50 ಏಕದಿನ ಶತಕಗಳ ರಾಜನಿಗೆ ಸಿಕ್ತು ಟೆನಿಸ್ ಲೋಕದ ಮಹಾರಾಜನಿಂದ ಪ್ರಶಂಸೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  50 ಏಕದಿನ ಶತಕಗಳ ರಾಜನಿಗೆ ಸಿಕ್ತು ಟೆನಿಸ್ ಲೋಕದ ಮಹಾರಾಜನಿಂದ ಪ್ರಶಂಸೆ

50 ಏಕದಿನ ಶತಕಗಳ ರಾಜನಿಗೆ ಸಿಕ್ತು ಟೆನಿಸ್ ಲೋಕದ ಮಹಾರಾಜನಿಂದ ಪ್ರಶಂಸೆ

  • Novak Djokovic on Virat Kohli: ವಿರಾಟ್ ಕೊಹ್ಲಿ ಅಭಿಮಾನಿಗಳ ಪಟ್ಟಿಗೆ ಮತ್ತೊಂದು ಹೆಸರು ಸೇರ್ಪಡೆಯಾಗಿದೆ. ಅವರು ಬೇರೆ ಯಾರೂ ಅಲ್ಲ, ವಿಶ್ವದ ನಂಬರ್ ಒನ್ ಟೆನಿಸ್ ತಾರೆ ನೊವಾಕ್ ಜೊಕೊವಿಕ್. 

ಏಕದಿನ ಕ್ರಿಕೆಟ್​ನಲ್ಲಿ 50ನೇ ಶತಕ ಸಿಡಿಸಿ ವಿಶ್ವದಾಖಲೆ ಬರೆದ ನಂತರ ವಿರಾಟ್ ಕೊಹ್ಲಿಯನ್ನು ಟೆನಿಸ್ ದಿಗ್ಗಜ ನೊವಾಕ್ ಜೊಕೊವಿಕ್ ಅಭಿನಂದಿಸಿದ್ದಾರೆ.
icon

(1 / 9)

ತಮ್ಮ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ವಿರಾಟ್ ಕೊಹ್ಲಿ ಶತಕ ಬಾರಿಸಿದ ಚಿತ್ರವನ್ನು ಪೋಸ್ಟ್ ಮಾಡಿರುವ ವಿಶ್ವದ ನಂಬರ್ ಒನ್ ಟೆನಿಸ್ ತಾರೆ, 'ಅಭಿನಂದನೆಗಳು ವಿರಾಟ್. ದಂತಕಥೆ ಎಂದು ಬರೆದಿದ್ದಾರೆ.
icon

(2 / 9)

ಎಕ್ಸ್​ ಖಾತೆಯಲ್ಲೂ ವಿರಾಟ್​ ಕೊಹ್ಲಿಗೆ ಟೆನಿಸ್ ತಾರೆ ಅಭಿನಂದನೆ ಸಲ್ಲಿಸಿದ್ದಾರೆ. ಕೊಹ್ಲಿ ಶತಕ ಸಿಡಿಸಿದ ಪೋಸ್ಟರ್ ಅನ್ನು ಬಿಸಿಸಿಐ ಹಂಚಿಕೊಂಡಿರುವ ಪೋಸ್ಟ್​ಗೆ ಜೋಕೋವಿಕ್ ಪ್ರತಿಕ್ರಿಯಿಸಿ ಅಭಿನಂದನೆ ಸಲ್ಲಿಸಿದ್ದಾರೆ.
icon

(3 / 9)

ನವೆಂಬರ್ 15ರಂದು ನ್ಯೂಜಿಲೆಂಡ್ ವಿರುದ್ಧ ವಿರಾಟ್ 113 ಎಸೆತಗಳಲ್ಲಿ 117 ರನ್ ಗಳಿಸಿದರು. ಇದು ಅವರ 50ನೇ ಏಕದಿನ ಶತಕ. ಏಕದಿನದಲ್ಲಿ 49 ಶತಕ ಬಾರಿಸಿದ್ದ ಸಚಿನ್ ದಾಖಲೆ ಮುರಿದಿದರು. ಅತಿಹೆಚ್ಚು ಶತಕ ಬಾರಿಸಿದವರ ಪೈಕಿ ರೋಹಿತ್ ಶರ್ಮಾ (31 ಶತಕ) 3ನೇ ಸ್ಥಾನದಲ್ಲಿದ್ದಾರೆ.
icon

(4 / 9)

ಸಚಿನ್ ತೆಂಡೂಲ್ಕರ್, ಡೇವಿಡ್ ಬೆಕ್‌ಹ್ಯಾಮ್‌ ಸೇರಿದಂತೆ ಜನಪ್ರಿಯ ತಾರೆಗಳು ವಿರಾಟ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ. ಆದರೆ ಜೊಕೊವಿಕ್ ಸಲ್ಲಿಸಿದ ಅಭಿನಂದನೆ, ಹೆಚ್ಚು ಮಹತ್ವದ್ದಾಗಿದೆ. ಏಕೆಂದರೆ ಅವರು ಕ್ರಿಕೆಟ್​ಗೆ ಸಂಬಂಧಿಸಿ ಪೋಸ್ಟ್ ಮಾಡಿದ್ದೇ ಇದೆ ಮೊದಲ ಬಾರಿ.
icon

(5 / 9)

ವಿರಾಟ್, ಸಚಿನ್​ರ ಮತ್ತೊಂದು ದಾಖಲೆ ಬರೆದಿದ್ದಾರೆ. ವಿಶ್ವಕಪ್ ಆವೃತ್ತಿಯೊಂದರಲ್ಲಿ ಅತ್ಯಧಿಕ ರನ್ ಗಳಿಸಿದ ಆಟಗಾರನಾಗಿ ಹೊರ ಹೊಮ್ಮಿದ್ದಾರೆ. ಈ ಹಿಂದೆ ಸಚಿನ್ 673 ರನ್ ಗಳಿಸಿ ಆವೃತ್ತಿ ಒಂದರಲ್ಲಿ ಅತ್ಯಧಿಕ ರನ್ ಗಳಿಸಿದ ಆಟಗಾರ ಎನಿಸಿದ್ದರು. ಇದೀಗ ಆ ದಾಖಲೆ ಮುರಿದ ಕೊಹ್ಲಿ ಈಗ 711 ರನ್ ಗಳಿಸಿದ್ದಾರೆ.
icon

(6 / 9)

ಸದ್ಯ ಕೊಹ್ಲಿ ಈ ಬಾರಿಯ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ರೇಸ್‌ನಲ್ಲಿಯೂ ಮುಂದಿದ್ದಾರೆ. ಈವರೆಗೂ ಆಡಿದ 10 ಪಂದ್ಯಗಳ ಪೈಕಿ 711 ರನ್ ಗಳಿಸಿದ್ದಾರೆ. ಇದರಲ್ಲಿ 3 ಶತಕ, 5 ಅರ್ಧಶತಕಗಳು ಸೇರಿವೆ.
icon

(7 / 9)

ಕ್ವಿಂಟನ್ ಡಿ ಕಾಕ್ (594 ರನ್) 2ನೇ ಸ್ಥಾನದಲ್ಲಿದ್ದಾರೆ. ರಚಿನ್ ರವೀಂದ್ರ ಮೂರನೇ (578 ರನ್) ಮತ್ತು ಡ್ಯಾರಿಲ್ ಮಿಚೆಲ್ (552 ರನ್) 4ನೇ ಸ್ಥಾನದಲ್ಲಿದ್ದಾರೆ. ಆದರೆ ಇಬ್ಬರೂ ತಮ್ಮ ವಿಶ್ವಕಪ್ ಅಭಿಯಾನವನ್ನು ಕೊನೆಗೊಳಿಸಿದ್ದಾರೆ. ರೋಹಿತ್ ಶರ್ಮಾ 5ನೇ ಸ್ಥಾನದಲ್ಲಿದ್ದಾರೆ (550 ರನ್).
icon

(8 / 9)

ನವೆಂಬರ್​ 19ರಂದು ಭಾನುವಾರ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯ ನಡೆಯಲಿದೆ. ಅಹ್ಮದಾಬಾದ್​ನ ನರೇಂದ್ರ ಮೋದಿ ಮೈದಾನದಲ್ಲಿ ಈ ಪಂದ್ಯ ನಡೆಯಲಿದೆ.
icon

(9 / 9)

ಇತರ ಗ್ಯಾಲರಿಗಳು