಿ 6.38 ಇಂಚಿನ ಫುಲ್ ಎಚ್ಡಿ ಪ್ಲಸ್ ಅಮೊಲೆಡ್ ಡಿಸ್ಪ್ಲೇ ಇದೆ. ಇದರಲ್ಲಿ 4,500 ಎಂಎಎಚ್ ಬ್ಯಾಟರಿ ಇದೆ.
(2 / 9)
Xiaomi 11 Lite NE 5G | ಶಿಯೊಮಿ 11 ಲೈಟ್ ಎನ್ಇ5ಜಿಯು 26,999 ರೂಪಾಯಿ ದರ ಹೊಂದಿದೆ. ಇದರಲ್ಲಿ 64ಎಂಪಿ ತ್ರಿಪಲ್ ಕ್ಯಾಮೆರಾವಿದೆ.
(3 / 9)
Oppo Reno 8T 5G| ಒಪ್ಪೊ ರೆನೊ 8ಟಿ 5ಜಿ ಫೋನ್ ಕೂಡ ನಿಮಗೆ ಸೂಕ್ತವಾಗಬಹುದು. ಫ್ಲಿಪ್ಕಾರ್ಟ್ನಲ್ಲಿ ಇದರ ದರ 29,999 ರೂಪಾಯಿ ಇದೆ. ಇದರಲ್ಲಿ ಕ್ವಾಲ್ಕಾಂ ಸ್ನಾಪ್ಡ್ರಾಗನ್ 695 ಪ್ರೊಸೆಸರ್ ಇದೆ. 4,800 ಎಂಎಎಚ್ ಬ್ಯಾಟರಿ ಇದೆ.
(4 / 9)
iQoo Neo 7 5G | ಐಕ್ಯೂಒ ನಿಯೊ 7 5ಜಿ ದರ ಸುಮಾರು 28,999 ರೂಪಾಯಿ ಇದೆ. ಮೀಡಿಯಾ ಟೆಕ್ ಡೈಮೆನ್ಸ್ಟಿ 8200 ಪ್ರೊಸೆಸರ್ ಹೊಂದಿದೆ. ಹಿಂಭಾಗದಲ್ಲಿ 64 ಎಂಪಿ ಒಐಎಸ್ ಕ್ಯಾಮೆರಾ ಇದೆ.
(5 / 9)
ಟೆಕ್ನೊ ಕೆಮನ್ 20 ಪ್ರೀಮಿಯರ್ 5ಜಿ: ಇದರ ದರ ಅಮೆಜಾನ್ನಲ್ಲಿ 29,999 ರೂಪಾಯಿ ಇದೆ. ಇದರಲ್ಲಿ ಅಲ್ಟ್ರಾ ವೈಡ್ 108 ಮೆಗಾಫಿಕ್ಸೆಲ್ ಕ್ಯಾಮೆರಾವಿದೆ.
(6 / 9)
Poco X5 Pro 5G | ಪೊಕೊ ಎಕ್ಸ್5 ಪ್ರೊ5ಜಿ ದರ 22,999 ರೂನಿಂದ ಆರಂಭವಾಗುತ್ತದೆ. ಇದರಲ್ಲಿ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 774ಜಿ ಪ್ರೊಸೆಸರ್ ಇದೆ.
(7 / 9)
Redmi Note 12 Pro 5G | ರೆಡ್ಮಿ ನೋಟ್ 12 ಪ್ರೊ 5ಜಿ ದರ 23,999 ರೂಪಾಯಿಯಿಂದ ಆರಂಭವಾಗುತ್ತದೆ. ಈ ಸ್ಮಾರ್ಟ್ಫೋನ್ನಲ್ಲಿ ಮೀಡಿಯಾಟೆಕ್ ಡೈಮೆನ್ಸಿಟಿ 1080 ಪ್ರೊಸೆಸರ್ ಇದೆ. 50 ಎಂಪಿ ಒಐಎಸ್ ಕ್ಯಾಮೆರಾ ಹಿಂಭಾಗದಲ್ಲಿದೆ.
(8 / 9)
Oppo F23 5G | ಈ ಸ್ಮಾರ್ಟ್ಫೋನ್ನಲ್ಲಿ 5,000 ಎಂಎಎಚ್ ಬ್ಯಾಟರಿ ಇದೆ. 6.7 ಇಂಚಿನ ಫುಲ್ ಎಚ್ಡಿ ಪ್ಲಸ್ ಪಂಚ್ ಹೋಲ್ 120 ಡಿಸ್ಪ್ಲೇ ಇದೆ. ಇದು 2400x1080 ಫಿಕ್ಸೆಲ್ ಡಿಸ್ಪ್ಲೇಯಾಗಿದೆ. ದರ 24,999 ರೂಪಾಯಿ ಇದೆ.
ಇತರ ಗ್ಯಾಲರಿಗಳು