ಅಪ್ಪ ನೋಡಿದ ಹುಡುಗ ಸುಬ್ಬು ಎಂಬ ಭ್ರಮೆಯಲ್ಲಿ ಶ್ರಾವಣಿ, ಊಟ–ನೀರು ಬಿಟ್ಟು ಸೊರಗಿದ ಶ್ರೀವಲ್ಲಿ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಅಪ್ಪ ನೋಡಿದ ಹುಡುಗ ಸುಬ್ಬು ಎಂಬ ಭ್ರಮೆಯಲ್ಲಿ ಶ್ರಾವಣಿ, ಊಟ–ನೀರು ಬಿಟ್ಟು ಸೊರಗಿದ ಶ್ರೀವಲ್ಲಿ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ಅಪ್ಪ ನೋಡಿದ ಹುಡುಗ ಸುಬ್ಬು ಎಂಬ ಭ್ರಮೆಯಲ್ಲಿ ಶ್ರಾವಣಿ, ಊಟ–ನೀರು ಬಿಟ್ಟು ಸೊರಗಿದ ಶ್ರೀವಲ್ಲಿ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ಅಪ್ಪ ಹೇಳಿದ ಹುಡುಗ ಸುಬ್ಬು ಎಂದು ತಪ್ಪಾಗಿ ತಿಳಿದ ಶ್ರಾವಣಿ ಚಿಕ್ಕಪ್ಪ–ಚಿಕ್ಕಮ್ಮನ ಮಾತನ್ನು ಕೇಳದೇ ಆ ಹುಡುಗ ತನಗೆ ಇಷ್ಟ ಎಂದು ಹೇಳಿ ಬಿಡುತ್ತಾಳೆ. ಇತ್ತ ಸುಬ್ಬು ತನ್ನ ಪ್ರೀತಿ ನಿರಾಕರಿಸಿದ್ದಕ್ಕೆ ಊಟ, ನೀರು ಬಿಟ್ಟು ಸೊರಗುತ್ತಾಳೆ ಶ್ರೀವಲ್ಲಿ. ಮದನ್‌ನಲ್ಲಾದ ಬದಲಾವಣೆ ಕಂಡು ಶ್ರಾವಣಿಗೆ ಅಚ್ಚರಿ. ಡಿಸೆಂಬರ್‌ 24ರ ಸಂಚಿಕೆಯಲ್ಲಿ ಏನೇನಾಯ್ತು ನೋಡಿ.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಡಿಸೆಂಬರ್‌ 24ರ ಸಂಚಿಕೆ
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಡಿಸೆಂಬರ್‌ 24ರ ಸಂಚಿಕೆ

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಡಿಸೆಂಬರ್‌ 24ರ ಸಂಚಿಕೆಯಲ್ಲಿ ವಂದನಾ ಹಾಗೂ ಸುರೇಂದ್ರ, ಶ್ರಾವಣಿ ಮದನ್‌ನನ್ನು ಮದುವೆಯಾಗಲು ಒಪ್ಪಿಗೆ ಸೂಚಿಸಿರುವ ಬಗ್ಗೆ ಗಾಬರಿಯಾಗಿ ಅವಳ ಬಳಿ ಮಾತನಾಡಲು ಬರುತ್ತಾರೆ. ಆದರೆ ಅಪ್ಪ ತನಗೆಂದು ನೋಡಿದ ಹುಡುಗ ಸುಬ್ಬು ಎಂಬ ಶ್ರಾವಣಿ ತಪ್ಪು ತಿಳಿಯುತ್ತಾಳೆ.  ‘ಆ ಹುಡುಗ ನಿಜಕ್ಕೂ ನಿನಗೆ ಒಪ್ಪಿಗೆಯೇ, ಎಲ್ಲಾ ಗೊತ್ತಿದ್ದು ನೀನ್ಯಾಕೆ ಅವನನ್ನು ಮದುವೆಯಾಗಲು ಒಪ್ಪಿದೆ‘ ಎಂದೆಲ್ಲಾ ಪ್ರಶ್ನೆ ಕೇಳುತ್ತಾರೆ. ಆದರೆ ಶ್ರಾವಣಿ ಅಪ್ಪ ತನ್ನ ಮದುವೆ ಫಿಕ್ಸ್ ಮಾಡಿದ್ದು ಮದನ್‌ ಜೊತೆಗೆ, ಸುಬ್ಬು ಜೊತೆಗೆಲ್ಲ ಎಂಬ ಅರಿವಿಲ್ಲದೇ ಚಿಕ್ಕಪ್ಪ, ಚಿಕ್ಕಮ್ಮನನ್ನು ಸಮಾಧಾನ ಮಾಡುತ್ತಾಳೆ.

‘ಚಿಕ್ಕಮ್ಮ– ಚಿಕ್ಕಪ್ಪ ನೀವು ನನ್ನ ಬಗ್ಗೆ ಚಿಂತೆ ಮಾಡ್ಬೇಡಿ. ಅಪ್ಪ ನೋಡಿದ ಹುಡುಗ ನನಗೂ ತುಂಬಾ ಇಷ್ಟ. ನಾನು ಅವನನ್ನು ಮದುವೆಯಾದರೆ ಜೀವನಪೂರ್ತಿ ಸಂತೋಷದಿಂದ ಇರುತ್ತೇನೆ. ಅವನು ನನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುತ್ತಾನೆ. ನಾನು ಅವನ ಜೊತೆ ಖುಷಿಯಿಂದ ಇರುತ್ತೇನೆ, ‘ ಎಂದು ಧೈರ್ಯ ಹೇಳುತ್ತಾಳೆ. ಶ್ರಾವಣಿ ಮಾತು ಕೇಳಿ ವಂದನಾ, ಸುರೇಂದ್ರ ಇಬ್ಬರಿಗೂ ಗಾಬರಿಯಾಗುತ್ತದೆ. ಸುರೇಂದ್ರ ವಂದನಾ ಬಳಿ ‘ಹೇಗೋ ಶ್ರಾವಣಿ ಖುಷಿಯಿಂದ ಇರುತ್ತಾಳಾಲ್ಲ ಅಷ್ಟೇ ಸಾಕು ನನಗೆ. ನೀನು ಇದರ ಬಗ್ಗೆ ಹೆಚ್ಚಿಗೆ ತಲೆ ಕೆಡಿಸಿಕೊಳ್ಳಬೇಡ‘ ಎಂದು ಅಲ್ಲಿಂದ ಹೊರಡುತ್ತಾನೆ. ಆದರೆ ವಂದನಾ ಮಾತ್ರ ‘ನಿಜಕ್ಕೂ ಶ್ರಾವಣಿ ಈ ಮದುವೆಗೆ ಒಪ್ಪಿಗೆ ಸೂಚಿಸಿದ್ದಾಳಾ, ಸುಬ್ಬುವನ್ನು ಅವಳು ಪ್ರೀತಿಸಿದ್ದೇ ಸುಳ್ಳಾ, ಇಲ್ಲೇನೋ ಸಮಸ್ಯೆಯಾಗಿದೆ‘ ಎಂದು ಯೋಚಿಸುತ್ತಾಳೆ.

ಹಾಸಿಗೆ ಹಿಡಿದ ಶ್ರೀವಲ್ಲಿ

ಸುಬ್ಬುವನ್ನು ಅತಿಯಾಗಿ ಪ್ರೀತಿಸಿ ಅವನನ್ನೇ ಸರ್ವಸ್ವ ಎಂದುಕೊಂಡಿದ್ದ ಶ್ರೀವಲ್ಲಿ ಅವನು ತನ್ನ ಪ್ರೀತಿಯನ್ನು ರಿಜೆಕ್ಟ್ ಮಾಡಿದ್ದು ನೋಡಿ ಊಟ–ತಿಂಡಿ ಬಿಟ್ಟು ಸೊರಗುತ್ತಾಳೆ. ನಿತ್ರಾಣಗೊಂಡ ಅವಳನ್ನು ಆಸ್ಪತ್ರೆಗೂ ಸೇರಿಸಬೇಕಾಗುತ್ತದೆ. ಮನೆಗೆ ಬಂದು ಹಾಸಿಗೆಯಲ್ಲಿ ಮಲಗಿದ ಮಗಳನ್ನು ನೋಡಿ ಪೋಷಕರಿಗೆ ಸಂಕಟ ಹೆಚ್ಚುತ್ತದೆ. ಆದರೆ ಶ್ರಾವಣಿ ಮಾತ್ರ ತನ್ನ ಹಟ ಬಿಡುವುದಿಲ್ಲ. ಇತ್ತ ಸುಬ್ಬು, ಶ್ರೀವಲ್ಲಿ ಪ್ರೀತಿ ನಿರಾಕರಿಸಿದ್ದು, ಇಂದ್ರಮ್ಮನಿಗೆ ಮಾತ್ರ ಖುಷಿ ನೀಡಿರುತ್ತದೆ. ಇದಕ್ಕಾಗಿ ಇಂದ್ರಮ್ಮ ತನ್ನ ತಂಗಿಯಿಂದ ಬೈಗುಳ ಕೇಳುತ್ತಾರೆ. ಅಕ್ಕ ನೀನು ಮಾಡಿದ್ದು ಸರಿಯಲ್ಲ, ನಿನ್ನ ಪ್ರತಿಷ್ಠೆಗಾಗಿ ಮಗಳ ಭವಿಷ್ಯ ಪಣಕ್ಕಿಡಬೇಡ ಎಂದು ಬುದ್ಧಿವಾದ ಹೇಳುತ್ತಾಳೆ. ಶ್ರೀವಲ್ಲಿ ಅಪ್ಪ, ಮಗಳ ಸ್ಥಿತಿ ನೋಡಲಾಗದೇ ಅಳುತ್ತಾ ಕೂತು ಬಿಡುತ್ತಾರೆ. ಸದಾ ಚಟುವಟಿಕೆಯಿಂದ ಓಡಾಡುತ್ತಿದ್ದ ಶ್ರೀವಲ್ಲಿ ಸುಬ್ಬು ಪ್ರೀತಿ ನಿರಾಕರಣೆಯಿಂದ ಮಂಕಾಗಿದ್ದಾಳೆ.

ಮದನ್ ವರ್ತನೆ ಕಂಡು ಶ್ರಾವಣಿಗೆ ಶಾಕ್‌

ಅಪ್ಪ ತನಗೆ ಸುಬ್ಬು ಜೊತೆ ಮದುವೆ ಮಾಡುತ್ತಾರೆ ಎಂಬ ಭ್ರಮೆಯಲ್ಲೇ ಇರುವ ಶ್ರಾವಣಿ ತಿಳಿಯದೇ ಮದನ್‌ಗೆ ಡಿಕ್ಕಿ ಹೊಡೆಯುತ್ತಾಳೆ. ಆದರೆ ಎಂದಿನಂತೆ ವರ್ತಿಸದ ಮದನ್ ಮೃದುವಾಗಿ ಸಾರಿ ಶ್ರಾವಣಿ, ನೋವಾಯ್ತಾ ನಾನು ನೋಡಬೇಕಿತ್ತು ಎಂದು ಹೇಳಿ ಶ್ರಾವಣಿಗೆ ಅಚ್ಚರಿಯಾಗುವಂತೆ ಮಾಡುತ್ತಾನೆ. ಮದನ್ ವರ್ತನೆ ಕಂಡ ಶ್ರಾವಣಿ, ಇದೇನಪ್ಪಾ ಇದು ನರಿ ಇಲಿಯಾಗಿದೆ ಎಂದು ಮನಸ್ಸಿನಲ್ಲೇ ಅಂದುಕೊಂಡು ಪರ್ವಾಗಿಲ್ಲ ಬಿಡು, ನಾನು ನೋಡ್ಕೊಂಡು ಬರ್ಬೇಕಿತ್ತು ಅಂತ ಹೇಳಿ ಹೊರಡಲು ಸಿದ್ಧಳಾಗುತ್ತಾಳೆ. ಆದರೆ ಮದನ್, ಹಿಂದೆ ತಾನು ಮಾಡಿರುವುದಕ್ಕೆಲ್ಲಾ ಸಾರಿ ಎಂದು ಮುಗ್ಧನಂತೆ ಹೇಳುತ್ತಾನೆ. ಆದರೆ ಶ್ರಾವಣಿ ಅವನಿಗೆ ಶೇಕ್ ಹ್ಯಾಂಡ್ ಕೂಡ ಮಾಡದೇ ಹೊರಟು ಹೋಗುತ್ತಾಳೆ, ಇದರಿಂದ ಮದನ್‌ಗೆ ಅವಮಾನವಾದ್ರೂ ತಡೆದುಕೊಂಡು ‘ಶ್ರಾವಣಿ ಇನ್ನು ಸ್ವಲ್ಪ ದಿನ ನಿನಗಾಗಿ ಎಲ್ಲವನ್ನೂ ಸಹಿಸಿಕೊಳ್ಳುತ್ತೇನೆ. ಇನ್ನು ಸ್ವಲ್ಪ ದಿನದಲ್ಲೇ ನಿನ್ನ ಕುತ್ತಿಗೆಗೆ ತಾಳಿ ಕಟ್ಟಿ ನಿನ್ನನ್ನು ಈ ಕೈ ಮುಷ್ಟಿಯಲ್ಲಿ ಇರಿಸಿಕೊಳ್ಳುತ್ತೇನೆ‘ ಎಂದು ಹೇಳಿ ಹೊರಡುತ್ತಾನೆ.

ಶ್ರಾವಣಿಯಮ್ಮನ ಮದುವೆ ಖುಷಿಗೆ ಸಿಹಿ ಹಂಚಿದ ಪದ್ಮನಾಭ

ಕಾಂತಮ್ಮ, ಸುಂದರ ಸೇರಿಕೊಂಡು ಶ್ರಾವಣಿ–ಸುಬ್ಬು ಮದುವೆ ಹೇಗೆ ಎಂದು ಪ್ಲಾನ್ ಮಾಡ್ತಾ ಇದ್ರೆ, ಹೊರಗಡೆ ಹೋಗಿದ್ದ ಪದ್ಮನಾಭ ಸ್ವೀಟ್ ಹಿಡಿದು ತರುತ್ತಾರೆ. ಮನೆಯವರಿಗೆಲ್ಲಾ ಸ್ವೀಟ್ ತೆಗೆದುಕೊಳ್ಳಲು ಹೇಳುತ್ತಾರೆ. ಸ್ವೀಟ್ ಯಾಕೆ ಎಂದು ಕೇಳಿದ್ರೆ ಶ್ರಾವಣಿಯಮ್ಮನ ಮದುವೆ ಫಿಕ್ಸ್ ಆಗಿದೆ ಅಂತಾರೆ. ಅದನ್ನ ಕೇಳಿ ವಿಶಾಲಾಕ್ಷಿ ಸಂತಸ ಪಟ್ರೆ ಕಾಂತಮ್ಮ, ಸುಂದರ ತಮ್ಮ ಐಡಿಯಾ ಎಲ್ಲಾ ಉಲ್ಟಾ ಹೊಡಿತು ಎಂದು ತಲೆ ಕೆಟ್ಟವರಂತೆ ನಿಂತಿರುತ್ತಾರೆ. ಅವರಿಗೆ ಶ್ರಾವಣಿ ಮದುವೆಯಾಗುತ್ತಿರುವುದು ಸುಬ್ಬುವನ್ನಲ್ಲ ಎಂಬುದು ಅರಿವಾಗುತ್ತದೆ. ‘ಮಮ್ಮಿ ಹೇಗೋ ಶ್ರೀವಲ್ಲಿ ಜೊತೆ ಸುಬ್ಬು ಮದುವೆಯಾಗೋದನ್ನು ತಡೆದಿದ್ದೇವೆ, ಆದರೆ ಈಗ ಶ್ರಾವಣಿ ಮೇಡಂ ಮದುವೆ ನಿಲ್ಲಿಸೋದು ಹೇಗೆ?‘ ಎಂದು ಕಾಂತಮ್ಮ ಬಳಿ ಪ್ರಶ್ನೆ ಮಾಡ್ತಾನೆ.

ಶ್ರಾವಣಿಗೆ ಸುಬ್ಬುವನ್ನು ತಾನು ಮದುವೆಯಾಗುತ್ತಿಲ್ಲ ಎಂಬುದು ಅರಿವಿಗೆ ಬರುತ್ತಾ, ಮದನ್‌–ವಿಜಯಾಂಬಿಕಾ ಕುತ್ರಂತಕ್ಕೆ ಶ್ರಾವಣಿ ಬಲಿಯಾಗ್ತಾಳಾ, ಶ್ರೀವಲ್ಲಿಗೆ ಸುಬ್ಬು ಪ್ರೀತಿ ಸಿಗುತ್ತಾ, ಕಾಂತಮ್ಮ–ಸುಂದರ ಸೇರಿ ಶ್ರಾವಣಿ ಮದುವೆ ನಿಲ್ಲಿಸೋಕೆ ಏನು ಪ್ಲಾನ್ ಮಾಡಬಹುದು ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.

ಪಾತ್ರ ಪರಿಚಯ

ವೀರೇಂದ್ರ– ಮೋಹನ್‌

ವಿಜಯಾಂಬಿಕಾ – ಸ್ನೇಹ ಈಶ್ವರ್

ಶ್ರಾವಣಿ – ಐಶ್ಚರ್ಯಾ ಫಿರ್ಡೋಸ್‌

ಸುಬ್ಬು – ಅಮೋಘ್‌

ಪದ್ಮನಾಭ – ಬಾಲರಾಜ್‌

ಪಿಂಕಿ – ಪ್ರತಿ ಶೆಟ್ಟಿ

ಮದನ್ – ಅರ್ಥವ

ಕಾಂತಮ್ಮ – ಭವಾನಿ ಪ್ರಕಾಶ್

ವಂದನಾ – ಜ್ಯೋತಿ

Whats_app_banner