ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಭಾರತದ ನೆರೆಯ ನೇಪಾಳದ ನೆರವಿಲ್ಲದೆ ಜಪಾನ್‌ ಕರೆನ್ಸಿ ಪ್ರಿಂಟ್ ಆಗಲ್ಲ, ಹೊಸ ಜಪಾನಿ ಯೆನ್‌ ನೋಟು ಇಂದು ಚಲಾವಣೆಗೆ, 10 ಕುತೂಹಲಕಾರಿ ಅಂಶಗಳು

ಭಾರತದ ನೆರೆಯ ನೇಪಾಳದ ನೆರವಿಲ್ಲದೆ ಜಪಾನ್‌ ಕರೆನ್ಸಿ ಪ್ರಿಂಟ್ ಆಗಲ್ಲ, ಹೊಸ ಜಪಾನಿ ಯೆನ್‌ ನೋಟು ಇಂದು ಚಲಾವಣೆಗೆ, 10 ಕುತೂಹಲಕಾರಿ ಅಂಶಗಳು

ಭಾರತದ ನೆರೆಯ ಪುಟ್ಟ ದೇಶ ನೇಪಾಳದ ನೆರವಿಲ್ಲದೆ ಜಪಾನ್‌ ಕರೆನ್ಸಿ ಪ್ರಿಂಟ್ ಆಗಲ್ಲ, ಹೊಸ ಜಪಾನಿ ಯೆನ್‌ ಕರೆನ್ಸಿಗಳು ಇಂದು ಚಲಾವಣೆಗೆJapan to launch new banknotes on July 3, 1st design change in 20 years 

ಬ್ಯಾಂಕ್ ಆಫ್ ಜಪಾನ್ ಗವರ್ನರ್ ಕಝುವೊ ಉಯೆಡಾ ಅವರು ಟೋಕಿಯೊದಲ್ಲಿರುವ ಬ್ಯಾಂಕ್‌ನ ಪ್ರಧಾನ ಕಚೇರಿಯಲ್ಲಿ ಹೊಸ ಯೆನ್ ನೋಟುಗಳ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.(ಚಿತ್ರ ಶೀರ್ಷಿಕೆ). ಜಪಾನ್‌ನ ಅರ್ಥ ವ್ಯವಸ್ಥೆಯಲ್ಲಿ ನಕಲಿ ನೋಟುಗಳ ಚಲಾವಣೆ ತಡೆಯುವುದಕ್ಕಾಗಿ ಅಲ್ಲಿನ ಸರ್ಕಾರ ಪ್ರತಿ 20 ವರ್ಷಕ್ಕೊಮ್ಮೆ ನೋಟುಗಳ ಬದಲಾವಣೆ ಮಾಡುತ್ತದೆ. ಅದರಂತೆ, ಇಂದು (ಜುಲೈ 3) 1,000 ಯೆನ್, 5,000 ಯೆನ್, 10,000 ಯೆನ್‌ ನೋಟುಗಳನ್ನು ಚಲಾವಣೆಗೆ ಬಿಟ್ಟಿದೆ. ವಿಶೇಷ ಎಂದರೆ ಭಾರತದ ನೆರೆಯ ನೇಪಾಳದ ನೆರವಿಲ್ಲದೆ ಜಪಾನ್‌ ಕರೆನ್ಸಿ ಪ್ರಿಂಟ್ ಆಗಲ್ಲ. 10 ಕುತೂಹಲಕಾರಿ ಅಂಶಗಳು
icon

(1 / 11)

ಬ್ಯಾಂಕ್ ಆಫ್ ಜಪಾನ್ ಗವರ್ನರ್ ಕಝುವೊ ಉಯೆಡಾ ಅವರು ಟೋಕಿಯೊದಲ್ಲಿರುವ ಬ್ಯಾಂಕ್‌ನ ಪ್ರಧಾನ ಕಚೇರಿಯಲ್ಲಿ ಹೊಸ ಯೆನ್ ನೋಟುಗಳ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.(ಚಿತ್ರ ಶೀರ್ಷಿಕೆ). ಜಪಾನ್‌ನ ಅರ್ಥ ವ್ಯವಸ್ಥೆಯಲ್ಲಿ ನಕಲಿ ನೋಟುಗಳ ಚಲಾವಣೆ ತಡೆಯುವುದಕ್ಕಾಗಿ ಅಲ್ಲಿನ ಸರ್ಕಾರ ಪ್ರತಿ 20 ವರ್ಷಕ್ಕೊಮ್ಮೆ ನೋಟುಗಳ ಬದಲಾವಣೆ ಮಾಡುತ್ತದೆ. ಅದರಂತೆ, ಇಂದು (ಜುಲೈ 3) 1,000 ಯೆನ್, 5,000 ಯೆನ್, 10,000 ಯೆನ್‌ ನೋಟುಗಳನ್ನು ಚಲಾವಣೆಗೆ ಬಿಟ್ಟಿದೆ. ವಿಶೇಷ ಎಂದರೆ ಭಾರತದ ನೆರೆಯ ನೇಪಾಳದ ನೆರವಿಲ್ಲದೆ ಜಪಾನ್‌ ಕರೆನ್ಸಿ ಪ್ರಿಂಟ್ ಆಗಲ್ಲ. 10 ಕುತೂಹಲಕಾರಿ ಅಂಶಗಳು(AFP)

ಜಪಾನ್‌ನ ಪ್ರಧಾನ ಮಂತ್ರಿ ಫ್ಯೂಮಿಯೊ ಕಿಶಿಡಾ (ಬಲ ಬದಿಯವರು) ಅವರು ಹೊಸ ಯೆನ್ ಬ್ಯಾಂಕ್‌ನೋಟುಗಳ ವಿತರಣೆ ಸಮಾರಂಭದಲ್ಲಿ ಬ್ಯಾಂಕ್ ಆಫ್ ಜಪಾನ್ ಗವರ್ನರ್ ಕಜುವೊ ಉಯೆಡಾ (ಎಡ ಬದಿಯವರು) ಫೋಟೊಗೆ ಪೋಸ್ ನೀಡಿದರು.(ಚಿತ್ರ ಶೀರ್ಷಿಕೆ). ಜಪಾನ್ ತನ್ನ ನೋಟು ಮುದ್ರಣಕ್ಕೆ ಬೇಕಾದ ಕಚ್ಚಾವಸ್ತುವಿಗಾಗಿ ಭಾರತದ ಪಕ್ಕದ ನೇಪಾಳವನ್ನು ನೆಚ್ಚಿಕೊಂಡಿದೆ. ಜಪಾನಿನ ನೋಟುಗಳನ್ನು ವಿಶೇಷ ಕಾಗದದ ಮೇಲೆ ಮುದ್ರಿಸಲಾಗುತ್ತದೆ, ಅದರ ಹೆಸರು ಮಿಟ್ಸುಮಾಟಾ. ಈ ಕಾಗದ ತಯಾರಿಗೆ ಬೇಕಾದ ಕಚ್ಚಾ ವಸ್ತು ಸಿಗುವುದು ನೇಪಾಳದಲ್ಲಿ.ಆದ್ದರಿಂದಲೇ, ನೇಪಾಳದ ನೆರವು ಇಲ್ಲದೆ ಜಪಾನ್‌ಗೆ ನೋಟು ಮುದ್ರಿಸಲಾಗದು.
icon

(2 / 11)

ಜಪಾನ್‌ನ ಪ್ರಧಾನ ಮಂತ್ರಿ ಫ್ಯೂಮಿಯೊ ಕಿಶಿಡಾ (ಬಲ ಬದಿಯವರು) ಅವರು ಹೊಸ ಯೆನ್ ಬ್ಯಾಂಕ್‌ನೋಟುಗಳ ವಿತರಣೆ ಸಮಾರಂಭದಲ್ಲಿ ಬ್ಯಾಂಕ್ ಆಫ್ ಜಪಾನ್ ಗವರ್ನರ್ ಕಜುವೊ ಉಯೆಡಾ (ಎಡ ಬದಿಯವರು) ಫೋಟೊಗೆ ಪೋಸ್ ನೀಡಿದರು.(ಚಿತ್ರ ಶೀರ್ಷಿಕೆ). ಜಪಾನ್ ತನ್ನ ನೋಟು ಮುದ್ರಣಕ್ಕೆ ಬೇಕಾದ ಕಚ್ಚಾವಸ್ತುವಿಗಾಗಿ ಭಾರತದ ಪಕ್ಕದ ನೇಪಾಳವನ್ನು ನೆಚ್ಚಿಕೊಂಡಿದೆ. ಜಪಾನಿನ ನೋಟುಗಳನ್ನು ವಿಶೇಷ ಕಾಗದದ ಮೇಲೆ ಮುದ್ರಿಸಲಾಗುತ್ತದೆ, ಅದರ ಹೆಸರು ಮಿಟ್ಸುಮಾಟಾ. ಈ ಕಾಗದ ತಯಾರಿಗೆ ಬೇಕಾದ ಕಚ್ಚಾ ವಸ್ತು ಸಿಗುವುದು ನೇಪಾಳದಲ್ಲಿ.ಆದ್ದರಿಂದಲೇ, ನೇಪಾಳದ ನೆರವು ಇಲ್ಲದೆ ಜಪಾನ್‌ಗೆ ನೋಟು ಮುದ್ರಿಸಲಾಗದು.(AFP)

ನೇಪಾಳದ ವಿವಿಧ ವಾಣಿಜ್ಯ ಬೆಳೆಗಳ ಪೈಕಿ ಎಡ್ಜ್ವರ್ಥಿಯಾ ಗಾರ್ಡ್ನೆರಿಯ ಮರ ಪ್ರಮುಖವಾದುದು., ಆಡುಮಾತಿನಲ್ಲಿ ಇದಕ್ಕೆ ಅರ್ಗೆಲಿ ಎಂದು ಹೇಳುತ್ತಾರೆ. ಆರಂಭದಲ್ಲಿ ಈ ಮರವನ್ನು ಬೇಲಿ ಮತ್ತು ಉರುವಲಾಗಿ ಬಳಸಲಾಗುತ್ತಿತ್ತು, ತರುವಾಯ ಇದರ ವಿಶೇಷ ಗುಣಗಳನ್ನು ಪರಿಗಣಿಸಿ, ಬ್ಯಾಂಕ್‌ ನೋಟು, ಪಾಸ್‌ಪೋರ್ಟ್‌, ಸ್ಟೇಷನರಿ ಕಾಗದ ಉತ್ಪಾದನೆಗೆ ಕಚ್ಚಾವಸ್ತುವನ್ನಾಗಿ ಬಳಸಲಾರಂಭಿಸಲಾಗಿದೆ. ಹೀಗಾಗಿ ಇದು ಅಂತಾರಾಷ್ಟ್ರೀಯ ಮಟ್ಟೆದ ಗಮನಸೆಳೆಯಿತು. 
icon

(3 / 11)

ನೇಪಾಳದ ವಿವಿಧ ವಾಣಿಜ್ಯ ಬೆಳೆಗಳ ಪೈಕಿ ಎಡ್ಜ್ವರ್ಥಿಯಾ ಗಾರ್ಡ್ನೆರಿಯ ಮರ ಪ್ರಮುಖವಾದುದು., ಆಡುಮಾತಿನಲ್ಲಿ ಇದಕ್ಕೆ ಅರ್ಗೆಲಿ ಎಂದು ಹೇಳುತ್ತಾರೆ. ಆರಂಭದಲ್ಲಿ ಈ ಮರವನ್ನು ಬೇಲಿ ಮತ್ತು ಉರುವಲಾಗಿ ಬಳಸಲಾಗುತ್ತಿತ್ತು, ತರುವಾಯ ಇದರ ವಿಶೇಷ ಗುಣಗಳನ್ನು ಪರಿಗಣಿಸಿ, ಬ್ಯಾಂಕ್‌ ನೋಟು, ಪಾಸ್‌ಪೋರ್ಟ್‌, ಸ್ಟೇಷನರಿ ಕಾಗದ ಉತ್ಪಾದನೆಗೆ ಕಚ್ಚಾವಸ್ತುವನ್ನಾಗಿ ಬಳಸಲಾರಂಭಿಸಲಾಗಿದೆ. ಹೀಗಾಗಿ ಇದು ಅಂತಾರಾಷ್ಟ್ರೀಯ ಮಟ್ಟೆದ ಗಮನಸೆಳೆಯಿತು. (AFP)

ಜಪಾನ್‌ನ ಸಾಂಪ್ರದಾಯಿಕ ಕಾಗದದ ವಸ್ತುವಾಗಿರುವ ಮಿಟ್ಸುಮಾಟಾಕ್ಕೆ ಅಗತ್ಯ ಕಚ್ಚಾವಸ್ತುವಿನ ಕೊರತೆ ಇದೆ. ನ್ಯೂಯಾರ್ಕ್ ಟೈಮ್ಸ್ (NYT) ನಲ್ಲಿನ ವರದಿಯ ಪ್ರಕಾರ, ಮಧ್ಯಮ ಬಿಸಿಲು ಮತ್ತು ಉತ್ತಮ ಭೂಪ್ರದೇಶದೊಂದಿಗೆ ಹೆಚ್ಚಿನ ಎತ್ತರದಲ್ಲಿ ಬೆಳೆಯುವ ಥೈಮೆಲೇಸಿ ಕುಟುಂಬದ ಸಸ್ಯಗಳಿಂದ ಮರದ ತಿರುಳಿನಿಂದ ಕಾಗದವನ್ನು ತಯಾರಿಸಲಾಗುತ್ತದೆ.
icon

(4 / 11)

ಜಪಾನ್‌ನ ಸಾಂಪ್ರದಾಯಿಕ ಕಾಗದದ ವಸ್ತುವಾಗಿರುವ ಮಿಟ್ಸುಮಾಟಾಕ್ಕೆ ಅಗತ್ಯ ಕಚ್ಚಾವಸ್ತುವಿನ ಕೊರತೆ ಇದೆ. ನ್ಯೂಯಾರ್ಕ್ ಟೈಮ್ಸ್ (NYT) ನಲ್ಲಿನ ವರದಿಯ ಪ್ರಕಾರ, ಮಧ್ಯಮ ಬಿಸಿಲು ಮತ್ತು ಉತ್ತಮ ಭೂಪ್ರದೇಶದೊಂದಿಗೆ ಹೆಚ್ಚಿನ ಎತ್ತರದಲ್ಲಿ ಬೆಳೆಯುವ ಥೈಮೆಲೇಸಿ ಕುಟುಂಬದ ಸಸ್ಯಗಳಿಂದ ಮರದ ತಿರುಳಿನಿಂದ ಕಾಗದವನ್ನು ತಯಾರಿಸಲಾಗುತ್ತದೆ.(AFP)

ಸರ್ಕಾರಕ್ಕೆ ಕಾಗದವನ್ನು ಉತ್ಪಾದಿಸುವ ಜಪಾನ್‌ನ ಪ್ರಮುಖ ಕಾಗದದ ಕಂಪನಿಯಾದ ಕಾನ್ಪೌ ಪರ್ಯಾಯಗಳನ್ನು ಹುಡುಕಿತು. ಮಿಟ್ಸುಮಾತಾ ತನ್ನ ಮೂಲವನ್ನು ಹಿಮಾಲಯದಲ್ಲಿ ಹೊಂದಿದೆ ಎಂದು ತಿಳಿದು ಅದು ನೇಪಾಳ ಕಡೆಗೆ ತಿರುಗಿತು. 2015ರಲ್ಲಿ ನೇಪಾಳದಲ್ಲಿ ಭೂಕಂಪ ಸಂಭವಿಸಿದಾಗ ಅಲ್ಲಿಗೆ ಜಪಾನ್ ತನ್ನ ಪರಿಣತರ ತಂಡವನ್ನು ಕಳುಹಿಸಿತ್ತು. ಅದಾಗಿ, ಅಲ್ಲಿನ ರೈತರಿಗೆ ಸ್ಥಳೀಯವಾಗಿ ಅರ್ಗೆಲಿಯನ್ನು ಹೆಚ್ಚು ಹೆಚ್ಚು ಬೆಳೆಸುವುದಕ್ಕೆ ನೆರವಾಯಿತು. ಒಪ್ಪಂದ ಮಾಡಿಕೊಂಡು ಜಪಾನ್‌ಗೆ ಅದನ್ನು ಆಮದು ಮಾಡಿಕೊಳ್ಳಲಾರಂಭಿಸಿತು.
icon

(5 / 11)

ಸರ್ಕಾರಕ್ಕೆ ಕಾಗದವನ್ನು ಉತ್ಪಾದಿಸುವ ಜಪಾನ್‌ನ ಪ್ರಮುಖ ಕಾಗದದ ಕಂಪನಿಯಾದ ಕಾನ್ಪೌ ಪರ್ಯಾಯಗಳನ್ನು ಹುಡುಕಿತು. ಮಿಟ್ಸುಮಾತಾ ತನ್ನ ಮೂಲವನ್ನು ಹಿಮಾಲಯದಲ್ಲಿ ಹೊಂದಿದೆ ಎಂದು ತಿಳಿದು ಅದು ನೇಪಾಳ ಕಡೆಗೆ ತಿರುಗಿತು. 2015ರಲ್ಲಿ ನೇಪಾಳದಲ್ಲಿ ಭೂಕಂಪ ಸಂಭವಿಸಿದಾಗ ಅಲ್ಲಿಗೆ ಜಪಾನ್ ತನ್ನ ಪರಿಣತರ ತಂಡವನ್ನು ಕಳುಹಿಸಿತ್ತು. ಅದಾಗಿ, ಅಲ್ಲಿನ ರೈತರಿಗೆ ಸ್ಥಳೀಯವಾಗಿ ಅರ್ಗೆಲಿಯನ್ನು ಹೆಚ್ಚು ಹೆಚ್ಚು ಬೆಳೆಸುವುದಕ್ಕೆ ನೆರವಾಯಿತು. ಒಪ್ಪಂದ ಮಾಡಿಕೊಂಡು ಜಪಾನ್‌ಗೆ ಅದನ್ನು ಆಮದು ಮಾಡಿಕೊಳ್ಳಲಾರಂಭಿಸಿತು.(AFP)

ಜಪಾನ್‌ನ ಹೊಸ ವಿನ್ಯಾಸದ 1000, 5000, 10000 ಯೆನ್‌ಗಳ ಬ್ಯಾಂಕ್‌ ನೋಟುಗಳ ಮಾದರಿ.
icon

(6 / 11)

ಜಪಾನ್‌ನ ಹೊಸ ವಿನ್ಯಾಸದ 1000, 5000, 10000 ಯೆನ್‌ಗಳ ಬ್ಯಾಂಕ್‌ ನೋಟುಗಳ ಮಾದರಿ.(Bloomberg)

ಜಪಾನ್‌ನ ಅತ್ಯುನ್ನತ ಪಂಗಡವಾದ 10,000 ಯೆನ್‌ ನೋಟಿನಲ್ಲಿ ವಾಣಿಜ್ಯೋದ್ಯಮಿ ಶಿಬುಸಾವಾ ಐಚಿ ಅವರ ಭಾವಚಿತ್ರ ಇದೆ. ಜಪಾನ್‌ನಲ್ಲಿ "ಬಂಡವಾಳಶಾಹಿಯ ಪಿತಾಮಹ" ಎಂದೇ ಗುರುತಿಸಿಕೊಂಡವರು ಇವರು. 1984 ರಿಂದ ನೋಟಿನಲ್ಲಿದ್ದ ಚಿಂತಕ ಮತ್ತು ಶಿಕ್ಷಣತಜ್ಞ ಫುಕುಜಾವಾ ಯುಕಿಚಿ ಅವರ ಚಿತ್ರ ಹೊಸದರಲ್ಲಿ ಇಲ್ಲ.  
icon

(7 / 11)

ಜಪಾನ್‌ನ ಅತ್ಯುನ್ನತ ಪಂಗಡವಾದ 10,000 ಯೆನ್‌ ನೋಟಿನಲ್ಲಿ ವಾಣಿಜ್ಯೋದ್ಯಮಿ ಶಿಬುಸಾವಾ ಐಚಿ ಅವರ ಭಾವಚಿತ್ರ ಇದೆ. ಜಪಾನ್‌ನಲ್ಲಿ "ಬಂಡವಾಳಶಾಹಿಯ ಪಿತಾಮಹ" ಎಂದೇ ಗುರುತಿಸಿಕೊಂಡವರು ಇವರು. 1984 ರಿಂದ ನೋಟಿನಲ್ಲಿದ್ದ ಚಿಂತಕ ಮತ್ತು ಶಿಕ್ಷಣತಜ್ಞ ಫುಕುಜಾವಾ ಯುಕಿಚಿ ಅವರ ಚಿತ್ರ ಹೊಸದರಲ್ಲಿ ಇಲ್ಲ.  (Bloomberg)

ಅಂತೆಯೇ, 5,000 ಯೆನ್ ಹೊಸ ನೋಟಿನಲ್ಲಿ ಮಹಿಳಾ ಶಿಕ್ಷಣ ಪ್ರತಿಪಾದಕಿ ತ್ಸುಡಾ ಉಮೆಕೊ ಚಿತ್ರವಿದೆ. ಈ ಹಿಂದೆ ಲೇಖಕಿ ಹಿಗುಚಿ ಇಚಿಯೋ ಫೋಟೋ ಇತ್ತು.
icon

(8 / 11)

ಅಂತೆಯೇ, 5,000 ಯೆನ್ ಹೊಸ ನೋಟಿನಲ್ಲಿ ಮಹಿಳಾ ಶಿಕ್ಷಣ ಪ್ರತಿಪಾದಕಿ ತ್ಸುಡಾ ಉಮೆಕೊ ಚಿತ್ರವಿದೆ. ಈ ಹಿಂದೆ ಲೇಖಕಿ ಹಿಗುಚಿ ಇಚಿಯೋ ಫೋಟೋ ಇತ್ತು.(Bloomberg)

1,000 ಯೆನ್‌ ನೋಟಿನಲ್ಲಿ  ವೈದ್ಯಕೀಯ ಸಂಶೋಧಕ ನೊಗುಚಿ ಹಿಡೆಯೊ ಬದಲಿಗೆ ಬ್ಯಾಕ್ಟೀರಿಯಾಲಜಿಸ್ಟ್ ಕಿಟಾಸಾಟೊ ಶಿಬಾಸಬುರೊ ಭಾವಚಿತ್ರ ಛಾಪಿಸಲಾಗಿದೆ.
icon

(9 / 11)

1,000 ಯೆನ್‌ ನೋಟಿನಲ್ಲಿ  ವೈದ್ಯಕೀಯ ಸಂಶೋಧಕ ನೊಗುಚಿ ಹಿಡೆಯೊ ಬದಲಿಗೆ ಬ್ಯಾಕ್ಟೀರಿಯಾಲಜಿಸ್ಟ್ ಕಿಟಾಸಾಟೊ ಶಿಬಾಸಬುರೊ ಭಾವಚಿತ್ರ ಛಾಪಿಸಲಾಗಿದೆ.(Bloomberg)

ಜೂನ್ 19, 2024 ರಂದು ಬುಧವಾರ ಜಪಾನ್‌ನ ಟೋಕಿಯೊದಲ್ಲಿರುವ ನ್ಯಾಷನಲ್ ಪ್ರಿಂಟಿಂಗ್ ಬ್ಯೂರೋ ಟೋಕಿಯೊ ಸ್ಥಾವರದಲ್ಲಿ ಜೋಡಿಸಲಾದ ಲೂಪ್ ಮೂಲಕ ನಕಲಿ ಮಾಡುವುದನ್ನು ತಡೆಗಟ್ಟಲು 3D ಹೊಲೊಗ್ರಾಫಿಕ್ ತಂತ್ರಜ್ಞಾನದೊಂದಿಗೆ ಹೊಸದಾಗಿ ವಿನ್ಯಾಸಗೊಳಿಸಲಾದ ಜಪಾನೀಸ್ 10,000 ಯೆನ್ ಬ್ಯಾಂಕ್‌ನೋಟಿನ ಮಾದರಿ.
icon

(10 / 11)

ಜೂನ್ 19, 2024 ರಂದು ಬುಧವಾರ ಜಪಾನ್‌ನ ಟೋಕಿಯೊದಲ್ಲಿರುವ ನ್ಯಾಷನಲ್ ಪ್ರಿಂಟಿಂಗ್ ಬ್ಯೂರೋ ಟೋಕಿಯೊ ಸ್ಥಾವರದಲ್ಲಿ ಜೋಡಿಸಲಾದ ಲೂಪ್ ಮೂಲಕ ನಕಲಿ ಮಾಡುವುದನ್ನು ತಡೆಗಟ್ಟಲು 3D ಹೊಲೊಗ್ರಾಫಿಕ್ ತಂತ್ರಜ್ಞಾನದೊಂದಿಗೆ ಹೊಸದಾಗಿ ವಿನ್ಯಾಸಗೊಳಿಸಲಾದ ಜಪಾನೀಸ್ 10,000 ಯೆನ್ ಬ್ಯಾಂಕ್‌ನೋಟಿನ ಮಾದರಿ.(Bloomberg)

ಜಪಾನೀಯರು ಇನ್ನೂ ಡಿಜಿಟಲ್ ಪಾವತಿಗೆ ಒಲವು ತೋರಿಸಿಲ್ಲ. ಬಹುತೇಕರು ಇನ್ನೂ ನಗದು ಹಣವನ್ನೇ ಬಳಸುತ್ತಿದ್ದಾರೆ. ಈಗ ಹೊಸ ನೋಟುಗಳು ದೊಡ್ಡ ಮೌಲ್ಯದವು ಆಗಿರುವ ಕಾರಣ, ಡಿಜಿಟಲ್ ಪಾವತಿ ಕಡೆಗೆ ಜಪಾನೀಯರು ಒಲವು ತೋರಿಸಬಹುದು ಎಂಬ ನಂಬಿಕೆ ಅಲ್ಲಿನ ಸರ್ಕಾರದ್ದು.
icon

(11 / 11)

ಜಪಾನೀಯರು ಇನ್ನೂ ಡಿಜಿಟಲ್ ಪಾವತಿಗೆ ಒಲವು ತೋರಿಸಿಲ್ಲ. ಬಹುತೇಕರು ಇನ್ನೂ ನಗದು ಹಣವನ್ನೇ ಬಳಸುತ್ತಿದ್ದಾರೆ. ಈಗ ಹೊಸ ನೋಟುಗಳು ದೊಡ್ಡ ಮೌಲ್ಯದವು ಆಗಿರುವ ಕಾರಣ, ಡಿಜಿಟಲ್ ಪಾವತಿ ಕಡೆಗೆ ಜಪಾನೀಯರು ಒಲವು ತೋರಿಸಬಹುದು ಎಂಬ ನಂಬಿಕೆ ಅಲ್ಲಿನ ಸರ್ಕಾರದ್ದು.(REUTERS)


ಇತರ ಗ್ಯಾಲರಿಗಳು