Amruthadhaare: ಕೊನೆಗೂ ಭೂಮಿಕಾಗೆ ಮುತ್ತು ನೀಡಿದ್ರು ಡುಮ್ಮ ಸರ್‌; ಗೌತಮ್‌ ಧೈರ್ಯಕ್ಕೆ ಪ್ರೇಕ್ಷಕರಿಗೆ ಅಚ್ಚರಿ; ಅಮೃತಧಾರೆಯಲ್ಲಿ ಚುಂಬನಧಾರೆ-television news amruthadhaare serial today episode goutham given sweet kiss to bhumika serial fans surprise pcp ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Amruthadhaare: ಕೊನೆಗೂ ಭೂಮಿಕಾಗೆ ಮುತ್ತು ನೀಡಿದ್ರು ಡುಮ್ಮ ಸರ್‌; ಗೌತಮ್‌ ಧೈರ್ಯಕ್ಕೆ ಪ್ರೇಕ್ಷಕರಿಗೆ ಅಚ್ಚರಿ; ಅಮೃತಧಾರೆಯಲ್ಲಿ ಚುಂಬನಧಾರೆ

Amruthadhaare: ಕೊನೆಗೂ ಭೂಮಿಕಾಗೆ ಮುತ್ತು ನೀಡಿದ್ರು ಡುಮ್ಮ ಸರ್‌; ಗೌತಮ್‌ ಧೈರ್ಯಕ್ಕೆ ಪ್ರೇಕ್ಷಕರಿಗೆ ಅಚ್ಚರಿ; ಅಮೃತಧಾರೆಯಲ್ಲಿ ಚುಂಬನಧಾರೆ

  • Amruthadhaare Serial Today Episode: ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಅಮೃತಧಾರೆ ಧಾರಾವಾಹಿಯಲ್ಲಿ ಬಹುದಿನಗಳಿಂದ ಪೆಂಡಿಂಗ್‌ ಇದ್ದ ಒಂದು ಮುತ್ತು ಸಂದಾಯವಾಗಿದೆ. ಹೌದು, ಗೌತಮ್‌ ಭೂಮಿಕಾಳಿಗೆ ಕೊನೆಗೂ ಮುತ್ತು ನೀಡಿದ್ದಾರೆ. ಈ ಮೂಲಕ ಡುಮ್ಮ ಸರ್‌ ಧೈರ್ಯ ಮಾಡಿದ್ದಾರೆ. ಹೋಳಿ ಹಬ್ಬದಂದು ಅಮೃತಧಾರೆಯಲ್ಲಿ ಚುಂಬನಧಾರೆಯಾಗಿದೆ.

ಝೀ ಕನ್ನಡ ವಾಹಿನಿಯು ಅಮೃತಧಾರೆ ಸೀರಿಯಲ್‌ನ ಇಂದಿನ ಎಪಿಸೋಡ್‌ನ ಪ್ರಮೋ ಬಿಡುಗಡೆ ಮಾಡಿದ್ದು, ಆ ಪ್ರಮೋದಲ್ಲಿ ಕೊನೆಗೂ ಗೌತಮ್‌ ಭೂಮಿಕಾಳಿಗೆ ಮುತ್ತು ನೀಡಿರುವುದು ಗೊತ್ತಾಗಿದೆ. ಈ ಮೂಲಕ ಬಹುದಿನಗಳಿಂದ ಧೈರ್ಯ ಸಾಲದೆ ಹಿಂಜರಿದಿದ್ದ ಗೌತಮ್‌ ಕೊನೆಗೂ ಭೂಮಿಕಾಳಿಗೆ ಮುತ್ತು ನೀಡಿದ್ದಾರೆ.
icon

(1 / 9)

ನಿನ್ನ ಖುಷಿ ಎಲ್ಲಿದೆ ಎಂದು ಅರ್ಥ ಮಾಡಿಕೋ, ಸಮಯ ನೋಡಿ ಮುತ್ತು ನೀಡು ಎಂದು ಆತ್ಮೀಯ ಗೆಳೆಯ ಆನಂದ್‌ ಸಲಹೆ ನೀಡಿರುತ್ತಾನೆ. 
icon

(2 / 9)

ಆನಂದ್‌ನ ಒತ್ತಾಯಕ್ಕಾದರೂ ಮುತ್ತು ನೀಡಬೇಕೆಂದು ಸಾಕಷ್ಟು ದಿನಗಳಿಂದ ಪ್ರಯತ್ನ ಪಡುತ್ತಿದ್ದರು ಗೌತಮ್‌. ಇದೇ ಸಮಯದಲ್ಲಿ ಗೌತಮ್‌ಗೆ ಭೂಮಿಕಾಳ ಮೇಲೆ ಪ್ರೀತಿ ಹೆಚ್ಚಾಗಿ ಉಳಿದಿರುವುದೂ ಗುಟ್ಟಾಗಿ ಉಳಿದಿಲ್ಲ.
icon

(3 / 9)

ಮನೆಯಲ್ಲಿ ಭೂಮಿಕಾ ಇದ್ದಾಗ "ಭೂಮಿಕಾ ನಿಮಗೆ ನಾನೇನೋ ಹೇಳಬೇಕು" ಎಂದು ಗೌತಮ್‌ ಹೇಳುತ್ತಾರೆ. "ಹೇಳಿ" ಅಂತಾರೆ ಭೂಮಿಕಾ.
icon

(4 / 9)

ಎಂಥೆಂತ ಬಿಸ್ನೆಸ್‌ ಡೀಲ್‌ಗಳನ್ನು ಚಿಟಿಕೆ ಹೊಡೆಯುವಷ್ಟರಲ್ಲಿ ಮುಗಿಸಿದ್ದೇನೆ, ಈ ಪ್ರೀತಿ ವಿಷಯ ಹೇಳಲು ಆಗುತ್ತಿಲ್ಲವಲ್ಲ ಎಂದು ಚಡಪಡಿಸುತ್ತಾನೆ ಗೌತಮ್‌. ಯಾಕೆ ಇಷ್ಟು ಒದ್ದಾಡ್ತಿನಿ ಎಂದು ಆಲೋಚಿಸ್ತಾರೆ.
icon

(5 / 9)

ಇದೇ ಸಮಯದಲ್ಲಿ ಭೂಮಿಕಾ ಮನದಲ್ಲೂ ಮಧುರ ಕಂಪನ. "ನನ್ನ ಬಗ್ಗೆ ಇವರಿಗೆ ಏನೋ ಭಾವನೆ ಇದೆ. ಅದನ್ನು ಹೇಳಲಾಗದೆ ಒದ್ದಾಡ್ತಾ ಇದ್ದಾರೆ. ಇವರ ಬಗ್ಗೆ ನಾನು ಡೈರಿಯಲ್ಲಿ ಬರೆದ ಪ್ರೀತಿಯ ಮಾತುಗಳನ್ನು ತೋರಿಸುವೆ ಎಂದುಕೊಳ್ಳುತ್ತಾಳೆ ಭೂಮಿಕಾ.
icon

(6 / 9)

ಮನಸ್ಸಲ್ಲಿ ಇರೋದನ್ನ ಬಾಯಿಬಿಟ್ಟು ಹೇಳಲು ಆಗುತ್ತಿಲ್ಲ. ಮುತ್ತಾದರೂ ಕೊಟ್ಟುಬಿಡೋಣ ಎಂದು ಹಿಂದಕ್ಕೆ ತಿರುಗಿದ ಗೌತಮ್‌ ಅಲ್ಲೇ ಇದ್ದ ಭೂಮಿಕಾಳಿಗೆ ಕಿಸ್‌ ನೀಡಿದ್ದಾನೆ. ಪ್ರೇಕ್ಷಕರಿಗೆ  ಮುತ್ತು ನೀಡುವುದು ಸರಿಯಾಗಿ ಕಾಣಿಸದೆ ಇದ್ದರೂ ಕಣ್ಣಿನ ನೋಟದಲ್ಲಿಯೇ ಎಲ್ಲವೂ ಅರ್ಥವಾಗಿದೆ. ಕೊನೆಗೂ ಗೌತಮ್‌ ಸರ್‌ ಮುತ್ತು ನೀಡಿದ್ದು ನೋಡಿ ನೆಟ್ಟಿಗರು ಖುಷಿಪಟ್ಟಿದ್ದಾರೆ.
icon

(7 / 9)

ಕಳೆದ ಕೆಲವು ದಿನಗಳಿಂದ ಅಮೃತಧಾರೆ ಸೀರಿಯಲ್‌ ಬೇರೆ ಎಲ್ಲೋ ಹೋಗಿತ್ತು. ಮಾನ್ಯಳ ಎಂಟ್ರಿ ಆದ ಬಳಿಕ ಗೌತಮ್‌ ಮನಸ್ಸು ಕೆಟ್ಟಿತ್ತು. ವಿಷಯ ಗೊತ್ತಿಲ್ಲದೆ  ಭೂಮಿಕಾಳಿಗೂ ಟೆನ್ಷನ್‌ ಆಗಿತ್ತು. ಈ ಹೋಳಿ ಹಬ್ಬದಂದು ಕೊನೆಗೂ ಗೌತಮ್‌ ಭೂಮಿಕಾಳಿಗೆ ಮುತ್ತು ನೀಡಿದ್ದಾರೆ. ಸದ್ಯಕ್ಕೆ ಮಾನ್ಯ, ಜೈದೇವ್, ಶಕುಂತಲಾದೇವಿ ವಿಚಾರಗಳು ಇಲ್ಲದೆ ಪ್ರೀತಿಯ ಚುಂಬನದ ದರ್ಶನದ ಪ್ರೇಕ್ಷಕರಿಗೆ ದೊರಕಿದೆ.
icon

(8 / 9)

ಅಮೃತಧಾರೆ ಮಾತ್ರವಲ್ಲ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದಲ್ಲಿ ಬೃಂದಾವನ, ಸೀತಾರಾಮ ಮದುವೆ ಮತ್ತು ಭಾಗ್ಯಲಕ್ಷ್ಮಿ ಸೀರಿಯಲ್‌ನಲ್ಲಿ ಇಂದೇನಾಗಲಿದೆ ಎಂಬ ವಿವರ, ನಿನ್ನೆಯ ಎಪಿಸೋಡ್‌ ಕಥೆಗಳು ಸೇರಿದಂತೆ ಕಿರುತೆರೆ ಜಗತ್ತಿನ ಸೀರಿಯಲ್‌, ರಿಯಾಲಿಟಿ ಶೋ, ಕಲಾವಿದರ ಫೋಟೋಗಳು ಸೇರಿದಂತೆ ಹಲವು ಮಾಹಿತಿಗಳನ್ನು ನೀವು ಪಡೆಯಬಹುದು. 
icon

(9 / 9)

ಇತರ ಗ್ಯಾಲರಿಗಳು