Football: ಚೆಂಡನ್ನು ಓವರ್​​ಶೂಟ್ ಮಾಡುವಾಗ ಆಟಗಾರನ ಕಾಲು ಮುರಿದ ಮಾರ್ಸೆಲೊ; ಭಯಾನಕ ವಿಡಿಯೋ ನೋಡಿದರೆ, ಒಂದು ಕ್ಷಣ ಎದೆ ಝಲ್ ಎನ್ನುತ್ತೆ!
ಕನ್ನಡ ಸುದ್ದಿ  /  ಕ್ರೀಡೆ  /  Football: ಚೆಂಡನ್ನು ಓವರ್​​ಶೂಟ್ ಮಾಡುವಾಗ ಆಟಗಾರನ ಕಾಲು ಮುರಿದ ಮಾರ್ಸೆಲೊ; ಭಯಾನಕ ವಿಡಿಯೋ ನೋಡಿದರೆ, ಒಂದು ಕ್ಷಣ ಎದೆ ಝಲ್ ಎನ್ನುತ್ತೆ!

Football: ಚೆಂಡನ್ನು ಓವರ್​​ಶೂಟ್ ಮಾಡುವಾಗ ಆಟಗಾರನ ಕಾಲು ಮುರಿದ ಮಾರ್ಸೆಲೊ; ಭಯಾನಕ ವಿಡಿಯೋ ನೋಡಿದರೆ, ಒಂದು ಕ್ಷಣ ಎದೆ ಝಲ್ ಎನ್ನುತ್ತೆ!

Marcelo: ಅರ್ಜೆಂಟಿನೋಸ್ ಜೂನಿಯರ್ ವಿರುದ್ಧದ ಪಂದ್ಯದಲ್ಲಿ ರೆಡ್ ಕಾರ್ಡ್ ತೋರಿಸಿದ ನಂತರ ಇಂಟರ್‌ನ್ಯಾಷನಲ್ ಫ್ಲುಮಿನೆನ್ಸ್ ಎಫ್‌ಸಿ ಮಾಜಿ ಬ್ರೆಜಿಲಿಯನ್ ಆಟಗಾರ ಮಾರ್ಸೆಲೊ ಕಣ್ಣೀರಿಟ್ಟರು.

ಚೆಂಡನ್ನು ಓವರ್​​ಶೂಟ್ ಮಾಡುವಾಗ ಆಟಗಾರನ ಕಾಲು ಮುರಿದ ಮಾರ್ಸೆಲೊ.
ಚೆಂಡನ್ನು ಓವರ್​​ಶೂಟ್ ಮಾಡುವಾಗ ಆಟಗಾರನ ಕಾಲು ಮುರಿದ ಮಾರ್ಸೆಲೊ.

ಬ್ಯೂನಸ್ ಐರಿಸ್‌ನಲ್ಲಿ ನಡೆದ ಕೋಪಾ ಲಿಬರ್ಟಡೋರ್ಸ್‌ (Copa Libertadores) ಫುಟ್ಬಾಲ್ ಟೂರ್ನಿಯ ಪಂದ್ಯದಲ್ಲಿ ಟ್ಯಾಕಲ್‌ ಮಾಡುವ ಸಂದರ್ಭದಲ್ಲಿ ರಿಯಲ್ ಮ್ಯಾಡ್ರಿಡ್‌ನ ಮಾಜಿ ದಿಗ್ಗಜ ಆಟಗಾರ ಮಾರ್ಸೆಲೊ ಆಕಸ್ಮಿಕವಾಗಿ ಎದುರಾಳಿ ಆಟಗಾರನ ಕಾಲು ಮುರಿದಿದ್ದಾರೆ. ತಮ್ಮ ಎದುರಾಳಿ ಲೂಸಿಯಾನೊ ಸ್ಯಾಂಚೆಜ್ (Luciano Sanchez) ಅವರ ಕಾಲು ಆಕಸ್ಮಿಕವಾಗಿ ಮುರಿದಿದೆ. ಈ ಭಯಾನಕ ವಿಡಿಯೋ ವೈರಲ್ ಆಗುತ್ತಿದೆ. ಮೈದಾನದಲ್ಲಿ ಜರುಗಿದ ಈ ಆಘಾತಕಾರಿ ಘಟನೆ ಫುಟ್ಬಾಲ್ ಅಭಿಮಾನಿಗಳಲ್ಲಿ ತಲ್ಲಣ ಮೂಡಿಸಿದೆ.

ಅರ್ಜೆಂಟಿನೋಸ್ ಜೂನಿಯರ್ ವಿರುದ್ಧದ ಪಂದ್ಯದಲ್ಲಿ ರೆಡ್ ಕಾರ್ಡ್ ತೋರಿಸಿದ ನಂತರ ಇಂಟರ್‌ನ್ಯಾಷನಲ್ ಫ್ಲುಮಿನೆನ್ಸ್ ಎಫ್‌ಸಿ ಮಾಜಿ ಬ್ರೆಜಿಲಿಯನ್ ಆಟಗಾರ ಕಣ್ಣೀರಿಟ್ಟರು. ಮಾರ್ಸೆಲೊ ಪ್ರಸ್ತುತ ಬ್ರೆಜಿಲ್‌ನ ಫ್ಲುಮಿನೆನ್ಸ್ ಪರ ಆಡುತ್ತಿದ್ದಾರೆ. ಪಂದ್ಯ 56ನೇ ನಿಮಿಷದಲ್ಲಿ ಆಘಾತ ಸಂಭವಿಸಿದೆ. ಫುಟ್​ವರ್ಕ್​ಗೆ ಖ್ಯಾತಿ ಪಡೆದ ಮಾರ್ಸೆಲೊ, ಸ್ಯಾಂಚೆಜ್ ಅವರನ್ನು ಹಾದು ಹೋಗಲು ಪ್ರಯತ್ನಿಸುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿತು.

ಘಟನೆ ಏನು ನಡೆಯಿತು?

ಆದರೆ, ಈ ಅನಿರೀಕ್ಷಿತ ಘಟನೆಯಲ್ಲಿ ರಿಯಲ್ ಮ್ಯಾಡ್ರಿಡ್ ಮಾಜಿ ಸ್ಟಾರ್ ಆಟಗಾರ, ಚೆಂಡನ್ನು ಓವರ್​​ಶಾಟ್ ಮಾಡಿದ ನಂತರ ಅರ್ಜೆಂಟಿನೋಸ್ ಆಟಗಾರನ ಮೊಣಕಾಲಿನ ಮೇಲೆ ಪಾದವನ್ನಿಟ್ಟರು. ಇಬ್ಬರೂ ಚೆಂಡನ್ನು ಒದೆಯಲು ರಭಸವಾಗಿ ಬಂದರು. ಉದ್ದೇಶಪೂರ್ವಕವಾಗಿ ನಡೆದ ಘಟನೆ ಇದು. ಸ್ಯಾಂಚೆಜ್ ಕಾಲು ಮುರಿತಕ್ಕೆ ಒಳಗಾದ ಬೆನ್ನಲ್ಲೇ ಸ್ಯಾಂಚೆಜ್ ಪಿಚ್​​ನಲ್ಲೇ ಕುಸಿದು ಬಿದ್ದರು. ತಕ್ಷಣವೇ ಸಹಾಯಕ ಸಿಬ್ಬಂದಿ ಸ್ಟ್ರೆಚರ್‌ನಲ್ಲಿ ಸ್ಯಾಂಚೆಜ್​ರನ್ನು ಮೈದಾನದಿಂದ ಹೊರಗೆ ಕರೆದೊಯ್ದರು.

ಸಮೀಪದ ಫಿನೋಚಿಟ್ಟೊ ಸ್ಯಾನಿಟೋರಿಯಂ ಆಸ್ಪ್ರತೆಗೆ ಸ್ಥಳಾಂತರ ಮಾಡಲಾಯಿತು. ಅಭಿಮಾನಿಗಳು ಸ್ಯಾಂಚೆಜ್ ಚೇತರಿಕೆ ಪ್ರಾರ್ಥಿಸುತ್ತಿದ್ದಾರೆ. ಭಯಾನಕ ಘಟನೆಗೆ ಮಾರ್ಸೆಲೊ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ನೀವು ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ ಎಂದು ಇನ್ಸ್ಟಾಗ್ರಾಮ್​ನಲ್ಲಿ ಪೋಸ್ಟ್ ದುಃಖ ವ್ಯಕ್ತಪಡಿಸಿದ್ದಾರೆ.

ಚೇತರಿಸಿಕೊಳ್ಳಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ?

ಘಟನೆಯಿಂದ ಸ್ಯಾಂಚೆಜ್‌ ಚೇತರಿಕೆಯಾಗಲು ಎಂಟರಿಂದ 12 ತಿಂಗಳು ಬೇಕಾಗುತ್ತದೆ ಎಂದು ಸ್ಯಾನೆಟೋರಿಯೊ ಫಿನೊಚಿಯೆಟೊ ಆಸ್ಪತ್ರೆಯ ವೈದ್ಯರು ಸ್ಪಷ್ಟಪಡಿಸಿದ್ದಾರೆ. ಮೊಣಕಾಲಿನಲ್ಲಿರುವ ಫೆಮ್ಯುರ್‌, ಟಿಬಿಯಾ ಹಾಗೂ ಪೆಟೆಲ್ಲಾ ಎಂಬ ಮೂರು ಮೂಳೆಗಳ ಕೀಲು ತಪ್ಪಿದ್ದು, ಅವು ತಮ್ಮ ಸ್ವಸ್ಥಾನದಿಂದ ಸ್ಥಾನಪಲ್ಲಟಗೊಂಡಿವೆ. ಇದು ಸಾಮಾನ್ಯವಾಗಿ ದೊಡ್ಡ ಆಘಾತಗಳು ಉಂಟಾದಾಗ ಸಂಬವಿಸುತ್ತದೆ. ಇದು ನರನಾಳಗಳ ತೊಂದರೆಗೂ ಕಾರಣವಾಗುತ್ತದೆ. ಮೊಣಕಾಲಿನ ಮೂಳೆ ಅಥವಾ ಕೀಲು ಜರುಗಿದ್ದರೆ ಇದು ತೊಡೆ ಹಾಗೂ ಕಾಲಿನ ಮೂಳೆಗಳ ಸ್ಥಾನಪಲ್ಲಟಕ್ಕೂ ಕಾರಣವಾಗುತ್ತದೆ.

ಮಹಾರಾಜ ಟ್ರೋಫಿ ಆಗಸ್ಟ್ 13ರಿಂದ ಆರಂಭ

ಬಹುನಿರೀಕ್ಷಿತ ಮಹಾರಾಜ ಟ್ರೋಫಿ ಟಿ20 ಟೂರ್ನಿಯು ಆಗಸ್ಟ್ 13ರಿಂದ ಪ್ರಾರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಗುಲ್ಬರ್ಗಾ ಮಿಸ್ಟಿಕ್ಸ್‌ ಹಾಗೂ ಕಳೆದ ಬಾರಿ ರನ್ನರ್‌-ಅಪ್‌ ಬೆಂಗಳೂರು ಬ್ಲಾಸ್ಟರ್ಸ್‌ ತಂಡಗಳು ಸೆಣಸಾಟ ನಡೆಸಲಿವೆ. ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಸಿಎ) ಆಯೋಜಿಸುವ ಟೂರ್ನಿಯಲ್ಲಿ ಈ ಬಾರಿ ಆರು ತಂಡಗಳು ಪಾಲ್ಗೊಳ್ಳಲಿದ್ದು, ಲೀಗ್‌ ಹಂತದಲ್ಲಿ ಪ್ರತಿ ತಂಡಗಳು ತಲಾ ಎರಡು ಬಾರಿ ಮುಖಾಮುಖಿಯಾಗಲಿವೆ.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.