ಬಾಯಲ್ಲಿ ನೀರೂರಿಸುವ ಸೋಯಾಬಿನ್ ಮಂಚೂರಿಯನ್ ರೆಸಿಪಿ ಮಾಡಿ ನೋಡಿ: ತಯಾರಿಸುವುದು ತುಂಬಾ ಸರಳ, ಇಲ್ಲಿದೆ ಪಾಕವಿಧಾನ
ಕನ್ನಡ ಸುದ್ದಿ  /  ಜೀವನಶೈಲಿ  /  ಬಾಯಲ್ಲಿ ನೀರೂರಿಸುವ ಸೋಯಾಬಿನ್ ಮಂಚೂರಿಯನ್ ರೆಸಿಪಿ ಮಾಡಿ ನೋಡಿ: ತಯಾರಿಸುವುದು ತುಂಬಾ ಸರಳ, ಇಲ್ಲಿದೆ ಪಾಕವಿಧಾನ

ಬಾಯಲ್ಲಿ ನೀರೂರಿಸುವ ಸೋಯಾಬಿನ್ ಮಂಚೂರಿಯನ್ ರೆಸಿಪಿ ಮಾಡಿ ನೋಡಿ: ತಯಾರಿಸುವುದು ತುಂಬಾ ಸರಳ, ಇಲ್ಲಿದೆ ಪಾಕವಿಧಾನ

ಸಂಜೆಯಾದರೆ ಅಂಗಡಿಗಳ ಮುಂದೆ ಪಕೋಡ,ಬಜ್ಜಿ, ಗೋಬಿ ಮಂಚೂರಿ ಇತ್ಯಾದಿ ಕರಿದ ತಿಂಡಿಗಾಗಿ ಜನರು ಸಾಲುಗಟ್ಟಿ ನಿಂತಿರುತ್ತಾರೆ. ಅದರಲ್ಲೂ ಈ ಚಳಿಗಾಲದಲ್ಲಿ ಬಿಸಿಬಿಸಿ ಏನಾದರೂ ತಿನ್ನಲು ಜನರು ಹಾತೊರೆಯುತ್ತಿರುತ್ತಾರೆ. ನಿಮಗೂ ಏನಾದರೂ ತಿನ್ನಬೇಕು ಎಂಬ ಬಯಕೆಯುಂಟಾದರೆ, ಸೋಯಾಬಿನ್ ಮಂಚೂರಿಯನ್ ಮಾಡಿ ನೋಡಿ. ತುಂಬಾ ರುಚಿಕರವಾದ ಈ ರೆಸಿಪಿ ಮಾಡುವುದು ಹೀಗೆ.

ಬಾಯಲ್ಲಿ ನೀರೂರಿಸುವ ಸೋಯಾಬಿನ್ ಮಂಚೂರಿಯನ್ ರೆಸಿಪಿ ಮಾಡುವುದು ಹೀಗೆ
ಬಾಯಲ್ಲಿ ನೀರೂರಿಸುವ ಸೋಯಾಬಿನ್ ಮಂಚೂರಿಯನ್ ರೆಸಿಪಿ ಮಾಡುವುದು ಹೀಗೆ (Youtube)

ಸಂಜೆಯಾದರೆ ಅಂಗಡಿಗಳ ಮುಂದೆ ಪಕೋಡ, ಬಜ್ಜಿ, ಗೋಬಿ ಮಂಚೂರಿ ಇತ್ಯಾದಿ ಕರಿದ ತಿಂಡಿಗಾಗಿ ಜನರು ಸಾಲುಗಟ್ಟಿ ನಿಂತಿರುತ್ತಾರೆ. ಅದರಲ್ಲೂ ಚಳಿಗಾಲದ ಸಂಜೆ ವೇಳೆ ಇಂತಹ ತಿಂಡಿಗಳನ್ನು ತಿನ್ನಲು ಬಹುತೇಕರು ಇಷ್ಟಪಡುತ್ತಾರೆ. ಹೊರಗಡೆ ತಿನ್ನುವುದಕ್ಕಿಂತ ಮನೆಯಲ್ಲಿಯೇ ಏನಾದರೂ ತಯಾರಿಸಿ ತಿನ್ನುವುದು ಎಲ್ಲ ರೀತಿಯಿಂದಲೂ ಆರೋಗ್ಯಕ್ಕೆ ಬಹಳ ಉತ್ತಮ. ಮಾಮೂಲಿ ಬಜ್ಜಿ, ಬೋಂಡಾಗಳನ್ನು ತಿನ್ನುತ್ತಿರುವಿರಿ. ಆದರೆ, ಎಂದಾದರೂ ಸೋಯಾಬಿನ್ ಮಂಚೂರಿಯನ್ ರೆಸಿಪಿಯನ್ನು ಎಂದಾದರೂ ಟ್ರೈ ಮಾಡಿದ್ದೀರಾ. ಇದು ಬಹಳ ರುಚಿಕರವಾಗಿರುತ್ತದೆ. ನೀವು ಗೋಬಿ ಮಂಚೂರಿ, ಬೇಬಿ ಕಾರ್ನ್, ಪನ್ನೀರ್ ಮಂಚೂರಿಯನ್ ತಿಂದಿರಬಹುದು. ಒಮ್ಮೆ ಸೋಯಾಬಿನ್ ಮಂಚೂರಿಯನ್ ತಿಂದು ನೋಡಿ. ಖಂಡಿತ ಇಷ್ಟಪಡುವಿರಿ, ಇದನ್ನು ಮಾಡುವುದು ಬಹಳ ಸುಲಭ. ಮಾರುಕಟ್ಟೆಯಲ್ಲಿ ಕೂಡ ಸೋಯಾಬಿನ್ ಸಿಗುತ್ತದೆ. ಈ ರೆಸಿಪಿ ತಯಾರಿಸುವುದು ಹೇಗೆ ಅನ್ನೋದು ಇಲ್ಲಿದೆ.

ಸೋಯಾಬಿನ್ ಮಂಚೂರಿಯನ್ ಮಾಡುವ ವಿಧಾನ ಇಲ್ಲಿದೆ

ಬೇಕಾಗುವ ಪದಾರ್ಥಗಳು: ಸೋಯಾಬಿನ್- ಎರಡು ಕಪ್, ನೀರು- ಬೇಕಾದಷ್ಟು, ಉಪ್ಪು ರುಚಿಗೆ ತಕ್ಕಷ್ಟು, ಶುಂಠಿ-ಬೆಳ್ಳುಳ್ಳಿ ಪೇಸ್ಟ್- 1 ಟೀ ಚಮಚ, ಶೆಜ್ವಾನ್ ಸಾಸ್- 1 ಟೀ ಚಮಚ, ಸೋಯಾ ಸಾಸ್- 1 ಟೀ ಚಮಚ, ಮೈದಾ ಹಿಟ್ಟು- 2 ಟೀ ಚಮಚ, ಕಾರ್ನ್ (ಜೋಳ) ಹಿಟ್ಟು- 3 ಟೀ ಚಮಚ, ಎಣ್ಣೆ- ಕರಿಯಲು, ಬೆಳ್ಳುಳ್ಳಿ ಎಸಳು- ಮೂರು, ಮೆಣಸಿನಕಾಯಿ- 3, ಕತ್ತರಿಸಿದ ಈರುಳ್ಳಿ- 1, ಟೊಮೆಟೊ ಸಾಸ್- 2 ಟೀ ಚಮಚ, ವಿನೆಗರ್- 1 ಟೀ ಚಮಚ, ಕಾಳುಮೆಣಸಿನ ಪುಡಿ- ಅರ್ಧ ಟೀ ಚಮಚ, ಕೊತ್ತಂಬರಿ ಪುಡಿ- ಒಂದು ಟೀ ಚಮಚ.

ಮಾಡುವ ವಿಧಾನ: ದೊಡ್ಡ ಗಾತ್ರದ ಸೋಯಾಬಿನ್ ಮಾರುಕಟ್ಟೆಯಲ್ಲಿ ಹೇರಳವಾಗಿ ಲಭ್ಯವಿದೆ. ಇವುಗಳನ್ನು ಸೋಯಾ ಚಂಕ್ಸ್ ಎಂದೂ ಕರೆಯುತ್ತಾರೆ. ಇವು ಸೋಯಾ ಹಿಟ್ಟಿನಿಂದ ತಯಾರಿಸಿದ ಉತ್ಪನ್ನಗಳಾಗಿವೆ.

- ಇವುಗಳನ್ನು ತೆಗೆದುಕೊಂಡು ಒಂದು ಪಾತ್ರೆಯಲ್ಲಿ ಹಾಕಿ. ಅದಕ್ಕೆ ನೀರು ಸೇರಿಸಿ ಸ್ಟೌವ್ ಮೇಲಿಟ್ಟು ಕುದಿಸಿ.

- ಐದು ನಿಮಿಷಗಳಲ್ಲಿ ಅವನ್ನು ಮೃದುವಾಗಿ ಬೇಯಿಸಿ. ನಂತರ ಇದನ್ನು ಬಿಸಿ ನೀರಿನಿಂದ ತೆಗೆದು ತಣ್ಣೀರಿನಲ್ಲಿ ಹಾಕಿ.

- ನಂತರ ಇವನ್ನು ಹೊರತೆಗೆಯಿರಿ. ನೀರನ್ನು ಹಿಂಡಿ ಹೊರತೆಗೆದು ಬೇರೆ ಪಾತ್ರೆಯಲ್ಲಿ ಹಾಕಿಡಿ.

- ಈಗ ಅದೇ ಪಾತ್ರೆಯಲ್ಲಿ ರುಚಿಗೆ ತಕ್ಕಷ್ಟು ಉಪ್ಪು, ಮೈದಾ ಹಿಟ್ಟು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಒಂದು ಚಮಚ ಶೆಜ್ವಾನ್ ಸಾಸ್, ಕಾರ್ನ್ ಫ್ಲೋರ್ ಹಾಕಿ ಚೆನ್ನಾಗಿ ಕಲಸಿ.

- ಸ್ಟೌವ್ ಮೇಲೆ ಬಾಣಲೆಯಿಟ್ಟು, ಆಳವಾಗಿ ಹುರಿಯಲು ಸಾಕಷ್ಟು ಎಣ್ಣೆಯನ್ನು ಸೇರಿಸಿ.

- ನಂತರ ಸೋಯಾಬಿನ್ ಅನ್ನು ಎಣ್ಣೆಯಲ್ಲಿ ಕರಿದು ಪಕ್ಕಕ್ಕೆ ಇಡಿ.

- ಈಗ ಇನ್ನೊಂದು ಬಾಣಲೆಯನ್ನು ಸ್ಟೌವ್ ಮೇಲೆ ಇಟ್ಟು ಒಂದು ಚಮಚ ಎಣ್ಣೆಯನ್ನು ಹಾಕಿ.

- ಎಣ್ಣೆಗೆ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ, ಅದನ್ನು ಫ್ರೈ ಮಾಡಿ.

- ಹಸಿಮೆಣಸಿನಕಾಯಿ ಪೇಸ್ಟ್ ಮತ್ತು ಈರುಳ್ಳಿ ಪೇಸ್ಟ್ ಸೇರಿಸಿ, ಫ್ರೈ ಮಾಡಿ.

- ಸ್ವಲ್ಪ ಉಪ್ಪು, ಅರ್ಧ ಚಮಚ ಕಾಳುಮೆಣಸಿನ ಪುಡಿ, ಒಂದು ಚಮಚ ಶೆಜ್ವಾನ್ ಸಾಸ್, ಎರಡು ಚಮಚ ಟೊಮೆಟೊ ಕೆಚಪ್, ಒಂದು ಚಮಚ ಸೋಯಾ ಸಾಸ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

- ಜತೆಗೆ ವಿನೆಗರ್ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ.

- ಈಗ ಒಂದು ಚಮಚ ಕಾರ್ನ್ ಫ್ಲೋರ್ ಅನ್ನು ಸಣ್ಣ ಬಟ್ಟಲಿನಲ್ಲಿ ಹಾಕಿ ಅರ್ಧ ಕಪ್ ನೀರು ಸೇರಿಸಿ ಚೆನ್ನಾಗಿ ಬೆರೆಸಿ. ಅದನ್ನು ಮಿಶ್ರಣಕ್ಕೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.

- ಮಿಶ್ರಣವನ್ನು ಚೆನ್ನಾಗಿ ಕಲಸಿದ ನಂತರ ಅದಕ್ಕೆ ಫ್ರೈ ಅಥವಾ ಕರಿದ ಸೋಯಾಬಿನ್ ಅನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

- ಇದರ ಮೇಲೆ ಕೊತ್ತಂಬರಿ ಸೊಪ್ಪನ್ನು ಹಾಕಿದರೆ ರುಚಿಕರವಾದ ಸೋಯಾಬಿನ್ ಮಂಚೂರಿಯನ್ ಸವಿಯಲು ಸಿದ್ಧ.

ಹೊರಗಡೆ ಹೋದಾಗ ಬಹುತೇಕರು ಗೋಬಿ ಮಂಚೂರಿಯನ್ ತಿನ್ನುತ್ತಾರೆ. ಸೋಯಾ ಮಂಚೂರಿಯನ್ ಅನ್ನು ಒಮ್ಮೆ ತಿಂದು ನೋಡಿ. ತುಂಬಾ ರುಚಿಕರವಾಗಿರುತ್ತದೆ ಈ ರೆಸಿಪಿ. ಆದರೆ, ಇದನ್ನು ಹೊರಗೆ ತಿನ್ನುವುದಕ್ಕಿಂತ ಮನೆಯಲ್ಲಿ ತಿನ್ನುವುದು ಆರೋಗ್ಯಕರ. ಇಲ್ಲಿ ಮೇಲೆ ತಿಳಿಸಿದ ರೆಸಿಪಿಯನ್ನು ಮಾಡಿ ನೋಡಿ, ಖಂಡಿತಾ ನಿಮಗೆ ಇಷ್ಟವಾಗಬಹುದು.

Whats_app_banner