Year in review 2022: ಈ ವರ್ಷ ಜಾಗತಿಕ ಮಟ್ಟದಲ್ಲಿ ಘಟಿಸಿದ ಐದು ಅನಿರೀಕ್ಷಿತ ವಿದ್ಯಮಾನಗಳಿವು
- ಹೊಸ ವರ್ಷ ಇನ್ನೇನು ಹತ್ತಿರ ಬರುತ್ತಿದೆ. 2022ಕ್ಕೆ ವಿದಾಯ ಹೇಳುವ ದಿನಗಳು ಬಂದುಬಿಟ್ಟಿದೆ. ಈ ವರ್ಷ ಜಾಗತಿಕ ಮಟ್ಟದಲ್ಲಿ ಹಲವು ಅನಿರೀಕ್ಷಿತ ವಿದ್ಯಮಾನಗಳು ನಡೆದಿವೆ. ವಿಶ್ವಾದ್ಯಂತ ಈ ವರ್ಷ ಘಟಿಸಿದ ಪ್ರಮುಖ ಐದು ಅನಿರೀಕ್ಷಿತ ಘಟನೆಗಳು ಹೀಗಿವೆ. ಇನ್ನೂ ಹಲವು ಪ್ರಮುಖ ಬೆಳವಣಿಗೆಗಳು ವಿಶ್ವದಲ್ಲಿ ನಡೆದಿದ್ದು, ಇಲ್ಲಿ ಅಗ್ರ ಐದು ಅಂಶಗಳನ್ನು ಮಾತ್ರ ಪಟ್ಟಿ ಮಾಡಲಾಗಿದೆ(ಭಾರತ ಹೊರತಾಗಿ).

(1 / 6)
ಕೋವಿಡ್ ಅಂತ್ಯಗೊಂಡು, ಸಾಕಷ್ಟು ಏರಿಳಿತಗಳನ್ನು ಕಂಡ 2022 ಇನ್ನೇನು ಕೊನೆಗೊಳ್ಳಲಿದೆ. ಈ ವರ್ಷವೂ ಸಿಹಿ ಕಹಿ ಘಟನೆಗಳು ಸಮನಾಗಿ ನಡೆದಿವೆ. ಆರ್ಥಿಕ ಬಿಕ್ಕಟ್ಟಿನಿಂದ ಹಿಡಿದು ರಾಜಕೀಯ ಮುಖ್ಯಾಂಶಗಳವರೆಗೆ, 2022ರಲ್ಲಿ ಇಡೀ ಜಗತ್ತಿನ ಚಿತ್ತವನ್ನು ತನ್ನತ್ತ ಸೆಳೆದ ಪ್ರಮುಖ ಘಟನೆಗಳು ಹೀಗಿವೆ ನೋಡಿ.(File Photos)
(2 / 6)
ಯುಕೆಯು ತನ್ನ ಮೊದಲ ಭಾರತೀಯ ಮೂಲದ ಪ್ರಧಾನಿಯನ್ನು ಪಡೆಯಿತು. 2022ರ ಅಕ್ಟೋಬರ್ 25ರಂದು ಕಿಂಗ್ ಚಾರ್ಲ್ಸ್ III ಅವರು ಸರ್ಕಾರವನ್ನು ರಚಿಸಲು ಕೇಳಿಕೊಂಡ ಬೆನ್ನಲ್ಲೇ, ರಿಷಿ ಸುನಕ್ ಬ್ರಿಟನ್‌ನ ಮೊದಲ ಭಾರತೀಯ ಮೂಲದ ಪ್ರಧಾನ ಮಂತ್ರಿಯಾದರು.(Bloomberg)
(3 / 6)
ಫುಟ್ಬಾಲ್ ಅಂದ್ರೆ ನೆನಪಾಗುವ ರೊನಾಲ್ಡೊ ಮ್ಯಾಂಚೆಸ್ಟರ್ ಯುನೈಟೆಡ್ ತೊರೆದಿದ್ದು, ಕ್ರೀಡಾ ಕ್ಷೇತ್ರದ ದೊಡ್ಡ ಬೆಳವಣಿಗೆ. ಪ್ರಸಿದ್ಧ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರು ನವೆಂಬರ್ 23ರಂದು ಮ್ಯಾಂಚೆಸ್ಟರ್ ಯುನೈಟೆಡ್ ತೊರೆದರು. 37 ವರ್ಷದ ಸ್ಟ್ರೈಕರ್ ಈಗ ಹೊಸ ಕ್ಲಬ್‌ಗಾಗಿ ಹುಡುಕಾಟದಲ್ಲಿದ್ದಾರೆ.(REUTERS)
(4 / 6)
ಟ್ವಿಟರ್ ಖರೀದಿಸಿದ ಎಲೋನ್ ಮಸ್ಕ್: ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲೋನ್ ಮಸ್ಕ್, ಟ್ವಿಟರ್ ಅನ್ನು ಖರೀದಿಸಲು ಬಯಸುವುದಾಗಿ ಏಪ್ರಿಲ್ 14ರಂದು ಹೇಳಿದ್ದರು. ಸಾಮಾಜಿಕ ಮಾಧ್ಯಮ ಜಾಲವನ್ನು ಖರೀದಿಸಲು 44 ಬಿಲಿಯನ್ ಡಾಲರ್ ಒಪ್ಪಂದವನ್ನು ಅಂತಿಮಗೊಳಿಸಿದ ಬಳಿಕ, ಅಂತಿಮವಾಗಿ ಅಧಿಕೃತವಾಗಿ ಕಂಪನಿಯ ನಿಯಂತ್ರಣವನ್ನು ಪಡೆದರು.(AP)
(5 / 6)
ರಾಣಿ ಎಲಿಜಬೆತ್ ಸಾವು: ಬ್ರಿಟನ್ ರಾಣಿ ಎಲಿಜಬೆತ್ II, ಸುದೀರ್ಘ ಸೇವೆ ಸಲ್ಲಿಸಿದ ಬ್ರಿಟಿಷ್ ರಾಣಿ. ಇವರು ಸೆಪ್ಟೆಂಬರ್ 8ರಂದು ಸ್ಕಾಟ್ಲೆಂಡ್‌ನ ಬಾಲ್ಮೋರಲ್ ಕ್ಯಾಸಲ್‌ನಲ್ಲಿ ನಿಧನರಾದರು.(AFP)
ಇತರ ಗ್ಯಾಲರಿಗಳು