Tourism: ಪ್ರವಾಸಿಗರು, ಚಾರಣಿಗರನ್ನು ಸೆಳೆಯುತ್ತಿದೆ ದೇವರಮನೆ ಗುಡ್ಡ, ಬೇರೆ ಎಲ್ಲೋ ಅಲ್ಲ ಇದು ಇರೋದು ಕರ್ನಾಟಕದಲ್ಲೇ; ಫೋಟೋ ಗ್ಯಾಲರಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Tourism: ಪ್ರವಾಸಿಗರು, ಚಾರಣಿಗರನ್ನು ಸೆಳೆಯುತ್ತಿದೆ ದೇವರಮನೆ ಗುಡ್ಡ, ಬೇರೆ ಎಲ್ಲೋ ಅಲ್ಲ ಇದು ಇರೋದು ಕರ್ನಾಟಕದಲ್ಲೇ; ಫೋಟೋ ಗ್ಯಾಲರಿ

Tourism: ಪ್ರವಾಸಿಗರು, ಚಾರಣಿಗರನ್ನು ಸೆಳೆಯುತ್ತಿದೆ ದೇವರಮನೆ ಗುಡ್ಡ, ಬೇರೆ ಎಲ್ಲೋ ಅಲ್ಲ ಇದು ಇರೋದು ಕರ್ನಾಟಕದಲ್ಲೇ; ಫೋಟೋ ಗ್ಯಾಲರಿ

ಕೆಲಸ, ಮನೆ, ಸಂಸಾರದ ಟೆನ್ಷನ್‌ ಇರೋರಿಗೆ ವೀಕೆಂಡ್‌ನಲ್ಲಿ ಹೊರಗೆ ಸುತ್ತಾಡಿ ಬಂದ್ರೆ ರಿಲೀಫ್‌ ಅನ್ನಿಸುತ್ತೆ. ಅದರಲ್ಲೂ ಪ್ರಕೃತಿ ಮಡಿಲಲ್ಲಿ ಅಡ್ಡಾಡಿ ಬಂದ್ರೆ ಇನ್ನೂ ಸ್ವಲ್ಪ ದಿನಗಳು ಖುಷಿ ಖುಷಿಯಾಗಿ ಎಲ್ಲಾ ಕೆಲಸಗಳನ್ನು ಮಾಡಬಹುದು. 

ಕೆಲವರು ಹಸಿರು ಪರಿಸರ ಹುಡುಕುತ್ತಾ ಹೊರ ರಾಜ್ಯಗಳಿಗೆ ಅಲೆಯುತ್ತಾರೆ. ಆದರೆ ನಮ್ಮ ಕರ್ನಾಟಕದಲ್ಲೇ ಎಷ್ಟೋ ಜನರಿಗೆ ಗೊತ್ತಿಲ್ಲದ ಅನೇಕ ಪ್ರವಾಸಿ ತಾಣಗಳಿವೆ. ಅದರಲ್ಲಿ ದೇವರಮನೆ ಗುಡ್ಡ ಕೂಡಾ ಒಂದು. 
icon

(1 / 8)

ಕೆಲವರು ಹಸಿರು ಪರಿಸರ ಹುಡುಕುತ್ತಾ ಹೊರ ರಾಜ್ಯಗಳಿಗೆ ಅಲೆಯುತ್ತಾರೆ. ಆದರೆ ನಮ್ಮ ಕರ್ನಾಟಕದಲ್ಲೇ ಎಷ್ಟೋ ಜನರಿಗೆ ಗೊತ್ತಿಲ್ಲದ ಅನೇಕ ಪ್ರವಾಸಿ ತಾಣಗಳಿವೆ. ಅದರಲ್ಲಿ ದೇವರಮನೆ ಗುಡ್ಡ ಕೂಡಾ ಒಂದು. (PC: ರಾಘವೇಂದ್ರರಾವ್‌ ಎ.ಆರ್‌ ಪವಾರ್‌, @ADARSHASK13 ಎಕ್ಸ್‌ ಪೇಜ್‌)

ದೇವರ ಮನೆ ಗುಡ್ಡ ಇರೋದು ಮತ್ತೆಲ್ಲೂ ಅಲ್ಲ, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ 
icon

(2 / 8)

ದೇವರ ಮನೆ ಗುಡ್ಡ ಇರೋದು ಮತ್ತೆಲ್ಲೂ ಅಲ್ಲ, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ (PC: @Blowfish_1201)

ಈ ಸ್ಥಳಕ್ಕೆ ನೀವು ಯಾವಾಗ ಬೇಕಿದ್ರೂ ಹೋಗಿ ಬರಬಹುದು, ಆದರೆ ನವೆಂಬರ್‌ನಿಂದ ಫೆಬ್ರವರಿವರೆಗೆ ಇಲ್ಲಿಗೆ ಹೋಗಲು ಸೂಕ್ತ ಸಮಯ. ಈ ಸೀಸನ್‌ನಲ್ಲಿ ಈ ಬೆಟ್ಟವನ್ನು ನೋಡೋದೇ ಚೆಂದ. 
icon

(3 / 8)

ದೇವರಮನೆಯು ಮೂಡಿಗೆರೆಯಿಂದ ಸುಮಾರು 25 ಕಿಮೀ ದೂರದಲ್ಲಿದೆ. ಸ್ವಂತ ವಾಹನಗಳಲ್ಲಿ ಈ ಸ್ಥಳಕ್ಕೆ ಬಂದರೆ ನೀವು ಹೆಚ್ಚು ಸಮಯವನ್ನು ಇಲ್ಲಿ ಕಳೆಯಬಹುದು. 
icon

(4 / 8)

ಟ್ರೆಕ್ಕಿಂಗ್‌ ಪ್ರಿಯರಿಗಂತೂ ಇದು ಹೇಳಿ ಮಾಡಿಸಿದಂಥ ಸ್ಥಳ. ಸೋಲೋ ಟ್ರಿಪ್‌, ಫ್ಯಾಮಿಲಿ, ಪ್ರೇಮಿಗಳೆಲ್ಲರಿಗೂ ಇದು ಫೇವರೆಟ್‌ ಸ್ಪಾಟ್.‌ 
icon

(5 / 8)

ಇಲ್ಲಿ ಬಂದವವರು ಪ್ರಕೃತಿಯ ಅಂದವನ್ನು ಸವಿಯೋದ್ರ ಜೊತೆಗೆ ಫೋಟೋಶೂಟ್‌ ಮಾಡಿಸದೆ ಹೋಗುವುದಿಲ್ಲ. ದೇವರಮನೆ ಗುಡ್ಡದ ಸೊಬಗು ಸವಿಯಲು ಎರಡು ಕಣ್ಣುಗಳು ಸಾಲದು. 
icon

(6 / 8)

ಹಸಿರು ಬೆಟ್ಟಗಳು ಹಾಗೂ ನೀಲಿ ಆಕಾಶದ ನಡುವಿನ ಬೆಳ್ಳಿಯ ಮೋಡಗಳ ದೃಶ್ಯ ಎಲ್ಲರ ಮನಸ್ಸನ್ನು ತಣಿಸದೆ ಇರಲಾರದು. ಹಸಿರು ವಾತಾವರಣ ಕಣ್ಣಿಗೆ ತಂಪೆರೆದರೆ, ತಣ್ಣನೆಯ ಗಾಳಿ ಮೈ ಮನಸ್ಸಿಗೆ ಮುದ ನೀಡುತ್ತದೆ. 
icon

(7 / 8)

ಮುಂದಿನ ಬಾರಿ ಟ್ರಿಪ್‌ ಪ್ಲ್ಯಾನ್ ಮಾಡುತ್ತಿದ್ದಲ್ಲಿ ಚಿಕ್ಕಮಗಳೂರಿನ ದೇವರಮನೆ ಗುಡ್ಡಕ್ಕೆ ಹೋಗಿ ಬನ್ನಿ 
icon

(8 / 8)

ಇತರ ಗ್ಯಾಲರಿಗಳು