ಕನ್ನಡ ಸುದ್ದಿ  /  Photo Gallery  /  Vijayapura News 500 Years Old Adil Shahi Period Water Tunnels Rejuvenated Now With Interest Of Minister Mb Patil Kub

Vijayapura News: ವಿಜಯಪುರದಲ್ಲಿ 500 ವರ್ಷದ ಹಳೆಯ ಜಲ ಸುರಂಗಗಳಿಗೆ ಮರು ಜೀವ, ಏನಿದರ ವಿಶೇಷ photos

 ವಿಜಯಪುರ ನಗರ ಆದಿಲ್‌ ಶಾಹಿ ಆಡಳಿತದಲ್ಲಿ ರೂಪಿಸಿದ ಊರು. ಈಗಲೂ ನೀರಿಗೆ ಸಂಬಂಧಿಸಿದಂತೆ ಹಳೆಯ ವ್ಯವಸ್ಥೆ ಇಲ್ಲಿದೆ. ಆದರೆ ಬಳಕೆಯಲ್ಲಿರಲಿಲ್ಲ. ಇದರಲ್ಲಿ ಕೆರೆ, ಕರೇಜ್‌, ಸುರಂಗ ಮಾರ್ಗಗಳು ಸೇರಿವೆ. ಅವುಗಳಿಗೆ ಪುನಶ್ಚೇತನ ನೀಡಿ ಮರು ಬಳಕೆಗೆ ಒತ್ತು ನೀಡಲಾಗುತ್ತಿದೆ. ಸಚಿವ ಡಾ.ಎಂ.ಬಿ.ಪಾಟೀಲರ ವಿಶೇಷ ಆಸಕ್ತಿ ಫಲವಾಗಿ ಇದು ಸಾಧ್ಯವಾಗುತ್ತಿದೆ. ಇದರ ಚಿತ್ರನೋಟವಿದು.

ವಿಜಯಪುರದಲ್ಲಿ ಆದಿಲ್‌ ಶಾಹಿ ಕಾಲದಲ್ಲಿ ರೂಪಿಸಿದ್ದ ನೀರು ಸರಬರಾಜು ಯೋಜನೆಗಳು ಈಗಲೂ ಇವೆ. ಬಳಕೆಯಿಲ್ಲದೇ ಗಿಡ ಮರಗಳು ಬೆಳೆದಿದ್ದ ಸುರಂಗ, ವೆಂಟ್‌ಗಳನ್ನು ದುರಸ್ಥಿಪಡಿಸುವ ಕೆಲಸ ಶುರುವಾಗಿದೆ. 
icon

(1 / 8)

ಸುರಂಗ ಮಾರ್ಗಗಳ ರೀತಿಯೇ ಇರುವ ಈ ಜಲ ಯೋಜನೆಗಳನ್ನೂ  ಈಗಲೂ ಬಳಸಬೇಕು ಎನ್ನುವುದು ವಿಜಯಪುರ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಅವರ ಯೋಚನೆ. ಇದಕ್ಕಾಗಿ ಕೆಲಸವೂ ಶುರುವಾಗಿದೆ. 
icon

(2 / 8)

ಈ ಜಲ ಮೂಲಗಳನ್ನು ಬಳಕೆ ಮಾಡಿಕೊಂಡು ವಿಜಯಪುರ ನಗರಕ್ಕೆ ಬೇಗಂ ತಲಾಬ್‌ನಿಂದ ಶುದ್ದ ನೀರು ಕೊಡಬೇಕು ಎನ್ನುವುದು ಯೋಜನೆ ಹಿಂದಿನ ಆಶಯ. ಅದರಂತೆಯೇ ಜಲಮಾರ್ಗಗಳ ದುರಸ್ಥಿ ಶುರುವಾಗಿದೆ. 
icon

(3 / 8)

ಆಳದಲ್ಲಿರುವ ವೆಂಟ್‌ಗಳನ್ನು ದುರಸ್ಥಿಗೊಳಿಸುವ ಕೆಲಸ ಶುರುವಾಗಿದೆ. ನೀರು ಸುಲಭವಾಗಿ ಹರಿಯಬಲ್ಲ ಆರು ಮಾರ್ಗಗಳನ್ನು ಗುರುತಿಸಲಾಗಿದ್ದು. ಇದನ್ನು ವೆಂಟ್‌ಗಳು ಎಂದು ಆಗ ಕರೆಯಲಾಗುತ್ತಿತ್ತು.
icon

(4 / 8)

ಬಳಕೆ ಮಾಡದೇ ಹಲವಾರು ವರ್ಷಗಳಿಂದ ಖಾಲಿ ಬಿಟ್ಟ ಪರಿಣಾಮವಾಗಿ ಅವುಗಳಲ್ಲಿ ಪಾಚಿಗಟ್ಟಿಕೊಂಡಿತ್ತು. ಮಣ್ಣು ತುಂಬಿ ಹೋಗಿತ್ತು. ವೆಂಟ್‌ಗಳನ್ನು ಸರಿಪಡಿಸಿ ಸರಾಗವಾಗಿ ನೀರು ಹರಿಯುವಂತೆ ಮಾಡಲು ನಗರಪಾಲಿಕೆ. ನೀರಾವರಿ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. 
icon

(5 / 8)

ನೀರು ಹರಿಯುತ್ತಿದ್ದ ಮಾರ್ಗವಿದು. ಇದನ್ನೇ ವೆಂಟ್‌ ಎಂದು ಅಧಿಕಾರಿಗಳು ಹೇಳುತ್ತಾರೆ. ಇವುಗಳನ್ನೇ ಪುನಶ್ಚೇತನಗೊಳಿಸಲಾಗುತ್ತಿದೆ. ವಿಜಯಪುರಕ್ಕೆ ಕೃಷ್ಣಾದಿಂದ ನೀರು ಕೆರೆಗಳಿಗೆ ಹರಿಯುತ್ತಿದ್ದು ಈ ಮಾರ್ಗ ಬಳಸಿಕೊಂಡು ವಿತರಿಸುವ ಗುರಿ ಹೊಂದಲಾಗಿದೆ. 
icon

(6 / 8)

ಕೆಲ ದಿನಗಳ ಹಿಂದೆ ಸಚಿವ ಡಾ.ಎಂ.ಬಿ.ಪಾಟೀಲ್‌ ನೀರಿನ ಸಂಪರ್ಕ ಇರುವ ಜಾಗಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅವರ ಸೂಚನೆಯ ನಂತರ ಕೆಲಸವೂ ಚುರುಕುಗೊಂಡಿದೆ.ಇತಿಹಾಸ  ಮರೆತವರು ಇತಿಹಾಸವನ್ನು  ಸೃಷ್ಟಿಸಲಾರರು!”  - ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ವಿಜಯಪುರದಲ್ಲಿನ ಐತಿಹಾಸಿಕ ನೀರಿನ ವ್ಯವಸ್ಥೆಯನ್ನು ಪುನಃ ಕಾರ್ಯಗತಗೊಳಿಸುವುದು ನನ್ನ ಕನಸು. ಬಹುಶಃ ದೇಶದಲ್ಲಿಯೇ ಮೊದಲ ಬಾರಿಗೆ ಕಾಲಗರ್ಭದಲ್ಲಿ ಹೂತು ಹೋಗಿರುವ ಅಂದಿನ ಜಲ ಸುರಂಗಗಳು, ಜಲ ವ್ಯವಸ್ಥೆಗಳನ್ನು ಜಾಲಾಡಿ, ವೈಜ್ಞಾನಿಕವಾಗಿ ಪುನಃಶ್ಚೇತನಗೊಳಿಸಿ, ನೀರು ಪೂರೈಸುವ ಕಾರ್ಯ ಕೈಗೊಂಡಿದ್ದು, ಕೆಲವೇ ದಿನಗಳಲ್ಲಿ ಸಾಕಾರವಾಗಲಿದೆ. ಈ ಹಿಂದೆ ನೀರಾವರಿ ಸಚಿವನಾಗಿದ್ದಾಗಲೂ ಈ ದಿಸೆಯಲ್ಲಿ ಕೆಲಸ ಮಾಡಿದ್ದು ಆ ಕಾರ್ಯಕ್ಕೆ ಮತ್ತೆ ಜೀವತುಂಬಿ ಮುಂದುವರಿಸಿದ್ದೇನೆ ಎಂದು ಎಂ.ಬಿ.ಪಾಟೀಲ್‌ ತಿಳಿಸಿದ್ದಾರೆ. 
icon

(7 / 8)

 ವಿಜಯಪುರದ ನೀರಿನ ಬವಣೆಯನ್ನು ನೀಗಿಸುವ ಸಲುವಾಗಿ ಈಗಾಗಲೇ ಭೂತನಾಳ ಕೆರೆಗೆ ಕೃಷ್ಣಾನದಿ ನೀರು ಹರಿಸಿ, ನಗರದಲ್ಲಿರುವ ನೀರಿನ ಸಮಸ್ಯೆಯನ್ನು ಸಾಕಷ್ಟು ನೀಗಿಸಲಾಗಿದೆ. ನಗರದ ಮತ್ತೊಂದು ಐತಿಹಾಸಿಕ ಬೇಗಂತಲಾಬ್ ಕೆರೆಯ ನೀರನ್ನು ಸಹ ಬಳಸಿಕೊಳ್ಳಲು ಸಾಧ್ಯವೇ ಎಂಬುದರ ಪರಿಶೀಲನೆ ನಡೆಸಿದೆ. ಅರಸರ ಕಾಲದಲ್ಲಿ ಅಳವಡಿಸಿದ್ದ ಡೆಲಿವರಿ ಚೇಂಬರ್  ಮೊದಲಾದವುಗಳನ್ನು ಬಳಸಿಕೊಳ್ಳುವುದರ ಕುರಿತಂತೆ ಹಾಗೂ ನೂತನವಾಗಿ ಕೈಗೊಳ್ಳಬಹುದಾದ ಕಾಮಗಾರಿಗಳ ಕುರಿತು ಪ್ರತ್ಯಕ್ಷವಾಗಿ ಪರಿಶೀಲಿಸಿರುವುದನ್ನು ಎಂ.ಬಿ.ಪಾಟೀಲ್‌ ತಿಳಿಸಿದ್ದಾರೆ. 
icon

(8 / 8)

IPL_Entry_Point

ಇತರ ಗ್ಯಾಲರಿಗಳು