ಐಫೋನ್‌ ಎಸ್‌ಇ 4 ಆಗಮನ ಸನಿಹ, ಆಪಲ್‌ ಕಂಪನಿಯ ಹೊಸ ಬಜೆಟ್‌ ಫೋನ್‌ ಕುರಿತು ಸೋರಿಕೆಯಾದ 5 ವಿವರಗಳು-technology news iphone se 4 launch inching closer 5 things about apple mid ranger iphone pcp ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಐಫೋನ್‌ ಎಸ್‌ಇ 4 ಆಗಮನ ಸನಿಹ, ಆಪಲ್‌ ಕಂಪನಿಯ ಹೊಸ ಬಜೆಟ್‌ ಫೋನ್‌ ಕುರಿತು ಸೋರಿಕೆಯಾದ 5 ವಿವರಗಳು

ಐಫೋನ್‌ ಎಸ್‌ಇ 4 ಆಗಮನ ಸನಿಹ, ಆಪಲ್‌ ಕಂಪನಿಯ ಹೊಸ ಬಜೆಟ್‌ ಫೋನ್‌ ಕುರಿತು ಸೋರಿಕೆಯಾದ 5 ವಿವರಗಳು

ಐಫೋನ್ ಎಸ್ಇ 4 ಎಂಬ ಮಧ್ಯಮ ಶ್ರೇಣಿಯ ಐಫೋನ್‌ ಬಿಡುಗಡೆಗೆ ಕೆಲವು ತಿಂಗಳು ಬಾಕಿ ಉಳಿದಿದೆ. ಆಪಲ್‌ ಕಂಪನಿಯ ಈ ಐಫೋನ್‌ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಈ ಐಫೋನ್‌ ಎಸ್‌ಇ 4 ಕುರಿತು ಸಾಕಷ್ಟು ವಿಚಾರಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿವೆ.

ಐಫೋನ್ ಎಸ್ಇ 4 ಬಿಡುಗಡೆ ಕುರಿತು ಆಪಲ್‌ ಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ. ಈ ಐಫೋನ್‌ ಭಾರತದ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯನ್ನು ಅಲ್ಲಾಡಿಸಿಬಿಡುವ ನಿರೀಕ್ಷೆಯಿದೆ. ಕಂಪನಿಯು ಬಹಳಷ್ಟು ಸಮಯದಿಂದ ಐಫೋನ್ ಎಸ್ಇ 4 ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ನಿರತವಾಗಿತ್ತು.  ಮುಂದಿನ ವರ್ಷ ಮಾರ್ಚ್‌ ತಿಂಗಳಲ್ಲಿ  ಐಫೋನ್ ಎಸ್ಇ 4 ಬಿಡುಗಡೆಯಾಗುವ ಸೂಚನೆಯಿದೆ.
icon

(1 / 5)

ಐಫೋನ್ ಎಸ್ಇ 4 ಬಿಡುಗಡೆ ಕುರಿತು ಆಪಲ್‌ ಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ. ಈ ಐಫೋನ್‌ ಭಾರತದ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯನ್ನು ಅಲ್ಲಾಡಿಸಿಬಿಡುವ ನಿರೀಕ್ಷೆಯಿದೆ. ಕಂಪನಿಯು ಬಹಳಷ್ಟು ಸಮಯದಿಂದ ಐಫೋನ್ ಎಸ್ಇ 4 ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ನಿರತವಾಗಿತ್ತು.  ಮುಂದಿನ ವರ್ಷ ಮಾರ್ಚ್‌ ತಿಂಗಳಲ್ಲಿ  ಐಫೋನ್ ಎಸ್ಇ 4 ಬಿಡುಗಡೆಯಾಗುವ ಸೂಚನೆಯಿದೆ.(X.com/MajinBuOfficial)

ಐಫೋನ್ ಎಸ್ಇ 4 ಫೇಸ್ ಐಡಿಯೊಂದಿಗೆ ಒಎಲ್ಇಡಿ ಡಿಸ್ಪ್ಲೇ ಮತ್ತು ಹೋಮ್ ಬಟನ್ ಇರದ ಆಲ್-ಸ್ಕ್ರೀನ್ ನೋಟ ಹೊಂದಿರಲಿದೆ ಎನ್ನಲಾಗುತ್ತಿದೆ. ಇದರ ಡಿಸ್‌ಪ್ಲೇ ಗಾತ್ರ 4.7 ಇಂಚುಗಳ ಬದಲಾಗಿ 6.06 ಇಂಚು ಇರಲಿದೆ. ಹೊಸ ಐಫೋನ್ 16 ನಿಂದ ಸ್ಫೂರ್ತಿ ಪಡೆದ ಪ್ಯಾನೆಲ್‌ ಇದರಲ್ಲಿ ಇರಲಿದೆ ಎನ್ನಲಾಗುತ್ತಿದೆ.
icon

(2 / 5)

ಐಫೋನ್ ಎಸ್ಇ 4 ಫೇಸ್ ಐಡಿಯೊಂದಿಗೆ ಒಎಲ್ಇಡಿ ಡಿಸ್ಪ್ಲೇ ಮತ್ತು ಹೋಮ್ ಬಟನ್ ಇರದ ಆಲ್-ಸ್ಕ್ರೀನ್ ನೋಟ ಹೊಂದಿರಲಿದೆ ಎನ್ನಲಾಗುತ್ತಿದೆ. ಇದರ ಡಿಸ್‌ಪ್ಲೇ ಗಾತ್ರ 4.7 ಇಂಚುಗಳ ಬದಲಾಗಿ 6.06 ಇಂಚು ಇರಲಿದೆ. ಹೊಸ ಐಫೋನ್ 16 ನಿಂದ ಸ್ಫೂರ್ತಿ ಪಡೆದ ಪ್ಯಾನೆಲ್‌ ಇದರಲ್ಲಿ ಇರಲಿದೆ ಎನ್ನಲಾಗುತ್ತಿದೆ.(Ming-Chi Kuo)

ಕಡಿಮೆ ದರದ ಈ ಆಪಲ್‌ ಸ್ಮಾರ್ಟ್‌ಫೋನ್‌ನ ಹೊಸ ವಿನ್ಯಾಸದ ಕುರಿತು ಸಾಕಷ್ಟು ಕೌತುಕವಿದೆ. ಇದೇ ಸಮಯದಲ್ಲಿ ಇದರ ದರ 500 ಡಾಲರ್‌ಗಿಂತ ಕಡಿಮೆ ಇರುವ ಸೂಚನೆ ಇದೆ. ಅಂದರೆ, ಆರಂಭಿಕ ಆವೃತ್ತಿಯ ದರ 40 ಸಾವಿರ ರೂಪಾಯಿ ಆಸುಪಾಸಿನಲ್ಲಿದ್ದರೆ ಅಚ್ಚರಿಯಿಲ್ಲ. ಇದರಲ್ಲಿ ಯುಎಸ್‌ಬಿ ಸಿ ಪೋರ್ಟ್‌, ಆಕ್ಷನ್‌ ಬಟನ್‌ ಮುಂತಾದ ಫೀಚರ್‌ಗಳೂ ಇರಲಿವೆ ಎಂದು ವರದಿಗಳು ತಿಳಿಸಿವೆ.
icon

(3 / 5)

ಕಡಿಮೆ ದರದ ಈ ಆಪಲ್‌ ಸ್ಮಾರ್ಟ್‌ಫೋನ್‌ನ ಹೊಸ ವಿನ್ಯಾಸದ ಕುರಿತು ಸಾಕಷ್ಟು ಕೌತುಕವಿದೆ. ಇದೇ ಸಮಯದಲ್ಲಿ ಇದರ ದರ 500 ಡಾಲರ್‌ಗಿಂತ ಕಡಿಮೆ ಇರುವ ಸೂಚನೆ ಇದೆ. ಅಂದರೆ, ಆರಂಭಿಕ ಆವೃತ್ತಿಯ ದರ 40 ಸಾವಿರ ರೂಪಾಯಿ ಆಸುಪಾಸಿನಲ್ಲಿದ್ದರೆ ಅಚ್ಚರಿಯಿಲ್ಲ. ಇದರಲ್ಲಿ ಯುಎಸ್‌ಬಿ ಸಿ ಪೋರ್ಟ್‌, ಆಕ್ಷನ್‌ ಬಟನ್‌ ಮುಂತಾದ ಫೀಚರ್‌ಗಳೂ ಇರಲಿವೆ ಎಂದು ವರದಿಗಳು ತಿಳಿಸಿವೆ.(AppleTrack)

ಐಫೋನ್ ಎಸ್ಇ 4 ಕೂಡ ಆಪಲ್ ಇಂಟೆಲಿಜೆನ್ಸ್ ಫೀಚರ್‌ ಅನ್ನು ಹೊಂದಿರುವ ನಿರೀಕ್ಷೆಯಿದೆ. ಐಫೋನ್ 16 ಸರಣಿಯ 'ಅತಿದೊಡ್ಡ ವೈಶಿಷ್ಟ್ಯ' ಎಂದು ಹೇಳಲಾಗುವ ಆಪಲ್ ಇಂಟೆಲಿಜೆನ್ಸ್ ವಾಸ್ತವವಾಗಿ ಐಒಎಸ್ 18 ನ ಭಾಗವಾಗಿದೆ. ಆದರೆ ಈ ಫೀಚರ್‌ ಐಫೋನ್ ಚಾಲಿತ ಎ 17 ಪ್ರೊ ಚಿಪ್ ಅಥವಾ ನಂತರದ ಐಫೋನ್‌ಗಳಿಗೆ ಮಾತ್ರ ಸೀಮಿತವಾಗಿದೆ.
icon

(4 / 5)

ಐಫೋನ್ ಎಸ್ಇ 4 ಕೂಡ ಆಪಲ್ ಇಂಟೆಲಿಜೆನ್ಸ್ ಫೀಚರ್‌ ಅನ್ನು ಹೊಂದಿರುವ ನಿರೀಕ್ಷೆಯಿದೆ. ಐಫೋನ್ 16 ಸರಣಿಯ 'ಅತಿದೊಡ್ಡ ವೈಶಿಷ್ಟ್ಯ' ಎಂದು ಹೇಳಲಾಗುವ ಆಪಲ್ ಇಂಟೆಲಿಜೆನ್ಸ್ ವಾಸ್ತವವಾಗಿ ಐಒಎಸ್ 18 ನ ಭಾಗವಾಗಿದೆ. ಆದರೆ ಈ ಫೀಚರ್‌ ಐಫೋನ್ ಚಾಲಿತ ಎ 17 ಪ್ರೊ ಚಿಪ್ ಅಥವಾ ನಂತರದ ಐಫೋನ್‌ಗಳಿಗೆ ಮಾತ್ರ ಸೀಮಿತವಾಗಿದೆ.(IceUniverse)

ಈಗಾಗಲೇ ಕಂಪನಿಯು ಮಾಹಿತಿ ನೀಡಿದಂತೆ  ಆಪಲ್ ಇಂಟೆಲಿಜೆನ್ಸ್ ಕಾರ್ಯನಿರ್ವಹಿಸಲು ಕನಿಷ್ಠ 8 ಜಿಬಿ ರಾಮ್‌ ಅಗತ್ಯವಿದೆ. ಐಫೋನ್ ಎಸ್ಇ 4 ಆಪಲ್ ಇಂಟೆಲಿಜೆನ್ಸ್ ಹೊಂದಿದ್ದರೆ,  8 ಜಿಬಿ ರಾಮ್‌ ಕೂಡ ಹೊಂದಿರಲಿದೆ.  2022ರಲ್ಲಿ ಬಿಡುಗಡೆಯಾಗಿದ್ದ  ಐಫೋನ್ ಎಸ್ಇ 3 ನಲ್ಲಿ 4 ಜಿಬಿ ರಾಮ್‌ ಇತ್ತು.
icon

(5 / 5)

ಈಗಾಗಲೇ ಕಂಪನಿಯು ಮಾಹಿತಿ ನೀಡಿದಂತೆ  ಆಪಲ್ ಇಂಟೆಲಿಜೆನ್ಸ್ ಕಾರ್ಯನಿರ್ವಹಿಸಲು ಕನಿಷ್ಠ 8 ಜಿಬಿ ರಾಮ್‌ ಅಗತ್ಯವಿದೆ. ಐಫೋನ್ ಎಸ್ಇ 4 ಆಪಲ್ ಇಂಟೆಲಿಜೆನ್ಸ್ ಹೊಂದಿದ್ದರೆ,  8 ಜಿಬಿ ರಾಮ್‌ ಕೂಡ ಹೊಂದಿರಲಿದೆ.  2022ರಲ್ಲಿ ಬಿಡುಗಡೆಯಾಗಿದ್ದ  ಐಫೋನ್ ಎಸ್ಇ 3 ನಲ್ಲಿ 4 ಜಿಬಿ ರಾಮ್‌ ಇತ್ತು.


ಇತರ ಗ್ಯಾಲರಿಗಳು