ಕನ್ನಡ ಸುದ್ದಿ  /  Sports  /  Cricket News Ipl What Is Duckworth Lewis Stern Rule Dls Method In Cricket Csk Ipl Champions Under Dls Rule Rmy

DLS Method in Cricket: ಡಿಎಲ್ಎಸ್ ನಿಯಮದಡಿ ಸಿಎಸ್‌ಕೆ 16ನೇ ಆವೃತ್ತಿಯ ಐಪಿಎಲ್ ಚಾಂಪಿಯನ್; ಏನಿದು ಡಕ್ವರ್ಥ್ ಲೂಯಿಸ್ ನಿಯಮ

ಡಕ್ವರ್ಥ್ ಲೂಯಿಸ್ ನಿಯಮ ಅನ್ವಯ ಕ್ರಿಕೆಟ್‌ನಲ್ಲಿ ಯಾವ ರೀತಿ ಟಾರ್ಗೆಟ್ ಲೆಕ್ಕಾಚಾರ ನಡೆಯುತ್ತೆ ಎಂಬುದು ಸೇರಿದಂತೆ ಡಿಎಲ್ಎಸ್‌ ಕುರಿತ ಮಾಹಿತಿ ಇಲ್ಲಿದೆ.

ಡಕ್ವರ್ಥ್ ಲೂಯಿಸ್ ನಿಯಮ ಎಂದರೆ ಏನು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ
ಡಕ್ವರ್ಥ್ ಲೂಯಿಸ್ ನಿಯಮ ಎಂದರೆ ಏನು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ

ಬೆಂಗಳೂರು: ಅಹಮದಾಬಾದ್‌ನಲ್ಲಿ (Ahmedabad) ನಡೆದ 16ನೇ ಆವೃತ್ತಿಯ ಐಪಿಎಲ್‌ ಫೈನಲ್‌ (IPL Final) ಪಂದ್ಯದಲ್ಲಿ ಮಳೆಯಾಟದ ಬಳಿಕ ಗುಜರಾತ್ ಟೈಟಾನ್ಸ್ (Gujarat Titans) ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಡಿಎಲ್‌ಎಸ್ ನಿಯಮದ (DLS Method) ಅನ್ವಯ ಗೆದ್ದು ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಸಿಎಸ್‌ಕೆ ಡಕ್ವರ್ಥ್ ಲೂಯಿಸ್ -ಸ್ವರ್ನ್ ನಿಯಮದಡಿ (Duckworth Lewis Stern rule) 5 ವಿಕೆಟ್‌ಗಳಿಂದ ಪಂದ್ಯವನ್ನು ಗೆಲ್ಲುತ್ತಿದ್ದಂತೆ ಕ್ರಿಕೆಟ್ ಪ್ರೇಮಿಗಳ ಮನಸ್ಸಿನಲ್ಲಿ ಡಿಎಲ್ಎಸ್ ಎಂದರೇನು, ಕ್ರಿಕೆಟ್‌ನಲ್ಲಿ ಡಿಎಲ್‌ಎಸ್ ನಿಯಮದ ಪ್ರಕಾರ ಹೇಗೆ ಟಾರ್ಗೆಟ್ ಲೆಕ್ಕಾಚಾರ ಮಾಡಲಾಗುತ್ತದೆ ಎಂಬುದು ಸೇರಿದಂತೆ ಹಲವು ಪ್ರಶ್ನೆಗಳು ಮೂಡಬಹುದು. ಇದರ ಬಗ್ಗೆ ಮಾಹಿತಿ ಇಲ್ಲಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಕ್ಕೆ ಮಳೆ ಸೇರಿದಂತೆ ಇನ್ನಿತರ ಕಾರಣಗಳಿಂದ ಅಡಚಣೆಯಾದಾಗ ಓವರ್‌ಗಳನ್ನು ಕಡಿತಗೊಳಿಸಬೇಕಾದ ಸನ್ನಿವೇಶನ ನಿರ್ಮಾಣವಾಗುತ್ತದೆ. ಆಗ ಟಾರ್ಗೆಟ್ ನಿಗದಿಪಡಿಸಲು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಡಕ್ವರ್ಥ್‌ ಲೂಯಿಸ್ ನಿಯಮವನ್ನು ಅನುಸರಿಸುತ್ತದೆ. ಇದು ಐಪಿಎಲ್‌ಗೂ ಅನ್ವಯಿಸುತ್ತದೆ.

ಈ ನಿಯಮದ ಪೂರ್ಣ ಹೆಸರು ಡಕ್ವರ್ಥ್ ಲೂಯಿಸ್ -ಸ್ವರ್ನ್ ಮೆಥಡ್ ಅಂತ ಕರೆಯಲಾಗುತ್ತದೆ. ಬ್ರಿಟನ್ ಸಂಖ್ಯಾಶಾಸ್ತ್ರಜ್ಞರಾದ ಫ್ರಾಂಕ್ ಡಕ್ವರ್ಥ್ ಮತ್ತು ಟೋನಿ ಲೂಯಿಸ್ ಮೊದಲ ಬಾರಿಗೆ ಈ ನಿಯಮವನ್ನು ರೂಪಿಸಿದ್ದಾರೆ. ನಂತರ ನಿಯಮವನ್ನು ಪ್ರೊಫೆಸರ್ ಸ್ವೀವನ್ ಸ್ಟರ್ನ್ ಕೆಲವು ಬದಲಾವಣೆಗಳನ್ನು ಮಾಡಿದ್ದಾರೆ. 2014ರ ನವೆಂಬರ್ ನಂತರ ಈ ನಿಮಯವನ್ನು ಡಕ್ವರ್ಥ್ ಲೂಯಿಸ್-ಸ್ವರ್ನ್ ಮೆಥಡ್ ಎಂದು ಕರೆಯಲಾಗುತ್ತಿದೆ.

ಕ್ರಿಕೆಟ್‌ನಲ್ಲಿ ಈ ನಿಮಯ ಬರುವುದಕ್ಕೂ ಮುನ್ನ ಸರಾಸರಿ ರನ್‌ರೇಟ್ ಮತ್ತು ಮೋಸ್ಟ್ ಪ್ರಡಕ್ವೀವ್ ಮೆಥಡ್‌ ಮೂಲಕ ಟಾರ್ಗೆಟ್ ಲೆಕ್ಕಾಚಾರ ಮಾಡಲಾಗುತ್ತಿತ್ತು. ಆದರೆ ಈ ವಿಧಾನದಲ್ಲಿ ಸರಾಸರಿ ರನ್ ಅನ್ನು ಮಾತ್ರ ಪರಿಗಣಿಸಲಾಗಿತ್ತು. ಆದರೆ ವಿಕೆಟ್ ಪತನವನ್ನು ಪರಿಗಣಿಸುತ್ತಿರಲಿಲ್ಲ. ಈ ಬಗ್ಗೆ ತಂಡಗಳು ಆಕ್ಷೇಪ ವ್ಯಕ್ತಪಡಿಸಿದ್ದವು. 1997ರ ಜನವರಿ 1 ರಂದು ಜಿಂಬಾಬ್ವೆ ಹಾಗೂ ಇಂಗ್ಲೆಂಡ್ ನಡುವೆ ನಡೆದ ಪಂದ್ಯದಲ್ಲಿ ಮೊದಲ ಬಾರಿಗೆ ಡಕ್ವರ್ಥ್ ಲೂಯಿಸ್ ನಿಮಯವನ್ನು ಜಾರಿಗೆ ತರಲಾಗಿತ್ತು.

ರನ್ ಲೆಕ್ಕಾಚಾರ ಹೇಗೆ ಮಾಡ್ತಾರೆ

ಡಕ್ವರ್ಥ್ ಲೂಯಿಸ್ ನಿಯಮದಲ್ಲಿ ರಿಸೋರ್ಸ್ ಆಧಾರದಲ್ಲಿ ಲೆಕ್ಕಾಹಾಕಲಾಗುತ್ತದೆ. ತಂಡದ ಬಳಿ ಉಳಿದಿರುವ ವಿಕೆಟ್‌ಗಳು, ಓವರ್‌ಗಳು ಅಥವಾ ಬಾಲ್‌ಗಳ ಲೆಕ್ಕಾಚಾರದಲ್ಲಿ ಟಾರ್ಗೆಟ್ ನೀಡಲಾಗುತ್ತದೆ.

ಅಹಮದಾಬಾದ್‌ನಲ್ಲಿ ನಡೆದ ಐಪಿಎಲ್ 16ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಹಾರ್ದಿಕ್ ಪಾಂಡ್ಯ ನೇತೃತ್ವದ ಜಿಟಿ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 214 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು.

ದೊಡ್ಡ ಗುರಿಯನ್ನು ಚೇಸ್ ಮಾಡಲು ಬಂದ ಸಿಎಸ್‌ಕೆಗೆ ಮೊದಲ ಓವರ್‌ನಲ್ಲೇ ಮಳೆ ಅಡ್ಡಿ ಮಾಡಿತು. ಸತತ ಮಳೆಯಿಂದಾಗಿ ಎರಡ್ಮೂರು ಬಾರಿ ಪಿಚ್ ಪರಿಶೀಲಿಸಲಾಯಿತು. ಕೊನೆಗೆ ತಡರಾತ್ರಿ ಆರಂಭವಾದ ಪಂದ್ಯದಲ್ಲಿ ಡಿಎಲ್‌ಎಸ್ ನಿಯಮದಡಿ ಚೆನ್ನೈ ಗೆಲುವಿಗೆ 15 ಓವರ್‌ಗಳಲ್ಲಿ 170 ರನ್ ಗಳ ಗುರಿ ನೀಡಲಾಗಿತ್ತು. ಸಿಎಎಸ್‌ಕೆ 15 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 171 ರನ್ ಗಳಿಸುವ ಮೂಲಕ ಚಾಂಪಿಯನ್ ಆಗಿದೆ.