ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ಗೆ ಅರ್ಹತೆ ಪಡೆದ, ಅರ್ಹತೆ ಪಡೆಯದ ತಂಡಗಳಿವು; ಟೂರ್ನಿಗೆ ವಿಂಗಡಿಸಿದ ಗುಂಪುಗಳೆಷ್ಟು?
ಕನ್ನಡ ಸುದ್ದಿ  /  ಕ್ರಿಕೆಟ್  /  ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ಗೆ ಅರ್ಹತೆ ಪಡೆದ, ಅರ್ಹತೆ ಪಡೆಯದ ತಂಡಗಳಿವು; ಟೂರ್ನಿಗೆ ವಿಂಗಡಿಸಿದ ಗುಂಪುಗಳೆಷ್ಟು?

ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ಗೆ ಅರ್ಹತೆ ಪಡೆದ, ಅರ್ಹತೆ ಪಡೆಯದ ತಂಡಗಳಿವು; ಟೂರ್ನಿಗೆ ವಿಂಗಡಿಸಿದ ಗುಂಪುಗಳೆಷ್ಟು?

ICC Champions Trophy 2025: 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಯಾವೆಲ್ಲಾ ತಂಡಗಳು ಅರ್ಹತೆ ಪಡೆದಿವೆ, ಯಾವೆಲ್ಲಾ ತಂಡಗಳು ಅರ್ಹತೆ ಪಡೆದಿಲ್ಲ? ಟೂರ್ನಿಗೆ ವಿಂಗಡಿಸಿದ ಗುಂಪುಗಳೆಷ್ಟು? ಈ ಎಲ್ಲದರ ವಿವರ ಇಂತಿದೆ.

ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆದ, ಅರ್ಹತೆ ಪಡೆಯದ ತಂಡಗಳಿವು; ಟೂರ್ನಿಗೆ ವಿಂಗಡಿಸಿದ ಗುಂಪುಗಳೆಷ್ಟು?
ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆದ, ಅರ್ಹತೆ ಪಡೆಯದ ತಂಡಗಳಿವು; ಟೂರ್ನಿಗೆ ವಿಂಗಡಿಸಿದ ಗುಂಪುಗಳೆಷ್ಟು?

ಮುಂದಿನ ವರ್ಷ ಫೆಬ್ರವರಿಯಲ್ಲಿ ನಡೆಯಲಿರುವ ಬಹುನಿರೀಕ್ಷಿತ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಆತಿಥ್ಯ ವಹಿಸುತ್ತಿರುವ ಪಾಕಿಸ್ತಾನ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ನೆರೆಯ ದೇಶಕ್ಕೆ ಪ್ರಯಾಣಿಸಲು ಒಪ್ಪದ ಕಾರಣಕ್ಕೆ ಭಾರತ ತಂಡದ ಪಂದ್ಯಗಳನ್ನು ದುಬೈನಲ್ಲಿ ಆಯೋಜಿಸಲು ಐಸಿಸಿ ಅಂತಿಮ ನಿರ್ಧಾರ ಕೈಗೊಂಡಿದೆ. ಈ ಮೆಗಾ ಟೂರ್ನಿಯಲ್ಲಿ ಒಟ್ಟು 8 ತಂಡಗಳ ನಡುವೆ ಪೈಪೋಟಿ ನಡೆಯಲಿದೆ. ಏಕದಿನ ವಿಶ್ವಕಪ್ ಲೀಗ್​ನ ಅಂತಿಮ ಅಂಕಪಟ್ಟಿಯಲ್ಲಿ ಅಗ್ರ-8 ತಂಡಗಳು ಚಾಂಪಿಯನ್ಸ್​ ಟ್ರೋಫಿಗೆ ಅರ್ಹತೆ ಪಡೆದುಕೊಂಡಿವೆ.

ಅರ್ಹತೆ ಪಡೆದಿರುವ 8 ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಣೆ ಮಾಡಲಾಗಿದೆ. ಫೆಬ್ರವರಿ 19ರಿಂದ ಟೂರ್ನಿಯು ಆರಂಭವಾಗಲಿದ್ದು, ಮಾರ್ಚ್​ 9ರ ತನಕ ನಡೆಯಲಿದೆ. ಒಂದು ಮಾರ್ಚ್​ 9ರಂದು ಜರುಗುವ ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದರೆ ಅಥವಾ ತುರ್ತು ಕಾರಣಗಳಿಗೆ ಪಂದ್ಯ ರದ್ದಾದರೆ ಆ ಪಂದ್ಯವನ್ನು ಮೀಸಲು ದಿನ ಮಾರ್ಚ್​ 10ರಂದು ನಡೆಸಲು ಐಸಿಸಿ ತೀರ್ಮಾನಿಸಿದೆ. ಭಾರತ ತಂಡ ಸೇರಿ ಟೂರ್ನಿಯಲ್ಲಿ ಆಡುವ ಎಲ್ಲಾ ತಂಡಗಳು ಲೀಗ್​​ ಹಂತದಲ್ಲಿ ತಲಾ 3 ಪಂದ್ಯಗಳನ್ನು ಆಡಲಿವೆ. ಎರಡು ಸೆಮಿಫೈನಲ್ ಮತ್ತು ಒಂದು ಫೈನಲ್ ಇರಲಿದೆ.

ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆದಿರುವ ತಂಡಗಳು

2023ರ ಏಕದಿನ ವಿಶ್ವಕಪ್ ಟೂರ್ನಿಯ ಲೀಗ್​ ಹಂತದಲ್ಲಿ ಅಗ್ರ 8 ಸ್ಥಾನ ಪಡೆದ ತಂಡಗಳು ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಗಳಿಸಿವೆ. ಒಂದು ವೇಳೆ ಆತಿಥ್ಯ ವಹಿಸುವ ದೇಶವು ಅಗ್ರ-8ರಿಂದ ಹೊರಗಿದ್ದರೂ ಆ ತಂಡಕ್ಕೆ ಆಡಲು ಅವಕಾಶ ಸಿಗುತ್ತಿತ್ತು. 2017ರಲ್ಲಿ ಕೊನೆಯದಾಗಿ ನಡೆದ ಈ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದ ಪಾಕಿಸ್ತಾನ ಆತಿಥ್ಯ ವಹಿಸುತ್ತಿದೆ. ಪಾಕ್ ಜೊತೆಗೆ, ಭಾರತ, ಆಸ್ಟ್ರೇಲಿಯಾ, ಸೌತ್ ಆಫ್ರಿಕಾ, ನ್ಯೂಜಿಲೆಂಡ್, ಅಫ್ಘಾನಿಸ್ತಾನ, ಇಂಗ್ಲೆಂಡ್, ಬಾಂಗ್ಲಾದೇಶ ತಂಡಗಳು ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯಲ್ಲಿ ಕಣಕ್ಕಿಳಿಯಲಿವೆ.

ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆಯದ ತಂಡಗಳು

2023ರ ಏಕದಿನ ವಿಶ್ವಕಪ್​ನಲ್ಲಿ ಪಾಲ್ಗೊಂಡಿದ್ದ 10 ತಂಡಗಳ ಪೈಕಿ ಅಂಕಪಟ್ಟಿಯಲ್ಲಿ 8 ಸ್ಥಾನ ಪಡೆದ ತಂಡಗಳು ಚಾಂಪಿಯನ್ಸ್​ ಟ್ರೋಫಿ ಆಡಲು ಸಜ್ಜಾಗಿವೆ. ಆದರೆ 9 ಮತ್ತು 10ನೇ ಗಳಿಸಿದ ತಂಡಗಳು ಅರ್ಹತೆ ಪಡೆಯಲು ವಿಫಲವಾಗಿವೆ. ಶ್ರೀಲಂಕಾ 9ನೇ ಸ್ಥಾನ, ನೆದರ್ಲೆಂಡ್ಸ್ 10ನೇ ಸ್ಥಾನ ಪಡೆದಿತ್ತು. ಇವುಗಳ ಜತೆಗೆ ವಿಶ್ವಕಪ್​ ಟೂರ್ನಿಗೇ ಅರ್ಹತೆಯನ್ನೇ ಪಡೆಯದ ವೆಸ್ಟ್​ ಇಂಡೀಸ್​, ಜಿಂಬಾಬ್ವೆ, ಐರ್ಲೆಂಟ್, ಸ್ಕಾಟ್ಲೆಂಡ್ ಐಸಿಸಿ ಚಾಂಪಿಯನ್ಸ್ ಟ್ರೋಫಿ ಆಡಲು ಅವಕಾಶ ಪಡೆದುಕೊಂಡಿಲ್ಲ.

ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಗುಂಪುಗಳು

ಎ ಗುಂಪು: ಪಾಕಿಸ್ತಾನ, ನ್ಯೂಜಿಲೆಂಡ್, ಭಾರತ, ಬಾಂಗ್ಲಾದೇಶ

ಬಿ ಗುಂಪು: ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ

ಪಾಕಿಸ್ತಾನ ಮತ್ತು ಭಾರತ ತಂಡಗಳು ಒಂದೇ ಗುಂಪಿನಲ್ಲಿರುವುದು ವಿಶೇಷವಾಗಿದೆ. 2017ರ ಫೈನಲ್​ನಲ್ಲಿ ಈ ಎರಡು ಪಂದ್ಯಗಳು ಸೆಣಸಾಟ ನಡೆಸಿದ್ದವು. ಆದರೆ ಅಂದು ಪಾಕ್ ಗೆದ್ದು ಟ್ರೋಫಿಗೆ ಮುತ್ತಿಕ್ಕಿತ್ತು. ಆಯಾ ಗುಂಪಿನ ಅಂಕಪಟ್ಟಿಯಲ್ಲಿ ಲೀಗ್​ ಮುಕ್ತಾಯದ ನಂತರ ಅಗ್ರ ಎರಡು ಸ್ಥಾನ ಪಡೆದ ತಂಡಗಳು ಸೆಮಿಫೈನಲ್​ಗೆ ಅರ್ಹತೆ ಪಡೆದುಕೊಳ್ಳಲಿವೆ. ಇನ್ನು ಭಾರತ ಪಂದ್ಯಗಳು ದುಬೈನಲ್ಲಿ ಆಡಲಿವೆ. ಆದರೆ ಉಳಿದ ಪಂದ್ಯಗಳು ಪಾಕಿಸ್ತಾನದ ಲಾಹೋರ್​, ಕರಾಚಿ ಮತ್ತು ರಾವಲ್ಪಿಂಡಿ ಕ್ರಿಕೆಟ್ ಮೈದಾನಗಳಲ್ಲಿ ನಡೆಯಲಿವೆ.

ಭಾರತದ ಪಂದ್ಯಗಳು ಯಾವಾಗ?

ಫೆಬ್ರವರಿ 20, 2025 - ಬಾಂಗ್ಲಾದೇಶ vs ಭಾರತ (ಮಧ್ಯಾಹ್ನ 2:30, ದುಬೈ)

ಫೆಬ್ರವರಿ 23, 2025 - ಪಾಕಿಸ್ತಾನ vs ಭಾರತ (ಮಧ್ಯಾಹ್ನ 2:30, ದುಬೈ)

ಮಾರ್ಚ್ 2, 2025 - ನ್ಯೂಜಿಲೆಂಡ್ vs ಭಾರತ (ಮಧ್ಯಾಹ್ನ 2:30, ದುಬೈ)

Whats_app_banner