Heart Attack: ಚಳಿಗಾಲದಲ್ಲಿ ಅತಿಯಾದ ವ್ಯಾಯಾಮ ಹೃದಯಾಘಾತಕ್ಕೆ ಕಾರಣವಾಗಬಹುದು ಜೋಕೆ! ಈ ಸಲಹೆ ಪಾಲಿಸಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Heart Attack: ಚಳಿಗಾಲದಲ್ಲಿ ಅತಿಯಾದ ವ್ಯಾಯಾಮ ಹೃದಯಾಘಾತಕ್ಕೆ ಕಾರಣವಾಗಬಹುದು ಜೋಕೆ! ಈ ಸಲಹೆ ಪಾಲಿಸಿ

Heart Attack: ಚಳಿಗಾಲದಲ್ಲಿ ಅತಿಯಾದ ವ್ಯಾಯಾಮ ಹೃದಯಾಘಾತಕ್ಕೆ ಕಾರಣವಾಗಬಹುದು ಜೋಕೆ! ಈ ಸಲಹೆ ಪಾಲಿಸಿ

  • Heart attack in winter: ಚಳಿಗಾಲ, ಅತಿಯಾದ ವ್ಯಾಯಾಮ ಮತ್ತು ಹೃದಯಾಘಾತ - ಈ ಮೂರಕ್ಕೂ ಒಂದಕ್ಕೊಂದು ಸಂಬಂಧವಿದೆ. ಚಳಿಗಾಲದಲ್ಲಿ ದಿಢೀರೆಂದು ಅತಿಯಾದ ದೈಹಿಕ ಚಟುವಟಿಕೆಗಳು ಹೃದಯಾಘಾತಕ್ಕೆ ಕಾರಣವಾಗಬಹುದು. ಅದಕ್ಕೆ ಇಲ್ಲಿದೆ ಕಾರಣಗಳು.

ಚಳಿಗಾಲದಲ್ಲಿ ವಾತಾವರಣ ಶೀತಮಯವಾಗಿರುತ್ತದೆ. ಈ ವೇಳೆ ನಮ್ಮ ರಕ್ತನಾಳಗಳು ಸಂಕುಚಿತಗೊಳ್ಳುತ್ತವೆ. ರಕ್ತದ ಹರಿವಿಗಾಗಿ ಇರುವ ಹಾದಿಗಳನ್ನು ಕಿರಿದಾಗಿಸುತ್ತದೆ. ಇದು ಹೃದಯದ ಮೇಲೆ ಕೆಲಸದ ಹೊರೆಯನ್ನು ಹೆಚ್ಚಿಸುತ್ತದೆ. ಹೀಗಾಗಿ ಹೃದಯವು  ಇದು ರಕ್ತದೊತ್ತಡ ಮತ್ತು ರಕ್ತಪರಿಚಲನೆಯನ್ನು ನಿರ್ವಹಿಸಲು ಗಟ್ಟಿಯಾಗಿ ಪಂಪ್ ಮಾಡಬೇಕಾಗುತ್ತದೆ.
icon

(1 / 5)

ಚಳಿಗಾಲದಲ್ಲಿ ವಾತಾವರಣ ಶೀತಮಯವಾಗಿರುತ್ತದೆ. ಈ ವೇಳೆ ನಮ್ಮ ರಕ್ತನಾಳಗಳು ಸಂಕುಚಿತಗೊಳ್ಳುತ್ತವೆ. ರಕ್ತದ ಹರಿವಿಗಾಗಿ ಇರುವ ಹಾದಿಗಳನ್ನು ಕಿರಿದಾಗಿಸುತ್ತದೆ. ಇದು ಹೃದಯದ ಮೇಲೆ ಕೆಲಸದ ಹೊರೆಯನ್ನು ಹೆಚ್ಚಿಸುತ್ತದೆ. ಹೀಗಾಗಿ ಹೃದಯವು  ಇದು ರಕ್ತದೊತ್ತಡ ಮತ್ತು ರಕ್ತಪರಿಚಲನೆಯನ್ನು ನಿರ್ವಹಿಸಲು ಗಟ್ಟಿಯಾಗಿ ಪಂಪ್ ಮಾಡಬೇಕಾಗುತ್ತದೆ.(istockphoto)

ಇದಲ್ಲದೇ ಚಳಿಗಾಲದಲ್ಲಿ ಶೀತ ವಾತಾವರಣವು ರಕ್ತವನ್ನು ಸ್ವಲ್ಪ ದಪ್ಪವಾಗಿಸುತ್ತದೆ. ಇದರಿಂದ ರಕ್ತವು ಸರಾಗವಾಗಿ ಹರಿಯಲು ಕಷ್ಟವಾಗುತ್ತದೆ. ಇದು ಹೃದಯದ ಪಂಪ್ ಮಾಡುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಶೀತ ಹವಾಮಾನವು ಹೃದಯ ಬಡಿತ ಮತ್ತು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಆಮ್ಲಜನಕದ ಪೂರೈಕೆಯನ್ನು ಕಡಿಮೆ ಮಾಡುತ್ತದೆ.  
icon

(2 / 5)

ಇದಲ್ಲದೇ ಚಳಿಗಾಲದಲ್ಲಿ ಶೀತ ವಾತಾವರಣವು ರಕ್ತವನ್ನು ಸ್ವಲ್ಪ ದಪ್ಪವಾಗಿಸುತ್ತದೆ. ಇದರಿಂದ ರಕ್ತವು ಸರಾಗವಾಗಿ ಹರಿಯಲು ಕಷ್ಟವಾಗುತ್ತದೆ. ಇದು ಹೃದಯದ ಪಂಪ್ ಮಾಡುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಶೀತ ಹವಾಮಾನವು ಹೃದಯ ಬಡಿತ ಮತ್ತು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಆಮ್ಲಜನಕದ ಪೂರೈಕೆಯನ್ನು ಕಡಿಮೆ ಮಾಡುತ್ತದೆ.  (istockphoto)

ಹೀಗಿರುವಾಗ ಚಳಿಗಾಲದಲ್ಲಿ ನಾವು ಅತಿಯಾಗಿ ವ್ಯಾಯಾಮ ಅಥವಾ ದೈಹಿಕ ಚಟುವಟಿಕೆ ಮಾಡಿದರೆ ಹೃದಯ ಬಡಿತ ಮತ್ತು ರಕ್ತದೊತ್ತಡದ ಮೇಲೆ ಮತ್ತಷ್ಟು ಪರಿಣಾಮ ಬೀರುತ್ತದೆ. ಅತಿಯಾದ ದೈಹಿಕ ಚಟುವಟಿಕೆ ವೇಳೆ ದೇಹಕ್ಕೆ ಆಮ್ಲಜನಕ ಬೇಡಿಕೆ ಹೆಚ್ಚುತ್ತದೆ. ಆದರೆ ಶೀತ ವಾತಾವರಣದಿಂದಾಗಿ ಈಗಾಗಲೇ ಆಮ್ಲಜನಕದ ಪೂರೈಕೆ ಕಡಿಮೆಯಾಗಿರುವಾಗ ಇದು ಹೃದಯಕ್ಕೆ ಇನ್ನಷ್ಟು ಒತ್ತಡ ನೀಡುತ್ತದೆ. ಹೀಗಾಗಿ ಚಳಿಗಾಲದಲ್ಲಿ ಅತಿಯಾದ ವ್ಯಾಯಾಮ ಹೃದಯಾಘಾತಕ್ಕೆ ಕಾರಣವಾಗುತ್ತದೆ. 
icon

(3 / 5)

ಹೀಗಿರುವಾಗ ಚಳಿಗಾಲದಲ್ಲಿ ನಾವು ಅತಿಯಾಗಿ ವ್ಯಾಯಾಮ ಅಥವಾ ದೈಹಿಕ ಚಟುವಟಿಕೆ ಮಾಡಿದರೆ ಹೃದಯ ಬಡಿತ ಮತ್ತು ರಕ್ತದೊತ್ತಡದ ಮೇಲೆ ಮತ್ತಷ್ಟು ಪರಿಣಾಮ ಬೀರುತ್ತದೆ. ಅತಿಯಾದ ದೈಹಿಕ ಚಟುವಟಿಕೆ ವೇಳೆ ದೇಹಕ್ಕೆ ಆಮ್ಲಜನಕ ಬೇಡಿಕೆ ಹೆಚ್ಚುತ್ತದೆ. ಆದರೆ ಶೀತ ವಾತಾವರಣದಿಂದಾಗಿ ಈಗಾಗಲೇ ಆಮ್ಲಜನಕದ ಪೂರೈಕೆ ಕಡಿಮೆಯಾಗಿರುವಾಗ ಇದು ಹೃದಯಕ್ಕೆ ಇನ್ನಷ್ಟು ಒತ್ತಡ ನೀಡುತ್ತದೆ. ಹೀಗಾಗಿ ಚಳಿಗಾಲದಲ್ಲಿ ಅತಿಯಾದ ವ್ಯಾಯಾಮ ಹೃದಯಾಘಾತಕ್ಕೆ ಕಾರಣವಾಗುತ್ತದೆ. (istockphoto)

ಪರಿಹಾರ ಏನು?: ಇದನ್ನು ತಡೆಯಲು ನೀವು ಅತಿಯಾಗಿ ವ್ಯಾಯಾಮ ಅಥವಾ ಅತಿಯಾಗಿ ಯಾವುದೇ ದೈಹಿಕ ಚಟುವಟಿಕೆ ಮಾಡಬಾರದು. ಯಾವುದೇ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಮೊದಲು, 5-10 ನಿಮಿಷಗಳ ಕಾಲ ಲಘು ವ್ಯಾಯಾಮ ಮಾಡಿ. ನಂತರ ನಿಧಾನವಾಗಿ ಬೇರೆ ಬೇರೆ ವ್ಯಾಯಾಮ ಮಾಡಿ. ವ್ಯಾಯಾಮದ ವೇಳೆ ಬಿಗಿಯಾದ ಬಟ್ಟೆಗಳನ್ನು ತಪ್ಪಿಸಿ. ದೈಹಿಕ ಚಟುವಟಿಕೆಯ ನಡುವೆ ಆಗಾಗ್ಗ ವಿಶ್ರಾಂತಿ ಪಡೆಯಿರಿ. ವಿಶ್ರಾಂತಿ ವೇಳೆ ನೀರನ್ನು ಕುಡಿಯಿರಿ. 
icon

(4 / 5)

ಪರಿಹಾರ ಏನು?: ಇದನ್ನು ತಡೆಯಲು ನೀವು ಅತಿಯಾಗಿ ವ್ಯಾಯಾಮ ಅಥವಾ ಅತಿಯಾಗಿ ಯಾವುದೇ ದೈಹಿಕ ಚಟುವಟಿಕೆ ಮಾಡಬಾರದು. ಯಾವುದೇ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಮೊದಲು, 5-10 ನಿಮಿಷಗಳ ಕಾಲ ಲಘು ವ್ಯಾಯಾಮ ಮಾಡಿ. ನಂತರ ನಿಧಾನವಾಗಿ ಬೇರೆ ಬೇರೆ ವ್ಯಾಯಾಮ ಮಾಡಿ. ವ್ಯಾಯಾಮದ ವೇಳೆ ಬಿಗಿಯಾದ ಬಟ್ಟೆಗಳನ್ನು ತಪ್ಪಿಸಿ. ದೈಹಿಕ ಚಟುವಟಿಕೆಯ ನಡುವೆ ಆಗಾಗ್ಗ ವಿಶ್ರಾಂತಿ ಪಡೆಯಿರಿ. ವಿಶ್ರಾಂತಿ ವೇಳೆ ನೀರನ್ನು ಕುಡಿಯಿರಿ. (istockphoto)

ಇದಲ್ಲದೇ ನೀವು ಈಗಾಗಲೇ ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್, ಮತ್ತು ಯಾವುದೇ ಹೃದಯ ಸಂಬಂಧಿ ಕಾಯಿಲೆಗಳನ್ನು ಹೊಂದಿದ್ದರೆ ವೈದ್ಯರನ್ನು ಸಂಪರ್ಕಿಸಿ ಚಳಿಗಾಲದ ವ್ಯಾಯಾಮದ ಮುನ್ನೆಚ್ಚರಿಕೆಗಳು ಮತ್ತು ನಿಮ್ಮ ದಿನನಿತ್ಯದ ಚಟುವಟಿಕೆಗಳಲ್ಲಿ ಬದಲಾವಣೆಗೆ ಅವರ ಸಲಹೆ ಪಡೆಯಿರಿ.  
icon

(5 / 5)

ಇದಲ್ಲದೇ ನೀವು ಈಗಾಗಲೇ ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್, ಮತ್ತು ಯಾವುದೇ ಹೃದಯ ಸಂಬಂಧಿ ಕಾಯಿಲೆಗಳನ್ನು ಹೊಂದಿದ್ದರೆ ವೈದ್ಯರನ್ನು ಸಂಪರ್ಕಿಸಿ ಚಳಿಗಾಲದ ವ್ಯಾಯಾಮದ ಮುನ್ನೆಚ್ಚರಿಕೆಗಳು ಮತ್ತು ನಿಮ್ಮ ದಿನನಿತ್ಯದ ಚಟುವಟಿಕೆಗಳಲ್ಲಿ ಬದಲಾವಣೆಗೆ ಅವರ ಸಲಹೆ ಪಡೆಯಿರಿ.  (istockphoto)


ಇತರ ಗ್ಯಾಲರಿಗಳು