ತಂದೆಯನ್ನು ಕಳೆದುಕೊಂಡ ತಿಂಗಳ ನಂತರ ಮಗನೂ ಸಾವು; ಮೆಕ್ಸಿಕೋದ WWE ಸೂಪರ್ ಸ್ಟಾರ್ ರೇ ಮಿಸ್ಟರಿಯೊ ಸೀನಿಯರ್ ನಿಧನ
Rey Mysterio death: ತನ್ನ ತಂದೆ ರಾಬರ್ಟೊ ಗುಟೆರೆಜ್ ಅವರನ್ನು ಕಳೆದುಕೊಂಡ ತಿಂಗಳ ಬಳಿಕ ಡಬ್ಲ್ಯುಡಬ್ಲ್ಯುಇ ಸ್ಟಾರ್ ರೇ ಮಿಸ್ಟರಿಯೊ ಸಿನಿಯರ್ ಅವರು ಡಿಸೆಂಬರ್ 20ರಂದು ನಿಧನ ಹೊಂದಿದ್ದಾರೆ.
ನವದೆಹಲಿ: ಲೆಜೆಂಡರಿ ಮೆಕ್ಸಿಕನ್ ವೃತ್ತಿಪರ ಕುಸ್ತಿಪಟು, ತರಬೇತುದಾರ ರೇ ಮಿಸ್ಟೆರಿಯೊ ಸೀನಿಯರ್ ತಮ್ಮ 66ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಇವರು ಡಬ್ಲ್ಯುಡಬ್ಲ್ಯುಇ ಹಾಲ್ ಫೇಮರ್ ರೇ ಮಿಸ್ಟೆರಿಯೊ ಸೀನಿಯರ್ ಅವರು ಸೂಪರ್ ಸ್ಟಾರ್ ಡೊಮಿನಿಕ್ ಮಿಸ್ಟೆರಿಯೊ ಜೂನಿಯರ್ ಅವರ ಚಿಕ್ಕಪ್ಪ. ಕುಸ್ತಿಪಟು ಕಳೆದ ತಿಂಗಳು (ನವೆಂಬರ್ 17) ತನ್ನ ತಂದೆ ರಾಬರ್ಟೊ ಗುಟೆರೆಜ್ರನ್ನು ಕಳೆದುಕೊಂಡಿದ್ದರು. ಇದೀಗ ತಿಂಗಳೊಳಗೆ ಮತ್ತೊಂದು ಸಾವು ಸಂಭವಿಸಿದೆ.
2024ರ ಡಿಸೆಂಬರ್ 20ರಂದು ಅವರ ಕುಟುಂಬ ಇದನ್ನು ದೃಢಪಡಿಸಿದೆ. ಈ ದುಃಖದ ಸುದ್ದಿಯನ್ನು ಕುಟುಂಬವು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ನಲ್ಲಿ ಹಂಚಿಕೊಂಡಿದೆ. ಮೆಕ್ಸಿಕನ್ ಕುಸ್ತಿಪಟುವಿನ ನಿಜವಾದ ಹೆಸರು ಮಿಗುಯೆಲ್ ಏಂಜೆಲ್ ಲೋಪೆಜ್ ಡಯಾಸ್. ಲುಚಾ ಲಿಬ್ರೆ ಎಎಎ ಅವರ ಅಧಿಕೃತ ಏಕ್ಸ್ ಹ್ಯಾಂಡಲ್‌ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದು, ಕುಟುಂಬಕ್ಕೆ ಸಂತಾಪ ಸೂಚಿಸಿದೆ. ವರ್ಲ್ಡ್ ರೆಸ್ಲಿಂಗ್ ಫೆಡರೇಶನ್ ಮತ್ತು ಲುಚಾ ಲಿಬ್ರೆ ಎಎಎ ವಿಶ್ವದ ರೆಸ್ಲಿಂಗ್ ಸಂಸ್ಥೆಗಳು. ಇಲ್ಲಿ ಅವರು ಪ್ರಶಸ್ತಿ ಗೆದ್ದಿದ್ದರು.
2009ರಲ್ಲಿ ಕುಸ್ತಿಗೆ ವಿದಾಯ ಹೇಳಿದ್ದ ರೇ ಮಿಸ್ಟೀರಿಯೊ ಸೀನಿಯರ್
ರೇ ಮಿಸ್ಟೀರಿಯೊ ಸೀನಿಯರ್ ಎತ್ತರದಲ್ಲಿ ಕಡಿಮೆ ಇದ್ದರೂ ತುಂಬಾ ಪ್ರಬಲ ಪೈಪೋಟಿ ನೀಡುತ್ತಿದ್ದರು. ರಿಂಗ್‌ನಲ್ಲಿ ದಿಗ್ಗಜರಿಗೆ ಪೈಪೋಟಿ ನೀಡುತ್ತಿರುವುದನ್ನು ನೋಡಿದರೆ ಎಲ್ಲರಿಗೂ ದಂಗುಬಡಿಸುತ್ತಿತ್ತು. ರೇ ಮಿಸ್ಟೀರಿಯೊ ಸೀನಿಯರ್ ಸೋಲಿಸುವುದು ಅನುಭವಿಗಳಿಗೂ ಸುಲಭವಾಗಿರಲಿಲ್ಲ. ಏಕೆಂದರೆ ಅವರ ಹೋರಾಟದ ತಂತ್ರವು ತುಂಬಾ ಉತ್ತಮವಾಗಿತ್ತು. ಆದಾಗ್ಯೂ, 2009 ರಲ್ಲಿ ಅವರು 51 ನೇ ವಯಸ್ಸಿನಲ್ಲಿ WWEಗೆ ಅಧಿಕೃತ ವಿದಾಯ ಹೇಳಿದ್ದರು. ಅವರ ನಂತರ ಸೋದರಳಿಯ ರೇ ಮಿಸ್ಟೀರಿಯೊ ಜೂನಿಯರ್ WWEನಲ್ಲಿ ತನ್ನ ಪರಂಪರೆ ಮುಂದುವರೆಸಿದರು.
ವಿಶ್ವ ಕುಸ್ತಿ ಅಸೋಸಿಯೇಷನ್ ಸೇರಿದಂತೆ ಅನೇಕ ಮೆಕ್ಸಿಕನ್ ಪ್ರಚಾರಗಳಲ್ಲಿ ಭಾಗವಹಿಸಿದ್ದ ರೇ ಮಿಸ್ಟೆರಿಯೊ ಸೀನಿಯರ್, 1976ರಲ್ಲಿ ರೆಸ್ಲಿಂಗ್ಗೆ ಪದಾರ್ಪಣೆ ಮಾಡಿದ್ದರು. ಬಳಿಕ ಪ್ರೊ ಕುಸ್ತಿ ಕ್ರಾಂತಿ, ಟಿಜುವಾನಾ ಕುಸ್ತಿ ಮತ್ತು ವಿಶ್ವ ಕುಸ್ತಿ ಸಂಘ (WWA) ನಂತಹ ಸಂಘಗಳ ಪರ ಕಣಕ್ಕಿಳಿದು ಚಾಂಪಿಯನ್ ಆಗಿದ್ದರು. ಒಂದು ಸಲ ಡಬ್ಲ್ಯುಡಬ್ಲ್ಯೂಎ ವಿಶ್ವ ಜೂನಿಯರ್ ಲೈಟ್ ಹೆವಿವೇಯ್ಟ್ ಚಾಂಪಿಯನ್ಶಿಪ್ ಗೆದ್ದಿದ್ದ ಅವರು, ಡಬ್ಲ್ಯುಡಬ್ಲ್ಯೂಎ ಟ್ಯಾಗ್ ಟೀಮ್ ಚಾಂಪಿಯನ್ಶಿಪ್ ಸಹ ಜಯಿಸಿದ್ದರು. ಡಬ್ಲ್ಯುಡಬ್ಲ್ಯುಇ ಕ್ಷೇತ್ರಕ್ಕೆ ಅವರ ಕೊಡುಗೆ ಅನನ್ಯವಾದದ್ದು.
ತಂದೆಯ ಸಾವಿನ ಬಗ್ಗೆ ರೇ ಮಿಸ್ಟರಿಯೊ ಏನು ಹೇಳಿದ್ರು?
‘ನಾಲ್ಕು ಗಂಡು ಮಕ್ಕಳ ತಂದೆಯನ್ನು ಹೇಗೆ ಪ್ರೀತಿಸಬೇಕು ಮತ್ತು ಕಾಪಾಡಿಕೊಳ್ಳಬೇಕು ಎಂಬುದಕ್ಕೆ ನೀವು ಉದಾಹರಣೆ ನೀಡುವುದಕ್ಕಿಂತ ಹೆಚ್ಚಿನದನ್ನು ಮಾಡಿದ್ದೀರಿ; ನೀವು ಮಾದರಿಯಾಗಿದ್ದಿರಿ. ಮತ್ತು ನಿಮ್ಮ ಸಾವಿನವರೆಗೂ ಪ್ರತಿ ಕ್ಷಣದವರೆಗೂ ಪ್ರತಿ ಬಾರಿ ಸಹ ಉತ್ತೀರ್ಣರಾಗಿದ್ದೀರಿ. ಅತ್ಯುತ್ತಮ ಪತಿ, ಪ್ರೀತಿಯ ತಂದೆ, ಸುಂದರವಾದ ಅಜ್ಜ, ಮಗ, ಸಹೋದರ ಮತ್ತು ಅದ್ಭುತ ಮಾವ’ ಎಂದು ರೇ ಮಿಸ್ಟರಿಯೊ ನವೆಂಬರ್ 17ರಂದು ನಿಧನರಾಗಿದ್ದ ತಮ್ಮ ತಂದೆಯ ಕುರಿತು ಇನ್ಸ್ಟಾಗ್ರಾಂನಲ್ಲಿ ಬರೆದಿದ್ದರು.
‘ನೀವು ಜೀವನದ ಪ್ರತಿಯೊಂದು ಪಟ್ಟಿಯನ್ನೂ ಪರಿಶೀಲಿಸಿದ್ದೀರಿ. ನಾನು ನಿಮ್ಮಿಂದ ಪಡೆದ ನನ್ನ ಬಹುಪಾಲು ಅಂಶಗಳನ್ನು ಪ್ರಾಮಾಣಿಕ ಎಂದೇ ಹೇಳಬಹುದು. ನೀವು ಕೊನೆಯ ಕ್ಷಣದವರೆಗೂ ಹೋರಾಡಿದ್ದೀರಿ ಮತ್ತು ನಿಮ್ಮ ಅತಿದೊಡ್ಡ ಭಯವೆಂದರೆ ತಾಯಿಯನ್ನು ಬಿಟ್ಟು ಹೋಗುವುದು ಎಂದು ನನಗೆ ತಿಳಿದಿದೆ. ಆದರೆ ಆಕೆಯನ್ನು ಒಬ್ಬಂಟಿಯಾಗಿರಲು ಬಿಡುವುದಿಲ್ಲ ಎಂದು ನಾನು ನಿಮಗೆ ಭರವಸೆ ನೀಡಬಲ್ಲೆ. ನಾವು ಯಾವಾಗಲೂ ಚೆನ್ನಾಗಿ ನೋಡಿಕೊಳ್ಳುತ್ತೇವೆ. ನಿಮ್ಮನ್ನು ಎಂದಿಗೂ ಮರೆಯಲ್ಲ ಮತ್ತು ಯಾವಾಗಲೂ ಪ್ರೀತಿಸಲಾಗುತ್ತದೆ' ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದರು.