ಕನ್ನಡ ಸುದ್ದಿ  /  ಕ್ರೀಡೆ  /  ಎಐಎಫ್‌ಎಫ್ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಶಾಜಿ ಪ್ರಭಾಕರನ್ ವಜಾ; ಕಾರಣ ಹೀಗಿದೆ

ಎಐಎಫ್‌ಎಫ್ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಶಾಜಿ ಪ್ರಭಾಕರನ್ ವಜಾ; ಕಾರಣ ಹೀಗಿದೆ

ಎಐಎಫ್‌ಎಫ್ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಶಾಜಿ ಪ್ರಭಾಕರನ್ ಅವರನ್ನು ವಜಾಗೊಳಿಸಲಾಗಿದೆ.

ಎಐಎಫ್‌ಎಫ್ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಶಾಜಿ ಪ್ರಭಾಕರನ್ ವಜಾ
ಎಐಎಫ್‌ಎಫ್ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಶಾಜಿ ಪ್ರಭಾಕರನ್ ವಜಾ (Twitter)

ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್ (AIFF) ಪ್ರಧಾನ ಕಾರ್ಯದರ್ಶಿ ಶಾಜಿ ಪ್ರಭಾಕರನ್ (Shaji Prabhakaran) ಅವರನ್ನು ಅವರ ಸ್ಥಾನದಿಂದ ವಜಾಗೊಳಿಸಲಾಗಿದೆ. ವಿಶ್ವಾಸಾರ್ಹ ಕೊರತೆಯ ಕಾರಣದಿಂದ ಈ ಮಹತ್ವದ ಕ್ರಮ ಕೈಗೊಳ್ಳಲಾಗಿದೆ ಎಂದು ಉನ್ನತ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

2022ರ ಸೆಪ್ಟೆಂಬರ್ 3ರಂದು ಎಐಎಫ್‌ಎಫ್ ಕಾರ್ಯದರ್ಶಿಯಾಗಿ ಪ್ರಭಾಕರನ್ ನೇಮಕವಾಗಿದ್ದರು. ಎಐಎಫ್‌ಎಫ್ ಅಧ್ಯಕ್ಷ ಕಲ್ಯಾಣ್ ಚೌಬೆ ಅವರು ಪ್ರಭಾಕರನ್ ಅವರಿಗೆ ಮಂಗಳವಾರ ಕರ್ತವ್ಯ ಅವಧಿ ಮುಕ್ತಾಯ ಪತ್ರ ನೀಡಿದ್ದಾರೆ.

ಉಪಾಧ್ಯಕ್ಷ ಎನ್ಎ ಹ್ಯಾರಿಸ್ ಹೇಳಿದ್ದೇನು?

“ಎಐಎಫ್ಎಫ್ ಅಧ್ಯಕ್ಷರು ಪ್ರಭಾಕರನ್ ಅವರನ್ನು ವಜಾಗೊಳಿಸಿದ್ದಾರೆ. ಇನ್ನು ಮುಂದೆ ಅವರು ಎಐಎಫ್ಎಫ್ ಪ್ರಧಾನ ಕಾರ್ಯದರ್ಶಿಯಾಗಿ ಮುಂದುವರಿಯುತ್ತಿಲ್ಲ. ಹೀಗಾಗಿ ಉಪ ಕಾರ್ಯದರ್ಶಿ ಸತ್ಯನಾರಾಯಣ ಎಂ ಅವರು ಹಂಗಾಮಿ ಪ್ರಧಾನ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ” ಎಂದು ಎಐಎಫ್ಎಫ್ ಉಪಾಧ್ಯಕ್ಷ ಎನ್ಎ ಹ್ಯಾರಿಸ್ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ವಿಶ್ವಾಸದ ಕೊರತೆ

ಚೌಬೆ ಮತ್ತು ಪ್ರಭಾಕರನ್ ನಡುವೆ ವಿಶ್ವಾಸದ ಕೊರತೆ ಉಂಟಾಗಿತ್ತು. ಅಲ್ಲದೆ ವಾಜಗೊಂಡಿರುವ ಪ್ರಧಾನ ಕಾರ್ಯದರ್ಶಿಯ ಕೆಲಸದಿಂದ ಎಐಎಫ್‌ಎಫ್ ಕಾರ್ಯಕಾರಿ ಸಮಿತಿಯ ಸದಸ್ಯರು ಕೂಡಾ ಅಸಮಾಧಾನಗೊಂಡಿದ್ದರು ಎಂದು ಹ್ಯಾರಿಸ್ ಹೇಳಿದ್ದಾರೆ.

ಗುರುವಾರ ದೆಹಲಿಯಲ್ಲಿ ಕಾರ್ಯಕಾರಿ ಸಮಿತಿಯ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಮಹತ್ವದ ಬೆಳವಣಿಗೆಯ ಬಗ್ಗೆ ಅಧಿಕೃತವಾಗಿ ತಿಳಿಸುವ ನಿರೀಕ್ಷೆಯಿದೆ. ಅಧ್ಯಕ್ಷರ ನಿರ್ಧಾರವನ್ನು ಎಐಎಫ್‌ಎಫ್ ಕಾರ್ಯಕಾರಿ ಸಮಿತಿ ಅಂಗೀಕರಿಸುವ ಅಗತ್ಯವಿಲ್ಲ ಎಂದು ಹ್ಯಾರಿಸ್ ಹೇಳಿದ್ದಾರೆ.

“ಕಾರ್ಯದರ್ಶಿ ಹುದ್ದೆಯನ್ನು ಕಾರ್ಯಕಾರಿ ಸಮಿತಿಯು ನೇಮಕ ಮಾಡಿಲ್ಲ. ಪ್ರಧಾನ ಕಾರ್ಯದರ್ಶಿಯನ್ನು ನೇಮಿಸುವ ಮತ್ತು ತೆಗೆದುಹಾಕುವ ಅಧಿಕಾರ ಅಧ್ಯಕ್ಷರಿಗೆ ಇದೆ,” ಎಂದು ಅವರು ತಿಳಿಸಿದ್ದಾರೆ.