ಚಳಿಗಾಲದಲ್ಲಿ ರೋಡ್ ಟ್ರಿಪ್ ಮಾಡ್ಬೇಕು ಅನ್ನೋ ಆಸೆ ಇದ್ರೆ, ಭಾರತದಲ್ಲಿನ ಈ 7 ರಸ್ತೆಗಳನ್ನು ಮಿಸ್ ಮಾಡ್ಲೇಬೇಡಿ
- ಜೀವನದಲ್ಲಿ ಒಮ್ಮೆಯಾದ್ರೂ ನಾನು ರೋಡ್ ಟ್ರಿಪ್ ಮಾಡ್ಬೇಕು ಅನ್ನೋ ಕನಸು ಬಹಳಷ್ಟು ಮಂದಿಗೆ ಇರುತ್ತೆ. ರೋಡ್ ಟ್ರಿಪ್ ಅಂದ್ರೆ ಅದೇನೋ ಥ್ರಿಲ್ ಇರೋದಂತು ಖಂಡಿತ. ಈ ಸಮಯದಲ್ಲಿ ರೋಡ್ ಟ್ರಿಪ್ ಮಜಾವೇ ಬೇರೆ. ಚಳಿಗಾಲದಲ್ಲಿ ರೋಡ್ ಟ್ರಿಪ್‌ಗೆ ಬೆಸ್ಟ್ ಎನ್ನಿಸುವ ಭಾರತದ 7 ಅದ್ಭುತ ತಾಣಗಳಿವು. ಜೀವನದಲ್ಲಿ ಒಮ್ಮೆಯಾದ್ರೂ ಈ ರಸ್ತೆಗಳಲ್ಲಿ ಓಡಾಡಬೇಕು.
- ಜೀವನದಲ್ಲಿ ಒಮ್ಮೆಯಾದ್ರೂ ನಾನು ರೋಡ್ ಟ್ರಿಪ್ ಮಾಡ್ಬೇಕು ಅನ್ನೋ ಕನಸು ಬಹಳಷ್ಟು ಮಂದಿಗೆ ಇರುತ್ತೆ. ರೋಡ್ ಟ್ರಿಪ್ ಅಂದ್ರೆ ಅದೇನೋ ಥ್ರಿಲ್ ಇರೋದಂತು ಖಂಡಿತ. ಈ ಸಮಯದಲ್ಲಿ ರೋಡ್ ಟ್ರಿಪ್ ಮಜಾವೇ ಬೇರೆ. ಚಳಿಗಾಲದಲ್ಲಿ ರೋಡ್ ಟ್ರಿಪ್‌ಗೆ ಬೆಸ್ಟ್ ಎನ್ನಿಸುವ ಭಾರತದ 7 ಅದ್ಭುತ ತಾಣಗಳಿವು. ಜೀವನದಲ್ಲಿ ಒಮ್ಮೆಯಾದ್ರೂ ಈ ರಸ್ತೆಗಳಲ್ಲಿ ಓಡಾಡಬೇಕು.
(1 / 8)
ಸ್ನೇಹಿತರ ಜೊತೆ ರೋಡ್ ಟ್ರಿಪ್ ಮಾಡುವ ಮಜಾನೇ ಬೇರೆ. ಅದ್ರಲ್ಲೂ ಚಳಿಗಾಲದಲ್ಲಿ ರೋಡ್ ಟ್ರಿಪ್‌ನ ಖುಷಿಯನ್ನು ಅನುಭವಿಸಿದವರಿಗೇ ಗೊತ್ತು. ಸಾಗುತ ದೂರ ದೂರ ಎನ್ನುತ್ತಾ ಕಾರ್ ಅಥವಾ ಬೈಕ್‌ನಲ್ಲಿ ಹೋಗುತ್ತಿದ್ದರೆ, ಆಹಾ ಆ ಖುಷಿಯನ್ನು ಅನುಭವಿಸಿಯೇ ಸವಿಯಬೇಕು. ನೀವು ಈ ಚಳಿಗಾಲದಲ್ಲಿ ರೋಡ್ ಟ್ರಿಪ್ ಪ್ಲಾನ್ ಮಾಡಿದ್ರೆ ಭಾರತದಲ್ಲಿನ ಈ 7 ತಾಣಗಳನ್ನು ನಿಮ್ಮ ಪಟ್ಟಿಗೆ ಸೇರಿಸಿಕೊಳ್ಳಿ.
(2 / 8)
ಮನಾಲಿಯಿಂದ ಲೇಹ್ ಹೆದ್ದಾರಿಯಲ್ಲಿ ರೋಡ್ ಟ್ರಿಪ್ ಮಾಡಬೇಕು ಎನ್ನುವ ಕನಸು ಹಲವರಿಗಿರುತ್ತದೆ. 479 ಕಿಲೋಮೀಟರ್ ಉದ್ದದ ಹಾದಿಯಲ್ಲಿ ಪ್ರಯಾಣ ಮಾಡುವುದು ಅದ್ಭುತ ಅನುಭವ. ದಾರಿಯುದ್ದಕ್ಕೂ ಹರಡಿರುವ ಬೆಟ್ಟ ಗುಡ್ಡಗಳು, ಬೆಟ್ಟಗಳ ಮೇಲೆ ಹಾಸು ಹೊದ್ದಿರುವ ಹಿಮ ಹೀಗೆ ಈ ದಾರಿಯಲ್ಲಿನ ಸಾಗುವ ಅನುಭವವೇ ವಿಭಿನ್ನ. ಬೈಕ್ ರೈಡ್ ಅಂತು ಇಲ್ಲಿಗೆ ಹೇಳಿ ಮಾಡಿಸಿದ್ದು. (HT File Photo )
(3 / 8)
ಶಿಮ್ಲಾದಿಂದ ಸ್ಪಿತಿ ಕಣಿವೆ: ಬೆಟ್ಟಗಳ ರಾಣಿ ಎಂದೇ ಕರೆಸಿಕೊಳ್ಳುವ ಶಿಮ್ಲಾದಿಂದ ಸ್ಪಿತಿ ಕಣಿವೆಯತ್ತ ಸಾಗುವ ದಾರಿಯು ರಸ್ತೆ ಪಯಣಕ್ಕೆ ಹೇಳಿ ಮಾಡಿಸಿದ್ದು, ಅಡ್ವೆಂಜರ್ ಪ್ರಿಯರು ಈ ರಸ್ತೆಯಲ್ಲಿ ವಿಭಿನ್ನ ಅನುಭವ ಪಡೆಯುವುದು ಖಂಡಿತ. ಚಳಿಗಾಲದಲ್ಲಿ ಇಲ್ಲಿನ ಕಣಿವೆಗಳಲ್ಲಿ ಬಿಳಿಬಟ್ಟೆ ಹಾಸಿ ಹೊದ್ದಂತೆ ಹಿಮ ಬಿದ್ದಿರುತ್ತದೆ. ಇಲ್ಲಿನ ಪಯಣದಲ್ಲಿ ಹೆಪ್ಪುಗಟ್ಟಿದ ಸರೋವರಗಳು, ಆಕರ್ಷಕ ಹಳ್ಳಿಗಳು ಜೊತೆಯಾಗುತ್ತವೆ.(Raacho Trekkers )
(4 / 8)
ಮುಂಬೈ ಗೋವಾ: ಬೇಸಿಗೆ ಕಾಲದಲ್ಲಿ ಹಲವರು ಗೋವಾ ಪ್ರವಾಸ ಎಂಜಾಯ್ ಮಾಡುತ್ತಾರೆ. ಆದರೆ ಚಳಿಗಾಲದಲ್ಲಿ ಮುಂಬೈ ಹಾಗೂ ಗೋವಾ ರೋಡ್ ಟ್ರಿಪ್ ಮಾಡುವುದು ನಿಮಗೆ ಭಿನ್ನ ಅನುಭವ ನೀಡುವುದು ಸುಳ್ಳಲ್ಲ. ಈ ಸಮಯದಲ್ಲಿ ಇಲ್ಲಿನ ವಾತಾವರಣವು ಆಹ್ಲಾದಕರವಾಗಿರುತ್ತದೆ. ಈ ರಸ್ತೆಯಲ್ಲಿ ಜನಸಂದಣಿಯು ಕಡಿಮೆ ಇರುತ್ತದೆ. ಕೊಂಕಣ ಕರಾವಳಿಯುದ್ದಕ್ಕೂ ಕಾರಿನಲ್ಲಿ ಹೋಗುವ ಪ್ರಯಾಣವೇ ಅದ್ಭುತ.
(5 / 8)
ದೆಹಲಿಯಿಂದ ಋಷಿಕೇಶ: ಚಳಿಗಾಲದಲ್ಲಿ ಶಾರ್ಟ್ ರೋಡ್ ಟ್ರಿಪ್ ಬೇಕು ಎಂದು ಬಯಸುವವರು ದೆಹಲಿ ಋಷಿಕೇಶ ದಾರಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಹಿಮಾಲಯದ ತಪ್ಪಲಿನಲ್ಲಿ ಸಾಗುವ ಈ ದಾರಿಯು ರೋಡ್ ಟ್ರಿಪ್‌ಗೆ ಹೇಳಿ ಮಾಡಿಸಿದ್ದು. ಗಂಗಾನದಿ, ಮಂಜಿನ ಬೆಟ್ಟಗಳಿಂದ ಆವೃತ್ತವಾದ ರಸ್ತೆಯಲ್ಲಿ ಸಾಗುತ್ತಾ ಋಷಿಕೇಶ ತಲುಪುವುದು ನಿಜಕ್ಕೂ ಅದ್ಭುತ ಅನುಭವ. (Revv)
(6 / 8)
ಕೋಲ್ಕತ್ತಾದಿಂದ ಪುರಿ: ಕೋಲ್ಕತ್ತಾದಿಂದ ಪುರಿ ರಸ್ತೆಯಲ್ಲಿ ಸಾಗುವಾಗ ಭಾರತದ ಪೂರ್ವ ಕರಾವಳಿಯು ನಿಮ್ಮನ್ನು ಸೆಳೆಯುತ್ತದೆ. ಒಂದು ಕಡೆ ಬಂಗಾಳಕೊಲ್ಲಿ ಇನ್ನೊಂದು ಕಡೆ ವಿಲಕ್ಷಣ ಹಳ್ಳಿಗಳು ಒಟ್ಟಾರೆ ಆಕರ್ಷಕವಾದ ಭೂದೃಶ್ಯ ನಿಮ್ಮನ್ನು ಸೆಳೆಯುವುದರಲ್ಲಿ ಎರಡು ಮಾತಿಲ್ಲ. ಈ ದಾರಿಯಲ್ಲಿ ಸಾಗಿ ಪುರಿಯ ಐತಿಹಾಸಿಕ ತಾಣಗಳನ್ನು ನೋಡುವುದು ನಿಜಕ್ಕೂ ಅದ್ಭುತ.
(7 / 8)
ಬೆಂಗಳೂರು ಊಟಿ: ಚಳಿಗಾಲದ ಬೆಸ್ಟ್ ರೋಡ್ ಟ್ರಿಪ್‌ಗೆ ನೀವು ಉತ್ತರದ ಕಡೆಗೆ ಹೋಗಬೇಕು ಎಂದೇನಿಲ್ಲ. ನಮ್ಮ ಬೆಂಗಳೂರು ಹಾಗೂ ಊಟಿ ರಸ್ತೆಯು ನಿಮಗೆ ಅದ್ಭುತ ಅನುಭವ ನೀಡುವುದರಲ್ಲಿ ಎರಡು ಮಾತಿಲ್ಲ. ನೀಲಗಿರಿ ಬೆಟ್ಟಗಳು, ಹಸಿರ ಹೊದ ಕಾನನ, ಮಂಜು ಮುಸುಕಿದ ವಾತಾವರಣ ನಡುವೆ ಕಾರಿನಲ್ಲಿ ಪ್ರಯಾಣ ಮಾಡುವುದು ನಿಜಕ್ಕೂ ಅದ್ಭುತ ಅನುಭವ ನೀಡುತ್ತದೆ.
ಇತರ ಗ್ಯಾಲರಿಗಳು