ಏಕದಿನ-ಟೆಸ್ಟ್ ತಂಡದಲ್ಲಿ ಹಿರಿಯ ಆಟಗಾರರು ಅವಕಾಶ ಪಡೆಯುತ್ತಾರೆಯೇ; ರೋಹಿತ್-ಕೊಹ್ಲಿ ಭವಿಷ್ಯ ಬಿಚ್ಚಿಟ್ಟ ಜಯ್ ಶಾ
- Jay Shah on Virat Kohli-Rohit Sharma: 2024ರ ಟಿ20 ವಿಶ್ವಕಪ್ ಗೆದ್ದ ಬಳಿಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ರವೀಂದ್ರ ಜಡೇಜಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಇದರ ಬೆನ್ನಲ್ಲೇ ಏಕದಿನ ಮತ್ತು ಟೆಸ್ಟ್ನಲ್ಲಿ ಅವರ ಭವಿಷ್ಯವೇನು ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸ್ಪಷ್ಟಪಡಿಸಿದ್ದಾರೆ.
- Jay Shah on Virat Kohli-Rohit Sharma: 2024ರ ಟಿ20 ವಿಶ್ವಕಪ್ ಗೆದ್ದ ಬಳಿಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ರವೀಂದ್ರ ಜಡೇಜಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಇದರ ಬೆನ್ನಲ್ಲೇ ಏಕದಿನ ಮತ್ತು ಟೆಸ್ಟ್ನಲ್ಲಿ ಅವರ ಭವಿಷ್ಯವೇನು ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸ್ಪಷ್ಟಪಡಿಸಿದ್ದಾರೆ.
(1 / 6)
ಟಿ20 ವಿಶ್ವಕಪ್ 2024 ಟೂರ್ನಿ ಗೆದ್ದ ಬೆನ್ನಲ್ಲೇ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ಅಂತಾರಾಷ್ಟ್ರೀಯ ಟಿ20ಐ ಕ್ರಿಕೆಟ್ಗೆ ವಿದಾಯ ಹೇಳಿದರು. ಇವರಿಬ್ಬರ ನಂತರ ರವೀಂದ್ರ ಜಡೇಜಾ ಅವರು ಸಹ ಚುಟುಕು ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದರು. ಇದೀಗ ಅವರು ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಮತ್ತು ಐಸಿಸಿ ಚಾಂಪಿಯನ್ಸ್ ಟ್ರೋಫಿ ಆಡಲಿದ್ದಾರೆಯೇ ಎಂಬ ಪ್ರಶ್ನೆ ಎದ್ದಿದೆ. ಇದರ ಬೆನ್ನಲ್ಲೇ ಜಯ್ ಶಾ ಉತ್ತರಿಸಿದ್ದಾರೆ.
(2 / 6)
ರೋಹಿತ್-ಕೊಹ್ಲಿ ಅವರ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ ಭವಿಷ್ಯದ ಬಗ್ಗೆ ಕ್ರಿಕೆಟ್ ಅಭಿಮಾನಿಗಳಿಗೆ ಗೊಂದಲ ಉಂಟಾಗಿದೆ. ಟೆಸ್ಟ್, ಏಕದಿನದಲ್ಲಿ ಮುಂದುವರೆಯುವುದಾಗಿ ಇಬ್ಬರು ಹೇಳಿದ್ದಾರೆ. ಆದರೂ ಅಭಿಮಾನಿಗಳಿಗೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ.
(3 / 6)
ಏಕದಿನ ಮತ್ತು ಟೆಸ್ಟ್ ತಂಡಗಳು ಬದಲಾಗುವುದಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸುಳಿವು ನೀಡಿದ್ದಾರೆ. ಹಿರಿಯರ ಸಹಾಯದಿಂದ ಭಾರತ ಈ ಬಾರಿ ಚಾಂಪಿಯನ್ಸ್ ಟ್ರೋಫಿ ಮತ್ತು ಟೆಸ್ಟ್ ಚಾಂಪಿಯನ್ಶಿಪ್ ಮೇಲೆ ಕಣ್ಣಿಟ್ಟಿದೆ ಎಂದು ಸ್ಪಷ್ಟಪಡಿಸಿದ್ದಾರೆ.
(4 / 6)
2023ರ ವಿಶ್ವಕಪ್ನಲ್ಲಿ ಎಲ್ಲಾ ಪಂದ್ಯಗಳನ್ನು ಗೆದ್ದಿದ್ದರೂ ಫೈನಲ್ನಲ್ಲಿ ಸೋತೆವು. ಆ ದಿನ ಆಸ್ಟ್ರೇಲಿಯಾ ಉತ್ತಮ ಪ್ರದರ್ಶನ ನೀಡಿತು. ಈ ಬಾರಿ ನಾವು ಕಠಿಣ ಪರಿಶ್ರಮ ವಹಿಸಿ ಪ್ರಶಸ್ತಿ ಗೆದ್ದಿದ್ದೇವೆ. ದೊಡ್ಡ ಟೂರ್ನಿಗಳಲ್ಲಿ ಅನುಭವವು ವ್ಯತ್ಯಾಸವನ್ನುಂಟು ಮಾಡುತ್ತದೆ. ವಿಶ್ವಕಪ್ನಲ್ಲಿ ಹೆಚ್ಚು ಪ್ರಯೋಗ ಮಾಡಲು ಸಾಧ್ಯವಿಲ್ಲ. ರೋಹಿತ್ ಅವರ ಸ್ಟ್ರೈಕ್ ರೇಟ್ ನೋಡಿದರೆ, ಯುವ ಕ್ರಿಕೆಟಿಗರಿಗಿಂತ ಉತ್ತಮವಾಗಿದೆ ಎಂದು ಹೇಳಿದ್ದಾರೆ.
(5 / 6)
ರೋಹಿತ್-ಕೊಹ್ಲಿ-ಜಡೇಜಾ ಇಲ್ಲದೆ ಭಾರತದ ಮುಂದಿನ ಟಿ20 ಅಧ್ಯಾಯದ ಬಗ್ಗೆ ಮಾತನಾಡಿದ ಜಯ್ ಶಾ, ಟೀಮ್ ಇಂಡಿಯಾ ಎಲ್ಲಾ ಪ್ರಶಸ್ತಿಗಳನ್ನು ಗೆಲ್ಲಬೇಕೆಂದು ಬಯಸುತ್ತೇನೆ. ನಮ್ಮ ಬೆಂಚ್ ಸಾಮರ್ಥ್ಯವು ದೊಡ್ಡದಾಗಿದೆ. ಈ ವಿಶ್ವಕಪ್ ತಂಡದ 3-4 ಕ್ರಿಕೆಟಿಗರು ಮಾತ್ರ ಜಿಂಬಾಬ್ವೆಗೆ ಹೋಗುತ್ತಿದ್ದಾರೆ ಎಂದು ಹೇಳಿದ್ದಾರೆ.
ಇತರ ಗ್ಯಾಲರಿಗಳು