Zee Kannada New Serial: ಜೀ ಕನ್ನಡ ವಾಹಿನಿಯಲ್ಲಿ ಬರಲಿದೆ ಹೊಸ ಧಾರಾವಾಹಿ ‘ನಾ ನಿನ್ನ ಬಿಡಲಾರೆ’; ಇದು ಅಮ್ಮ ಮಗಳ ಬಾಂಧವ್ಯದ ಕಥೆ
Na ninna bidalare Kannada Serial: ಜೀ ಕನ್ನಡ ವಾಹಿನಿಯಲ್ಲಿ ಶೀಫ್ರದಲ್ಲೇ ಹೊಸ ಧಾರಾವಾಹಿಯೊಂದು ಪ್ರಸಾರವಾಗಲಿದೆ. 'ನಾ ನಿನ್ನ ಬಿಡಲಾರೆ' ಎಂಬ ಶೀರ್ಷಿಕೆ ಹೊಂದಿರುವ ಈ ಧಾರಾವಾಹಿ ಅಮ್ಮ ಮಗಳ ನಡುವಿನ ಬಾಂಧವ್ಯವನ್ನು ತೋರ್ಪಡಿಸುತ್ತದೆ.
Na ninna bidalare Kannada Serial: ಜೀ ಕನ್ನಡ ವಾಹಿನಿಯಲ್ಲಿ ‘ನಾ ನಿನ್ನ ಬಿಡಲಾರೆ’ ಎಂಬ ಹೊಸ ಧಾರಾವಾಹಿ ಶೀಫ್ರದಲ್ಲೇ ಪ್ರಸಾರವಾಗಲಿದೆ. ಪ್ರೋಮೋ ಕೂಡ ಬಿಡುಗಡೆಯಾಗಿದೆ. ಧಾರಾವಾಹಿಯಲ್ಲಿ ಹಾರರ್ ಸೀನ್‌ಗಳು ಇದೆ. ಆತ್ಮದ ಕಥೆಯೂ ಇದೆ. ಈಗಾಗಲೇ ಜೀ ವಾಹಿನಿಯ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಯಾದ ಪ್ರೋಮೋದಲ್ಲಿ ಕಥೆಯ ಸಾರ ಇದೆ. ಒಂದು ಸುಂದರವಾದ ನೆಮ್ಮದಿಯಾಗಿರುವ ಕುಟುಂಬ ಇರುತ್ತದೆ. ಆದರೆ ಆ ಕುಟುಂಬದ ಮೇಲೆ ಒಂದು ಹೆಣ್ಣಿನ ಕಣ್ಣು ಬೀಳುತ್ತದೆ. ಅವಳು ಈ ಸುಂದರ ಸಂಸಾರವನ್ನು ಹಾಳು ಮಾಡುತ್ತಾಳೆ.
ಮುದ್ದಾದ ಮಗು, ತಾಯಿ ಹಾಗೂ ತಂದೆ ತಮ್ಮ ಪಾಡಿಗೆ ತಾವು ಜೀವನ ನಡೆಸುತ್ತಿರುತ್ತಾರೆ. ಆದರೆ ಇನ್ಯಾರದೋ ಕೆಟ್ಟ ದೃಷ್ಟಿ ಬಿದ್ದು ತಾಯಿಯ ಕೊಲೆ ಆಗುತ್ತದೆ. ಆ ರೀತಿ ಆದಾಗಿನಿಂದಲೂ ಮಗು ಮನಸ್ಸು ಕೆಡುತ್ತದೆ. ಅಮ್ಮ ಇಲ್ಲ ಎಂಬ ಕೊರಗು ಅವಳನ್ನು ಕಾಡುತ್ತದೆ. ಬೇರೊಂದು ಹುಡುಗಿ ಇವರ ಸಂಸಾರದ ಮೇಲೆ ತನ್ನ ನಿರ್ಧಾರವೇ ನಡೆಯಬೇಕು ತಾನು ಆಸೆ ಪಟ್ಟ ಹುಡುಗ ಮತ್ತೆ ತನಗೆ ಸಿಗಬೇಕು ಎಂಬ ದೃಷ್ಟಿಯಿಂದ ಈ ರೀತಿ ಮಾಡಿರುತ್ತಾಳೆ. ಸತ್ತ ನಂತರವೂ ಮಗುವಿನ ಮೇಲಿನ ಪ್ರೀತಿಯಿಂದ ಆತ್ಮವಾಗಿ ತಾಯಿ ಕಾಣಿಸಿಕೊಳ್ಳುತ್ತಾಳೆ
ಆದರೆ ಆ ದುಷ್ಟ ಹುಡುಗಿ ಇವರ ಸಂಸಾರವನ್ನು ಹಾಳು ಮಾಡಿದ್ದಷ್ಟೇ ಅಲ್ಲದೇ ಮತ್ತಷ್ಟು ತೊಂದರೆ ಕೊಡುತ್ತಾಳೆ. ತಾಯಿಯನ್ನು ಮಾತ್ರವಲ್ಲ ಮುಂದಿನ ದಿನಗಳಲ್ಲಿ ತಾನು ಆ ಮಗುವನ್ನೂ ಕೊಂದು ಬಿಡಬೇಕು ಎಂದು ಅಂದುಕೊಳ್ಳುತ್ತಾಳೆ. ಯಾಕೆಂದರೆ ಆ ಮಗು ಇವಳ ಮಾತನ್ನು ಕೇಳುತ್ತಿರಲಿಲ್ಲ. ನಾನೂ ನಿಮ್ಮ ಅಮ್ಮನ ಹಾಗೇ ಎಂದು ಹೇಳಿದರೂ ಆ ಮಗು ಮಾತ್ರ ಇವಳನ್ನು ಹತ್ತಿರಕ್ಕೆ ಸೇರಿಸುತ್ತಿರುವುದಿಲ್ಲ. ಈ ಎಲ್ಲ ಕಾರಣಕ್ಕೆ ಅವಳು ಮಗುವನ್ನೂ ತಾಯಿ ಇದ್ದ ಜಾಗಕ್ಕೆ ಕಳಿಸಬೇಕು ಎಂದು ಅಂದುಕೊಳ್ಳುತ್ತಾಳೆ.
ಇದನ್ನೆಲ್ಲ ಆತ್ಮವಾಗಿರುವ ತಾಯಿ ಗಮನಿಸುತ್ತಾ ಇರುತ್ತಾಳೆ. ಹೇಗಾದರೂ ಮಾಡಿ ತನ್ನ ಮಗಳನ್ನು ರಕ್ಷಿಸಿಕೊಳ್ಳಬೇಕು ಎಂಬ ಮನೋಭಾವದಿಂದ ತುಂಬಾ ಪ್ರಯತ್ನ ಮಾಡುತ್ತಾ ಇರುತ್ತಾಳೆ. ಆದರೆ ಭೌತಿಕವಾದ ಯಾವ ಶಕ್ತಿಯೂ ಅವಳಿಗೆ ಇರುವುದಿಲ್ಲ. ಹಾಗಾಗಿ ಏನು ಮಾಡಲೂ ಸಾಧ್ಯವಾಗದೇ ಅಮ್ಮನವರ ಮೊರೆ ಹೋಗುತ್ತಾಳೆ. ಆದರೆ ದೇವಸ್ಥಾನದ ಮೆಟ್ಟಿಲನ್ನು ಆತ್ಮದ ಬಳಿ ಹತ್ತಲು ಅಥವಾ ದೇವಸ್ಥಾನದ ಒಳಗಡೆ ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ಆಗ ಇನ್ಯಾವುದೋ ಒಂದು ಹುಡುಗಿ ಬಂದು ಆತ್ಮದ ಕೈ ಹಿಡಯುತ್ತಾಳೆ. ಯಾರೊಂದಿಗೂ ಆಗದ ಭೌತಿಕ ಅನುಭವ ಆ ಹುಡುಗಿಯಿಂದ ಆತ್ಮಕ್ಕೆ ಆಗುತ್ತದೆ. ಇವಿಷ್ಟು ಪ್ರೋಮೋದಿಂದ ತಿಳಿದು ಬರುತ್ತದೆ.
ಮಗುವಿನ ಪಾತ್ರದಲ್ಲಿ ಮಹಿತಾ
ಮಗುವಿನ ಪಾತ್ರದಲ್ಲಿ ಮಹಿತಾ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಚುಕ್ಕಿ ತಾರೆ ಧಾರಾವಾಹಿಯಲ್ಲಿ ಚುಕ್ಕಿಯಾಗಿ ಮಹಿತಾ ಅಭಿನಯಿಸಿದ್ದರು. ಈ ಧಾರಾವಾಹಿಯಲ್ಲಿ ಅವರ ಪಾತ್ರದ ಹೆಸರು ಇನ್ನೂ ರಿವೀಲ್ ಆಗಿಲ್ಲ. ವಿಕ್ರಾಂತ್ ರೋಣ ಚಿತ್ರದ ನಟಿ ನೀತಾ ಅಶೋಕ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪುಟ್ಟ ಮಗುವೊಂದನ್ನು ಎತ್ತಿ ಆಡಿಸುತ್ತಾ ಅಮ್ಮನ ಪ್ರೀತಿಯನ್ನು ಹಂಚುತ್ತಾ ಆನಂದ ಹಾಗೂ ದುಃಖ ಎರಡೂ ಭಾವನೆಗಳನ್ನು ತೋರಿಸುವ ಪಾತ್ರ ಇವರದ್ದಾಗಿದೆ. ಈ ಧಾರಾವಾಹಿ ಬಿಡುಗಡೆ ದಿನವನ್ನು ವಾಹಿನಿ ಇನ್ನೂ ಪ್ರಕಟಿಸಿಲ್ಲ. ಆದರೆ, ಶೀಘ್ರದಲ್ಲಿ ಆರಂಭವಾಗುವ ಸೂಚನೆ ದೊರಕಿದೆ.
ವಿಭಾಗ