Identity Movie: ಐಡೆಂಟಿಟಿ ಸಿನಿಮಾದ ಟ್ರೇಲರ್‌ ಬಿಡುಗಡೆ; ಟೊವಿನೋ ಥಾಮಸ್, ತ್ರಿಶಾ ನಟನೆಯ ಮಲಯಾಳಂ ಸಿನಿಮಾ ನೋಡಲು ಸಿದ್ಧರಾಗಿ
ಕನ್ನಡ ಸುದ್ದಿ  /  ಮನರಂಜನೆ  /  Identity Movie: ಐಡೆಂಟಿಟಿ ಸಿನಿಮಾದ ಟ್ರೇಲರ್‌ ಬಿಡುಗಡೆ; ಟೊವಿನೋ ಥಾಮಸ್, ತ್ರಿಶಾ ನಟನೆಯ ಮಲಯಾಳಂ ಸಿನಿಮಾ ನೋಡಲು ಸಿದ್ಧರಾಗಿ

Identity Movie: ಐಡೆಂಟಿಟಿ ಸಿನಿಮಾದ ಟ್ರೇಲರ್‌ ಬಿಡುಗಡೆ; ಟೊವಿನೋ ಥಾಮಸ್, ತ್ರಿಶಾ ನಟನೆಯ ಮಲಯಾಳಂ ಸಿನಿಮಾ ನೋಡಲು ಸಿದ್ಧರಾಗಿ

Identity malayalam movie release date: ಟೊವಿನೋ ಥಾಮಸ್, ತ್ರಿಶಾ ಕೃಷ್ಣನ್‌ ನಟನೆಯ ಐಡೆಂಟಿಟಿ ಸಿನಿಮಾವು ಬಿಡುಗಡೆಗೆ ಸಿದ್ಧವಾಗಿದೆ. ಈ ಸಿನಿಮಾದ ಟ್ರೇಲರ್‌ ಬಿಡುಗಡೆಯಗಿದೆ. ಈ ಸಸ್ಪೆನ್ಸ್‌ ಆಕ್ಷನ್‌ ಥ್ರಿಲ್ಲರ್‌ ಸಿನಿಮಾದ ಕುರಿತು ಹೆಚ್ಚಿನ ವಿವರ ಪಡೆಯೋಣ ಬನ್ನಿ.

Identity Movie: ಐಡೆಂಟಿಟಿ ಸಿನಿಮಾದ ಟ್ರೇಲರ್‌ ಬಿಡುಗಡೆ
Identity Movie: ಐಡೆಂಟಿಟಿ ಸಿನಿಮಾದ ಟ್ರೇಲರ್‌ ಬಿಡುಗಡೆ

Identity Malayalam movie release date: ಟೊವಿನೋ ಥಾಮಸ್, ತ್ರಿಶಾ ಕೃಷ್ಣನ್‌ ನಟನೆಯ ಬಹುನಿರೀಕ್ಷಿತ "ಐಡೆಂಟಿಟಿ ಸಿನಿಮಾದ ಟ್ರೇಲರ್‌" ಬಿಡುಗಡೆಯಾಗಿದೆ. ಈ ಸಸ್ಪೆನ್ಸ್‌ ಆಕ್ಷನ್‌ ಥ್ರಿಲ್ಲರ್‌ ಸಿನಿಮಾದ ಬಿಡುಗಡೆ ದಿನಾಂಕವೂ ಪ್ರಕಟವಾಗಿದೆ. ಮುಂದಿನ ಗುರುವಾರ ಬಿಡುಗಡೆಯಾಗುವ ಈ ಸಿನಿಮಾದ ಕುರಿತು ಹೆಚ್ಚಿನ ವಿವರ ಇಲ್ಲಿದೆ. ಈಗಾಗಲೇ ಬಿಡುಗಡೆಯಾಗಿರುವ ಈ ಸಿನಿಮಾದ ಟ್ರೇಲರ್‌ ಮಲಯಾಳಂ ಸಿನಿಮಾಸಕ್ತರ ಗಮನ ಸೆಳೆದಿದೆ.

ಐಡೆಂಟಿಟಿ ಮಲಯಾಳಂ ಸಿನಿಮಾ ಬಿಡುಗಡೆ ದಿನಾಂಕ

ಟೊವಿನೋ ಥಾಮಸ್ ಅವರ ಶೀರ್ಷಿಕೆಯ ಐಡೆಂಟಿಟಿ ಜನವರಿ ಮೊದಲ ವಾರವೇ ಬಿಡುಗಡೆಯಾಗಲಿದೆ. ಅಂದರೆ, ಮುಂದಿನ ವಾರ ಈ ಚಿತ್ರ ಥಿಯೇಟರ್‌ಗಳಿಗೆ ಆಗಮಿಸಲಿದೆ. ಈ ಸಿನಿಮಾ ಜನವರಿ 2, 2025ರಂದು ಬಿಡುಗಡೆಯಾಗಲಿದೆ. ಅಖಿಲ್ ಪೌಲ್ ಮತ್ತು ಅನಾಸ್ ಖಾನ್ ಸಹ-ಬರೆದು ನಿರ್ದೇಶಿಸಿದ ಸಿನಿಮಾ ಇದಾಗಿದೆ.

ಐಡೆಂಟಿಟಿ ಸಿನಿಮಾದ ತಾರಾಗಣ

ಮಲಯಾಳಂ ಸಿನಿಮಾ ಐಡೆಂಟಿಟಿಯಲ್ಲಿ ತ್ರಿಶಾ ಕೃಷ್ಣನ್‌ ಮತ್ತು ಟೊವಿನೋ ಥಾಮಸ್‌ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ವಿನಯ್ ರೈ, ಮಂದಿರಾ ಬೇಡಿ, ಶಮ್ಮಿ ತಿಲಕನ್, ಅಜು ವರ್ಗೀಸ್, ಅರ್ಜುನ್ ರಾಧಾಕೃಷ್ಣನ್, ಅರ್ಚನಾ ಕವಿ, ಗೋಪಿಕಾ ರಮೇಶ್, ಅನೀಶ್ ಗೋಪಾಲ್, ಗಿಜು ಜಾನ್ ಮತ್ತು ಧ್ರುವನ್ ಸೇರಿದಂತೆ ಸಾಕಷ್ಟು ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಛಾಯಾಗ್ರಾಹಕ ಅಖಿಲ್ ಜಾರ್ಜ್, ಸಂಕಲನಕಾರ ಚಮನ್ ಚಕ್ಕೋ ಮತ್ತು ಸಂಗೀತ ನಿರ್ದೇಶಕ ಜೇಕ್ಸ್ ಬಿಜಾಯ್ ಕೂಡ ಈ ಚಿತ್ರದ ತಾಂತ್ರಿಕ ವಿಭಾಗದಲ್ಲಿದ್ದಾರೆ. ಯಾನಿಕ್ ಬೆನ್ ಅವರ ಸಾಹಸ, ಫೀನಿಕ್ಸ್ ಪ್ರಬು ಅವರ ನೃತ್ಯ ಸಂಯೋಜನೆಯೂ ಇದೆ. ಇವರಿಬ್ಬರೂ ತಮಿಳು ಸಿನಿಮಾ ಮಾವೀರನ್‌ಗೆ ಕೆಲಸ ಮಾಡಿದ್ದಾರೆ. ರಾಗಂ ಮೂವೀಸ್ ಮತ್ತು ಕಾನ್ಫಿಡೆಂಟ್ ಗ್ರೂಪ್‌ನ ಬ್ಯಾನರ್‌ಗಳ ಅಡಿಯಲ್ಲಿ ರಾಜು ಮಲ್ಲಿಯತ್ ಮತ್ತು ಡಾ ರಾಯ್ ಸಿಜೆ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.

ಐಡೆಂಟೆಟಿ ಸಿನಿಮಾದ ಟ್ರೇಲರ್‌

 

ಸಿನಿಮಾದಲ್ಲಿ ಟೊವಿನೋ ಥಾಮಸ್‌ "ಸ್ಕೆಚ್‌ ಆರ್ಟಿಸ್ಟ್‌" ಆಗಿ ಕಾಣಿಸಿಕೊಂಡಿದ್ದಾರೆ. ಅಪರಾಧವೊಂದು ನಡೆದಾಗ ಆರೋಪಿಯ ಮುಖದ ಚಿತ್ರವನ್ನು ಬರೆಯುವುದು ಅಂದುಕೊಂಡಷ್ಟು ಸುಲಭವಲ್ಲ. ಒಂದೇ ರೀತಿಯ ಇಬ್ಬರೂ ವ್ಯಕ್ತಿಗಳು ಇರಬಹುದು. ಈ ರೀತಿ ಸ್ಕೆಚ್‌ ಆರ್ಟಿಸ್ಟ್‌ ಬರೆಯುವ ಚಿತ್ರದಲ್ಲಿ ಅತ್ಯಂತ ಸೂಕ್ಷ್ಮ ವಿಷಯಗಳೂ ಇರಬೇಕಾಗುತ್ತದೆ. "ಘಟನೆಯ ವಿವರ ಪಡೆಯದೆ ನೀವು ತಿಳಿಸಿದ ವ್ಯಕ್ತಿಯ ಮುಖ ಚಹರೆ ಮರುಸೃಷ್ಟಿಸುವುದು ಬಹಳ ಸವಾಲಿನ ಸಂಗತಿಯಾಗಿದೆ" ಎಂದು ಹರಣ್‌ ಶಂಕರ್‌(ಟೊವಿನೋ ಥಾಮಸ್‌) ನಾಯಕಿ ತ್ರಿಶಾಗೆ ಹೇಳುತ್ತಾರೆ. ಈ ಮೂಲಕ ಇದು ಯಾರಾದರೂ ಪೊಲೀಸ್‌ ಸ್ಟೇಷನ್‌ಗೆ ಬಂದಾಗ ಶಂಕಿತನ ಹೋಲಿಕೆಯ ಚಿತ್ರವನ್ನು ಬಿಡಿಸುವ ಸಾಮಾನ್ಯ ಕಥೆಯಂತೆ ಇರದೆ, ಈ ಚಿತ್ರದಲ್ಲಿ ಸಾಕಷ್ಟು ಸಂಕೀರ್ಣ ಅಂಶಗಳು ಇರುವ ಸೂಚನೆಯನ್ನು ನೀಡಲಾಗಿದೆ. ಇದರೊಂದಿಗೆ ಒಂದು ಕಡೆ ವಿಮಾನ ಹಾರಾಟದ ನಡುವೆ ನಡೆಯುವ ಫೈಟಿಂಗ್‌, ಇನ್ನೊಂದೆಡೆ ಕಾರುಗಳ ನಡುವೆ ಚೇಸಿಂಗ್‌ ಫೈಟಿಂಗ್‌ ಕೂಡ ಗಮನ ಸೆಳೆಯುತ್ತದೆ. ಹೀಗೆ, ಈ ಸಿನಿಮಾದಲ್ಲಿ ಸಾಕಷ್ಟು ಅಂಶಗಳು ಇರುವ ಸೂಚನೆಯನ್ನು ಟ್ರೇಲರ್‌ ನೀಡಿದೆ.

Whats_app_banner