Asian Games 2023: ಏಷ್ಯನ್ ಗೇಮ್ಸ್ ಶೂಟಿಂಗ್‌ನಲ್ಲಿ ಭಾರತಕ್ಕೆ ಮತ್ತೆ 2 ಬಂಗಾರ; 10 ಮೀಟರ್ ಏರ್ ಪಿಸ್ತೂಲ್, 50 ಮೀಟರ್ ರೈಫಲ್‌ನಲ್ಲಿ ಚಿನ್ನ
ಏಷ್ಯನ್ ಗೇಮ್ಸ್‌ನಲ್ಲಿ ಇಂದು ನಡೆದ 10 ಮೀಟರ್ ಏರ್ ಪಿಸ್ತೂಲ್ ಮಹಿಳೆಯರ ವಿಭಾಗದಲ್ಲಿ ಭಾರತದ ಪಲಾಕ್ ಅವರು ಚಿನ್ನದ ಪದಕ ಗೆದ್ದಿದ್ದಾರೆ. ಇದೇ ವಿಭಾಗದಲ್ಲಿ ಭಾರತದ ಇಶಾ ಸಿಂಗ್ ಬೆಳ್ಳಿ ಪದಕ ಗೆದ್ದರೆ ಪಾಕಿಸ್ತಾದ ಕಿಶ್ಮಲಾ ತಲಾತ್ ಅವರು ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ 19ನೇ ಆವೃತ್ತಿಯ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳ ಪದಕಗಳ ಬೇಟೆ ಮುಂದುವರೆದಿದ್ದು, ಇಂದು (ಸೆಪ್ಟೆಂಬರ್ 29, ಶುಕ್ರವಾರ) 10 ಮೀಟರ್ ಏರ್ ಪಿಸ್ತೂಲ್ ಮಹಿಳಾ ವಿಭಾಗದಲ್ಲಿ ಪಲಾಕ್ ಅವರು ಚಿನ್ನದ ಪದಕ ಗೆದ್ದಿದ್ದಾರೆ. ಇದೇ ವಿಭಾಗದಲ್ಲಿ ಭಾರತದ ಇಶಾ ಸಿಂಗ್ ಬೆಳ್ಳಿ ಪದಕ ಗೆದ್ದುಕೊಂಡರೆ ಪಾಕಿಸ್ತಾದ ಕಿಶ್ಮಲಾ ತಲಾತ್ ಅವರು ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
50 ಮೀಟರ್ ರೈಫಲ್ 3ಪಿ ಪುರುಷರ ವಿಭಾಗದಲ್ಲಿ ಭಾರತ ಮೊದಲ ಸ್ಥಾನದೊಂದಿಗೆ ಬಂಗಾರದ ಪದಕ ಗೆದ್ದುಕೊಂಡಿದೆ. ಐಶ್ವರಿ ಪ್ರತಾಪ್ ಸಿಂಗ್ ತೋರ್ (2ನೇ), ಸ್ವಪ್ನಿಲ್ ಸುರೇಶ್ ಕುಸಾಲೆ (1ನೇ) ಹಾಗೂ ಅಖಿಲ್ ಶೆರಾನ್ (5ನೇ) ಅವರು 50 ಮೀಟರ್ ಏರ್ ರೈಫಲ್ ಪಿ3 ಪುರುಷರ ವಿಭಾಗದ ಫೈನಲ್‌ನಲ್ಲಿ ಅರ್ಹತೆ ಪಡೆದುಕೊಂಡರು.
ಮತ್ತೊಂದೆಡೆ ಟೆನಿಸ್ ಪುರುಷರ ಡಬಲ್ಸ್‌ನಲ್ಲಿ ಸಾಕೇತ್ ಮೈನೇನಿ, ರಾಮ್‌ಕುಮಾರ್ ರಾಮನಾಥ್ನ್ ಬೆಳ್ಳಿ ಪದಕ ಗೆದ್ದಿದ್ದಾರೆ. ಮಹಿಳೆಯರ 50 ಮೀಟರ್ ಬಟರ್‌ಫ್ಲೈ ಹಿಯರ್ಸ್‌ನಲ್ಲಿ ನೀನಾ ವೆಂಕಟೇಶ್ 14ನೇ ಸ್ಥಾನ ಪಡೆದು ಅರ್ಹತೆ ಪಡೆಯುವಲ್ಲಿ ವಿಫಲರಾಗಿದ್ದಾರೆ. ಇಂದಿನ ಪದಕಗಳೊಂದಿಗೆ ಭಾರತ ಒಟ್ಟು ಪದಕಗಳ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದೆ.