Traditional 'jilapi' sweet: ಇದೇನು ಸ್ವೀಟ್‌ ಗೆಸ್‌ ಮಾಡಬಲ್ಲಿರಾ? ಭಾರತದಲ್ಲಿ ಕೈದಿಗಳಿಗೆ ವಿಷ ಪ್ರಾಶನಕ್ಕೆ ಇದೇ ಸ್ವೀಟ್‌ ಬಳಸ್ತಿದ್ರಂತೆ!
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Traditional 'Jilapi' Sweet: ಇದೇನು ಸ್ವೀಟ್‌ ಗೆಸ್‌ ಮಾಡಬಲ್ಲಿರಾ? ಭಾರತದಲ್ಲಿ ಕೈದಿಗಳಿಗೆ ವಿಷ ಪ್ರಾಶನಕ್ಕೆ ಇದೇ ಸ್ವೀಟ್‌ ಬಳಸ್ತಿದ್ರಂತೆ!

Traditional 'jilapi' sweet: ಇದೇನು ಸ್ವೀಟ್‌ ಗೆಸ್‌ ಮಾಡಬಲ್ಲಿರಾ? ಭಾರತದಲ್ಲಿ ಕೈದಿಗಳಿಗೆ ವಿಷ ಪ್ರಾಶನಕ್ಕೆ ಇದೇ ಸ್ವೀಟ್‌ ಬಳಸ್ತಿದ್ರಂತೆ!

  • Traditional 'jilapi' sweet: ಇಷ್ಟು ದೊಡ್ಡದಾಗಿರುವ ಈ ಸ್ವೀಟ್‌ ಯಾವುದು ಎಂದು ಗೆಸ್‌ ಮಾಡಬಲ್ಲಿರಾ? ಒಂದೊಂದು ಊರಲ್ಲಿ ಇದಕ್ಕೆ ಒಂದೊಂದು ಹೆಸರು. ಆದರೂ ಹೆಸರಿನಲ್ಲಿ ಸಾಮ್ಯತೆ ಇದೆ. ನಮ್ಮ ದೇಶದಲ್ಲಿ ಕೈದಿಗಳಿಗೆ ವಿಷ ಪ್ರಾಶನ ಮಾಡೋದಕ್ಕೂ ಬಳಸ್ತಿದ್ರಂತೆ! ಇಷ್ಟು ಕ್ಲೂ ಕೊಡಬಹುದು. ಉಳಿದಿರೋದನ್ನು ಸಚಿತ್ರ ವರದಿ ಮೂಲಕ ತಿಳಿದುಕೊಳ್ಳಿ.. 

ಪಶ್ಚಿಮ ಬಂಗಾಳದ ಬಂಕುರಾದಲ್ಲಿ ಬಧು ಪೂಜೆ ಮತ್ತು ವಿಶ್ವಕರ್ಮ ಪೂಜೆಗೆ ದೇವರ ನೈವೇದ್ಯಕ್ಕೆಂದು ಮಾಡಿದ ಸ್ವೀಟ್‌ ಇದು. ಈ ಸ್ವೀಟ್‌ ಏನು ಅಂತ ಗೆಸ್‌ ಮಾಡ್ತೀರಾ? ಉಳಿದ ವಿವರಗಳನ್ನು ಮುಂದಿನ ಫೋಟೋಗಳ ಜತೆಗೆ ಗಮನಿಸೋಣ. (PTI Photo)
icon

(1 / 7)

ಪಶ್ಚಿಮ ಬಂಗಾಳದ ಬಂಕುರಾದಲ್ಲಿ ಬಧು ಪೂಜೆ ಮತ್ತು ವಿಶ್ವಕರ್ಮ ಪೂಜೆಗೆ ದೇವರ ನೈವೇದ್ಯಕ್ಕೆಂದು ಮಾಡಿದ ಸ್ವೀಟ್‌ ಇದು. ಈ ಸ್ವೀಟ್‌ ಏನು ಅಂತ ಗೆಸ್‌ ಮಾಡ್ತೀರಾ? ಉಳಿದ ವಿವರಗಳನ್ನು ಮುಂದಿನ ಫೋಟೋಗಳ ಜತೆಗೆ ಗಮನಿಸೋಣ. (PTI Photo)(PTI)

ಪಶ್ಚಿಮ ಬಂಗಾಳದ ಬಂಕುರಾದ ಸಿಹಿಖಾದ್ಯ ತಯಾರಕರು ಈ ಸ್ವೀಟ್‌ ತಯಾರಿಸಿದ್ದಾರೆ. ಈ ಸ್ವೀಟ್‌ ಅಲ್ಲಿನ ಸಾಂಪ್ರದಾಯಿಕ ಸಿಹಿ ಖಾದ್ಯ. ಸಾಮಾನ್ಯವಾಗಿ ಗಾತ್ರದಲ್ಲಿ ಸಣ್ಣದಿರುತ್ತೆ. ಆದರೆ ವಿಶೇಷ ಸಂದರ್ಭ ಎಂದು ದೊಡ್ಡ ಗಾತ್ರದ ಸ್ವೀಟ್‌ ಮಾಡಿದ್ದಾರೆ. 2 ಅಡಿ ವ್ಯಾಸದ ಈ ಸ್ವೀಟ್‌ನ ಹೆಸರು ಜಿಲಾಪಿ (Jilapi)̤  (PTI Photo)
icon

(2 / 7)

ಪಶ್ಚಿಮ ಬಂಗಾಳದ ಬಂಕುರಾದ ಸಿಹಿಖಾದ್ಯ ತಯಾರಕರು ಈ ಸ್ವೀಟ್‌ ತಯಾರಿಸಿದ್ದಾರೆ. ಈ ಸ್ವೀಟ್‌ ಅಲ್ಲಿನ ಸಾಂಪ್ರದಾಯಿಕ ಸಿಹಿ ಖಾದ್ಯ. ಸಾಮಾನ್ಯವಾಗಿ ಗಾತ್ರದಲ್ಲಿ ಸಣ್ಣದಿರುತ್ತೆ. ಆದರೆ ವಿಶೇಷ ಸಂದರ್ಭ ಎಂದು ದೊಡ್ಡ ಗಾತ್ರದ ಸ್ವೀಟ್‌ ಮಾಡಿದ್ದಾರೆ. 2 ಅಡಿ ವ್ಯಾಸದ ಈ ಸ್ವೀಟ್‌ನ ಹೆಸರು ಜಿಲಾಪಿ (Jilapi)̤  (PTI Photo)(PTI)

ನಿಮ್ಮ ಗೆಸ್‌ ಕರೆಕ್ಟ್‌ ಅಂತ ಅಂದುಕೊಂಡು ಜಿಲೇಬಿ ಅಂತ ಹೇಳೋಣ. ಹೌದು ಕನ್ನಡಿಗರು ಹೇಳುವ ಜಿಲೇಬಿಯೇ ಇದು. ಒಂದೊಂದು ಊರಲ್ಲಿ ಇದಕ್ಕೆ ಒಂದೊಂದು ಹೆಸರು. ಹಿಂದಿಯಲ್ಲಿ ಇದನ್ನು ಜಲೇಬಿ ಎನ್ನುತ್ತಾರೆ. ಬಂಗಾಳಿಯಲ್ಲಿ ಜಿಲಾಪಿ ಎನ್ನುತ್ತಾರೆ. ಇದೇ ರೀತಿ, ಜಿಲಿಪಿ, ಜಿಲಿಬಿ, ಝುಲ್ಬಿಯಾ, ಜೆರ್ರಿ, ಮುಷಾಬಕ್‌, ಝʻಲ್ಬಿಯಾ, ಝಲಬಿಯಾ ಹೀಗೆ ನಾನಾ ಹೆಸರುಗಳು. ಆದರೂ ಸಿಹಿ ತಿನಿಸು ಮತ್ತು ರೆಸಿಬಿ ಮಾತ್ರ ಒಂದೇ. ಆಕಾರದಲ್ಲೂ ವ್ಯತ್ಯಾಸವಿದೆ. ಆಯಾ ಪಾಕತಜ್ಞ ಕಲಾವಿದರ ಕೈಚಳಕದಂತೆ ಆಕಾರಗಳಲ್ಲಿ ವತ್ಯಾಸವನ್ನು ಕಾಣಬಹುದು. 
icon

(3 / 7)

ನಿಮ್ಮ ಗೆಸ್‌ ಕರೆಕ್ಟ್‌ ಅಂತ ಅಂದುಕೊಂಡು ಜಿಲೇಬಿ ಅಂತ ಹೇಳೋಣ. ಹೌದು ಕನ್ನಡಿಗರು ಹೇಳುವ ಜಿಲೇಬಿಯೇ ಇದು. ಒಂದೊಂದು ಊರಲ್ಲಿ ಇದಕ್ಕೆ ಒಂದೊಂದು ಹೆಸರು. ಹಿಂದಿಯಲ್ಲಿ ಇದನ್ನು ಜಲೇಬಿ ಎನ್ನುತ್ತಾರೆ. ಬಂಗಾಳಿಯಲ್ಲಿ ಜಿಲಾಪಿ ಎನ್ನುತ್ತಾರೆ. ಇದೇ ರೀತಿ, ಜಿಲಿಪಿ, ಜಿಲಿಬಿ, ಝುಲ್ಬಿಯಾ, ಜೆರ್ರಿ, ಮುಷಾಬಕ್‌, ಝʻಲ್ಬಿಯಾ, ಝಲಬಿಯಾ ಹೀಗೆ ನಾನಾ ಹೆಸರುಗಳು. ಆದರೂ ಸಿಹಿ ತಿನಿಸು ಮತ್ತು ರೆಸಿಬಿ ಮಾತ್ರ ಒಂದೇ. ಆಕಾರದಲ್ಲೂ ವ್ಯತ್ಯಾಸವಿದೆ. ಆಯಾ ಪಾಕತಜ್ಞ ಕಲಾವಿದರ ಕೈಚಳಕದಂತೆ ಆಕಾರಗಳಲ್ಲಿ ವತ್ಯಾಸವನ್ನು ಕಾಣಬಹುದು. (Wikipedia)

ಪಶ್ಚಿಮ ಬಂಗಾಳದ ಹೌರಾದಲ್ಲಿನ ಕಡ್ಲೆಮಿಠಾಯಿ, ಜಿಲೇಬಿ ಅಂಗಡಿ ಇದು. ಅಂದ ಹಾಗೆ ಜಿಲೇಬಿಯ ಮೂಲ ಎಲ್ಲಿ? ಯಾವ ದೇಶದಲ್ಲಿ ಯಾವ ಪ್ರದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಇದು ಪರಿಚಯಿಸಲ್ಪಟ್ಟಿತು. ನಿಖರ ಮಾಹಿತಿ ಇಲ್ಲ. ಆದರೂ, ಪಶ್ಚಿಮ ಏಷ್ಯಾದಲ್ಲಿ ಮೊಟ್ಟ ಮೊದಲ ಬಾರಿಗೆ ಇದು ಪರಿಚಯಿಸಲ್ಪಟ್ಟಿತು ಎನ್ನಲಾಗುತ್ತಿದೆ. ಅದಕ್ಕೆ ಉಲ್ಲೇಖವಾಗಿ ಅರಬ್‌ ಲೇಖಕ ಇಬ್ನ್ ಸಯ್ಯರ್ ಅಲ್-ವಾರ್ರಾಕ್ ಅವರ ಅರೇಬಿಕ್ ಅಡುಗೆ ಪುಸ್ತಕ ಕಿತಾಬ್ ಅಲ್-ತಬಿಖ್ (ಇಂಗ್ಲಿಷ್: ದಿ ಬುಕ್ ಆಫ್ ಡಿಶಸ್) ಅನ್ನು ಮುಂದಿಡಲಾಗುತ್ತಿದೆ. 13 ನೇ ಶತಮಾನದ ಪರ್ಷಿಯಾದಲ್ಲಿ, ಮುಹಮ್ಮದ್ ಬಿನ್ ಹಸನ್ ಅಲ್-ಬಾಗ್ದಾದಿ ಅವರ ಅಡುಗೆ ಪುಸ್ತಕವು ಇದೇ ರೀತಿಯ ಭಕ್ಷ್ಯವನ್ನು ಉಲ್ಲೇಖಿಸಿದೆ.
icon

(4 / 7)

ಪಶ್ಚಿಮ ಬಂಗಾಳದ ಹೌರಾದಲ್ಲಿನ ಕಡ್ಲೆಮಿಠಾಯಿ, ಜಿಲೇಬಿ ಅಂಗಡಿ ಇದು. ಅಂದ ಹಾಗೆ ಜಿಲೇಬಿಯ ಮೂಲ ಎಲ್ಲಿ? ಯಾವ ದೇಶದಲ್ಲಿ ಯಾವ ಪ್ರದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಇದು ಪರಿಚಯಿಸಲ್ಪಟ್ಟಿತು. ನಿಖರ ಮಾಹಿತಿ ಇಲ್ಲ. ಆದರೂ, ಪಶ್ಚಿಮ ಏಷ್ಯಾದಲ್ಲಿ ಮೊಟ್ಟ ಮೊದಲ ಬಾರಿಗೆ ಇದು ಪರಿಚಯಿಸಲ್ಪಟ್ಟಿತು ಎನ್ನಲಾಗುತ್ತಿದೆ. ಅದಕ್ಕೆ ಉಲ್ಲೇಖವಾಗಿ ಅರಬ್‌ ಲೇಖಕ ಇಬ್ನ್ ಸಯ್ಯರ್ ಅಲ್-ವಾರ್ರಾಕ್ ಅವರ ಅರೇಬಿಕ್ ಅಡುಗೆ ಪುಸ್ತಕ ಕಿತಾಬ್ ಅಲ್-ತಬಿಖ್ (ಇಂಗ್ಲಿಷ್: ದಿ ಬುಕ್ ಆಫ್ ಡಿಶಸ್) ಅನ್ನು ಮುಂದಿಡಲಾಗುತ್ತಿದೆ. 13 ನೇ ಶತಮಾನದ ಪರ್ಷಿಯಾದಲ್ಲಿ, ಮುಹಮ್ಮದ್ ಬಿನ್ ಹಸನ್ ಅಲ್-ಬಾಗ್ದಾದಿ ಅವರ ಅಡುಗೆ ಪುಸ್ತಕವು ಇದೇ ರೀತಿಯ ಭಕ್ಷ್ಯವನ್ನು ಉಲ್ಲೇಖಿಸಿದೆ.(Wikipedia)

ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ, ಮಾಲ್ಡೀವ್ಸ್‌, ಇರಾನ್‌, ಅಜರ್‌ಬೈಜಾನ್‌, ಅರಬ್‌, ಉತ್ತರ ಆಫ್ರಿಕಾ ರಾಷ್ಟ್ರಗಳಲ್ಲಿ ಇದು ಬಹಳ ಫೇಮಸ್‌. ಇದರ ರೆಸಿಪಿ ಏನು ಅಂತ ತಿಳ್ಕೊಳ್ಳುವ ಕುತೂಹಲವೇ? - ಸಾಮಾನ್ಯವಾಗಿ ಬಳಸುವ ಇನ್‌ಗ್ರೆಡಿಯೆಂಟ್ಸ್‌ - ಮೈದಾ ಪುಡಿ, ಸಕ್ಕರೆ ಮತ್ತು ತುಪ್ಪ, ಕೇಸರಿ. ಕೆಲವರು ಸಕ್ಕರೆ ಬದಲು ಜೇನು ಬಳಸುತ್ತಾರೆ. 
icon

(5 / 7)

ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ, ಮಾಲ್ಡೀವ್ಸ್‌, ಇರಾನ್‌, ಅಜರ್‌ಬೈಜಾನ್‌, ಅರಬ್‌, ಉತ್ತರ ಆಫ್ರಿಕಾ ರಾಷ್ಟ್ರಗಳಲ್ಲಿ ಇದು ಬಹಳ ಫೇಮಸ್‌. ಇದರ ರೆಸಿಪಿ ಏನು ಅಂತ ತಿಳ್ಕೊಳ್ಳುವ ಕುತೂಹಲವೇ? - ಸಾಮಾನ್ಯವಾಗಿ ಬಳಸುವ ಇನ್‌ಗ್ರೆಡಿಯೆಂಟ್ಸ್‌ - ಮೈದಾ ಪುಡಿ, ಸಕ್ಕರೆ ಮತ್ತು ತುಪ್ಪ, ಕೇಸರಿ. ಕೆಲವರು ಸಕ್ಕರೆ ಬದಲು ಜೇನು ಬಳಸುತ್ತಾರೆ. (Wikipedia)

ಭಾರತದಲ್ಲಿ ಪಶ್ಚಿಮ ಬಂಗಾಳ, ಕೇರಳ, ಉತ್ತರಾಖಂಡ ಮತ್ತು ಉತ್ತರ ಪ್ರದೇಶ, ಮಹಾರಾಷ್ಟ್ರ, ಕರ್ನಾಟಕದ ಕೆಲವೆಡೆ ಜಿಲೇಬಿ ಬಹಳ ಫೇಮಸ್‌. ಬೆಳಗ್ಗಿನ ಉಪಾಹಾರಕ್ಕೂ ಇದನ್ನು ಸೇವಿಸುವವರಿದ್ದಾರೆ. ಜಿಲೇಬಿ ಮತ್ತು ರಬ್ಡಿ ಸೇರಿಸಿ ತಿಂದರೆ ಅದರ ಖುಷಿಯೇ ಬೇರೆ. ಉತ್ತರ ಭಾರತದಲ್ಲಿ ಕಚೋರಿ ಜತೆಗೂ ಜಿಲೇಬಿ ತಿನ್ನುವವರಿದ್ದಾರೆ. 
icon

(6 / 7)

ಭಾರತದಲ್ಲಿ ಪಶ್ಚಿಮ ಬಂಗಾಳ, ಕೇರಳ, ಉತ್ತರಾಖಂಡ ಮತ್ತು ಉತ್ತರ ಪ್ರದೇಶ, ಮಹಾರಾಷ್ಟ್ರ, ಕರ್ನಾಟಕದ ಕೆಲವೆಡೆ ಜಿಲೇಬಿ ಬಹಳ ಫೇಮಸ್‌. ಬೆಳಗ್ಗಿನ ಉಪಾಹಾರಕ್ಕೂ ಇದನ್ನು ಸೇವಿಸುವವರಿದ್ದಾರೆ. ಜಿಲೇಬಿ ಮತ್ತು ರಬ್ಡಿ ಸೇರಿಸಿ ತಿಂದರೆ ಅದರ ಖುಷಿಯೇ ಬೇರೆ. ಉತ್ತರ ಭಾರತದಲ್ಲಿ ಕಚೋರಿ ಜತೆಗೂ ಜಿಲೇಬಿ ತಿನ್ನುವವರಿದ್ದಾರೆ. (Wikipedia)

ಭಾರತದಲ್ಲಿ ಹರಪ್ರಸಾದ್ ಬದ್ಕುಲ್ ಅವರು 1889ರಲ್ಲಿ ಜಬಲ್ಪುರದಲ್ಲಿ ಮೊಟ್ಟ ಮೊದಲ ಸಲ ಖೋಯಾ ಅಥವಾ ಮಾವಾದಿಂದ ಮಾಡಿದ ಜಲೇಬಿಯನ್ನು ಕಂಡುಹಿಡಿದರು. ನಾರ್ಮನ್ ಚೆವರ್ಸ್ ಪುಸ್ತಕದಲ್ಲಿ, ಎ ಮ್ಯಾನ್ಯುಯಲ್ ಆಫ್ ಮೆಡಿಕಲ್ ಜ್ಯೂರಿಸ್‌ಪ್ರುಡೆನ್ಸ್ ಫಾರ್ ಇಂಡಿಯಾ (1870, ಪುಟ 178) 1800 ರ ದಶಕದಲ್ಲಿ ಭಾರತದಲ್ಲಿ ಕೈದಿಗಳಿಗೆ ವಿಷ ಪ್ರಾಶನ ಮಾಡಿಸುವುದಕ್ಕೆ ಇದೇ ಸ್ವೀಟ್‌ ಜಲೇಬಿಗಳನ್ನೇ ಬಳಸುತ್ತಿದ್ದರು ಎಂಬ ಉಲ್ಲೇಖವಿರುವುದಾಗಿ ಇತಿಹಾಸದ ಪುಟಗಳು ಹೇಳಿವೆ. 
icon

(7 / 7)

ಭಾರತದಲ್ಲಿ ಹರಪ್ರಸಾದ್ ಬದ್ಕುಲ್ ಅವರು 1889ರಲ್ಲಿ ಜಬಲ್ಪುರದಲ್ಲಿ ಮೊಟ್ಟ ಮೊದಲ ಸಲ ಖೋಯಾ ಅಥವಾ ಮಾವಾದಿಂದ ಮಾಡಿದ ಜಲೇಬಿಯನ್ನು ಕಂಡುಹಿಡಿದರು. ನಾರ್ಮನ್ ಚೆವರ್ಸ್ ಪುಸ್ತಕದಲ್ಲಿ, ಎ ಮ್ಯಾನ್ಯುಯಲ್ ಆಫ್ ಮೆಡಿಕಲ್ ಜ್ಯೂರಿಸ್‌ಪ್ರುಡೆನ್ಸ್ ಫಾರ್ ಇಂಡಿಯಾ (1870, ಪುಟ 178) 1800 ರ ದಶಕದಲ್ಲಿ ಭಾರತದಲ್ಲಿ ಕೈದಿಗಳಿಗೆ ವಿಷ ಪ್ರಾಶನ ಮಾಡಿಸುವುದಕ್ಕೆ ಇದೇ ಸ್ವೀಟ್‌ ಜಲೇಬಿಗಳನ್ನೇ ಬಳಸುತ್ತಿದ್ದರು ಎಂಬ ಉಲ್ಲೇಖವಿರುವುದಾಗಿ ಇತಿಹಾಸದ ಪುಟಗಳು ಹೇಳಿವೆ. (PTI)


ಇತರ ಗ್ಯಾಲರಿಗಳು