ಕನ್ನಡ ಸುದ್ದಿ  /  Sports  /  Asia Cup Live Streaming: 132 Countries To Live Broadcast Asia Cup Cricket

Asia Cup 2022: 132 ದೇಶಗಳಲ್ಲಿ ಇಂಡಿಯಾ- ಪಾಕ್‌ ಪಂದ್ಯದ ನೇರಪ್ರಸಾರ; ಭಾರತದಲ್ಲಿ ಯಾವ ಚಾನೆಲ್‌ನಲ್ಲಿ ಲೈವ್‌ ಸ್ಟ್ರೀಮ್?

ಏಷ್ಯಾ ಕಪ್ 2022 ಟಿ20 ಕ್ರಿಕೆಟ್ ಟೂರ್ನಿ ಆರಂಭವಾಗಲು ಕೇವಲ ಮೂರು ದಿನಗಳು ಮಾತ್ರ ಬಾಕಿ ಉಳಿದಿವೆ. ದಾಖಲೆಯ ಏಳು ಬಾರಿಯ ಚಾಂಪಿಯನ್ ಭಾರತವು ಆಗಸ್ಟ್ 28 ರಂದು ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದೊಂದಿಗೆ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ.

132 ದೇಶಗಳಲ್ಲಿ ಇಂಡಿಯಾ- ಪಾಕ್‌ ಪಂದ್ಯದ ನೇರಪ್ರಸಾರ; ಭಾರತದಲ್ಲಿ ಯಾವ ಚಾನೆಲ್‌ನಲ್ಲಿ ಲೈವ್‌ ಸ್ಟ್ರೀಮ್?
132 ದೇಶಗಳಲ್ಲಿ ಇಂಡಿಯಾ- ಪಾಕ್‌ ಪಂದ್ಯದ ನೇರಪ್ರಸಾರ; ಭಾರತದಲ್ಲಿ ಯಾವ ಚಾನೆಲ್‌ನಲ್ಲಿ ಲೈವ್‌ ಸ್ಟ್ರೀಮ್?

ದುಬೈ: ಏಷ್ಯಾ ಕಪ್ 2022 ಟಿ20 ಕ್ರಿಕೆಟ್ ಟೂರ್ನಿ ಆರಂಭವಾಗಲು ಕೇವಲ ಮೂರು ದಿನಗಳು ಮಾತ್ರ ಬಾಕಿ ಉಳಿದಿವೆ. ದಾಖಲೆಯ ಏಳು ಬಾರಿಯ ಚಾಂಪಿಯನ್ ಭಾರತವು ಆಗಸ್ಟ್ 28 ರಂದು ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದೊಂದಿಗೆ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ಹೀಗಿರುವಾಗಲೇ ಏಷ್ಯಾಕಪ್‌ನ ಪಂದ್ಯಗಳ ಲೈವ್‌ ವೀಕ್ಷಣೆ ಯಾವ ಚಾನೆಲ್‌ನಲ್ಲಿ ಎಂಬ ಬಗ್ಗೆಯೂ ಹಲವು ಗೊಂದಲವಿದೆ. ಆ ಪ್ರಶ್ನೆಗೀಗ ಉತ್ತರ ಇಲ್ಲಿದೆ.

132 ದೇಶಗಳಲ್ಲಿ ನೇರ ಪ್ರಸಾರ

ಭಾರತ- ಪಾಕಿಸ್ತಾನ ಪಂದ್ಯ ಸೇರಿ ಏಷ್ಯಾ ಕಪ್ 2022ರ ಎಲ್ಲ ಪಂದ್ಯಗಳು ಈ ಸಲ 132 ದೇಶಗಳಲ್ಲಿ ನೇರ ಪ್ರಸಾರವಾಗಲಿದೆ. ಭಾರತದಲ್ಲಿ ಸ್ಟಾರ್ ಸ್ಪೋರ್ಟ್ಸ್ ಮತ್ತು ಡಿಡಿ ಸ್ಪೋರ್ಟ್ಸ್ ಟೂರ್ನಿಯ ನೇರ ಪ್ರಸಾರ ಮಾಡಲಿದೆ. ಇದಲ್ಲದೆ, ಭಾರತದಲ್ಲಿ ಭಾರತ ಮತ್ತು ಪಾಕಿಸ್ತಾನ ಪಂದ್ಯವನ್ನು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿಯೂ ನೇರ ಪ್ರಸಾರನು ಸಹ ವೀಕ್ಷಿಸಬಹುದು. ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಏಷ್ಯಾ ಕಪ್ ಲೈವ್ ಬ್ರಾಡ್‌ಕಾಸ್ಟ್‌ನ ಮುಖ್ಯ ಪ್ರಸಾರಕ ವಾಹಿನಿಯಾಗಿದೆ. ಇನ್ನುಳಿದಂತೆ ಬೇರೆ ಬೇರೆ ದೇಶಗಳಲ್ಲಿಯೂ ಹಲವು ವಾಹಿನಿಗಳಲ್ಲಿ ಈ ಟೂರ್ನಿಯ ನೇರಪ್ರಸಾರವಾಗಲಿದೆ.

ಏಷ್ಯಾ ಕಪ್ 2022 ಪಂದ್ಯಗಳನ್ನು ಪ್ರಸಾರ ಮಾಡುವ ದೇಶಗಳು ಮತ್ತು ಟಿವಿ ಚಾನೆಲ್‌ಗಳು

ಭಾರತ: ಸ್ಟಾರ್ ಸ್ಪೋರ್ಟ್ಸ್, ಡಿಸ್ನಿ+ಹಾಟ್‌ಸ್ಟಾರ್, ಡಿಡಿ ಸ್ಪೋರ್ಟ್ಸ್

ಪಾಕಿಸ್ತಾನ: PTV ಸ್ಪೋರ್ಟ್ಸ್, ಟೆನ್ ಸ್ಪೋರ್ಟ್ಸ್, Daraz ಮತ್ತು Tapmadi ನಲ್ಲಿ ಲೈವ್ ಸ್ಟ್ರೀಮಿಂಗ್

ಬಾಂಗ್ಲಾದೇಶ: Ghazi TV (GTV)

ಆಸ್ಟ್ರೇಲಿಯಾ: ಫಾಕ್ಸ್ ಸ್ಪೋರ್ಟ್ಸ್

ನ್ಯೂಜಿಲೆಂಡ್: ಸ್ಕೈ ಸ್ಪೋರ್ಟ್ಸ್

ದಕ್ಷಿಣ ಆಫ್ರಿಕಾ: ಸೂಪರ್‌ಸ್ಪೋರ್ಟ್ ನೆಟ್‌ವರ್ಕ್

USA, ಕೆನಡಾ, ಉತ್ತರ ಅಮೆರಿಕಾ: ವಿಲೋ ಟಿವಿ

ಯುಕೆ: ಸ್ಕೈ ಸ್ಪೋರ್ಟ್ಸ್ ನೆಟ್‌ವರ್ಕ್

ಅಫ್ಘಾನಿಸ್ತಾನ: ಅರಿಯಾನಾ ಟಿವಿ

ಪಾಕ್ ವಿರುದ್ಧದ ಆ ಸೋಲನ್ನ ನೆನಪಿಸಿಕೊಂಡ್ರೆ ಇವತ್ತಿಗೂ ನಿದ್ದೆ ಬರಲ್ಲ - ಕಪಿಲ್ ದೇವ್

ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕಿಸ್ತಾನ ಪಂದ್ಯ ಎಂದರೆ ಸಾಕು ಇಡೀ ಜಗತ್ತೇ ಕಾತುರದಿಂದ ಕಾಯುತ್ತೆ. ಆದರೆ ಎರಡೂ ದೇಶಗಳ ರಾಜಕೀಯ ಕಾರಣಗಳಿಂದಾಗಿ ದ್ವಿಪಕ್ಷೀಯ ಸರಣಿಗಳು ನಡೆಯುತ್ತಿಲ್ಲ, ಆದರೆ ಒಮ್ಮೆ ಎರಡು ತಂಡಗಳ ನಡುವೆ ಅನೇಕ ಏಕದಿನ ಮತ್ತು ಟೆಸ್ಟ್ ಸರಣಿಗಳು ನಡೆದಿವೆ.

ಪ್ರಸ್ತುತ ಐಸಿಸಿ ಟೂರ್ನಿಯಾಗಿರುವ ಏಷ್ಯಾ ಕಪ್ ನಲ್ಲಿ ಎರಡು ತಂಡಗಳು ಮುಖಾಮುಖಿಯಾಗಲಿವೆ. ಎರಡೂ ತಂಡಗಳ ಮುಖಾಮುಖಿ ಗೆಲುವನ್ನು ನೋಡಿದರೆ ಪಾಕಿಸ್ತಾನ ಮುನ್ನಡೆಯಲ್ಲಿದೆ. ಪಾಕಿಸ್ತಾನದ ವಿರುದ್ಧ ಭಾರತದ ಸೋಲುಗಳಲ್ಲಿ ಪ್ರಮುಖವಾದದ್ದು1986 ರಲ್ಲಿ ನಡೆದಿದ್ದ ಪಂದ್ಯ. ಆ ಪಂದ್ಯವನ್ನು ಗೆಲ್ಲಲು ಪಾಕಿಸ್ತಾನಕ್ಕೆ ಕೊನೆಯ ಎಸೆತದಲ್ಲಿ 4 ರನ್‌ಗಳ ಅಗತ್ಯವಿತ್ತು. ಮಿಯಾಂದಾದ್ ಸಿಕ್ಸರ್‌ನೊಂದಿಗೆ ತಮ್ಮ ತಂಡವನ್ನು ಗೆಲ್ಲಿಸುತ್ತಾರೆ. ಇದರಿಂದಾಗಿ ಭಾರತೀಯ ಅಭಿಮಾನಿಗಳು ತೀವ್ರ ನಿರಾಸೆ ಅನುಭವಿಸಿದ್ದರು. ಆ ಪಂದ್ಯವನ್ನು ಅಂದಿನ ಟೀಂ ಇಂಡಿಯಾದ ನಾಯಕರಾಗಿದ್ದ ಕಪಿಲ್ ದೇವ್ ನೆನಪಿಸಿಕೊಂಡಿದ್ದಾರೆ. ಪಾಕಿಸ್ತಾನದ ಮಾಜಿ ವಾಸಿಂ ಅಕ್ರಮ್ ಅವರೊಂದಿಗಿನ ಮುಖಾಮುಖಿ ಯಲ್ಲಿ ಹಳೆಯ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಅಂದಿನ ಸೋಲು ಮುಂದಿನ ನಾಲ್ಕು ವರ್ಷಗಳ ಭಾರತೀಯ ಆಟಗಾರರ ಆತ್ಮವಿಶ್ವಾಸವನ್ನು ಕುಗ್ಗಿಸಿತ್ತು ಎಂದು ಹೇಳಿದ್ದಾರೆ.

ಅಂತಿಮ ಓವರ್‌ನಲ್ಲಿ ಪಾಕ್ ಗೆಲುವಿಗೆ 12 ಅಥವಾ 13 ರನ್‌ಗಳ ಅಗತ್ಯವಿತ್ತು. ಆ ದಿನಗಳಲ್ಲಿ ಆ ಗುರಿಯನ್ನು ಸಾಧಿಸುವುದು ತುಂಬಾ ಕಷ್ಟಕರವಾಗಿತ್ತು. ಕೆಲವೊಮ್ಮೆ ಅದು ಅಸಾಧ್ಯವೆಂದು ತೋರುತ್ತಿತ್ತು. ನಾವು ಚೇತನ್ ಶರ್ಮಾಗೆ ಬೌಲ್ ಮಾಡುವಂತೆ ಬಾಲ್ ಅನ್ನು ಕೊಟ್ಟೆವು. ಪಂದ್ಯ ಸೋತ್ತಿದ್ದಕ್ಕೆ ಈತನ ತಪ್ಪು ಅಲ್ಲ ಎಂದು ನಾನು ಇನ್ನೂ ಭಾವಿಸುತ್ತೇನೆ. ಕೊನೆಯ ಎಸೆತದಲ್ಲಿ ನಾಲ್ಕು ರನ್‌ಗಳ ಅಗತ್ಯವಿತ್ತು.

ನಾವು ಅದನ್ನು ತಪ್ಪಿಸಿಕೊಂಡರೆ, ಇನ್ನೊಂದು ಪರ್ಯಾಯ ಮಾರ್ಗವನ್ನು ಕೊಂಡುಕೊಂಡಿದ್ದೆವು. ಆದರೆ ಚೆಂಡು ಫುಲ್ ಟಾಸ್ ಆಗಿತ್ತು. ಮಿಯಾಂದಾದ್ ಚೆಂಡನ್ನು ಸಿಕ್ಸರ್ ಎತ್ತಿದರು. ಇಂದು ಆ ಘಟನೆಯನ್ನು ನೆನಪಿಸಿಕೊಂಡರೆ ನಮಗೆ ಸುಖ ನಿದ್ರೆ ಬರುವುದಿಲ್ಲ. ಆ ವೈಫಲ್ಯ ನಮ್ಮನ್ನು ನಾಲ್ಕು ವರ್ಷಗಳ ಕಾಲ ಕಾಡುತ್ತಿತ್ತು. ನಾಲ್ಕು ವರ್ಷಗಳ ಕಾಲ ನಮ್ಮ ಆತ್ಮವಿಶ್ವಾಸವೇ ಕುಸಿದಿತ್ತು ಎಂದು ಕಪಿಲ್ ದೇವ್ ಹಿಂದಿನ ವಿರೋಚಿತ ಸೋಲಿನ ಘಟನೆಯನ್ನು ಸ್ಮರಿಸಿಕೊಂಡಿದ್ದಾರೆ.