ಕನ್ನಡ ಸುದ್ದಿ  /  Photo Gallery  /  Televison News Amruthadhaare Serial Today Episode February 26 Jaidev Married Malli Shakuntaladeve Angry With Bhumika Pcp

Amruthadhaare: ಮಲ್ಲಿಗೆ ತಾಳಿ ಕಟ್ಟಿದ ಜೈದೇವ್‌; ಎಲ್ಲದಕ್ಕೂ ಕಾರಣ ಭೂಮಿಕಾ, ಗೌತಮ್‌ ಜತೆ ನೆಮ್ಮದಿಯಾಗಿ ಬದುಕಲು ಬಿಡಲಾರೆ ಎಂದ ಶಕುಂತಲಾದೇವಿ

  • Amruthadhaare Serial Today Episode: ಭೂಮಿಕಾ ಮತ್ತು ಗೌತಮ್‌ ಮುಂದೆ ಶಕುಂತಲಾದೇವಿ ಆಟ ನಡೆದಿಲ್ಲ. ಜೈದೇವ್‌ಗೆ ಮಲ್ಲಿ ಜತೆ ವಿವಾಹವಾಗುತ್ತದೆ.  ಪರೋಕ್ಷವಾಗಿ ಮಲತಾಯಿಯೆಂದು ಗೌತಮ್‌ ಹೇಳಿರುವುದು ಶಕುಂತಲಾದೇವಿಯ ಆಕ್ರೋಶ ಹೆಚ್ಚಿಸಿದೆ.  ಎಲ್ಲದಕ್ಕೂ ಕಾರಣಳಾದ ಭೂಮಿಕಾಳನ್ನು ಗೌತಮ್‌ ಜತೆ ನೆಮ್ಮದಿಯಾಗಿ ಸಂಸಾರ ಮಾಡಲು ಬಿಡಲಾರೆ ಎನ್ನುತ್ತಿದ್ದಾಳೆ ಅತ್ತೆ.

Amruthadhaare Serial Today: ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಮಲ್ಲಿ ಕೊರಳಿಗೆ ಜೈದೇವ್‌ ತಾಳಿ ಕಟ್ಟಲಿದ್ದಾನೆ. ಗೌತಮ್‌ ಎಲ್ಲಾ ಸತ್ಯವನ್ನು ತಿಳಿದುಕೊಂಡು ಜೈದೇವ್‌ನ ವಿವಾಹ ಮಾಡಿಸುತ್ತಾನೆ. ಭೂಮಿಕಾ ಮತ್ತು ಗೌತಮ್‌ ಇಬ್ಬರು ಸುಳ್ಳಿನ ವಿರುದ್ಧ ಸಮರ ಸಾರಿ ಯಶಸ್ಸು ಗಳಿಸಿದ್ದಾರೆ. ಝೀ ಕನ್ನಡ ಬಿಡುಗಡೆ ಮಾಡಿರುವ ಪ್ರಮೋದಲ್ಲಿ ಇಂದಿನ ಸೀರಿಯಲ್‌ನ ಸಂಚಿಕೆಯ ಕುರಿತು ಹೆಚ್ಚಿನ ವಿವರ ತಿಳಿದುಬಂದಿದೆ.
icon

(1 / 10)

ಜೈದೇವ್‌ ಜತೆ ಮದುವೆಯಾಗುವುದನ್ನು ಶಕುಂತಲಾದೇವಿ ಶತಾಯಗತಾಯ ತಪ್ಪಿಸಲು ಯತ್ನಿಸುತ್ತಾಳೆ. ಆ ಸಮಯದಲ್ಲಿ ಗೌತಮ್‌ ಹೇಳಿದ ಒಂದು ಮಾತು ಶಕುಂತಲಾದೇವಿಯ ಬಾಯಿಯನ್ನು ಕಟ್ಟಿ ಹಾಕುತ್ತದೆ. ಇಂದಿನ ಸಂಚಿಕೆಯಲ್ಲಿ ಮಲ್ಲಿ ಜತೆ ಜೈದೇವ್‌ ವಿವಾಹ ನಡೆಯುತ್ತದೆ. ಪಾರ್ಥ ಮತ್ತು ಅಪೇಕ್ಷಾ ಮನಸ್ಸಲ್ಲಿ ಮತ್ತೆ ಕೋಲ್ಮಿಂಚು ಮೂಡಿದೆ.
icon

(2 / 10)

ನನ್ನ ಅಪ್ಪ ಕೊನೆಯ ದಿನದಲ್ಲಿರುವಾಗ ಈ ಮನೆಗೆ ಒಬ್ಬರು ಮಹಿಳೆ ತನ್ನ ಮಕ್ಕಳೊಂದಿಗೆ ಇದೇ ರೀತಿ ಬಂದಿದ್ದಳು. ನನಗೆ ಮಲ್ಲಿಯ ಈಗಿನ ಸ್ಥಿತಿಯನ್ನು ನೋಡಿದಾಗ ಆ ಘಟನೆ ನೆನಪಾಗುತ್ತದೆ ಎಂದು ಗೌತಮ್‌ ಹೇಳಿದಾಗ ಶಕುಂತಲಾ ದೇವಿ ಮುಖದಲ್ಲಿ ನಾನಾ ಭಾವ ಮೂಡುತ್ತದೆ. 
icon

(3 / 10)

ನಾನು ಭೂಮಿಕಾಳ ಮಾತು ಮಾತ್ರ ಕೇಳಿ ಈ ಮದುವೆ ಮಾಡಿಸುತ್ತಿಲ್ಲ. ಹಳೆಯ ಎಲ್ಲಾ ಸಿಸಿ ಟಿವಿ ವಿಡಿಯೋ ರಿಟ್ರೈವ್‌ ಮಾಡಿ ನೋಡಿದ್ದೇನೆ. ಜೈದೇವ್‌ ಮತ್ತು ಮಲ್ಲಿ ಸಂಬಂಧದ ಬಗ್ಗೆ ತಿಳಿದುಕೊಂಡಿದ್ದೇನೆ ಎಂದು ಗೌತಮ್‌ ಹೇಳುತ್ತಾನೆ.  
icon

(4 / 10)

ಈ ಮೂಲಕ ಮಲತಾಯಿಯಾಗಿ ಈ ಮನೆಗೆ ಶಕುಂತಲಾದೇವಿ ಒಂದು ಸಮಯದಲ್ಲಿ ಬಂದಿರುವುದನ್ನು ಗೌತಮ್‌ ನೆನಪಿಸುತ್ತಾನೆ. "ಎಲ್ಲರ ಮುಂದೆ ನನ್ನನ್ನು ಮಲತಾಯಿ ಎಂದು ಪರೋಕ್ಷವಾಗಿ ಹೇಳಲು ಕಾರಣರಾದ ಭೂಮಿಕಾಳನ್ನು ಇನ್ನು ಬಿಡಲಾರೆ" ಎಂದು ಶಕುಂತಲಾದೇವಿ ತೀರ್ಮಾನಿಸುತ್ತಾರೆ. 
icon

(5 / 10)

ಇದೇ ಸಂದರ್ಭದಲ್ಲಿ ಭೂಮಿಕಾ ಅವರು "ನಿಮ್ಮ ಮನಸ್ಸು ನೋಯಿಸಿದ್ದೇನೆ. ನನಗೆ ಬೇರೆ ದಾರಿ ಇರಲಿಲ್ಲ. ನನ್ನನ್ನು ಕ್ಷಮಿಸಿ ಬಿಡಿ" ಎಂದು ಶಕುಂತಲಾ ದೇವಿ ಪಾದದ ಮುಂದೆ ಕುಳಿತು ಕ್ಷಮಾಪಣೆ ಕೇಳುತ್ತಾಳೆ.  
icon

(6 / 10)

ಇನ್ನು ಈ ಭೂಮಿಕಾ ಗೌತಮ್‌ ಜತೆ ಹೇಗೆ ಸುಖವಾಗಿ  ಸಂಸಾರ ಮಾಡ್ತಾಳೆ ಎಂದು ನಾನು ನೋಡ್ತಿನಿ ಎಂದು ಶಕುಂತಲಾ ದೇವಿ ಮನಸ್ಸಲ್ಲಿಯೇ ರೋಷದಿಂದ ಹೇಳ್ತಾರೆ.  ಈ ಎಪಿಸೋಡ್‌ ಕುರಿತು ಪ್ರೇಕ್ಷಕರ ನಿರೀಕ್ಷೆ ಹೆಚ್ಚಾಗಿದೆ. ಸೋಷಿಯಲ್‌ ಮೀಡಿಯಾದಲ್ಲಿ ಕಿರುತೆರೆ ವೀಕ್ಷಕರು ಏನೆಲ್ಲ ಕಾಮೆಂಟ್‌ ಮಾಡಿದ್ದಾರೆ ನೋಡೋಣ.
icon

(7 / 10)

"ಭೂಮಿಗೆ ಇನ್ನೂ ಹೆಚ್ಚಿನ ಕಷ್ಟ ಹೆಗಲೆರಿದೆ . ಇನ್ನು ಅಪ್ಪಿ & ಪಾರ್ಥ ಮದುವೆ ತುಂಬಾ ಕಷ್ಟ" ಎಂದು ಒಬ್ಬರು ಕಾಮೆಂಟ್‌ ಮಾಡಿದ್ದಾರೆ. "ಅತ್ತೆ. ಭೂಮಿಕಾಗೆ ಕಷ್ಟ, ಉಪದ್ರವ ನೀಡಲೇಬೇಕು. ಅದೂ ಜೈದೇವ್ ಜೊತೆ ಸೇರಿಕೊಂಡು. ಇಲ್ಲದಿದ್ರೆ ಧಾರಾವಾಹಿ ಮುಂದೆ ಹೋಗೋದಾದ್ರು ಹೇಗೆ ? " ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ.  
icon

(8 / 10)

"ದಯವಿಟ್ಟು ಈ ಸೀರಿಯಲ್‌ ಅನ್ನು ಇನ್ನು ಮುಂದೆ ಇತರೆ ಸೀರಿಯಲ್‌ಗಳಂತೆ ಅತ್ತೆಸೊಸೆ ಜಗಳದ ಸೀರಿಯಲ್‌ ಆಗಿ ಮಾಡಬೇಡಿ" ಎಂದು ಇನ್ನೊಬ್ಬರು ವೀಕ್ಷಕರು ವಿನಂತಿಸಿದ್ದಾರೆ. "ನಿನ್ನ ಮಗಳು ಹೇಗಿದ್ದಾಳೆ ಅತ್ತೆ ಮನೆಯಲ್ಲಿ. ಇನ್ನೊಬ್ಬ ಮಗಳು ಮದುವೆಯಾಗಿದ್ರು ಅತ್ತೆ ಮನೆಗೆ ಹೋಗಿಲ್ಲ" ಎಂದು ಇನ್ನೊಬ್ಬರು ಪ್ರಶ್ನಿಸಿದ್ದಾರೆ. ಹೀಗೆ ಪ್ರೇಕ್ಷಕರು ನಾನಾ ಬಗೆಯ ಕಾಮೆಂಟ್‌ ಮಾಡಿದ್ದಾರೆ. 
icon

(9 / 10)

ಅಮೃತಧಾರೆ ಮಾತ್ರವಲ್ಲ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದಲ್ಲಿ ಬೃಂದಾವನ, ಸೀತಾರಾಮ ಮದುವೆ ಮತ್ತು ಭಾಗ್ಯಲಕ್ಷ್ಮಿ ಸೀರಿಯಲ್‌ನಲ್ಲಿ ಇಂದೇನಾಗಲಿದೆ ಎಂಬ ವಿವರ, ನಿನ್ನೆಯ ಎಪಿಸೋಡ್‌ ಕಥೆಗಳು ಸೇರಿದಂತೆ ಕಿರುತೆರೆ ಜಗತ್ತಿನ ಸೀರಿಯಲ್‌, ರಿಯಾಲಿಟಿ ಶೋ, ಕಲಾವಿದರ ಫೋಟೋಗಳು ಸೇರಿದಂತೆ ಹಲವು ಮಾಹಿತಿಗಳನ್ನು ನೀವು ಪಡೆಯಬಹುದು. 
icon

(10 / 10)

IPL_Entry_Point

ಇತರ ಗ್ಯಾಲರಿಗಳು