Brain Teaser: 5*5=11, 8*8=20 ಆದ್ರೆ 10*10= ಎಷ್ಟು; ಗಣಿತದಲ್ಲಿ ನೀವು ಪಂಟರಾದ್ರೆ 20 ಸೆಕೆಂಡ್‌ನಲ್ಲಿ ಉತ್ತರ ಹೇಳಿ
ಗಣಿತ ಎಲ್ಲರಿಗೂ ಸುಲಭವಲ್ಲ, ಹಾಗಂತ ಇದು ಕಬ್ಬಿಣದ ಕಡಲೆ ಖಂಡಿತ ಅಲ್ಲ. ನೀವು ಗಣಿತಪ್ರೇಮಿಯಾಗಿದ್ದು, ಪಜಲ್ ಬಿಡಿಸೋದು ನಿಮಗೆ ಇಷ್ಟ ಅಂದ್ರೆ ನಿಮಗಾಗಿ ಇಲ್ಲೊಂದು ಬ್ರೈನ್ ಟೀಸರ್ ಇದೆ. ಇದರಲ್ಲಿರುವ ಪ್ರಶ್ನೆಗೆ ನೀವು 20 ಸೆಕೆಂಡ್ ಒಳಗೆ ಉತ್ತರ ಹೇಳಬೇಕು. ನಿಮಗೊಂದು ಹೊಸ ಚಾಲೆಂಜ್.
ಗಣಿತ ಕೆಲವರಿಗೆ ಫೇವರಿಟ್ ಸಬ್ಜೆಕ್ಟ್. ಗಣಿತ ಪ್ರೇಮಿಗಳು ಎಂಥದ್ದೆ ಸವಾಲು ಇದ್ದರೂ ಥಟ್ಟಂತ ಬಿಡಿಸುತ್ತಾರೆ. ಗಣಿತದಲ್ಲಿ ಇರುವ ಸೂತ್ರಗಳು, ಸಮೀಕರಣಗಳನ್ನು ಬಿಡಿಸುವುದು ನಿಜಕ್ಕೂ ಎಲ್ಲರಿಗೂ ಸಾಧ್ಯವಿಲ್ಲ, ಹಾಗಂತ ಇದು ಅಸಾಧ್ಯವೂ ಏನಲ್ಲ. ನೀವು ನಿಜಕ್ಕೂ ಗಣಿತ ಪ್ರೇಮಿಯಾಗಿದ್ದರೆ ನಿಮಗಾಗಿ ಇಲ್ಲೊಂದು ಬ್ರೈನ್ ಟೀಸರ್ ಚಿತ್ರವಿದೆ. ಇದರಲ್ಲಿರುವ ಪ್ರಶ್ನೆಗೆ ನೀವು 20 ಸೆಕೆಂಡ್ ಒಳಗೆ ಉತ್ತರ ಹೇಳಬೇಕು.
ಗಣಿತದ ಪಜಲ್‌ಗಳು ಮೆದುಳಿಗೆ ಹುಳ ಬಿಡುವಂತಿದ್ದರೂ ಇದರಿಂದ ನಮ್ಮಲ್ಲಿ ಸಮಸ್ಯೆ ಪರಿಹರಿಸುವ ಗುಣ ಬೆಳೆಯುತ್ತದೆ. ಇದು ನಮ್ಮ ಯೋಚನಾಶಕ್ತಿ ವೃದ್ಧಿಯಾಗುವಂತೆ ಮಾಡುತ್ತದೆ. ಇದು ನಮ್ಮ ಮನಸ್ಸಿಗೆ ಮೋಜು ನೀಡುವ ಜೊತೆಗೆ ಸಜೃನಾತ್ಮಕ ಯೋಚನೆಗೂ ಕಾರಣವಾಗುತ್ತದೆ. ಇದರಿಂದ ಕೆಲ ಹೊತ್ತು ಮೆದುಳು ಎಲ್ಲಾ ಯೋಚನೆ, ಭಾವನೆ, ಒತ್ತಡಗಳಿಂದ ವಿರಾಮ ಪಡೆಯುತ್ತದೆ.
ಇಂದಿನ ಬ್ರೈನ್ ಟೀಸರ್ ಅನ್ನು Pro Brain Teaser ಎಂಬ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಇಲ್ಲಿರುವ ಪ್ರಶ್ನೆ ಹಲವರು ಮೆದುಳು ಕೆರೆದುಕೊಳ್ಳುವಂತೆ ಮಾಡಿದೆ. ಯಾಕೆಂದರೆ ಇಲ್ಲಿ 5*5= 10 ಆಗುವುದಿಲ್ಲ. ಹಾಗಾದರೆ ಇಂದಿನ ಬ್ರೈನ್ ಟೀಸರ್ ಪ್ರಶ್ನೆ ಹೇಗಿದೆ ನೋಡಿ.
5 × 5 = 11, 6 × 6 = 14, 7 × 7 = 17, 8 × 8 = 20, ಆದರೆ 10 × 10 = ಎಷ್ಟು ಎಂದು ನೀವು ಕಂಡುಹಿಡಿಯಬೇಕು. ಇದು ನಿಮಗಿರುವ ಸವಾಲು.
ಗಣಿತದಲ್ಲಿ ನೀವು ಎಕ್ಸ್‌ಪರ್ಟ್ ಅಂತಾದ್ರೆ ಈ ಬ್ರೈನ್ ಟೀಸರ್‌ಗೆ ಖಂಡಿತ 20 ಸೆಕೆಂಡ್ ಒಳಗೆ ಉತ್ತರ ಕಂಡುಹಿಡಿಯಲು ಸಾಧ್ಯವಿಲ್ಲ. ನೀವು ಉತ್ತರ ಕಂಡುಕೊಳ್ಳಲು ಸಾಧ್ಯವಾದರೆ ಇದನ್ನು ನಿಮ್ಮ ಸ್ನೇಹಿತರು ಆತ್ಮೀಯರೊಂದಿಗೆ ಹಂಚಿಕೊಳ್ಳಿ, ಅವರಿಂದ ಯಾವ ಉತ್ತರ ಬರುತ್ತದೆ ನಿರೀಕ್ಷಿಸಿ. ಇಂತಹ ಬ್ರೈನ್ ಟೀಸರ್‌ಗೆ ಟೈಮ್‌ಪಾಸ್‌ಗೆ ಹೇಳಿ ಮಾಡಿಸಿದ್ದು ಎಂಬುದು ಸುಳ್ಳಲ್ಲ.
ಈ ಬ್ರೈನ್ ಟೀಸರ್‌ಗಳನ್ನೂ ಓದಿ
Brain Teaser: A+A=2, A+b=3 ಆದ್ರೆ A+B+C*4= ಎಷ್ಟು? ಗಣಿತದಲ್ಲಿ ನೀವು ಎಕ್ಸ್‌ಪರ್ಟ್ ಆದ್ರೆ 30 ಸೆಕೆಂಡ್ ಒಳಗೆ ಉತ್ತರ ಹೇಳಿ
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವೈರಲ್ ಆದ ಬ್ರೈನ್ ಟೀಸರ್‌ವೊಂದು ಮೆದುಳಿಗೆ ಹುಳ ಬಿಡೋದು ಸುಳ್ಳಲ್ಲ. ಗಣಿತದಲ್ಲಿ ನೀವು ಎಕ್ಸ್‌ಪರ್ಟ್ ಆದ್ರೆ ಈ ಬ್ರೈನ್ ಟೀಸರ್‌ಗೆ ಉತ್ತರ ಹೇಳಲು ಸಾಧ್ಯವಾಗುತ್ತದೆ. A+B+C*4= ಎಷ್ಟು? 30 ಸೆಕೆಂಡ್ ಒಳಗೆ ನೀವು ಉತ್ತರ ಹೇಳಬೇಕು.
Brain Teaser: ಚಿತ್ರದಲ್ಲಿ ಮಿಸ್ ಆಗಿರುವ ನಂಬರ್ ಯಾವುದು, 15 ಸೆಕೆಂಡ್‌ನಲ್ಲಿ ಕಂಡುಹಿಡಿಯಿರಿ, ನಿಮಗೊಂದು ಚಾಲೆಂಜ್
ನಿಮ್ಮ ಕಣ್ಣು ಹಾಗೂ ಮೆದುಳು ಸಖತ್ ಶಾರ್ಪ್ ಆಗಿದೆ ಅಂತ ನಿಮಗೆ ಅನ್ನಿಸುತ್ತಾ, ಹಾಗಾದ್ರೆ ನಿಮಗಾಗಿ ಇಲ್ಲೊಂದು ಚಾಲೆಂಜ್ ಇದೆ. 1 ರಿಂದ 100ವರೆಗೆ ಬರೆದಿರುವ ಈ ನಂಬರ್‌ಗಳಲ್ಲಿ ಒಂದು ನಂಬರ್ ಮಿಸ್ ಆಗಿದೆ. ಆ ನಂಬರ್ ಯಾವುದು ಎಂದು ನೀವು ಕಂಡುಹಿಡಿಯಬೇಕು. ಇದು ನಿಮಗಿರುವ ಚಾಲೆಂಜ್. ಕೇವಲ 15 ಸಕೆಂಡ್ ಒಳಗೆ ನೀವು ಉತ್ತರ ಹೇಳಬೇಕು.