ಒಲಿಂಪಿಕ್ಸ್: ಲಕ್ಷ್ಯ ಸೇನ್ ಗೆಲುವು, ಆರ್ಚರಿ ತಂಡಕ್ಕೆ ಕ್ವಾರ್ಟರ್ ಫೈನಲ್‌ನಲ್ಲಿ ಸೋಲು; ಅರ್ಜೆಂಟೀನಾ ವಿರುದ್ಧದ ಹಾಕಿ ಪಂದ್ಯ ಡ್ರಾ
ಕನ್ನಡ ಸುದ್ದಿ  /  ಕ್ರೀಡೆ  /  ಒಲಿಂಪಿಕ್ಸ್: ಲಕ್ಷ್ಯ ಸೇನ್ ಗೆಲುವು, ಆರ್ಚರಿ ತಂಡಕ್ಕೆ ಕ್ವಾರ್ಟರ್ ಫೈನಲ್‌ನಲ್ಲಿ ಸೋಲು; ಅರ್ಜೆಂಟೀನಾ ವಿರುದ್ಧದ ಹಾಕಿ ಪಂದ್ಯ ಡ್ರಾ

ಒಲಿಂಪಿಕ್ಸ್: ಲಕ್ಷ್ಯ ಸೇನ್ ಗೆಲುವು, ಆರ್ಚರಿ ತಂಡಕ್ಕೆ ಕ್ವಾರ್ಟರ್ ಫೈನಲ್‌ನಲ್ಲಿ ಸೋಲು; ಅರ್ಜೆಂಟೀನಾ ವಿರುದ್ಧದ ಹಾಕಿ ಪಂದ್ಯ ಡ್ರಾ

ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್‌ನಲ್ಲಿ ಭಾರತದ ಶಟ್ಲರ್ ಲಕ್ಷ್ಯ ಸೇನ್ ಬೆಲ್ಜಿಯಂನ ಜೂಲಿಯನ್ ಕರಾಗ್ಗಿ ವಿರುದ್ಧ ಗೆಲುವು ಸಾಧಿಸಿದ್ದಾರೆ. ಅರ್ಜೆಂಟೀನಾ ವಿರುದ್ಧದ ಹಾಕಿ ಪಂದ್ಯದಲ್ಲಿ ಭಾರತ ಪುರುಷರ ತಂಡ ಡ್ರಾ ಸಾಧಿಸಿದೆ. ಅತ್ತ ಆರ್ಚರಿ ಕ್ವಾಟರ್ ಫೈನಲ್‌ನಲ್ಲಿ ಪುರುಷರ ತಂಡ ಸೋತು ಹೊರಬಿದ್ದಿದೆ.

ಒಲಿಂಪಿಕ್ಸ್: ಲಕ್ಷ್ಯ ಸೇನ್ ಗೆಲುವು, ಆರ್ಚರಿ ತಂಡಕ್ಕೆ ಕ್ವಾರ್ಟರ್ ಫೈನಲ್‌ನಲ್ಲಿ ಸೋಲು
ಒಲಿಂಪಿಕ್ಸ್: ಲಕ್ಷ್ಯ ಸೇನ್ ಗೆಲುವು, ಆರ್ಚರಿ ತಂಡಕ್ಕೆ ಕ್ವಾರ್ಟರ್ ಫೈನಲ್‌ನಲ್ಲಿ ಸೋಲು

ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಮೂರನೇ ದಿನದಾಟದಲ್ಲಿ ಭಾರತೀಯ ಕ್ರೀಡಾಪಟುಗಳು ಮಿಶ್ರ ಫಲಿತಾಂಶ ಪಡೆದಿದ್ದಾರೆ. ಶೂಟಿಂಗ್‌ನಲ್ಲಿ ಎರಡು ಪದಕ ಗೆಲ್ಲುವ ಆಸೆ ಕಮರಿದರೆ, ಪುರುಷರ ಆರ್ಚರಿ ತಂಡ ಕೂಡಾ ಕ್ವಾರ್ಟರ್‌ ಫೈನಲ್‌ನಲ್ಲಿ ಸೋಲು ಕಂಡಿದೆ. ಭಾರತ ಹಾಕಿ ತಂಡವು ಗುಂಪು ಹಂತದ ಪಂದ್ಯದಲ್ಲಿ ಅರ್ಜೆಂಟೀನಾ ವಿರುದ್ಧ ಸಮಬಲ ಸಾಧಿಸಿತು. ಅತ್ತ ಬ್ಯಾಡ್ಮಿಂಟನ್‌ ಸಿಂಗಲ್ಸ್‌ನಲ್ಲಿ ಲಕ್ಷ್ಯ ಸೇನ್‌ ಗೆಲುವು ಸಾಧಿಸಿದರೆ, ಮಹಿಳೆಯರ ಡಬಲ್ಸ್‌ ಜೋಡಿ ಸೋಲು ಕಂಡಿದೆ. ಇದೇ ವೇಳೆ ಪುರುಷರ ಸ್ಟಾರ್‌ ಜೋಡಿ ಸಾತ್ವಿಕ್ ಮತ್ತು ಚಿರಾಗ್‌ ಕ್ವಾರ್ಟರ್‌ ಫೈನಲ್‌ ಪ್ರವೇಶ ಮಾಡಿದ್ದಾರೆ.

ಪುರುಷರ ಹಾಕಿಯಲ್ಲಿ ಭಾರತ ಮತ್ತು ಅರ್ಜೆಂಟೀನಾ ನಡುವಿನ ಪಂದ್ಯವು 1-1 ಅಂಕಗಳೊಂದಿಗೆ ಸಮಬಲದಲ್ಲಿ ಅಂತ್ಯಗೊಂಡಿತು. ಮೊದಲಾರ್ಧದಲ್ಲಿಯೇ ಅರ್ಜೆಂಟೀನಾ ಗೋಲು ಗಳಿಸಿ ಮುನ್ನಡೆ ಕಾಯ್ದುಕೊಂಡಿತು. ಭಾರತ ತಂಡವು ಮೊದಲಾರ್ಧವಿಡೀ ಗೋಲುಗಳಿಲ್ಲದೆ ಭಾರಿ ಹಿನ್ನಡೆ ಅನುಭವಿಸಿತು. ಇನ್ನೇನು ಅರ್ಜೆಂಟೀನಾ ಗೆಲ್ಲುವ ಹಂತದಲ್ಲಿತ್ತು. ಕೊನೆಯ ಹಂತದಲ್ಲಿ ನಾಯಕ ಹರ್ಮನ್‌ಪ್ರೀತ್ ಸಿಂಗ್ ಪೆನಾಲ್ಟಿ ಕಾರ್ನರ್‌ ಮೂಲಕ ತಡವಾಗಿ ಗೋಲು ಗಳಿಸಿ ಅತ್ಯಮೂಲ್ಯವಾದ ಪಾಯಿಂಟ್ ಗಳಿಸಿದರು. ಪಂದ್ಯ ಆರಂಭವಾದ 22ನೇ ನಿಮಿಷದಲ್ಲಿಯೇ ಲ್ಯೂಕಾಸ್ ಮಾರ್ಟಿನೆಜ್ ಅರ್ಜೆಂಟೀನಾಕ್ಕೆ ಮುನ್ನಡೆ ತಂದು ಕೊಟ್ಟರು. ಭಾರತದ ಪರ 10ನೇ ಮತ್ತು ಕೊನೆಯ ಪೆನಾಲ್ಟಿ ಕಾರ್ನರ್ ಅನ್ನು ಹರ್ಮನ್‌ಪ್ರೀತ್ ಗೋಲಾಗಿ ಪರಿವರ್ತಿಸುವ ಮೂಲಕ ಪಂದ್ಯ ಸಮಬಲಗೊಂಡಿತು. ಈ ಪಂದ್ಯಕ್ಕೂ ಮುನ್ನ ಶನಿವಾರ ನಡೆದ ಪೂಲ್ ಬಿ ಆರಂಭಿಕ ಪಂದ್ಯದಲ್ಲಿ ಭಾರತೀಯರು ನ್ಯೂಜಿಲೆಂಡ್ ತಂಡವನ್ನು ಸೋಲಿಸಿದ್ದರು.

ಭಾರತ ತನ್ನ ಕೊನೆಯ ಪೂಲ್ ಪಂದ್ಯಗಳಲ್ಲಿ ಮಂಗಳವಾರ ಐರ್ಲೆಂಡ್ ವಿರುದ್ಧ ಆಡಲಿದೆ. ಆ ಬಳಿಕ ಆಸ್ಟ್ರೇಲಿಯಾ ಮತ್ತು ಹಾಲಿ ಚಾಂಪಿಯನ್ ಬೆಲ್ಜಿಯಂ ವಿರುದ್ಧ ಸೆಣಸಲಿದೆ. ಪ್ರತಿ ಪೂಲ್‌ನಿಂದ ಅಗ್ರ ನಾಲ್ಕು ತಂಡಗಳು ಕ್ವಾರ್ಟರ್‌ಫೈನಲ್‌ಗೆ ಅರ್ಹತೆ ಪಡೆಯುತ್ತವೆ.

ಲಕ್ಷ್ಯ ಸೇನ್‌ ಗೆಲುವು

ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಭಾರತದ ಶಟ್ಲರ್ ಲಕ್ಷ್ಯ ಸೇನ್ ಬೆಲ್ಜಿಯಂನ ಜೂಲಿಯನ್ ಕರಾಗ್ಗಿ ಅವರನ್ನು ನೇರ ಗೇಮ್‌ಗಳಲ್ಲಿ ಸೋಲಿಸಿದರು. ಇದಕ್ಕೂ ಮುನ್ನ ನಡೆದಿದ್ದ ಆರಂಭಿಕ ಪಂದ್ಯದ ಗೆಲುವನ್ನು ರದ್ದುಗೊಳಿಸಿದ ಬಳಿಕ, ಇದೀಗ ಲಕ್ಷ್ಯ ಅವರು ಮೊದಲ ಗೆಲುವು ದಾಖಲಿಸಿದಂತಾಗಿದೆ. ಆರಂಭಿಕ ಸೆಟ್‌ನ ಆರಂಭದಲ್ಲಿ ಹಿನ್ನಡೆ ಕಂಡಿದ್ದ ಲಕ್ಷ್ಯ, ಕೊನೆಗೆ ರೋಚಕವಾಗಿ ಮೊದಲ ಸೆಟ್‌ ವಶಪಡಿಸಿಕೊಂಡರು. ಒಲಿಂಪಿಕ್ಸ್‌ಗೆ ಪದಾರ್ಪಣೆ ಮಾಡುತ್ತಿರುವ 22ರ ಹರೆಯದ ಸೇನ್, ಎಲ್ ಗುಂಪಿನ ಪಂದ್ಯದಲ್ಲಿ ಕಾರಾಗಿ ಅವರ ವಿರುದ್ಧ ಅಂತಿಮವಾಗಿ 21-19 21-14 ಸೆಟ್‌ಗಳಿಂದ ಗೆದ್ದು ಬೀಗಿದರು.

ಕ್ವಾರ್ಟರ್‌ ಫೈನಲ್‌ಗೆ ಸಾತ್ವಿಕ್‌ - ಚಿರಾಗ್‌ ಜೋಡಿ

ಭಾರತದ ಸ್ಟಾರ್‌ ಡಬಲ್ಸ್‌ ಜೋಡಿಯಾದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ, ಬ್ಯಾಡ್ಮಿಂಟನ್ ಪುರುಷರ ಡಬಲ್ಸ್ ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಪಡೆದಿದ್ದಾರೆ. ಜರ್ಮನಿ ವಿರುದ್ಧ ನಡೆಯಬೇಕಿದ್ದ ಸೋಮವಾರದ ಪಂದ್ಯದಲ್ಲಿ ರದ್ದಾದರೂ, ಅವರು ಕ್ವಾರ್ಟರ್‌ ಫೈನಲ್‌ ಪ್ರವೇಶ ಪಡೆದಿದ್ದಾರೆ. ಮುಂದೆ ಅವರು ಇಂಡೋನೇಷ್ಯಾದ ಎದುರಾಳಿಗಳಾದ ಫಜರ್ ಅಲ್ಫಿಯಾನ್-ಮುಹಮ್ಮದ್ ರಿಯಾನ್ ಅರ್ಡಿಯಾಂಟೊ ಅವರನ್ನು ಎದುರಿಸಲಿದ್ದಾರೆ. ಆ ಪಂದ್ಯದಲ್ಲಿ ಸೋತರೂ, ಭಾರತದ ಜೋಡಿಗೆ ಕ್ವಾರ್ಟರ್‌ ಫೈನಲ್‌ ಟಿಕೆಟ್‌ ಸಿಗಲಿದೆ.

ಪುರುಷರ ಆರ್ಚರಿ ತಂಡಕ್ಕೆ ಕ್ವಾರ್ಟರ್ ಫೈನಲ್‌ನಲ್ಲಿ ಸೋಲು

ಪುರುಷರ ಆರ್ಚರಿ ರಿಕರ್ವ್ ತಂಡ ಕ್ವಾರ್ಟರ್ ಫೈನಲ್‌ನಲ್ಲಿ ಭಾರತ ತಂಡ ಸೋಲು ಕಂಡಿದೆ. ಧೀರಜ್ ಬೊಮ್ಮದೇವರ, ಪ್ರವೀಣ್ ಜಾಧವ್, ತರುಣದೀಪ್ ರೈ ಅವರನ್ನೊಳಗೊಂಡ ಟರ್ಕಿ ವಿರುಇದ್ಧ ಮುಗ್ಗರಿಸಿದೆ. ಇದರೊಂದಿಗೆ ಸೆಮಿಫೈನಲ್‌ ಪ್ರವೇಶಿಸುವ ಅವಕಾಶ ಕಳೆದುಕೊಂಡಿದೆ.

ಅರ್ಜುನ್ ಬಾಬುತಾ, ರಮಿತಾ ಜಿಂದಾಲ್‌ಗೆ ಸೋಲು; ಮಿಶ್ರ ತಂಡ ಗೆಲುವು

10 ಮೀಟರ್ ಏರ್ ರೈಫಲ್ ಶೂಟಿಂಗ್‌ ಪುರುಷರ ಫೈನಲ್‌ನಲ್ಲಿ ಅರ್ಜುನ್ ಬಾಬುತಾ ಕೇವಲ ಒಂದು ಸ್ಥಾನದಿಂದ ಪದಕವನ್ನು ಕಳೆದುಕೊಂಡರು. ಅದಕ್ಕೂ ಮೊದಲು, ಮನು ಭಾಕರ್ ಮತ್ತು ಸರಬ್ಜೋತ್ ಸಿಂಗ್ ಅವರು 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡವು ಕಂಚಿನ ಪದಕ ಸುತ್ತಿಗೆ ತಲುಪಿದೆ. ಮಹಿಳೆಯರ 10 ಮೀಟರ್ ಏರ್ ರೈಫಲ್ ಫೈನಲ್‌ನಲ್ಲಿ ರಮಿತಾ ಜಿಂದಾಲ್ 7ನೇ ಸ್ಥಾನ ಪಡೆದರು.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.