ಕೆಟ್ಟ ಮೇಲೆ ಬುದ್ದಿ ಕಲಿತ ವಿನೋದ್ ಕಾಂಬ್ಳಿ; ಡಾಕ್ಟರ್ ಹೇಳಿದಂತೆ ಕೇಳುತ್ತೇನೆ; ಚೇತರಿಕೆಯ ನಂತರ ಮಾಜಿ ಕ್ರಿಕೆಟಿಗ ಹೇಳಿದ ಮಾತಿದು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕೆಟ್ಟ ಮೇಲೆ ಬುದ್ದಿ ಕಲಿತ ವಿನೋದ್ ಕಾಂಬ್ಳಿ; ಡಾಕ್ಟರ್ ಹೇಳಿದಂತೆ ಕೇಳುತ್ತೇನೆ; ಚೇತರಿಕೆಯ ನಂತರ ಮಾಜಿ ಕ್ರಿಕೆಟಿಗ ಹೇಳಿದ ಮಾತಿದು

ಕೆಟ್ಟ ಮೇಲೆ ಬುದ್ದಿ ಕಲಿತ ವಿನೋದ್ ಕಾಂಬ್ಳಿ; ಡಾಕ್ಟರ್ ಹೇಳಿದಂತೆ ಕೇಳುತ್ತೇನೆ; ಚೇತರಿಕೆಯ ನಂತರ ಮಾಜಿ ಕ್ರಿಕೆಟಿಗ ಹೇಳಿದ ಮಾತಿದು

  • Vinod Kambli: ಡಿಸೆಂಬರ್​ 21ರ ಶನಿವಾರ ಮುಂಬೈನ ಥಾಣಾದ ಆಕೃತಿ ಆಸ್ಪ್ರತೆಗೆ ದಾಖಲಾಗಿದ್ದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಅವರ ಆರೋಗ್ಯ ಈಗ ಸ್ಥಿರವಾಗಿದೆ. ಚೇತರಿಕೆ ಕಂಡ ನಂತರ ವಿನೋದ್ ಕಾಂಬ್ಳಿ ಅವರು ಪ್ರತಿಕ್ರಿಯಿಸಿದ್ದು, ವೈದ್ಯರಿಗೆ ಧನ್ಯವಾದ ಅರ್ಪಿಸಿದ್ದಾರೆ.

ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ಡಿಸೆಂಬರ್​ 21ರ ಶನಿವಾರ ಮುಂಬೈನ ಥಾಣಾದಲ್ಲಿರುವ ಆಕೃತಿ ಆಸ್ಪ್ರತೆಗೆ ದಾಖಲಾಗಿದ್ದರು. ಈಗ ಅವರ ಆರೋಗ್ಯ ಸ್ಥಿರವಾಗಿದೆ. ಆ ಬಳಿಕ ಮಾತನಾಡಿದ ವಿನೋದ್ ಕಾಂಬ್ಳಿ, ಇನ್ಮುಂದೆ ವೈದ್ಯರು ಹೇಳಿದ್ದನ್ನು ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.
icon

(1 / 9)

ಕಾಂಬ್ಳಿ ಆರೋಗ್ಯ ಸ್ಥಿರವಾಗಿದ್ದಾರೆ ಎಂದಮಾತ್ರಕ್ಕೆ ಅಪಾಯದಿಂದ ಪಾರಾಗಿದ್ದಾರೆ ಎಂದಲ್ಲ. ವಿವಿಧ ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ ಅವರ ತಲೆಯಲ್ಲಿ ರಕ್ತ ಹೆಪ್ಪುಗಟ್ಟಿರುವುದು ತಿಳಿದುಬಂದಿದೆ. ಹಾಗಾಗಿ ಪ್ರತಿ ಕ್ಷಣವೂ ಅವರು ಎಚ್ಚರವಾಗಿರಬೇಕು. ಪ್ರಸ್ತುತ 24 ಗಂಟೆಗಳ ಕಾಲ ಮೇಲ್ವಿಚಾರಣೆಯಲ್ಲಿ ಇರಿಸಲಾಗಿದೆ.
icon

(2 / 9)

ಆರೋಗ್ಯದಲ್ಲಿ ಸ್ಥಿರ ಕಂಡ ನಂತರ ವೈದ್ಯರ ಕೈ ಮಾತನಾಡಿದ ವಿನೋದ್ ಕಾಂಬ್ಳಿ, ವೈದ್ಯರಿಂದಲೇ ನಾನು ಬದುಕಿದ್ದೇನೆ. ನಾನು ಜೀವಂತವಾಗಿರಲು ಅವರೇ ಕಾರಣ. ವೈದ್ಯರು ಹೇಳಿದ್ದನ್ನು ಇನ್ಮುಂದೆ ಕಟ್ಟುನಿಟ್ಟಾಗಿ ಅನುಕರಿಸುತ್ತೇನೆ. ನಾನು ಜನರಿಗೆ ಒಂದು ಉದಾಹರಣೆಯಾಗಿರಲು ಪ್ರಯತ್ನಿಸುತ್ತೇನೆ ಎಂದು ಹೇಳಿದ್ದಾರೆ.
icon

(3 / 9)

ವೈದ್ಯ ವಿವೇಕ್ ದ್ವಿವೇದಿ ಮಾತನಾಡಿ, ಡಿಸೆಂಬರ್​ 21ರಂದು ಶನಿವಾರ ರಾತ್ರಿ ಅವರನ್ನು ಆಸ್ಪತ್ರೆಗೆ ಕರೆತಂದಾಗ ಜ್ವರದಿಂದ ಬಳಲುತ್ತಿದ್ದರು. ಅಲ್ಲದೆ, ಮಂಪರಿನಲ್ಲಿದ್ದರು. ತುಂಬಾ ನೋವು ಕೂಡ ಇತ್ತು. ಅವರಿಗೆ ನಡೆಯಲು ಆಗುತ್ತಿರಲಿಲ್ಲ. ಕುಳಿತುಕೊಳ್ಳಲೂ ಸಾಧ್ಯವಾಗುತ್ತಿರಲಿಲ್ಲ. ಆಸ್ಪತ್ರೆಗೆ ದಾಖಲಾದಾಗ ಅವರು ನಿದ್ರಾವಸ್ಥೆಯಲ್ಲಿದ್ದರು ಎಂದರು.
icon

(4 / 9)

ದಾಖಲಾದ ಬೆನ್ನಲ್ಲೇ ನಾವು ಎಲ್ಲಾ ವೈದ್ಯಕೀಯ ಪರೀಕ್ಷೆಗಳನ್ನು ಮಾಡಿದ್ದೇವೆ. ಆ ಬಳಿಕ ಅವರಿಗೆ ಮೂತ್ರನಾಳ ಮತ್ತು ಎಲೆಕ್ಟ್ರೋಲೈಟ್ ಸಮತೋಲನದಲ್ಲಿ ಸಮಸ್ಯೆ ಇರುವುದು ಕಂಡು ಬಂತು. ದೇಹದಲ್ಲಿ ಸೋಡಿಯಂ, ಪೊಟ್ಯಾಸಿಯಮ್ ಕಡಿಮೆಯಾಗಿದೆ. ರಕ್ತದೊತ್ತಡವೂ ಕಡಿಮೆ ಇತ್ತು. ಹೀಗಾಗಿ ಆ್ಯಂಟಿಬಯೋಟಿಕ್ ನೀಡಿದೆವು ಎಂದರು.
icon

(5 / 9)

ಕೆಲವು ತಿಂಗಳಿಂದ ವಿನೋದ್ ಕಾಂಬ್ಳಿ ಆರೋಗ್ಯ ತೀವ್ರ ಹದಗೆಟ್ಟಿದೆ. ಅದರಲ್ಲೂ ರಮಾಕಾಂತ್ ಅಚ್ರೇಕರ್ ಅವರ ಸ್ಮಾರಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಕಾಂಬ್ಳಿ ಅವರನ್ನು ನೋಡಿದ ಬಳಿಕ ಆರೋಗ್ಯ ಸ್ಥಿತಿ ಹೇಗಿದೆ ಎನ್ನುವುದು ಸೂಕ್ಷ್ಮವಾಗಿ ಕಂಡು ಬಂತು. ಅವರು ಬೈಕ್​ನಿಂದಲೂ ಇಳಿಯಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದರು.
icon

(6 / 9)

ಕಾಂಬ್ಳಿ ಅವರ ಆರ್ಥಿಕ ಸ್ಥಿತಿಯೂ ಉತ್ತಮವಾಗಿಲ್ಲ. ಬಿಸಿಸಿಐ ನೀಡುವ ಮಾಸಿಕ ಪಿಂಚಣಿ 30,000 ರೂಪಾಯಿಂದಲೇ ಜೀವನ ನಡೆಸಬೇಕಿದೆ. 1983ರ ವಿಶ್ವಕಪ್ ವಿಜೇತ ತಂಡದ ಸದಸ್ಯರಾದ ಸುನಿಲ್ ಗವಾಸ್ಕರ್ ಮತ್ತು ಕಪಿಲ್ ದೇವ್ ಅವರು ನೆರವಿಗೆ ಧಾವಿಸುವುದಾಗಿ ಹೇಳಿದ್ದಾರೆ. ಅವರು ರಿಹ್ಯಾಬ್​ಗೆ ಹೋದರೆ ಮಾತ್ರ ನೆರವು ನೀಡುತ್ತೇವೆ ಎಂದಿದ್ದಾರೆ.
icon

(7 / 9)

ಈವರೆಗೂ 14 ಬಾರಿ ರಿಹ್ಯಾಬ್​ಗೆ ಹೋಗಿರುವ ಕಾಂಬ್ಳಿ ಅವರು 15 ಬಾರಿ ಪುನರ್ವಸತಿಗೆ ಹೋಗಲು ಸಿದ್ದರಿದ್ದಾರೆ. 10 ವರ್ಷಗಳ ಹಿಂದೆ ಹೃದಯ ಶಸ್ತ್ರಚಿಕಿತ್ಸೆಗೆ ದಾಖಲಾಗಿದ್ದ ಎರಡು ಬಾರಿಯೂ ಸಚಿನ್ ತೆಂಡೂಲ್ಕರ್ ಅವರು ಆರ್ಥಿಕವಾಗಿ ನೆರವಾಗಿದ್ದರು. ಸಾಕಷ್ಟು ಬಾರಿಯೂ ಸಹಾಯ ಹಸ್ತ ಚಾಚಿದ್ದಾರೆ ಸಚಿನ್. 
icon

(8 / 9)

ಕ್ಷಣ ಕ್ಷಣದ ಅಪ್ಡೇಟ್ಸ್​​ಗಾಗಿ ಹಿಂದೂಸ್ತಾನ್ ಟೈಮ್ಸ್​ ಕನ್ನಡ ವೆಬ್​ಸೈಟ್ ಫಾಲೋ ಮಾಡಿ.
icon

(9 / 9)

ಇತರ ಗ್ಯಾಲರಿಗಳು