ಕನ್ನಡ ಸುದ್ದಿ  /  Photo Gallery  /  Cricket News Ind Vs Aus Wtc Final Ajinkya Rahane Break Records Shardul Thakur Equals Alan Border Don Bradman Record Prs

Ajinkya Rahane: ಫೈನಲ್​​​ನಲ್ಲಿ ಅಜಿಂಕ್ಯ ರಹಾನೆ ದಾಖಲೆಗಳ ಸುರಿಮಳೆ; ಡಾನ್​ ಬ್ರಾಡ್ಮನ್, ಅಲನ್​ ಬಾರ್ಡರ್ ಸಾಲಿಗೆ ಸೇರಿದ ಶಾರ್ದೂಲ್ ಠಾಕೂರ್

  • ಡಬ್ಲ್ಯುಟಿಸಿ ಫೈನಲ್​​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೊದಲ ಇನ್ನಿಂಗ್ಸ್​ ಟೀಮ್​ ಇಂಡಿಯಾ ಪರ ಅಜಿಂಕ್ಯ ರಹಾನೆ ಮತ್ತು ಶಾರ್ದೂಲ್​​ ಠಾಕೂರ್​ ತಲಾ ಅರ್ಧಶತಕ ಸಿಡಿಸಿದ್ದಾರೆ. ಇದರೊಂದಿಗೆ  ಹಲವು ದಾಖಲೆಗಳನ್ನೂ ಬರೆದಿದ್ದಾರೆ.

ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ನಲ್ಲಿ ಟೀಮ್​ ಇಂಡಿಯಾ ಬ್ಯಾಟಿಂಗ್​ ವೈಫಲ್ಯ ಕಂಡಿದೆ. ಮೊದಲ ಇನ್ನಿಂಗ್ಸ್​​ನಲ್ಲಿ ಬೌಲಿಂಗ್​​​ ಜೊತೆಗೆ ಬ್ಯಾಟಿಂಗ್​​ ಹಳಿ ತಪ್ಪಿದೆ. ಆದರೆ, ಅಜಿಂಕ್ಯ ರಹಾನೆ ಮತ್ತು ಶಾರ್ದೂಲ್​ ಠಾಕೂರ್​ ಅದ್ಭುತ ಆಟವಾಡಿ ನೆರವಾದರು.
icon

(1 / 9)

ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ನಲ್ಲಿ ಟೀಮ್​ ಇಂಡಿಯಾ ಬ್ಯಾಟಿಂಗ್​ ವೈಫಲ್ಯ ಕಂಡಿದೆ. ಮೊದಲ ಇನ್ನಿಂಗ್ಸ್​​ನಲ್ಲಿ ಬೌಲಿಂಗ್​​​ ಜೊತೆಗೆ ಬ್ಯಾಟಿಂಗ್​​ ಹಳಿ ತಪ್ಪಿದೆ. ಆದರೆ, ಅಜಿಂಕ್ಯ ರಹಾನೆ ಮತ್ತು ಶಾರ್ದೂಲ್​ ಠಾಕೂರ್​ ಅದ್ಭುತ ಆಟವಾಡಿ ನೆರವಾದರು.(Action Images via Reuters)

ಕೆಚ್ಚೆದೆಯ ಬ್ಯಾಟಿಂಗ್ ನಡೆಸಿದ ಅಜಿಂಕ್ಯ ರಹಾನೆ ಮತ್ತು ಶಾರ್ದೂಲ್​​ ಠಾಕೂರ್​ ಆಸೀಸ್ ವೇಗಿಗಳ ದಾಳಿಯನ್ನು ಸಮರ್ಥವಾಗಿ ಎದುರಿಸಿದ್ರು. ಆ ಮೂಲಕ ಇಬ್ಬರೂ ತಲಾ ಅರ್ಧಶತಕ ಸಿಡಿಸಿ ಗಮನ ಸೆಳೆದರು. ಇದರೊಂದಿಗೆ ದಾಖಲೆಗಳನ್ನೂ ಬರೆದಿದ್ದಾರೆ ಇಬ್ಬರು.
icon

(2 / 9)

ಕೆಚ್ಚೆದೆಯ ಬ್ಯಾಟಿಂಗ್ ನಡೆಸಿದ ಅಜಿಂಕ್ಯ ರಹಾನೆ ಮತ್ತು ಶಾರ್ದೂಲ್​​ ಠಾಕೂರ್​ ಆಸೀಸ್ ವೇಗಿಗಳ ದಾಳಿಯನ್ನು ಸಮರ್ಥವಾಗಿ ಎದುರಿಸಿದ್ರು. ಆ ಮೂಲಕ ಇಬ್ಬರೂ ತಲಾ ಅರ್ಧಶತಕ ಸಿಡಿಸಿ ಗಮನ ಸೆಳೆದರು. ಇದರೊಂದಿಗೆ ದಾಖಲೆಗಳನ್ನೂ ಬರೆದಿದ್ದಾರೆ ಇಬ್ಬರು.(ESPN Cricinfo/Twitter)

ರಹಾನೆ ಫೈನಲ್​ ಪಂದ್ಯದಲ್ಲಿ 129 ಎಸೆತಗಳಲ್ಲಿ 11 ಬೌಂಡರಿ, 1 ಸಿಕ್ಸರ್​​ ನೆರವಿನಿಂದ 89 ರನ್​ ಗಳಿಸಿ ಔಟಾದರು. ಇದರೊಂದಿಗೆ ಡಬ್ಲ್ಯುಟಿಸಿ ಫೈನಲ್​ನಲ್ಲಿ ಅರ್ಧಶತಕ ಸಿಡಿಸಿದ ಮೊದಲ ಭಾರತೀಯ ಎನಿಸಿದ್ದಾರೆ. 
icon

(3 / 9)

ರಹಾನೆ ಫೈನಲ್​ ಪಂದ್ಯದಲ್ಲಿ 129 ಎಸೆತಗಳಲ್ಲಿ 11 ಬೌಂಡರಿ, 1 ಸಿಕ್ಸರ್​​ ನೆರವಿನಿಂದ 89 ರನ್​ ಗಳಿಸಿ ಔಟಾದರು. ಇದರೊಂದಿಗೆ ಡಬ್ಲ್ಯುಟಿಸಿ ಫೈನಲ್​ನಲ್ಲಿ ಅರ್ಧಶತಕ ಸಿಡಿಸಿದ ಮೊದಲ ಭಾರತೀಯ ಎನಿಸಿದ್ದಾರೆ. 

ಹಾಗೆ ಟೆಸ್ಟ್ ಕ್ರಿಕೆಟ್​ನಲ್ಲಿ 5000 ರನ್ ಕೂಡ ಪೂರ್ಣಗೊಳಿಸಿದ್ದಾರೆ. 69 ರನ್ ಗಳಿಸಿದಾಗ ಈ ಸಾಧನೆ ಮಾಡಿದರು. ಒಟ್ಟಾರೆಯಾಗಿ 5000 ರನ್​ ಪೂರೈಸಿದ 13ನೇ ಭಾರತೀಯ ಬ್ಯಾಟರ್ ಎಂದ ಖ್ಯಾತಿಗೂ ಒಳಗಾಗಿದ್ದಾರೆ.
icon

(4 / 9)

ಹಾಗೆ ಟೆಸ್ಟ್ ಕ್ರಿಕೆಟ್​ನಲ್ಲಿ 5000 ರನ್ ಕೂಡ ಪೂರ್ಣಗೊಳಿಸಿದ್ದಾರೆ. 69 ರನ್ ಗಳಿಸಿದಾಗ ಈ ಸಾಧನೆ ಮಾಡಿದರು. ಒಟ್ಟಾರೆಯಾಗಿ 5000 ರನ್​ ಪೂರೈಸಿದ 13ನೇ ಭಾರತೀಯ ಬ್ಯಾಟರ್ ಎಂದ ಖ್ಯಾತಿಗೂ ಒಳಗಾಗಿದ್ದಾರೆ.

ಅಷ್ಟೇ ಅಲ್ಲದೆ ಐಸಿಸಿ ಫೈನಲ್​ ಪಂದ್ಯಗಳಲ್ಲಿ ಹೆಚ್ಚು ರನ್​ ಕಲೆ ಹಾಕಿದ ಭಾರತದ ನಾಲ್ಕನೇ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಸೌರವ್​ ಗಂಗೂಲಿ (117)​, ಎಂಎಸ್​ ಧೋನಿ (91), ಗೌತಮ್ ಗಂಭೀರ್ (97)​ ಬಳಿಕ ರಹಾನೆ ಸ್ಥಾನ ಪಡೆದಿದ್ದಾರೆ.
icon

(5 / 9)

ಬ್ಯಾಟಿಂಗ್​ ಜೊತೆಗೆ ಫೀಲ್ಡಿಂಗ್​ನಲ್ಲೂ ರಹಾನೆ ದಾಖಲೆ ಬರೆದಿದ್ದಾರೆ. ಆಸೀಸ್ ನಾಯಕ ಪ್ಯಾಟ್ ಕಮ್ಮಿನ್ಸ್ ಕ್ಯಾಚ್ ಹಿಡಿಯುತ್ತಿದ್ದಂತೆ ಟೆಸ್ಟ್ ಕ್ರಿಕೆಟ್​ನಲ್ಲಿ 100 ಕ್ಯಾಚ್​ಗಳನ್ನು ಪೂರೈಸಿದರು. 100ಕ್ಕೂ ಅಧಿಕ ಕ್ಯಾಚ್​​ ಪಡೆದ 6ನೇ ಭಾರತೀಯ ಆಟಗಾರ ಎನಿಸಿದ್ದಾರೆ.
icon

(6 / 9)

ರಹಾನೆಗೂ ಮುನ್ನ ವಿವಿಎಸ್ ಲಕ್ಷ್ಮಣ್ ( 135 ಕ್ಯಾಚ್), ಸಚಿನ್ ತೆಂಡೂಲ್ಕರ್ (115), ವಿರಾಟ್ ಕೊಹ್ಲಿ (109), ಸುನಿಲ್ ಗವಾಸ್ಕರ್ (108), ಮೊಹಮ್ಮದ್ ಅಜರುದ್ದೀನ್ (105) ಟೆಸ್ಟ್​ನಲ್ಲಿ 100 ಕ್ಯಾಚ್​ಗಳ​ ದಾಖಲೆ ಬರೆದಿದ್ದಾರೆ.
icon

(7 / 9)

ರಹಾನೆಗೂ ಮುನ್ನ ವಿವಿಎಸ್ ಲಕ್ಷ್ಮಣ್ ( 135 ಕ್ಯಾಚ್), ಸಚಿನ್ ತೆಂಡೂಲ್ಕರ್ (115), ವಿರಾಟ್ ಕೊಹ್ಲಿ (109), ಸುನಿಲ್ ಗವಾಸ್ಕರ್ (108), ಮೊಹಮ್ಮದ್ ಅಜರುದ್ದೀನ್ (105) ಟೆಸ್ಟ್​ನಲ್ಲಿ 100 ಕ್ಯಾಚ್​ಗಳ​ ದಾಖಲೆ ಬರೆದಿದ್ದಾರೆ.

ರಹಾನೆ ಜೊತೆಗೆ ಬೊಂಬಾಟ್​ ಬ್ಯಾಟಿಂಗ್​ ನಡೆಸಿದ ಶಾರ್ದೂಲ್​ ಠಾಕೂರ್​ ಕೂಡ ಮಹತ್ವದ ದಾಖಲೆ ಬರೆದಿದ್ದಾರೆ. 109 ಎಸೆತಗಳಲ್ಲಿ 6 ಬೌಂಡರಿಗಳ ನೆರವಿನಿಂದ 51 ರನ್​ ಚಚ್ಚಿದರು. ಇದರೊಂದಿಗೆ ದಿಗ್ಗಜ ಡಾನ್​ ಬ್ರಾಡ್ಮನ್​, ಅಲನ್​ ಬಾರ್ಡರ್​ ಸಾಲಿಗೆ ಸೇರಿದ್ದಾರೆ.
icon

(8 / 9)

ರಹಾನೆ ಜೊತೆಗೆ ಬೊಂಬಾಟ್​ ಬ್ಯಾಟಿಂಗ್​ ನಡೆಸಿದ ಶಾರ್ದೂಲ್​ ಠಾಕೂರ್​ ಕೂಡ ಮಹತ್ವದ ದಾಖಲೆ ಬರೆದಿದ್ದಾರೆ. 109 ಎಸೆತಗಳಲ್ಲಿ 6 ಬೌಂಡರಿಗಳ ನೆರವಿನಿಂದ 51 ರನ್​ ಚಚ್ಚಿದರು. ಇದರೊಂದಿಗೆ ದಿಗ್ಗಜ ಡಾನ್​ ಬ್ರಾಡ್ಮನ್​, ಅಲನ್​ ಬಾರ್ಡರ್​ ಸಾಲಿಗೆ ಸೇರಿದ್ದಾರೆ.(BCCI Twitter)

ಆಸ್ಟ್ರೇಲಿಯಾದ ದಿಗ್ಗಜರಾದ ಸರ್ ಡಾನ್ ಬ್ರಾಡ್ಮನ್ ಮತ್ತು ಅಲನ್ ಬಾರ್ಡರ್ ಅವರ ದಾಖಲೆ ಸರಿಗಟ್ಟಿರುವ ಶಾರ್ದೂಲ್​, ಓವಲ್​ ಮೈದಾನದಲ್ಲಿ ಸತತ 3ನೇ ಅರ್ಧಶತಕ ಸಿಡಿಸಿದ 3ನೇ ವಿದೇಶಿ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.
icon

(9 / 9)

ಆಸ್ಟ್ರೇಲಿಯಾದ ದಿಗ್ಗಜರಾದ ಸರ್ ಡಾನ್ ಬ್ರಾಡ್ಮನ್ ಮತ್ತು ಅಲನ್ ಬಾರ್ಡರ್ ಅವರ ದಾಖಲೆ ಸರಿಗಟ್ಟಿರುವ ಶಾರ್ದೂಲ್​, ಓವಲ್​ ಮೈದಾನದಲ್ಲಿ ಸತತ 3ನೇ ಅರ್ಧಶತಕ ಸಿಡಿಸಿದ 3ನೇ ವಿದೇಶಿ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.

ಇತರ ಗ್ಯಾಲರಿಗಳು