2025ರ ಶುಭಾಶಯಗಳು: ಈ ಬಂಧ ಇನ್ನಷ್ಟು ಗಟ್ಟಿಯಾಗಲಿ, ಹೊಸ ವರ್ಷಕ್ಕೆ ನಿಮ್ಮ ಪ್ರೀತಿಯ ಅಣ್ಣ-ತಮ್ಮನಿಗೆ ಈ ರೀತಿ ಶುಭ ಕೋರಿ
ಕನ್ನಡ ಸುದ್ದಿ  /  ಜೀವನಶೈಲಿ  /  2025ರ ಶುಭಾಶಯಗಳು: ಈ ಬಂಧ ಇನ್ನಷ್ಟು ಗಟ್ಟಿಯಾಗಲಿ, ಹೊಸ ವರ್ಷಕ್ಕೆ ನಿಮ್ಮ ಪ್ರೀತಿಯ ಅಣ್ಣ-ತಮ್ಮನಿಗೆ ಈ ರೀತಿ ಶುಭ ಕೋರಿ

2025ರ ಶುಭಾಶಯಗಳು: ಈ ಬಂಧ ಇನ್ನಷ್ಟು ಗಟ್ಟಿಯಾಗಲಿ, ಹೊಸ ವರ್ಷಕ್ಕೆ ನಿಮ್ಮ ಪ್ರೀತಿಯ ಅಣ್ಣ-ತಮ್ಮನಿಗೆ ಈ ರೀತಿ ಶುಭ ಕೋರಿ

New Year 2025 Wishes: ಯಾವುದೇ ಶುಭ ಸಮಾರಂಭ ಇರಲಿ, ಖುಷಿಯ ವಿಚಾರವಾಗಲಿ ಆತ್ಮೀಯರಿಗೆ ಅಭಿನಂದನೆ ಸಲ್ಲಿಸುವುದು, ಶುಭಾಶಯ ಕೋರುವುದು ಸಾಮಾನ್ಯ. ಹೊಸ ವರ್ಷ ಬರುತ್ತಿದೆ. ನೀವು ನಿಮ್ಮ ಅಣ್ಣ-ತಮ್ಮಂದಿರಿಗೆ ಶುಭಾಶಯ ಕೋರಬೇಕು ಎಂದುಕೊಂಡಲ್ಲಿ ಇಲ್ಲಿ ಕೆಲವು ಸುಂದರ ಸಾಲುಗಳಿವೆ.

ನಿಮ್ಮ ಪ್ರೀತಿಯ ಸಹೋದರಿಯರಿಗೆ ಹೊಸ ವರ್ಷದ ಶುಭಾಶಯಗಳನ್ನು ಹೀಗೆ ಕೋರಿ
ನಿಮ್ಮ ಪ್ರೀತಿಯ ಸಹೋದರಿಯರಿಗೆ ಹೊಸ ವರ್ಷದ ಶುಭಾಶಯಗಳನ್ನು ಹೀಗೆ ಕೋರಿ ( PC: Canva)

2025ರ ಶುಭಾಶಯಗಳು: ದಿನಗಳು ಕಳೆಯುತ್ತಿವೆ, ವರ್ಷಗಳು ಉರುಳುತ್ತಿವೆ. ಮೊನ್ನೆ ಮೊನ್ನೆಯಷ್ಟೇ 2024ನ್ನು ಸ್ವಾಗತಿಸಿದ್ದೇವೆ ಎನಿಸುತ್ತಿದೆ. ಅಷ್ಟರಲ್ಲಿ ಒಂದು ವರ್ಷ ಮುಗಿದು ಹೊಸ ವರ್ಷ ಬರುತ್ತಿದೆ. 2025 ನ್ನು ಸ್ವಾಗತಿಸಲು ಇನ್ನು ವಾರವಷ್ಟೇ ಬಾಕಿ ಉಳಿದಿದೆ. ಹಿಂದೂಗಳಿಗೆ ಹೊಸ ವರ್ಷ ಎಂದರೆ ಅದು ಯುಗಾದಿ, ಆದರೂ ಇಂಗ್ಲೀಷ್‌ ಕ್ಯಾಲೆಂಡರ್‌ ಪ್ರಕಾರ ಜನವರಿ 1ನ್ನು ಕೂಡಾ ಹೊಸ ವರ್ಷವನ್ನಾಗಿ ಆಚರಿಸುತ್ತಾ ಬರಲಾಗಿದೆ.

ಹೊಸ ವರ್ಷ ಬರುತ್ತಿದ್ದಂತೆ ಪಾರ್ಟಿ, ಪ್ರವಾಸ, ರೆಸ್ಯುಲೂಷನ್‌ ಸೇರಿದಂತೆ ನಾನಾ ವಿಚಾರಗಳ ಬಗ್ಗೆ ಪ್ಲ್ಯಾನ್‌ ಮಾಡಲಾಗುತ್ತದೆ. ಹೋಟೆಲ್‌, ರೆಸಾರ್ಟ್‌ಗಳಲ್ಲಿ ಹೊಸ ವರ್ಷ ಆಚರಿಸಲು ಈಗಲೇ ತಯಾರಿ ನಡೆದಿದೆ. ಡಿಸೆಂಬರ್‌ 31 ಮಧ್ಯರಾತ್ರಿ 12 ದಾಟುತ್ತಿದ್ದಂತೆ ಜನರು ಪಟಾಕಿ ಸಿಡಿಸಿ ಹರ್ಷೋದ್ಗಾರದಿಂದ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಾರೆ. ಹೊಸ ಹೊಸ ಕನಸುಗಳು, ಗುರಿಗಳನ್ನು ಇಟ್ಟುಕೊಂಡು ಹೊಸ ವರ್ಷವನ್ನು ಸ್ವಾಗತಿಸುತ್ತಾರೆ. ನಿಮ್ಮ ಬದುಕಲ್ಲಿ ಸಂತೋಷವೇ ತುಂಬಿರಲಿ ಎಂದು ಆತ್ಮೀಯರಿಗೆ ಹಾರೈಸುತ್ತಾರೆ. ಹಾಗಾದರೆ ಈ ಹೊಸ ವರ್ಷಕ್ಕೆ ಮೊದಲು ಯಾರಿಗೆ ಶುಭ ಕೋರಬೇಕು ಎಂದುಕೊಂಡಿದ್ದೀರ?

ಹೊಸ ವರ್ಷಕ್ಕೆ ನಿಮ್ಮ ಪ್ರೀತಿಯ ಅಣ್ಣ-ತಮ್ಮಂದಿರಿಗೆ ಈ ರೀತಿ ಶುಭ ಕೋರಿ

 

  • ಹೊಸ ವರ್ಷದ ಶುಭಾಶಯಗಳು ಅಣ್ಣ/ತಮ್ಮ, ನಿನ್ನ ಹೊಸ ವರ್ಷವು ಸಂತೋಷ, ಶಾಂತಿ, ಸಮೃದ್ಧಿ ಮತ್ತು ಸಂತೋಷದಿಂದ ತುಂಬಿರಲಿ.
  • ಹೊಸ ವರ್ಷದ ಶುಭಾಶಯಗಳು ಸಹೋದರ. ಮುಂಬರುವ ವರ್ಷದಲ್ಲಿ ನೀನು ಇನ್ನಷ್ಟು ಸಾಧನೆ ಮಾಡು, ನಿನಗೆ ಸದಾ ನಾನು ಬೆಂಬಲವಾಗಿ ನಿಲ್ಲುತ್ತೇನೆ,
  • ನಿನ್ನಂಥ ಅಣ್ಣ/ತಮ್ಮನನ್ನು ಪಡೆದ ನಾನೇ ಧನ್ಯ, ನನ್ನ ಕಷ್ಟ-ಸುಖ ಎಲ್ಲದರಲ್ಲೂ ಜೊತೆಯಾಗಿ ನಿಂತ ನಿನಗೆ ಹೊಸ ವರ್ಷ ಇನ್ನಷ್ಟು ಸಂತೋಷ ತರಲಿ
  • ರಕ್ಷಾಬಂಧನ ಮಾತ್ರವಲ್ಲ, ವರ್ಷದ 365 ದಿನವೂ ನಿನಗೆ ಒಳ್ಳೆಯದನ್ನು ಹಾರೈಸುತ್ತೇನೆ, ನಿನ್ನ ಜೀವನ ಉಜ್ವಲವಾಗಿರಲಿ ಅಣ್ಣ/ತಮ್ಮ, 2025 ವರ್ಷದ ಶುಭಾಶಯಗಳು
  • ಹೊಸ ವರ್ಷದ ಶುಭಾಶಯಗಳು 2025 ಸಹೋದರ, ಈ ಹೊಸ ವರ್ಷವು ನಿನ್ನ ಜೀವನದಲ್ಲಿ ಮಿತಿ ಇಲ್ಲದಷ್ಟು ಸಂತೋಷ ಮತ್ತು ಅದೃಷ್ಟವನ್ನು ತರಲಿ. ನಿನ್ನ ತಂಗಿ/ಅಕ್ಕನಾಗಿ ಜನಿಸಿರುವುದಕ್ಕೆ ನಾನು ನಿಜಕ್ಕೂ ಅದೃಷ್ಟ ಮಾಡಿದ್ದೆ, ನಿನ್ನ ಬಾಳು ಸುಂದರವಾಗಿರಲಿ
  • ಹೊಸ ವರ್ಷವು ನಿನಗೆ ಇನ್ನಷ್ಟು ಅವಕಾಶಗಳನ್ನು ಮತ್ತು ಭರವಸೆಯನ್ನು ತರಲಿ. ಐ ಲವ್‌ ಯೂ ನನ್ನ ಮುದ್ದಿನ ಅಣ್ಣ/ತಮ್ಮ, ಎಂದೆಂದಿಗೂ ಖುಷಿಯಾಗಿರು

ಇದನ್ನೂ ಓದಿ: 2025ರ ಶುಭಾಶಯಗಳು: ದಿನಗಳು ಉರುಳಲಿ, ಪ್ರೀತಿ ಹೆಚ್ಚಾಗುತ್ತಲೇ ಇರಲಿ: ಹೊಸ ವರ್ಷಕ್ಕೆ ನಿಮ್ಮ ಪ್ರೇಯಸಿಗೆ ಈ ರೀತಿ ಶುಭ ಕೋರಿ

  • ನನ್ನ ಕ್ರೈಂ ಪಾರ್ಟ್ನರ್‌ ಅಣ್ಣ/ತಮ್ಮನಿಗೆ ಹೊಸ ವರ್ಷ ಸಕಲ ಖುಷಿಯನ್ನೂ ನೀಡಲಿ, ಎಷ್ಟು ವರ್ಷಗಳು ಕಳೆದರೂ ನಿನ್ನ ಖುಷಿ ಹೀಗೇ ಇರಲಿ, ನಮ್ಮ ಬಂಧ ಇನ್ನಷ್ಟು ಗಟ್ಟಿಯಾಗಲಿ
  • ಹೊಸ ವರ್ಷ ಯಾವುದೇ ಸವಾಲುಗಳನ್ನು ಎದುರಿಸುವ ಧೈರ್ಯ ಮತ್ತು ಅವುಗಳನ್ನು ಜಯಿಸುವ ಅದೃಷ್ಟವನ್ನು ಹೊತ್ತು ತರಲಿ. ಹೊಸ ವರ್ಷದ ಶುಭಾಶಯಗಳು ಸಹೋದರ
  • ಹೊಸ ವರ್ಷವೆಂಬ ಖಾಲಿ ಪುಟಗಳಲ್ಲಿ ಸಂತೋಷ, ಯಶಸ್ಸೆಂಬ ಸಾಲುಗಳನ್ನು ಬರೆಯೋಣ ಅಣ್ಣ. ಪ್ರತಿದಿನವೂ ನಿನ್ನ ದಿನವಾಗಿರಲಿ, 2025 ಹೊಸ ವರ್ಷದ ಹಾರ್ದಿಕ ಶುಭ ಹಾರೈಕೆಗಳು
  • ಹಳೆಯ ಕಹಿಗಳನ್ನು ಮರೆಯೋಣ, ಹೊಸ ಸಿಹಿ ದಿನಗಳನ್ನು ಸ್ವಾಗತಿಸೋಣ, ಹೊಸ ವರ್ಷ ನಿನ್ನ ಬಾಳಲ್ಲಿ ಹೊಸ ಚೈತನ್ಯ ತರಲಿ, ಯಶಸ್ಸು ನಿನ್ನ ಪಾಲಿಗೆ ಇರಲಿ, ಹೊಸ ವರ್ಷದ ಶುಭಾಶಯಗಳು

ಹೀಗೆ ವಾಟ್ಸಾಪ್‌ ಸಂದೇಶದ ಮೂಲಕ ನಿಮ್ಮ ಪ್ರೀತಿಯ ಸಹೋದರರಿಗೆ ಶುಭ ಹಾರೈಸಿ.

Whats_app_banner