ಕನ್ನಡ ಸುದ್ದಿ  /  Sports  /  Cricket News Tim David Unhappy With Umpire After No Ball Results In His Dismissal Mi Vs Lsg Eliminator Clash Prs

IPL Umpires: ಟಿಮ್​ ಡೇವಿಡ್​ ಔಟಾ ಅಥವಾ ನಾಟೌಟಾ; ಪದೆಪದೇ ಅದೇ ತಪ್ಪು, ಚರ್ಚೆಗೆ ಕಾರಣವಾಗ್ತಿದೆ ಐಪಿಎಲ್​ ಅಂಪೈರ್​ಗಳ ನಿರ್ಧಾರ

ಮುಂಬೈ ಬ್ಯಾಟರ್ ಟಿಮ್ ಡೇವಿಡ್ (Tim David) ಸೊಂಟದ ಎತ್ತರದ ನೋ-ಬಾಲ್‌ನಲ್ಲಿ (No Ball) ಔಟಾದಾಗ ವಿವಾದಾತ್ಮಕ ನಿರ್ಧಾರಕ್ಕೆ ಬಲಿಯಾದರು. ಔಟಾದ ನಂತರ ಸೋಷಿಯಲ್​ ಮೀಡಿಯಾದಲ್ಲಿ ಅಂಪೈರ್​​ಗಳ ವಿರುದ್ಧ ಪೋಸ್ಟ್​ಗಳ ಪ್ರವಾಹ ಹರಿಸಿದ್ದಾರೆ.

ಟಿಮ್​ ಡೇವಿಡ್​ ಔಟಾದ ದೃಶ್ಯ
ಟಿಮ್​ ಡೇವಿಡ್​ ಔಟಾದ ದೃಶ್ಯ

ಲಕ್ನೋ ಸೂಪರ್ ಜೈಂಟ್ಸ್​ ವಿರುದ್ಧ ಮುಂಬೈ ಇಂಡಿಯನ್ಸ್ (LSG vs MI Eliminator)​ ಗೆದ್ದು ಬೀಗಿದೆ. ಐಪಿಎಲ್ (IPL)​ ಎಲಿಮಿನೇಟರ್​ ಪಂದ್ಯದಲ್ಲಿ ಸೋತ ಲಕ್ನೋ ಟೂರ್ನಿಯಿಂದ ಎಲಿಮಿನೇಟ್​ ಆಗಿದೆ. ಗೆದ್ದ ಮುಂಬೈ ಎರಡನೇ ಕ್ವಾಲಿಫೈಯರ್​ಗೆ ಅರ್ಹತೆ ಪಡೆದುಕೊಂಡಿದೆ. ಫೈನಲ್​​ಗೇರಲು ಮೇ 26ರಂದು ಗುಜರಾತ್​ ಟೈಟಾನ್ಸ್​ (Gujarat Titans) ಎದುರು ಸೆಣಸಾಟ ನಡೆಸಲಿದೆ. ಈ ಪಂದ್ಯದಲ್ಲಿ ಅಂಪೈರ್​ಗಳು ಮತ್ತೊಮ್ಮೆ ಎಡವಟ್ಟು ಮಾಡಿದ್ದಾರೆ.

ಈ ಟೂರ್ನಿಯಲ್ಲಿ ಅಂಪೈರ್​ಗಳ ಪ್ರಮಾದಗಳು (IPL Umpires Mistake) ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಅದರಲ್ಲೂ ನೋ ಬಾಲ್​ ವಿಚಾರವಾಗಿಯೇ ಅಧಿಕ ಎಂಬುದು ಬೇಸರದ ಸಂಗತಿ. ಲೀಗ್​ ಆರಂಭದಿಂದಲೂ ನೋ ಬಾಲ್ (No Ball) ಅನ್ನು ಉತ್ತಮ ಎಸೆತವೆಂದು ತೀರ್ಪುನ್ನೂ ಕೊಟ್ಟಿದ್ದಾರೆ. ನೋ ಬಾಲ್​​ಗೆ ಔಟಾಗಿದ್ದರೂ, ಆ ಎಸೆತವನ್ನು ಉತ್ತಮ ಎಸೆತವೆಂದು ಪರಿಗಣಿಸಿ ಔಟ್​ ಕೊಟ್ಟಿದ್ದೂ ಇದೆ. ಈಗ ಅಂತಹದ್ದೇ ಘಟನೆ ನಡೆದಿದೆ.

ಎಲಿಮಿನೇಟರ್​ ಪಂದ್ಯದಲ್ಲೂ ಎಡವಟ್ಟು

ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಮೊದಲು ಬ್ಯಾಟಿಂಗ್​ ನಡೆಸಿತು. ಈ ಪಂದ್ಯದಲ್ಲಿ ಬ್ಯಾಟ್ಸ್​ಮನ್​ಗಳು ನಿರೀಕ್ಷಿತ ಪ್ರದರ್ಶನ ನೀಡದಿದ್ದರೂ, ಪರವಾಗಿಲ್ಲ ಎನ್ನುವಂತೆ ರನ್​ ಗಳಿಸಿದರು. ತಿಲಕ್​ ವರ್ಮಾ (Tilak Varma) ಮತ್ತು ಟಿಮ್​ ಡೇವಿಡ್ (Tim D​avid)​ ಅಂತಿಮ ಹಂತದಲ್ಲಿ ತಂಡಕ್ಕೆ ರನ್​ ಗಳಿಕೆಯಲ್ಲಿ ನೆರವಾಗುತ್ತಿದ್ದರು. ಈ ವೇಳೆ ತಂಡದ 16.2 ಓವರ್​​ಗಳಲ್ಲಿ 4 ವಿಕೆಟ್​ 148 ರನ್​ ಗಳಿಸಿತ್ತು. ಆಗ ಡೇವಿಡ್​ 13 ರನ್​ ಗಳಿಸಿತು. ತಿಲಕ್​ 26 ರನ್​ ಗಳಿಸಿದ್ದರು. ಯಶ್​ ಠಾಕೂರ್ (Yash Thakur) ಬೌಲಿಂಗ್​ ಮಾಡುತ್ತಿದ್ದರು.

16.3ನೇ ಓವರ್​​ನಲ್ಲಿ ಟಿಮ್​ ಡೇವಿಡ್​, ಯಶ್​​ ಠಾಕೂರ್ ಬೌಲಿಂಗ್​ನಲ್ಲಿ ಫುಲ್​ ಟಾಸ್​ ಎಸೆತಕ್ಕೆ ಸ್ಟ್ರೈಟ್​​​ ಫೀಲ್ಡರ್​​ಗೆ ಕ್ಯಾಚ್​ ನೀಡಿದರು. ಅಂಪೈರ್​ ಔಟ್​ ನೀಡುತ್ತಿದ್ದ ಬೆನ್ನಲ್ಲೇ ಅಚ್ಚರಿ ವ್ಯಕ್ತಪಡಿಸಿದ ಟಿಮ್ ಡೇವಿಡ್​​ ಎಂದು ಮನವಿ ಮಾಡಿದರು. ಬಳಿಕ ಡೇವಿಡ್ ಮರು ಪರಿಶೀಲನೆ ಮಾಡುವಂತೆ ರಿವ್ಯೂವ್​ ಪಡೆದರು. ಚೆಂಡು ಸೊಂಟದ ಮೇಲಿತ್ತು. ಹಾಗೆಯೇ ವಿಕೆಟ್​ ಬೇಲ್ಸ್​ ತಾಗಿರುವಂತೆ ಕಂಡು ಬಂತು. ಬಳಿಕ 3ನೇ ಅಂಪೈರ್​ ಉತ್ತಮ ಎಸೆತವೆಂದು ತೀರ್ಮಾನಿಸಿ ಔಟ್​ ನೀಡಿದರು.

ಅಂಪೈರ್​ ವಿರುದ್ಧ ನೆಟ್ಟಿಗರು ಗರಂ

ನೋಬಾಲ್​ ಆಗಿದ್ದರೂ, ಉತ್ತಮ ಎಸೆತವೆಂದು ಅಂಪೈರ್ ತೀರ್ಮಾನಿಸಿದ್ದು, ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಮುಂಬೈ ಬ್ಯಾಟರ್ ಟಿಮ್ ಡೇವಿಡ್ ಸೊಂಟದ ಎತ್ತರದ ನೋ-ಬಾಲ್‌ನಲ್ಲಿ ಔಟಾದಾಗ ವಿವಾದಾತ್ಮಕ ನಿರ್ಧಾರಕ್ಕೆ ಬಲಿಯಾದರು. ಔಟಾದ ನಂತರ ಸೋಷಿಯಲ್​ ಮೀಡಿಯಾದಲ್ಲಿ ಅಂಪೈರ್​​ಗಳ ವಿರುದ್ಧ ಪೋಸ್ಟ್​ಗಳ ಪ್ರವಾಹ ಹರಿಸಿದ್ದಾರೆ. ಇದು ಕ್ಲಿಯರ್ ನೋ ಬಾಲ್​​, ಅಂಪೈರ್​ಗಳು ತಪ್ಪು ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ. ಇದು ಮೋಸ ಎಂದಿದ್ದಾರೆ.

ಡೇವಿಡ್​ ಅಸಮಾಧಾನ

ಅಂಪೈರ್​ಗಳ ವಾದ ಟಿಮ್​ ಡೇವಿಡ್​ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 3ನೇ ಅಂಪೈರ್ ವಿಡಿಯೋ ಪರಿಶೀಲಿಸಿದ ವೇಳೆ ಚೆಂಡು ಟೇವಿಡ್ ಅವರ ಸೊಂಟಕ್ಕಿಂತ ತುಸು ಕೆಳ ಭಾಗದಲ್ಲಿತ್ತು. ಹಾಗೆಯೇ ಬಾಲ್ ನೇರವಾಗಿ ವಿಕೆಟ್ ಬೇಲ್ಸ್ ಎಗರಿಸುವಂತೆ ಕಾಣುತ್ತಿದೆ. ಇದೇ ಕಾರಣಕ್ಕೆ ಟಿವಿ ಅಂಪೈರ್ ನೋಬಾಲ್ ಅಲ್ಲ, ಔಟ್ ಎಂಬ ತೀರ್ಪು ಕೊಟ್ಟಿದ್ದರು. ಇದೀಗ ಕೆಲವರು ಜಾಲತಾಣಗಳಲ್ಲಿ ಆಕ್ರೋಶ ಹೊರ ಹಾಕಿದ್ದಾರೆ. ಅದು ನೋಬಾಲ್/ಗುಡ್ ಬಾಲ್ ಎಂಬ ಪರ-ವಿರೋಧ ಚರ್ಚೆಗಳೂ ಶುರುವಾಗಿವೆ.

ಪಂದ್ಯದ ಫಲಿತಾಂಶ

ಮೊದಲು ಬ್ಯಾಟಿಂಗ್​ ನಡೆಸಿದ್ದ ಮುಂಬೈ​​ 20 ಓವರ್​​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 182 ರನ್​ ಗಳಿಸಿತು. ಕ್ಯಾಮರೂನ್​ ಗ್ರೀನ್​ (41), ಸೂರ್ಯಕುಮಾರ್​ (33), ತಿಲಕ್​ ವರ್ಮಾ (26), ನೇಹಾಲ್​ ವಧೇರಾ (23) ಅವರ ಹೋರಾಟದ ಫಲವಾಗಿ ಮುಂಬೈ 180 ರನ್​ಗಳ ಗಡಿ ದಾಟಿತ್ತು. ನವೀನ್​ ಉಲ್​ ಹಕ್​ 4 ವಿಕೆಟ್​ ಪಡೆದು ಮಿಂಚಿದ್ದರು. ಇದೀಗ ಅವರ ಆಟ ವ್ಯರ್ಥವಾಗಿದೆ. ಈ ಗುರಿ ಬೆನ್ನತ್ತಿದ ಲಕ್ನೋ ಸೂಪರ್​ ಜೈಂಟ್ಸ್​, ಆಕಾಶ್​​ ಮಧ್ವಾಲ್​ ಮಾರಕ ಬೌಲಿಂಗ್​ ದಾಳಿಗೆ ತತ್ತರಿಸಿತು. ಪರಿಣಾಮ 101 ರನ್​ಗಳಿಗೆ ಆಲೌಟಾಯಿತು.