Kannada News  /  Sports  /  Asian Games 2023 India Mens Hockey Team Departs To Hangzhou China Full Schedule Of Hockey News In Kannada Jra

ಚೀನಾಗೆ ಹಾರಿದ ಭಾರತ ಹಾಕಿ ತಂಡ; ಏಷ್ಯನ್ ಗೇಮ್ಸ್ ಸಂಪೂರ್ಣ ವೇಳಾಪಟ್ಟಿ, ಲೈವ್‌ ಸ್ಟ್ರೀಮಿಂಗ್‌ ವಿವರ ಹೀಗಿದೆ

ಭಾರತ ಹಾಕಿ ತಂಡ
ಭಾರತ ಹಾಕಿ ತಂಡ (Hockey India)
Jayaraj • HT Kannada
Sep 19, 2023 08:14 PM IST

Asian Games: ಭಾರತ ಹಾಕಿ ತಂಡವು ಪಾಕಿಸ್ತಾನ, ಜಪಾನ್, ಬಾಂಗ್ಲಾದೇಶ, ಸಿಂಗಾಪುರ ಮತ್ತು ಉಜ್ಬೇಕಿಸ್ತಾನ್ ಜೊತೆಗೆ 'ಪೂಲ್ ಎ'ನಲ್ಲಿ ಸ್ಥಾನ ಪಡೆದಿದೆ. ಮತ್ತೊಂದೆಡೆ ಕೊರಿಯಾ, ಮಲೇಷ್ಯಾ, ಚೀನಾ, ಓಮನ್, ಥೈಲ್ಯಾಂಡ್ ಮತ್ತು ಇಂಡೋನೇಷ್ಯಾ ತಂಡಗಳು 'ಪೂಲ್ ಬಿ'ಯಲ್ಲಿ ಸ್ಥಾನ ಪಡೆದಿವೆ.

ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ (Asian Games Hangzhou 202) ಪಾಲ್ಗೊಳ್ಳಲು ಭಾರತೀಯ ಪುರುಷರ ಹಾಕಿ ತಂಡವು (Indian men's hockey team) ಮಂಗಳವಾರ ಚೀನಾಗೆ ಹಾರಿದೆ. ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ 19ನೇ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತ ಹಾಕಿ ತಂಡವು ಸೆಪ್ಟೆಂಬರ್ 24ರಂದು ತನ್ನ ಅಭಿಯಾನ ಆರಂಭಿಸಲಿದೆ. ಮೊದಲ ಪಂದ್ಯದಲ್ಲಿ ಉಜ್ಬೇಕಿಸ್ತಾನ್ ವಿರುದ್ಧ ಸೆಣಸಲಿದೆ.

ಟ್ರೆಂಡಿಂಗ್​ ಸುದ್ದಿ

ಭಾರತ ಹಾಕಿ ತಂಡವು ಪಾಕಿಸ್ತಾನ, ಜಪಾನ್, ಬಾಂಗ್ಲಾದೇಶ, ಸಿಂಗಾಪುರ ಮತ್ತು ಉಜ್ಬೇಕಿಸ್ತಾನ್ ಜೊತೆಗೆ 'ಪೂಲ್ ಎ'ನಲ್ಲಿ ಸ್ಥಾನ ಪಡೆದಿದೆ. ಮತ್ತೊಂದೆಡೆ ಕೊರಿಯಾ, ಮಲೇಷ್ಯಾ, ಚೀನಾ, ಓಮನ್, ಥೈಲ್ಯಾಂಡ್ ಮತ್ತು ಇಂಡೋನೇಷ್ಯಾ ತಂಡಗಳು 'ಪೂಲ್ ಬಿ'ಯಲ್ಲಿ ಸ್ಥಾನ ಪಡೆದಿವೆ.

ಡಿಫೆಂಡರ್ ಹರ್ಮನ್‌ಪ್ರೀತ್ ಸಿಂಗ್‌ ಮತ್ತೊಮ್ಮೆ ಭಾರತ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಪಡೆದಿದ್ದಾರೆ. ಇದೇ ವೇಳೆ ಹಾರ್ದಿಕ್ ಉಪನಾಯಕನಾಗಿ ಆಯ್ಕೆಯಾಗಿದ್ದಾರೆ. ಭಾರತವು ಸೆಪ್ಟೆಂಬರ್ 24ರಂದು ಉಜ್ಬೇಕಿಸ್ತಾನವನ್ನು ಎದುರಿಸಲಿದೆ. ಆ ಬಳಿಕ ಸೆಪ್ಟೆಂಬರ್ 26, 28 ಮತ್ತು 30 ರಂದು ಕ್ರಮವಾಗಿ ಸಿಂಗಾಪುರ, ಜಪಾನ್ ಮತ್ತು ಪಾಕಿಸ್ತಾನವನ್ನು ಎದುರಿಸಲಿದೆ. ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಅಕ್ಟೋಬರ್ 2ರಂದು ಕಣಕ್ಕಿಳಿಯಲಿದೆ.

ಪ್ರತಿ ಪೂಲ್‌ನಿಂದ ಅಗ್ರ ಎರಡು ತಂಡಗಳು ನೇರವಾಗಿ ಸೆಮಿಫೈನಲ್‌ಗೆ ಅರ್ಹತೆ ಪಡೆಯುತ್ತವೆ.

ಭಾರತ ಪುರುಷರ ಹಾಕಿ ತಂಡದ ವೇಳಾಪಟ್ಟಿ ಹೀಗಿದೆ

  • 24ನೇ ಸೆಪ್ಟೆಂಬರ್ 2023: ಭಾರತ Vs ಉಜ್ಬೇಕಿಸ್ತಾನ್, ಬೆಳಗ್ಗೆ 08: 45
  • 26ನೇ ಸೆಪ್ಟೆಂಬರ್ 2023 : ಭಾರತ Vs ಸಿಂಗಾಪುರ, ಬೆಳಗ್ಗೆ 06:30 ಗಂಟೆ
  • 28ನೇ ಸೆಪ್ಟೆಂಬರ್ 2023 : ಭಾರತ Vs ಜಪಾನ್, ಸಂಜೆ 6:15 ಗಂಟೆ
  • 30ನೇ ಸೆಪ್ಟೆಂಬರ್ 2023 : ಭಾರತ Vs ಪಾಕಿಸ್ತಾನ, ಸಂಜೆ 6:15 ಗಂಟೆ
  • 2ನೇ ಅಕ್ಟೋಬರ್ 2023 : ಭಾರತ Vs ಬಾಂಗ್ಲಾದೇಶ, ಮಧ್ಯಾಹ್ನ 1:15 ಗಂಟೆ
  • 4 ಅಕ್ಟೋಬರ್ 2023 : ಸೆಮಿಫೈನಲ್, ಮಧ್ಯಾಹ್ನ 1.30 ಗಂಟೆ
  • 6 ಅಕ್ಟೋಬರ್ 2023 : ಕಂಚಿನ ಪದಕ ಪಂದ್ಯ, ಮಧ್ಯಾಹ್ನ 1.30 ಗಂಟೆ
  • 6 ಅಕ್ಟೋಬರ್ 2023 : ಚಿನ್ನದ ಪದಕ ಪಂದ್ಯ : ಸಂಜೆ 4.00 ಗಂಟೆ

ಲೈವ್‌ ಸ್ಟ್ರೀಮಿಂಗ್‌ ವಿವರ

ಸೋನಿ ಲೈವ್ ಆ್ಯಪ್ ಅಥವಾ ವೆಬ್‌ಸೈಟ್‌ನಲ್ಲಿ ಹಾಕಿ ಪಂದ್ಯಗಳ ಲೈವ್ ಸ್ಟ್ರೀಮಿಂಗ್ ವೀಕ್ಷಿಸಬಹುದು. ಲೈವ್ ಟೆಲಿಕಾಸ್ಟ್ ಸೋನಿ ಸ್ಪೋರ್ಟ್ಸ್ ಟೆನ್ 2, 3, 4, 5 SH/HD ಚಾನೆಲ್‌ಗಳಲ್ಲಿ ಲಭ್ಯವಿರುತ್ತದೆ.

ಭಾರತ ಪುರುಷರ ಹಾಕಿ ತಂಡ

ಪಿಆರ್ ಶ್ರೀಜೇಶ್, ಕ್ರಿಶನ್ ಪಾಠಕ್, ವರುಣ್ ಕುಮಾರ್, ಅಮಿತ್ ರೋಹಿದಾಸ್, ಜರ್ಮನ್‌ಪ್ರೀತ್ ಸಿಂಗ್, ಹರ್ಮನ್‌ಪ್ರೀತ್ ಸಿಂಗ್ (ನಾಯಕ), ಸಂಜಯ್, ಸುಮಿತ್, ನೀಲಕಂಠ ಶರ್ಮಾ, ಹಾರ್ದಿಕ್ ಸಿಂಗ್ (ಉಪನಾಯಕ), ಮನ್‌ಪ್ರೀತ್ ಸಿಂಗ್, ವಿವೇಕ್ ಸಾಗರ್ ಪ್ರಸಾದ್, ಶಂಶೇರ್ ಸಿಂಗ್, ಅಭಿಷೇಕ್ , ಗುರ್ಜಂತ್ ಸಿಂಗ್, ಮನದೀಪ್ ಸಿಂಗ್, ಸುಖಜೀತ್ ಸಿಂಗ್ ಮತ್ತು ಲಲಿತ್ ಕುಮಾರ್ ಉಪಾಧ್ಯಾಯ.